ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಇಂಟರ್‌ನೆಟ್ ಇಲ್ಲದ, ಆಫ್‌ಲೈನ್ ಡಿಜಿಟಲ್ ಪಾವತಿ ಯೋಜನೆಯನ್ನು ಆರಂಭ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಯೋಜನೆಯಡಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರಂಚ್‌ಫಿಶ್ ಸಹಭಾಗಿತ್ವದಲ್ಲಿ ಆಫ್‌ಲೈನ್‌ಪೇ ಅನ್ನು ಆರಂಭ ಮಾಡಿದೆ.
ಈ ಆಫ್‌ಲೈನ್ ಪಾವತಿ ವಿಧಾನದಲ್ಲಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬೇಕಾಗಿಲ್ಲ. ಗ್ರಾಹಕರು ಮತ್ತು ಉದ್ಯಮಿಗಳು ಹಣವನ್ನು ಕಳುಹಿಸಲು ಮತ್ತು ಪಡೆಯಲು ಈ ಇಂಟರ್‌ನೆಟ್ ಇಲ್ಲದೆಯೇ ಪಾವತಿ ಮಾಡುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಆಫ್‌ಲೈನ್ ವಿಧಾನವನ್ನು ಆರಂಭಿಸಿದ ಭಾರತದ ಮೊದಲ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದೆ.
ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಪಾವತಿಗೆ ಅಧಿಕ ಒತ್ತನ್ನು ನೀಡಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ, ಇಂಟರ್‌ನೆಟ್ ಸೌಲಭ್ಯವಿಲ್ಲದ ಪ್ರದೇಶದಲ್ಲಿ ಇನ್ನೂ ಕೂಡಾ ಡಿಜಿಟಲ್ ಪಾವತಿಯ ಪರಿಚಯವೇ ಆಗಿಲ್ಲ. ಇಂತಹ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಯನ್ನು ನಡೆಸಲು ಸಹಾಯವಾಗಲು ಎಚ್‌ಡಿಎಫ್‌ಸಿ ಬ್ಯಾಂಕ್ ಈ ಆಫ್‌ಲೈನ್ ಪಾವತಿ ವಿಧಾನವನ್ನು ಆರಂಭಿಸಿದೆ.

ದೊಡ್ಡ ಕಾರ್ಯಕ್ರಮಗಳಲ್ಲಿ, ಜಾತ್ರೆ ಸಮಾರಂಭಗಳಲ್ಲಿ, ವಹಿವಾಟು ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ನಗದು ರಹಿತ ವಹಿವಾಟು ನಡೆಸಲು ಈ ಆಫ್‌ಲೈನ್‌ಪೇ ಸಹಾಯಕವಾಗಲಿದೆ. ಸಾಂಪ್ರಾದಾಯಿಕವಾದ ಪಾವತಿ ವಿಧಾನದಲ್ಲಿ ಒಬ್ಬರು ಆನ್‌ಲೈನ್ ಪಾವತಿಯನ್ನು ಮಾಡುವುದು ಮುಖ್ಯವಾಗುತ್ತದೆ. ಆದರೆ ನೆಟ್‌ವರ್ಕ್ ಸಮಸ್ಯೆ ಇರುವಲ್ಲಿ ಈ ಪಾವತಿ ನಡೆಸುವುದು ಕಷ್ಟವಾಗಿದೆ. ಆದರೆ ಇದಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಆಫ್‌ಲೈನ್ ಪೇಮೆಂಟ್ ಸಹಾಯವಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....
ಆಫ್‌ಲೈನ್ ಪಾವತಿ ವಿಧಾನ ಹೇಗೆ?
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಆಫ್‌ಲೈನ್ ಪಾವತಿ ವಿಧಾನದಲ್ಲಿ ನಾವು ಆಫ್‌ಲೈನ್‌ನಲ್ಲಿ ಪಾವತಿಯನ್ನು ಮಾಡಲು ಸಾಧ್ಯವಾಗಲಿದೆ. ಈ ಸೇವೆಯು ಇತರೆ ಬ್ಯಾಂಕ್‌ಗಳಿಗೂ ಲಭ್ಯವಿದೆ. invitation link ಮೂಲಕ ಈ ಸೇವೆಯನ್ನು ಪಡೆಯಬಹುದು. ಇದು ನಾಲ್ಕು ತಿಂಗಳ ಪ್ರಯೋಗವಾಗಿದೆ. ಭಾರತದ 16 ನಗರಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತದೆ. ಈ ಪ್ರಾಯೋಗಿಕ ಸಂದರ್ಭದಲ್ಲಿ ಆಫ್‌ಲೈನ್ ವಹಿವಾಟಿನಲ್ಲಿ ವಹಿವಾಟಿನ ಮೊತ್ತದ ಮಿತಿ 200 ರೂಪಾಯಿ ಆಗಿದೆ.
ಯಾವುದೇ ಇಂಟರ್‌ನೆಟ್ ಇಲ್ಲದ ಪ್ರದೇಶಗಳಾದ ಮೆಟ್ರೋ ಅಂಡರ್‌ಗ್ರೌಂಡ್ ಸ್ಟೇಷನ್, ಪಾರ್ಕಿಂಗ್ ಸ್ಥಳ, ರಿಟೇಲ್ ಸ್ಟೋರ್‌ಗಳು, ಏರ್‌ಪ್ಲೇನ್‌ಗಳು, ರೈಲುಗಳು, ಶಿಪ್‌ಗಳಲ್ಲಿ ಈ ಆಫ್‌ಲೈನ್ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ. ಎಚ್‌ಡಿಎಫ್‌ಸಿ ಹಾಗೂ ಕ್ರಂಚ್‌ಫಿಶ್ ಡೆವಲಪ್‌ಮೆಂಟ್ ಮಾಡಿದ ಈ ಯೋಜನೆಗೆ ಆರ್‌ಬಿಐ ಸೆಪ್ಟೆಂಬರ್ 2022ರಲ್ಲಿ ಅನುಮೋದನೆ ನೀಡಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದಲ್ಲಿ ಆಫ್‌ಲೈನ್ ಡಿಜಿಟಲ್ ಪಾವತಿ ಯುಗಕ್ಕೆ ಹೊಸ ಮುನ್ನುಡಿ ಬರೆದಂತಾಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications