ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಇತ್ತೀಚೆಗೆ ಹೊಸ ಆಯ್ಕೆಯೊಂದನ್ನು ನೀಡಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ಗೆ (ಯುಪಿಐ) ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ ಆಯ್ಕೆಯನ್ನು ಇತ್ತೀಚೆಗೆ ಎನ್‌ಪಿಸಿಐ ನೀಡಿದೆ.
ದೇಶದಲ್ಲಿ ಈಗಾಗಲೇ ಆನ್‌ಲೈನ್ ಪಾವತಿಯನ್ನು ಜನರು ಹೆಚ್ಚಾಗಿ ಮಾಡುತ್ತಿದ್ದಾರೆ. ಆದರೆ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯಲ್ಲಿ ಆನ್‌ಲೈನ್ ವಹಿವಾಟನ್ನು ಇನ್ನಷ್ಟು ಹೆಚ್ಚಳ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಎನ್‌ಪಿಸಿಐ ದೇಶದಲ್ಲಿ ಆನ್‌ಲೈನ್ ಪಾವತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರೆಡಿಟ್ ಕಾರ್ಡ್‌ಗೆ ಯುಪಿಐ ಲಿಂಕ್ ಮಾಡುವ ಆಯ್ಕೆಯನ್ನು ಪರಿಚಯಿಸಿದೆ.
ಈ ಫೀಚರ್ ಅನ್ನು ಹಲವಾರು ಬ್ಯಾಂಕುಗಳು ಅಳವಡಿಸಿಕೊಳ್ಳುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಈಗ ರುಪೇ ಕ್ರೆಡಿಟ್ ಕಾರ್ಡ್‌ಗೆ ಯುಪಿಐ ಲಿಂಕ್ ಮಾಡುವ ಆಯ್ಕೆಯನ್ನು ನೀಡಿದೆ. ಗ್ರಾಹಕರು ಶೀರ್ಘವಾಗಿ ತನ್ನ ಎಚ್‌ಡಿಎಫ್‌ಸಿ ರುಪೇ ಕ್ರೆಡಿಟ್ ಕಾರ್ಡ್‌ಗೆ ಯುಪಿಐ ಅನ್ನು ಲಿಂಕ್ ಮಾಡಲು ಸಾಧ್ಯವಾಗುತ್ತದೆ. ಹೇಗೆ ಲಿಂಕ್ ಮಾಡುವುದು, ಪ್ರಯೋಜನವೇನು ಎಂಬ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....
ರುಪೇ ಕ್ರೆಡಿಟ್ ಕಾರ್ಡ್‌ಗೆ ಯುಪಿಐ ಲಿಂಕ್
ಹಂತ 1: ಪ್ಲೇಸ್ಟೋರ್‌ನಲ್ಲಿ BHIM ಆಪ್ ಅನ್ನು ಡೌನ್‌ಲೋಡ್ ಮಾಡಿ
ಹಂತ 2: ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಮಾಡಿ
ಹಂತ 3: ಕ್ರೆಡಿಟ್ ಕಾರ್ಡ್‌ನಲ್ಲಿರುವ ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ನಿಮ್ಮ ಅಪ್‌ಡೇಟೆಡ್ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 5: ಕಾರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಿ confirm ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ಯುಪಿಐ ಪಿನ್ ಅನ್ನು ಜನರೇಟ್ ಮಾಡಿದರೆ ಪ್ರಕ್ರಿಯೆ ಪೂರ್ಣ
ವಹಿವಾಟು ನಡೆಸುವುದು ಹೇಗೆ?
ನೀವು ಎಚ್‌ಡಿಎಫ್‌ಸಿ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐನೊಂದಿಗೆ ಲಿಂಕ್ ಮಾಡಿದ ಬಳಿಕ ಸುಲಭವಾಗಿ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಕೆಳಗಿದೆ ಮಾಹಿತಿ.
ಹಂತ 1: ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ
ಹಂತ 2: ಪಾವತಿ ಮಾಡುವ ಮೊತ್ತವನ್ನು ನಮೂದಿಸಿ
ಹಂತ 3: ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಯುಪಿಐ ಪಿನ್ ಅನ್ನು ನಮೂದಿಸಿ
ಹಂತ 5: ಶೀರ್ಘ, ಸುಲಭವಾಗಿ ಪಾವತಿ ಆಗಲಿದೆ.
ಪ್ರಯೋಜನವೇನು, ಬೇರೆ ಯಾವ ಬ್ಯಾಂಕ್‌ನಲ್ಲಿದೆ ಈ ವ್ಯವಸ್ಥೆ
ಪ್ರಮುಖವಾಗಿ ದೇಶದಲ್ಲಿ ಡಿಜಿಟಲ್ ಯುಪಿಐ ಪಾವತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದನ್ನು ಆರಂಭ ಮಾಡಲಾಗಿದೆ. ಇದರಿಂದಾಗಿ ಸುಲಭವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡುವ ಬದಲಾಗಿ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಪಾವತಿ ಮಾಡಲು ಸಾಧ್ಯವಾಗುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕುಗಳು ರುಪೇ ಕ್ರೆಡಿಟ್ ಕಾರ್ಡ್‌ಗೆ ಯುಪಿಐ ಲಿಂಕ್ ಮಾಡುವ ಆಯ್ಕೆ ನೀಡುತ್ತದೆ. ಈ ಬ್ಯಾಂಕ್‌ನಲ್ಲೂ ಇದೇ ಪ್ರಕ್ರಿಯೆ ಇರಲಿದೆ.


Click it and Unblock the Notifications