For Quick Alerts
ALLOW NOTIFICATIONS  
For Daily Alerts

ಸರ್ಕಾರಿ ನೌಕರರು ಷೇರುಪೇಟೆ ವಹಿವಾಟು ನಡೆಸುವಂತಿಲ್ಲವಾ?

|

ಬೆಂಗಳೂರು, ನ. 15: ಷೇರುಪೇಟೆ ವ್ಯವಹಾರವೇ ಅಂಥದ್ದು. ಬೆಟಿಂಗ್ ರೀತಿ ಬಹಳ ರಸವತ್ತಾಗಿರುತ್ತದೆ, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಹೋಗುತ್ತದೆ. ಅಂತೆಯೇ ಬೆಟಿಂಗ್‌ನಷ್ಟೇ ಡೇಂಜರ್ ಕೂಡ ಹೌದು. ಬಹಳ ಮಂದಿ ಕುಂತಲ್ಲಿ ನಿಂತಲ್ಲಿ ಷೇರುಪೇಟೆ ಏರಿಳಿತದತ್ತ ಕಣ್ಣಿಟ್ಟೇ ಇರುತ್ತಾರೆ. ನಿತ್ಯವೂ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರ ಈ ವಿಚಾರದ ಬಗ್ಗೆ ಚಿತ್ತ ಹರಿಸಿದೆ. ನಿತ್ಯವೂ ಷೇರು ವ್ಯವಹಾರ ನಡೆಸುವ ಸರ್ಕಾರಿ ನೌಕರರು ತಮ್ಮ ಕೆಲಸ ಕಳೆದುಕೊಳ್ಳುವ ಅಪಾಯ ಇದೆ.

ಸರ್ಕಾರಿ ಉದ್ಯೋಗಿಗಳು ಷೇರುಪೇಟೆಯಲ್ಲಿ ಹಣ ತೊಡಗಿಸಬಾರದು ಎಂಬುದು ಸರ್ಕಾರದ ಉದ್ದೇಶವಲ್ಲ. ಆದರೆ, ನಿತ್ಯವೂ ಷೇರು ವಹಿವಾಟಿನಲ್ಲಿ ತೊಡಗುವುದು ಸರಿ ಅಲ್ಲ ಎಂಬುದು ಸರ್ಕಾರದ ಅನಿಸಿಕೆ ಎನ್ನಲಾಗಿದೆ. ಈ ಸಂಬಂಧ ಕಾನೂನೂ ಕೂಡ ಇದೆ.1964ರ ಸೆಂಟ್ರಲ್ ಸಿವಿಲ್ ಸರ್ವಿಸ್ ನಿಯಮಗಳ ಪ್ರಕಾರ ಷೇರು, ಸೆಕ್ಯೂರಿಟಿ ಅಥವಾ ಇತರ ಹೂಡಿಕೆಗಳ ಮೇಲೆ ನಿಯಮಿತವಾಗಿ ಖರೀದಿ ಅಥವಾ ಮಾರಾಟ ಮಾಡುವುದನ್ನು ಸ್ಪೆಕ್ಯುಲೇಶನ್ ಎಂದು ಪರಿಗಣಿಸಲಾಗುತ್ತದೆ. ಅಸಹಜ ಲಾಭದ ನಿರೀಕ್ಷೆಯಲ್ಲಿ ಹೂಡಿಕೆ ಮಾಡುವುದು ಸ್ಪೆಕ್ಯೂಲೇಶನ್. ಷೇರುಪೇಟೆ ವಹಿವಾಟು ಬಹುತೇಕ ಸ್ಪೆಕ್ಯುಲೇಶನ್ ಆಗಿಹೋಗಿದೆ. ಬಹಳಷ್ಟು ಷೇರುಗಳು ದಿಢೀರ್ ಉಬ್ಬಿ ಹೋಗಿ ಹಾಗೆಯೇ ಅಷ್ಟೇ ವೇಗದಲ್ಲಿ ಕುಸಿತುಹೋಗಿದ್ದಿದೆ.

ಅಮೇಜಾನ್‌ನಿಂದ 10 ಸಾವಿರ ಉದ್ಯೋಗ ಕಡಿತ? ಎಲ್ಲೆಲ್ಲಿ ಎಷ್ಟು ಲೇ ಆಫ್?ಅಮೇಜಾನ್‌ನಿಂದ 10 ಸಾವಿರ ಉದ್ಯೋಗ ಕಡಿತ? ಎಲ್ಲೆಲ್ಲಿ ಎಷ್ಟು ಲೇ ಆಫ್?

