ಹಿಂದುಜಾ ಗ್ರೂಪ್‌ನ ಚೇರ್‌ಮನ್ ಮತ್ತು ನಾಲ್ಕು ಹಿಂದುಜಾ ಸಹೋದರರ ಹಿರಿಯರಾದ ಶ್ರೀಚಂದ್ ಪರಮಾನಂದ ಹಿಂದುಜಾ ಇಹಲೋಹ ತ್ಯಜಿಸಿದ್ದಾರೆ. ಮೇ 17ರಂದು ಲಂಡನ್‌ನಲ್ಲಿ 87 ವರ್ಷ ಪ್ರಾಯದ ಎಸ್‌ಪಿ ಹಿಂದುಜಾ ನಿಧನ ಹೊಂದಿದ್ದಾರೆ. ಈ ಬಗ್ಗೆ ಕುಟುಂಬದ ವಕ್ತಾರರು ಮಾಹಿತಿ ನೀಡಿದ್ದಾರೆ. ಹಿಂದುಜಾ ಬಗ್ಗೆ ನೀವು ತಿಳಿದಿರಬೇಕಾದ ವಿಚಾರ ನಾವಿಲ್ಲಿ ವಿವರಿಸಿದ್ದೇವೆ.
"ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದುಜಾ ಕುಟುಂಬವು ನಮ್ಮ ಕುಟುಂಬದ ಹಿರಿಯ ವ್ಯಕ್ತಿ ಮತ್ತು ಹಿಂದುಜಾ ಗ್ರೂಪ್‌ನ ಚೇರ್‌ಮನ್ ಎಸ್ ಪಿ ಹಿಂದುಜಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ," ಎಂದು ಕುಟುಂಬದ ವಕ್ತಾರರು ಮೇ 17ರ ಸಂಜೆ ತಿಳಿಸಿದ್ದಾರೆ. "ನಮ್ಮ ದಿವಂಗತ ತಂದೆ ಪಿಡಿ ಹಿಂದುಜಾರ ತತ್ವಗಳನ್ನು ಮತ್ತು ಮೌಲ್ಯವನ್ನು ನೀಡುವ ಕುಟುಂಬಕ್ಕೆ ಎಸ್ ಪಿ ಹಿಂದುಜಾ ಮಾರ್ಗದರ್ಶಕರಾಗಿದ್ದರು," ಎಂದು ಕೂಡಾ ತಿಳಿಸಿದ್ದಾರೆ.

"ಎಸ್ ಪಿ ಹಿಂದುಜಾ ತಮ್ಮ ಸಹೋದರರೊಂದಿಗೆ ಸೇರಿ ತಾನು ಇದ್ದ ದೇಶವಾದ ಯುಕೆ ಮತ್ತು ತನ್ನ ದೇಶವಾದ ಭಾರತದ ನಡುವೆ ಬಲವಾದ ಸಂಬಂಧವನ್ನು ನಿರ್ಮಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ," ಎಂದು ವಕ್ತಾರರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. "ಎಸ್‌ಪಿ ಹಿಂದುಜಾ ನಿಜವಾಗಿಯೂ ಹಿಂದುಜಾ ಗ್ರೂಪ್‌ನ ಸಂಸ್ಥಾಪಕ ತತ್ವಗಳು ಮತ್ತು ಮೌಲ್ಯಗಳನ್ನು ಪಾಲಿಸಿದ್ದಾರೆ, ಅದನ್ನು ಸಾಕಾರಗೊಳಿಸಿದ್ದಾರೆ," ಎಂದು ಕೂಡಾ ಉಲ್ಲೇಖಿಸಲಾಗಿದೆ.
ಎಸ್‌ಪಿ ಹಿಂದುಜಾ ಯಾರು, ನೀವು ತಿಳಿದಿರಬೇಕಾದ ವಿಚಾರ
ಎಸ್‌ಪಿ ಹಿಂದುಜಾ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಚಂದ್ ಪರಮಾನಂದ ಹಿಂದುಜಾ ಮುಂಬೈ ಮೂಲದ ಸಂಸ್ಥೆಯಾದ ಹಿಂದುಜಾ ಗ್ರೂಪ್‌ನ ಸಂಸ್ಥಾಪಕರಾಗಿದ್ದಾರೆ. ಹಾಗೆಯೇ ತನ್ನ ಸಹೋದರರ ಪೈಕಿ ಹಿರಿಯರಾಗಿದ್ದಾರೆ. ನವೆಂಬರ್ 28, 1935ರಲ್ಲಿ ಬ್ರಿಟಿಷ್ ಭಾರತದ ಸಿಂಧ್ ಪ್ರಾಂತ್ಯದಲ್ಲಿ (ಪ್ರಸ್ತುತ ಪಾಕಿಸ್ತಾನದ ಭಾಗ) ಎಸ್‌ಪಿ ಹಿಂದುಜಾ ಜನಿಸಿದ್ದಾರೆ.
ತನ್ನ ಹದಿಹರೆಯದ ಪ್ರಾಯದಲ್ಲಿಯೇ ಎಸ್‌ಪಿ ಹಿಂದುಜಾ ತನ್ನ ಕುಟುಂಬದ ಉದ್ಯಮಕ್ಕೆ ಎಂಟ್ರಿ ನೀಡಿದ್ದಾರೆ. ಎಸ್‌ಪಿ ಹಿಂದುಜಾರ ತಂದೆ ಪರಮಾನಂದ ದೀಪ್‌ಚಂದ್ ಹಿಂದುಜಾ ಯಶಸ್ವಿ ಉದ್ಯಮವನ್ನು ಆರಂಭಿಸಿದ್ದಾರೆ. ಈ ಉದ್ಯಮವು ಕಾರ್ಪೆಟ್‌ಗಳು, ಡ್ರೈಫ್ರೂಟ್ಸ್, ಕೇಸರಿ, ಜವಳಿ ಮತ್ತು ಚಹಾ ವ್ಯವಹಾರದಲ್ಲಿ ಯಶಸ್ವಿ ವ್ಯಾಪಾರವನ್ನು ಸ್ಥಾಪಿಸಿದ್ದರು.
ಎಸ್‌ಪಿ ಹಿಂದುಜಾರ ತಂದೆ 1971ರಲ್ಲಿ ನಿಧನ ಹೊಂದಿದ್ದಾರೆ. ಅದಾದ ಬಳಿಕ ಎಸ್‌ಪಿ ಹಿಂದುಜಾ ಮತ್ತು ಸಹೋದರ ಗೋಪಿಚಂದ್ ಕುಟುಂಬದ ವ್ಯವಹಾರವನ್ನು ಇರಾನ್‌ನಿಂದ ಲಂಡನ್‌ಗೆ ಸ್ಥಳಾಂತರ ಮಾಡಿದ್ದಾರೆ. ಇನ್ನು 2021 ರಲ್ಲಿ ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಹಿಂದುಜಾ ಗ್ರೂಪ್ ಟ್ರಕ್ ತಯಾರಿಕೆ, ಬ್ಯಾಂಕಿಂಗ್, ರಾಸಾಯನಿಕಗಳು, ವಿದ್ಯುತ್, ಮಾಧ್ಯಮ ಮತ್ತು ಆರೋಗ್ಯ ರಕ್ಷಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. 38 ದೇಶಗಳಲ್ಲಿ 150,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಗ್ರೂಪ್ ಹೊಂದಿದೆ.
ಎಸ್‌ಪಿ ಹಿಂದುಜಾ ಆದಾಯ ಇತರೆ ಮಾಹಿತಿ
ಎಸ್‌ಪಿ ಹಿಂದುಜಾ ಮಧುರನ್ನು ವಿವಾಹವಾಗಿದ್ದು ದಂಪತಿಗೆ ಮೂರು ಮಕ್ಕಳಿದ್ದಾರೆ. ಶಾನು, ವಿನೂ, ಧರಮ್ (1992ರಲ್ಲಿ ನಿಧನ) ಮೂರು ಮಕ್ಕಳು. ಪ್ರಮುಖ ಅನಿವಾಸಿ ಭಾರತೀಯ (ಎನ್‌ಆರ್‌ಐ) ಉದ್ಯಮಿ ಎಂದು ಕರೆಯಲ್ಪಡುವ ಹಿಂದುಜಾ ಭಾರತದ ಮೊದಲ ಹೊಸ-ಪೀಳಿಗೆಯ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಸ್‌ಇಂಡ್ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬ್ಲ್ಯೂಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಎಸ್‌ಪಿ ಹಿಂದುಜಾ ನಿವ್ವಳ ಆದಾಯವನ್ನು 3.6 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. 2022ರಲ್ಲಿ ಎಸ್‌ಪಿ ಹಿಂದುಜಾ ಮತ್ತು ಕಿರಿಯ ಸಹೋದರ ಗೋಪಿಚಂದ್ ಸತತ ನಾಲ್ಕನೇ ಬಾರಿಗೆ ದಿ ಸಂಡೆ ಟೈಮ್ಸ್ ರಿಚ್ ಲೀಸ್ಟ್‌ನಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಆದಾಯವು £28.5 ಬಿಲಿಯನ್ ಅಥವಾ 36 ಬಿಲಿಯನ್ ಡಾಲರ್ ಆಗಿದೆ.


Click it and Unblock the Notifications