ಪ್ರಸ್ತುತ 5ಜಿ ಸ್ಪೆಕ್ಟ್ರಮ್‌ನ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇಡೀ ದೇಶವೇ ಮುಂದಿನ ದಿನದಲ್ಲಿ 5ಜಿ ನೆಟ್‌ವರ್ಕ್ ಪಡೆಯುವ ಭರವಸೆಯಲ್ಲಿ ಇದೆ. ಈ ನಡುವೆ ಹಲವಾರು ಮಂದಿಗೆ 5ಜಿ ಎಂದರೆ ಏನು, 5ಜಿ ಹೇಗೆ 4ಜಿಗಿಂತ ಭಿನ್ನ ಎಂಬ ಬಗ್ಗೆ ಗೊಂದಲಗಳು ಇದೆ. ನಾವಿಲ್ಲಿ ಈ ಬಗ್ಗೆ ವಿವರಿಸಿದ್ದೇವೆ.
ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್ 5ಜಿ ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಭಾಗಿಯಾಗಿದೆ. ಮೊದಲ ದಿನದಲ್ಲಿ (ಜುಲೈ 26) ನಾಲ್ಕು ಸುತ್ತಿನಲ್ಲಿ ಹರಾಜು ನಡೆದಿದೆ. ಎರಡನೇ ದಿನ (ಜುಲೈ 27) 5ನೇ ಸುತ್ತಿನ ಬಿಡ್ಡಿಂಗ್ ಆರಂಭವಾಗಿದೆ. ಮೊದಲ ದಿನವೇ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ. ದಾಖಲೆಯ ಬಿಡ್ಡಿಂಗ್ ಇದಾಗುವ ನಿರೀಕ್ಷೆ ಇದೆ.
ಆದರೆ ಏನಿದು ಹರಾಜು, ಈ 5ಜಿ ಸ್ಪೆಕ್ಟ್ರಮ್‌ನಿಂದ ಉದ್ಯಮಕ್ಕೆ ಏನು ಲಾಭ, ಯಾಕಾಗಿ ಇಷ್ಟೊಂದು ಸ್ಪರ್ಧೆ, 5ಜಿಯಿಂದ ಏನು ಲಭ್ಯವಾಗಲಿದೆ, ಉದ್ಯಮಕ್ಕೆ 5ಜಿ ಪ್ರಭಾವವೇನು, 4ಜಿಗೂ 5ಜಿಗೂ ಏನು ವ್ಯತ್ಯಾಸ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
4ಜಿಗೂ 5ಜಿಗೂ ಏನು ವ್ಯತ್ಯಾಸ?
ನಮಗೆ 3ಜಿ ಬಳಿಕ 4ಜಿ ಪರಿಚಯವಾದಾಗ ನೆಟ್‌ವರ್ಕ್ ಬಹಳ ಸ್ಪೀಡ್ ಆಗಿ ಇರುವುದು ಗಮನಕ್ಕೆ ಬಂದಿದೆ. ಆದರೆ ಈ 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ (gigabyte) ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ. ಪ್ರಸ್ತುತ 4ಜಿಯಲ್ಲಿ 21 Mbps (megabits per second) ವೇಗವಿದೆ ಎಂದು ಭಾರತದ ಟೆಲಿಕಾಂ ರೆಗ್ಯೂಲೇಟರ್ ಅಥಾರಿಟಿ ಹೇಳಿದೆ. ನಾವು 5 ಜಿಬಿಯ ಸಿನಿಮಾವನ್ನು 4ಜಿ ನೆಟ್‌ವರ್ಕ್‌ನಲ್ಲಿ 40 ನಿಮಿಷದಲ್ಲಿ ಡೌನ್‌ಲೋಡ್ ಮಾಡಬಹುದು. 3ಜಿ ನೆಟ್‌ವರ್ಕ್‌ನಲ್ಲಿ 2 ಗಂಟೆಯಲ್ಲಿ ಡೌನ್‌ಲೋಡ್ ಮಾಡಬಹುದು. 2ಜಿ ನೆಟ್‌ವರ್ಕ್‌ನಲ್ಲಿ 2.8 ದಿನದಲ್ಲಿ ನಾವು 5 ಜಿಬಿಯ ಸಿನಿಮಾವನ್ನು ಡೌನ್‌ಲೋಡ್ ಮಾಡಬಹುದು. ಆದರೆ 5ಜಿ ನೆಟ್‌ವರ್ಕ್‌ನಲ್ಲಿ ನಾವು 35 ಸೆಕೆಂಡ್‌ನಲ್ಲಿ 5 ಜಿಬಿಯ ಸಿನಿಮಾವನ್ನು ಡೌನ್‌ಲೋಡ್ ಮಾಡಬಹುದು.