ಸಿವಿಲ್ ಸರ್ವಿಸ್ ಕಾನೂನು ಹೇಳೋದೇನು?

ಸಿವಿಲ್ ಸರ್ವಿಸ್ ಕಾನೂನು ಹೇಳೋದೇನು?

ಸಿವಿಲ್ ಸರ್ವಿಸಸ್ ನಿಯಮಗಳ ಪ್ರಕಾರ ಸರ್ಕಾರಿ ಉದ್ಯೋಗಿಗಳು ಸ್ಪೆಕ್ಯುಲೇಶನ್‌ನಲ್ಲಿ ತೊಡಗಬಾರದು. ಸರ್ಕಾರಿ ನೌಕರರು ತಾವಷ್ಟೇ ಅಲ್ಲ, ಬೇರೆ ವ್ಯಕ್ತಿಯ ಮೂಲಕವೂ ತಮ್ಮ ಷೇರು ವಹಿವಾಟು ನಡೆಸುವಂತಿಲ್ಲ ಎಂದು ಈ ನಿಯಮ ಹೇಳುತ್ತದೆ.

"ಯಾವುದೇ ಸರ್ಕಾರಿ ನೌಕರರು ತಾವೇ ಖುದ್ದಾಗಿ ಅಥವಾ ತನ್ನ ಪರವಾಗಿ ಇನ್ನೊಬ್ಬ ವ್ಯಕ್ತಿಯ ಮೂಲಕ ತನ್ನ ಕರ್ತವ್ಯ ಪಾಲನೆಗೆ ಪ್ರಭಾವ ತರುವಂತಹ ಯಾವುದೇ ಹೂಡಿಕೆ ಮಾಡಬಾರದು" ಎಂದು 1964ರ ಸೆಂಟ್ರಲ್ ಸಿವಿಲ್ ಸರ್ವಿಸ್ ಕಾನೂನು ಹೇಳುತ್ತದೆ.

ಈ ಕಾನೂನಿನ ರೂಲ್ ನಂಬರ್ 16ರ ಉಪನಿಮಯ (1) ಪ್ರಕಾರ ಸರ್ಕಾರಿ ನೌಕರರು ಯಾವುದೇ ಸ್ಟಾಕ್, ಷೇರು ಅಥವಾ ಇತರ ಹೂಡಿಕೆಗಳ ಸ್ಪೆಕ್ಯುಲೇಶನ್‌ನಲ್ಲಿ ತೊಡಗಲು ಅನುಮತಿ ಇರುವುದಿಲ್ಲ. ಈ ಉಪನಿಯಮದಲ್ಲಿ ಸ್ಪೆಕ್ಯುಲೇಶನ್ ಬಗ್ಗೆ ವಿವರಣೆ ನೀಡಲಾಗಿದೆ. ಷೇರು, ಸೆಕ್ಯೂರಿಟಿ ಅಥವಾ ಇತರ ಹೂಡಿಕೆಗಳನ್ನು ಬಾರಿ ಬಾರಿ ಖರೀದಿ ಅಥವಾ ಮಾರಾಟ ಮಾಡುವುದನ್ನು ಸ್ಪೆಕ್ಯುಲೇಶನ್ ಎಂದು ಪರಿಗಣಿಸಲಾಗುತ್ತದೆ.

 ಷೇರುಪೇಟೆಯಲ್ಲಿ ಎಲ್‌ಐಸಿ ಮಿಂಚು; ಈಗ ಕೊಂಡರೆ ಲಾಭವಾ? ಷೇರುಪೇಟೆಯಲ್ಲಿ ಎಲ್‌ಐಸಿ ಮಿಂಚು; ಈಗ ಕೊಂಡರೆ ಲಾಭವಾ?

ಸರ್ಕಾರಿ ನೌಕರರು ಹೂಡಿಕೆ ಮಾಡಬಾರದಾ?

ಸರ್ಕಾರಿ ನೌಕರರು ಹೂಡಿಕೆ ಮಾಡಬಾರದಾ?

ಸರ್ಕಾರಿ ನೌಕರರು ಷೇರುಗಳ ಮೇಲೆ ಹೂಡಿಕೆಯೇ ಮಾಡಬಾರದಾ ಎಂಬ ಪ್ರಶ್ನೆ ಬರುತ್ತದೆ. ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬಾರದು ಎಂದು ಎಲ್ಲಿಯೂ ನಿಯಮ ಇಲ್ಲ. ಆದರೆ, ಬಾರಿ ಬಾರಿ ಷೇರು ವಹಿವಾಟು ನಡೆಸಬಾರದು ಎಂಬ ನಿಯಮ ಇದೆ. ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಸ್ಟಾಕ್ ಬ್ರೋಕರ್‌ಗಳ ಮೂಲಕವೋ ಅಥವಾ ಕಾನೂನು ಸಮ್ಮತವಾಗಿ ಪರವಾನಿಗೆ ಪಡೆದಿರುವ ಇತರ ವ್ಯಕ್ತಿಗಳ ಮೂಲಕವೋ ಆಗೊಮ್ಮೆ ಹೀಗೊಮ್ಮೆ ಹೂಡಿಕೆ ಮಾಡಲು ಅವಕಾಶ ಇದೆ ಎಂದು ತಜ್ಞರು ಹೇಳುತ್ತಾರೆ.

ಆದರೆ, 1964ರ ಸೆಂಟ್ರಲ್ ಸಿವಿಲ್ ಸರ್ವಿಸ್ ನಿಯಮದಲ್ಲಿ ಹೆಚ್ಚು ಸ್ಪಷ್ಟತೆ ಇಲ್ಲ ಎಂಬ ಅನಿಸಿಕೆ ಇದೆ. ಸರ್ಕಾರಿ ನೌಕರರು ಬಾರಿ ಬಾರಿ ಷೇರುಗಳ ಮಾರಾಟ ಅಥವಾ ಖರೀದಿ ಮಾಡಬಾರದು ಎಂದು ನಿಯಮದಲ್ಲಿ ತಿಳಿಸಲಾಗಿದೆ. ಆದರೆ, ಎಷ್ಟು ಬಾರಿಗೊಮ್ಮೆ ವಹಿವಾಟು ನಡೆಸಬಾರದು ಎಂದು ನಿರ್ದಿಷ್ಟವಾಗಿ ತಿಳಿಸಿಲ್ಲ. ಈಗ ನಿತ್ಯ ಒಮ್ಮೆಯಾದರೂ ಷೇರು ವಹಿವಾಟು ನಡೆಸುವುದು, ಅಥವಾ ವಾರಕ್ಕೆ 2-3 ಬಾರಿ ವಹಿವಾಟು ನಡೆಸುವುದೋ, ಅಥವಾ ತಿಂಗಳಿಗೆ ಏಳೆಂಟು ಬಾರಿ ಷೇರು ವಹಿವಾಟು ನಡೆಸುವುದೋ ಹೀಗೆ ಒಂದು ನಿರ್ದಿಷ್ಟ ಶ್ರೇಣಿಯನ್ನು ನಿಯಮದಲ್ಲಿ ತಿಳಿಸಲಾಗಿಲ್ಲ. ಹೀಗಾಗಿ, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.

 

ಏನಿದೆ ಶಿಕ್ಷೆ?

ಏನಿದೆ ಶಿಕ್ಷೆ?

ಆದರೂ ಹಲವು ಸರ್ಕಾರಿ ನೌಕರರಿಗೆ ಈ ನಿಯಮ ಉಲ್ಲಂಘನೆಗೆ ನೋಟೀಸ್ ಬಂದಿದ್ದು ವ್ಯಾಜ್ಯಗಳಾಗಿ ಮಾರ್ಪಟ್ಟ ಪ್ರಕರಣಗಳಿವೆ. ಒಂದು ವೇಳೆ ಈ ನಿಯಮದ ಪ್ರಕಾರ ಸರ್ಕಾರಿ ನೌಕರರು ತಪ್ಪೆಸಗಿರುವುದು ಋಜುವಾತಾದಲ್ಲಿ ಕೆಲಸವನ್ನೇ ಕಳೆದುಕೊಳ್ಳುವ ಹಂತದವರೆಗೂ ಶಿಕ್ಷೆ ಇರುತ್ತದೆ.

ಒಂದು ವೇಳೆ, ಇಂಥ ಆರೋಪದಲ್ಲಿ ಕೆಲಸ ಕಳೆದುಕೊಂಡರೂ ಆ ನೌಕರನ ಪಿಂಚಣಿ ಇತ್ಯಾದಿ ನಿವೃತ್ತಿ ಸೌಲಭ್ಯಗಳನ್ನು ಹಿಂಪಡೆಯಲಾಗುವುದಿಲ್ಲ.

 

English summary

Government Employees May Lose Job If Involved In Frequent Trading Of Shares

1964 Central Civil Service rule prohibits government employees from doing frequent trading of stock, share or any other investment that affects his job.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X