ಸರ್ಕಾರವು ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್(ನಬಾರ್ಡ್) ಮತ್ತು ಇತರ ಸ್ಥಳೀಯ ಬ್ಯಾಂಕುಗಳ ಸಹಯೋಗದೊಂದಿಗೆ ಮೇಕೆ ಸಾಕಣೆಗಾಗಿ ಯೋಜನೆಯೊಂದನ್ನು ಪರಿಚಯಿಸಿದೆ. ಯಾರು ಮೇಕೆ ಸಾಕಾಣಿಕೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೋ ಅವರಿಗೆ ಹಣಕಾಸಿನ ನೆರವು ನೀಡಲು ಈ ನಿಧಿಯನ್ನು ಸ್ಥಾಪಿಸಲಾಗಿದೆ. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) ಪಶುಸಂಗೋಪನೆ ಮತ್ತು ಡೈರಿ ಇಲಾಖೆಯ ಅಡಿಯಲ್ಲಿಈ ಯೋಜನೆ ಬರುತ್ತದೆ.
ಇತ್ತೀಚಿನ ದಿನಗಳಲ್ಲಿ, ಮೇಕೆ ಸಾಕಾಣಿಕೆ ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಇದು ಉದ್ಯಮವಾಗಿ ಬದಲಾಗುತ್ತಿದೆ. ರೈತರು ಹೆಚ್ಚುವರಿ ಆದಾಯಕ್ಕಾಗಿ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಆಡಿನಿಂದ ಬಹು ಉಪಯೋಗವಿದ್ದು, ಇದು ದೇಶದ ಕೆಳ ವರ್ಗದ ರೈತರ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಮೇಕೆ ಸಾಕಾಣಿಕೆಯಿಂದಾಗಿ ಆಡುಗಳನ್ನು ಒಂದೇ ವರ್ಷಕ್ಕೆ ಮಾರಾಟ ಮಾಡಿದರೂ ಲಾಭ ಗಳಿಸಬಹುದು. ಇದರೊಂದಿಗೆ ಆಡಿನ ಹಾಲು, ಗೊಬ್ಬರಕ್ಕೂ ಉತ್ತಮ ಬೇಡಿಕೆಯಿದೆ. ಆಡಿನ ಹಾಲು ಪೌಷ್ಠಿಕತೆ ಹೊಂದಿದ್ದು, ಇದು ಒಂದು ಸಮತೋಲನ ಆಹಾರದ ಮೂಲವಾಗಿದೆ. ಇವುಗಳ ಮಾಂಸಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇದೆ.
ಕೇಂದ್ರ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳು ಮೇಕೆ ಸಾಕಾಣಿಕೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಸಹಾಯ ಮಾಡುತ್ತಿವೆ. ಈ ಯೋಜನೆಯ ಉದ್ದೇಶ ಕಡಿಮೆ ಆದಾಯದ ಕುಟುಂಬಗಳಿಗೆ ಧನಸಹಾಯ ಮಾಡುವುದು ಜೊತೆಗೆ ಅವರ ಅಭಿವೃದ್ದಿ ಮತ್ತು ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವುದಾಗಿದೆ.
ಹರಿಯಾಣ ರಾಜ್ಯ ಸರ್ಕಾರ ಮೇಕೆ ಸಾಕಾಣಿಕೆಯನ್ನು ಉತ್ತೇಜಿಸಲು ಶೇಕಡ 90 ರವರೆಗೆ ಸಹಾಯಧನ ನೀಡುತ್ತಿದ್ದು, ಮಧ್ಯಪ್ರದೇಶ ಸರ್ಕಾರ ಸುಮಾರು ಶೇಕಡ 60 ರಷ್ಟು ಸಬ್ಸಿಡಿ ನೀಡುತ್ತದೆ. ಕೇಂದ್ರ ಸರಕಾರ ಮೇಕೆ ಸಾಕಾಣಿಕೆಗೆ ಶೇ.35ರ ವರೆಗೆ ಸಹಾಯಧನ ನೀಡುತ್ತಿದ್ದು, ನೀವು ಕೇಂದ್ರ ಸರ್ಕಾರದ ಯೋಜನೆಯಾದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿಗಳ ಆಯ್ಕೆ ಮಾಡಬಹುದು.
ಯಾರಾದರೂ ಮೇಕೆ ಸಾಕಾಣಿಕೆ ಮಾಡಲು ಬಯಸಿದರೆ, ಕನಿಷ್ಟ 20 ಮೇಕೆಗಳೊಂದಿಗೆ ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ. ಯಾಕೆಂದರೆ ಇದು ಸಾಕಾಣಿಕೆದಾರರಿಗೆ ವಾರ್ಷಿಕವಾಗಿ 2,50,000 ರೂಪಾಯಿವರೆಗೆ ಗಳಿಸಲು ಸಹಾಯ ಮಾಡುತ್ತದೆ. ವರದಿಗಳ ಪ್ರಕಾರ, ಪ್ರಪಂಚದಾದ್ಯಂತ ಜನರು ಗೋಮಾಂಸ ಅಥವಾ ಹಂದಿಮಾಂಸಕ್ಕಿಂತ ಚೆವೊನ್ (ಮೇಕೆ ಮಾಂಸ) ಸೇವಿಸುತ್ತಿದ್ದು ಮೇಕೆ ಹಾಲಿಗೂ ಹೆಚ್ಚಿನ ಬೇಡಿಕೆಯಿದೆ.
ಮೇಕೆ ಸಾಕಣೆಯ ಪ್ರಯೋಜನಗಳು:
* ಮೇಕೆ ಸಾಕಾಣಿಕೆಗೆ ಆರಂಭಿಕ ಹೂಡಿಕೆ ಕಡಿಮೆ.
* ಕುರಿಗಳಿಗೆ ಹೋಲಿಸಿದರೆ ಆಡುಗಳು 2.5 ಪಟ್ಟು ಹೆಚ್ಚು ಮಿತವ್ಯಯಿಯಾಗಿದೆ.
* ಆಡುಗಳ ಸಣ್ಣ ಗಾತ್ರದ್ದಾಗಿರುವುದರಿಂದ ಕೊಟ್ಟಿಗೆ ಅವಶ್ಯಕತೆ, ನಿರ್ವಹಣೆ ಸಮಸ್ಯೆ ಕೂಡಾ ಕಡಿಮೆ
* ಮಿಶ್ರ ಜಾತಿಯ ಆಡುಗಳು ಮೇಯಿಸಲು ಸೂಕ್ತವಾಗಿರುತ್ತದೆ.
* ಮೇಕೆ ಮಾಂಸವು ಹೆಚ್ಚು ತೆಳ್ಳಗಿರುತ್ತದೆ (ಕಡಿಮೆ ಕೊಲೆಸ್ಟ್ರಾಲ್ ಹೊಂದಿರುತ್ತದೆ) ಮತ್ತು ಮೇಕೆ ಹಾಲು ಸುಲುಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ಅಧಿಕವಾಗಿ ಈ ಮಾಂಸ ಸೇವಿಸುತ್ತಾರೆ.
ಮೇಕೆ ಸಾಕಾಣಿಕೆಯಲ್ಲಿ ಸುಧಾರಿತ ಮೇಕೆ ತಳಿಗಳನ್ನು ಆಯ್ಕೆ ಮತ್ತು ಋತುಗಳಿಗೆ ಅನುಗುಣವಾಗಿ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದನ್ನು ಅತಿ ಮುಖ್ಯವಾಗುತ್ತದೆ. ಭಾರತದಲ್ಲಿ ಸುಮಾರು 21 ವಿಧದ ಮೇಕೆ ತಳಿಗಳು ಲಭ್ಯವಿದ್ದು ಗರಿಷ್ಠ ಲಾಭಕ್ಕಾಗಿ ಸರಿಯಾದದನ್ನು ಆಯ್ಕೆ ಮಾಡುವುದು ಮೇಕೆ ಸಾಕಾಣಿಕೆಯಲ್ಲಿ ಪ್ರಮುಖ ಅಂಶ ಎಂಬುವುದನ್ನು ಗಮನದಲ್ಲಿಡಬೇಕು.
ವರದಿಗಳ ಪ್ರಕಾರ, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಮೇಕೆ ಸಾಕಣೆಯನ್ನು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಳ್ಳುತ್ತಿದ್ದಾರೆ. ವಿವಿಧ ಬ್ಯಾಂಕ್‌ಗಳು ಮೇಕೆ ಸಾಕಣೆಗೆ ಸಾಲ ನೀಡುತ್ತವೆ. ಎಸ್‌ಬಿಐ, ನಬಾರ್ಡ್, ಕೆನರಾ ಬ್ಯಾಂಕ್, ಮೈಕ್ರೋ ಯೂನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ (ಮುದ್ರಾ) ಸಾಲ ಯೋಜನೆ ಮತ್ತು ಐಡಿಬಿಐ ಬ್ಯಾಂಕ್‌ನಂತಹ ಹಲವಾರು ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತದೆ.


Click it and Unblock the Notifications