5ಜಿಯಿಂದ ನಾವು ಏನು ನಿರೀಕ್ಷಿಸಬಹುದು?
5ಜಿಯಲ್ಲಿ ನಾವು ಯಾವುದೇ ಲೈವ್ ಅನ್ನು 4K ಕ್ವಾಲಿಟಿಯಲ್ಲಿ ನೀಡಲು ಸಾಧ್ಯವಾಗಲಿದೆ. ಹಾಗೆಯೇ ನಾವು ಅತೀ ಅಧಿಕ ಕ್ವಾಲಿಟಿಯಲ್ಲಿ ವಿಡಿಯೋ ಕಾಲ್ ಮಾಡಬಹುದು. ವಿಡಿಯೋ ಕರೆಯಲ್ಲಿ ಯಾವುದೇ ನೆಟ್‌ವರ್ಕ್ ತೊಂದರೆ ಉಂಟಾಗಲಾರದು. ಒಂದೇ ಸಮಯದಲ್ಲಿ ಹೆಚ್ಚು ಮಂದಿಯೊಂದಿಗೆ ಆನ್‌ಲೈನ್ ಸಂಭಾಷಣೆ ಸಾಧ್ಯವಾಗಲಿದೆ. ಯಾವುದೇ ಮಾಧ್ಯಮ ಸಂಸ್ಥೆಗಳು ಸ್ಟ್ರೀಮಿಂಗ್ ಮಾಡಲು ಸಹಾಕಯವಾಗಲಿದೆ. ಇನ್ನು ವಿಡಿಯೋ ಗೇಮ್ ಆಡುವುದು ಕೂಡಾ ಸುಲಭವಾಗಲಿದೆ. ವಿಡಿಯೋ ಗೇಮ್ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗುವುದು ತಪ್ಪಲಿದೆ.
ಉದ್ಯಮಕ್ಕೆ 5ಜಿ ಪ್ರಭಾವವೇನು?
5ಜಿಯಿಂದಾಗಿ ತಾಂತ್ರಿಕವಾಗಿ ಬೆಳವಣಿಯನ್ನು ನಿರೀಕ್ಷಿಸಲಾಗಿದೆ. ರಿಮೋಟ್ ಸರ್ಜರಿಗೂ ಕೂಡಾ ಇದು ಸಹಕಾರಿಯಾಗಲಿದೆ. ಇದರಿಂದಾಗಿ ವೈದ್ಯಕೀಯ ಕ್ಷೇತ್ರಕ್ಕೂ ಲಾಭ ಉಂಟಾಗಲಿದೆ. ಅಪ್ಲಿಕೇಶನ್‌ಗಳು ಅಪ್‌ಗ್ರೇಡ್ ಆಗಲು ಕೂಡಾ 5ಜಿ ಸಹಕಾರಿಯಾಗಲಿದೆ. ರಿಯಲ್ ಟೈಮ್ ಪ್ರೋಸೆಸಿಂಗ್ ಸುಲಭವಾಗಲಿದೆ. ಹೆಚ್ಚಾಗಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 22.3 ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಇದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಲಭ್ಯವಾಗಲಿದೆ. ಹಾಗೆಯೇ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ.
ನೆಟ್‌ವರ್ಕ್ ದಟ್ಟಣೆ ಕಡಿಮೆಯಾಗಲಿದೆಯೇ?
ಜನರು ನೆಟ್‌ವರ್ಕ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಇದು ಸಹಕಾರಿಯಾಗಲಿದೆ. ಇದು ