ಗ್ರೀನ್ FD ಎಂದರೇನು, ಯಾರು ಹೂಡಿಕೆ ಮಾಡಬಹುದು?

ನವದೆಹಲಿ, ಜುಲೈ 11: ಹೂಡಿಕೆ ಎಂದ ತಕ್ಷಣ ನಮ್ಮೆಲ್ಲರ ಕಣ್ಣ ಮುಂದೆ ಬರುವುದನ ಎಫ್‌ಡಿ ಅಂದರೆ ಫಿಕ್ಸೆಡ್‌ ಡಿಪಾಸಿಟ್. ಎಫ್‌ಡಿ ಯಲ್ಲಿ ರಿಟರ್ನ್ ಗ್ಯಾರಂಟಿ ಇರುತ್ತದೆ. ನೀವು ಫಿಕ್ಸೆಟ್ ಅವಧಿಗೆ ಅಂದರೆ ಒಂದು ಎರಡು ಅಥವಾ ಐದು ವರ್ಷಗಳಿಗೆ ಇನ್ವೆಸ್ಟ್ ಮಾಡುತ್ತೀರಿ. ಬಹುತೇಕ ಎಲ್ಲರಿಗೂ ಟರ್ಮ್ ಡೆಪಾಸಿಟ್ ಬಗ್ಗೆ ತಿಳಿದಿರುತ್ತದೆ. ಆದರೆ ನಿಮಗೆ ಗ್ರೀನ್ ಟರ್ಮ್ ಡೆಪಾಸಿಟ್ ಅಥವಾ ಗ್ರೀನ್ ಎಫ್ ಡಿ ಬಗ್ಗೆ ಗೊತ್ತಿದೆಯೇ? ಹಾಗೆಂದರೆ ಏನು? ರೆಗ್ಯುಲರ್ ಎಫ್ ಡಿ ಗೂ ಇದಕ್ಕೂ ಏನು ವ್ಯತ್ಯಾಸ? ಗ್ರೀನ್ ಮತ್ತು ನಾರ್ಮಲ್ ಎಫ್ ಡಿ ಗೂ ಬಡ್ಡಿ ದರದಲ್ಲಿ ವ್ಯತ್ಯಾಸ ಇದೆಯೇ? ಇದನ್ನು ಸಹ ನಾವು ತಿಳಿದುಕೊಳ್ಳಬೇಕು.

ಗ್ರೀನ್ ಎಫ್ ಡಿಯನ್ನು ಪರಿಸರ ಸ್ನೇಹಿ ಫಿಕ್ಸೆಡ್ ಡೆಪಾಸಿಟ್ ಎಂದೂ ಕರೆಯಲಾಗುತ್ತದೆ. ಇದರಿಂದ ಸಂಗ್ರಹವಾದ ಹಣವನ್ನು ಪರಿಸರಕ್ಕೆ ಅನುಕೂಲಕರವಾದ ಪ್ರಾಜೆ ಕ್ಟ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಉದಾಹರಣೆಗೆ ಸೋಲಾರ್ ಪವರ್, ವಿಂಡ್ ಫಾರ್ಮ್, ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ರಕ್ಷಾ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

ಗ್ರೀನ್ FD ಎಂದರೇನು, ಯಾರು ಹೂಡಿಕೆ ಮಾಡಬಹುದು?

ಒಂದು ಸಾಮಾನ್ಯ ಬ್ಯಾಂಕ್ ಎಫ್‌ಡಿ ರೀತಿಯಲ್ಲೇ, ಗ್ರಾಹಕರು ಗ್ರೀನ್ ಫಿಕ್ಸೆಡ್ ಡೆಪಾಸಿಟ್ ನಲ್ಲೂ ಕೂಡ ಫಿಕ್ಸೆಡ್ ಟೈಮಿಗೆ ಹೂಡಿಕೆ ಮಾಡಬಹುದು. ಆದರೆ ಇದರಲ್ಲಿರುವ ವ್ಯತ್ಯಾಸ ಏನೆಂದರೆ ಫಂಡ್ ಅಲೊಕೇಶನ್. ಗ್ರೀನ್ ಎಫ್ ಡಿ ಯಲ್ಲಿ ಸಂಗ್ರಹವಾದ ಹಣವನ್ನು ಎಕೋ ಫ್ರೆಂಡ್ಲಿ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಸಾಮಾನ್ಯ ಡಿಪೋಸಿಟ್ ಗಳಲ್ಲಿ ಯಾವುದೇ ನಿರ್ದಿಷ್ಟ ಪ್ರಾಜೆಕ್ಟ್ ಗಳಿಗೆ ಹಣ ಹಾಕಲಾಗುವುದಿಲ್ಲ. ಇದು ಒಂದು ಸಾಮಾನ್ಯ ಹೂಡಿಕೆ ನಿಧಿಗೆ ಹೋಗುತ್ತದೆ. ಈ ನಿಧಿಯನ್ನು ವ್ಯಾಪಾರ, ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳಿಗೆ ಬಳಸಲಾಗುತ್ತದೆ.

ಇದನ್ನು ಹೊರತುಪಡಿಸಿ ಉಳಿದ ಎಲ್ಲ ವಿಷಯಗಳಲ್ಲೂ ಎರಡು ಎಫ್ ಡಿಗಳು ಒಂದೇ ರೀತಿಯಾಗಿರುತ್ತದೆ. ಮೆಚುರಿಟಿಯಾದಾಗ ಹಣ ವಿತ್ ಡ್ರಾ ಮಾಡುವುದು, ರಿನಿವಲ್ ಮಾಡುವ ಸೌಲಭ್ಯ ಇರುತ್ತದೆ. ಓವರ್ ಡ್ರಾಪ್ ಸೌಲಭ್ಯ ಕೂಡ ಗ್ರೀನ್ ಎಫ್ ಡಿ ಯಲ್ಲಿ ಇರುತ್ತದೆ. ಬಡ್ಡಿ ಪಾವತಿ ಮಾಸಿಕ, ತ್ರೈಮಾಸಿಕ, ವಾರ್ಷಿಕ ಅಥವಾ ಮೆಚುರಿಟಿಯಲ್ಲಿ ಮಾಡಬಹುದು. ಇದನ್ನು ಯಾವುದೇ ರೂಪದಲ್ಲಿ ಕೂಡ ಖರೀದಿ ಮಾಡಬಹುದು.
ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಅನ್ನು ಜನಸಾಮಾನ್ಯರು, ಹಿರಿಯ ನಾಗರಿಕರು, ಅನಿವಾಸಿ ಭಾರತೀಯರು ಅಥವಾ ಎನ್ ಆರ್ ಐ ಗಳು ಹಾಗೂ ಅಧಿಕ ಸಂಪತ್ತು ಇರುವ ವ್ಯಕ್ತಿಗಳು ಕೂಡ ತೆರೆಯಬಹುದು.

ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಗಳ ಬಡ್ಡಿ ದರ ಸಾಮಾನ್ಯ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಹೋಲಿಸಿದರೆ ಹೆಚ್ಚು ಅಥವಾ ಕಡಿಮೆ ಇರಬಹುದು. ಏಕೆಂದರೆ ಇದು ಬ್ಯಾಂಕ್ ನಿಗದಿ ಮಾಡಿದ ನೀತಿಗಳನ್ನು ಆಧರಿಸಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ ಡಿ ಎಫ್ ಸಿ ಬ್ಯಾಂಕ್, ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ಯಾದಿ ಸಂಸ್ಥೆಗಳು ಗ್ರೀನ್ ಎಫ್ ಡಿ ಗಳನ್ನು ವಿತರಿಸುತ್ತವೆ.

ಎಸ್ ಬಿ ಐ ರೆಗುಲರ್ ಎಫ್ ಡಿಗಳಲ್ಲಿ 3 ರಿಂದ ಏಳು ಪರ್ಸೆಂಟ್ ಬಡ್ಡಿದರ ನೀಡುತ್ತದೆ. ಏಳು ದಿನಗಳಿಂದ 10 ವರ್ಷಗಳ ಅವಧಿಯ ಎಫ್ ಡಿ ಗಳ ಮೇಲೆ ಜನಸಾಮಾನ್ಯರಿಗೆ ಈ ದರ ಇರುತ್ತದೆ. 400 ದಿನಗಳ ವಿಶೇಷ ಡಿಪಾಸಿಟ್ ಮೇಲೆ 7.10% ಬಡ್ಡಿ ಇದೆ. ಇನ್ನು ಗ್ರೀನ್ ಡೆಪಾಸಿಟ್ ಬಗ್ಗೆ ಮಾತನಾಡುವುದಾದರೆ 1,111 ರಿಂದ 1,777 ದಿನಗಳ ಎಫ್ ಡಿ ಗಳಿಗೆ 6.65% ಬಡ್ಡಿ ದರ ಇದೆ. ಇನ್ನು 2,222 ದಿನದ ಗ್ರೀನ್ ಎಫ್ ಡಿ ಮೇಲೆ 6.40% ಬಡ್ಡಿ ಸಿಗುತ್ತದೆ. ಇದನ್ನು ಒಂದು ಉದಾಹರಣೆ ರೀತಿ ನಿಮ್ಮ ಮುಂದೆ ಇಟ್ಟಿದ್ದೇವೆ. ಬ್ಯಾಂಕ್ ನೀತಿ ಮತ್ತು ನಿಯಮಗಳು ಪರಿಶೀಲನೆಗೆ ಒಳಪಟ್ಟಾಗ ಬದಲಾಗಬಹುದು.

ಸಮಗ್ರ ಮಾಹಿತಿಯನ್ನು ಬ್ಯಾಂಕ್ ನ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು. ನಿಮ್ಮ ಟೆನ್ಯೂರ್ ಆಧರಿಸಿ, ನಾರ್ಮಲ್ ಎಫ್‌ಡಿಗಿಂತ ಗ್ರೀನ್ ಎಫ್‌ಡಿಯಲ್ಲಿ ಹೆಚ್ಚಿ ಬಡ್ಡಿ ಸಿಗುತ್ತದೆ ಎಂದಾದರೆ ನೀವು ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು. ಸದ್ಯ, ಶಾರ್ಟ್ ಟರ್ಮ್ ರೆಗ್ಯುಲರ್ ಎಫ್‌ಡಿಗಳಿಗೆ ಅಂದರೆ 1 ರಿಂದ 3 ವರ್ಷಗಳ ಅವಧಿಯ ಎಫ್‌ಡಿಗಳಿಗೆ ಹೆಚ್ಚು ಬಡ್ಡಿ ಕೊಡುತ್ತಿವೆ. ಸಾಮಾನ್ಯ ಜನರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ 0.50% ಹೆಚ್ಚು ಬಡ್ಡಿ ಸಿಗುತ್ತದೆ. ನೀವು ಒಂದಿಷ್ಟು ಮೊತ್ತ ಹೂಡಿಕೆಗೆ ತೆಗೆದಿಟ್ಟು ದೊಡ್ಡ ಮೊತ್ತದಲ್ಲಿ ಬಡ್ಡಿ ದರದ ವ್ಯತ್ಯಾಸ ಇದ್ದರೆ ಆಗ ಗ್ರೀನ್ ಎಫ್ ಡಿ ಆಯ್ಕೆ ಮಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+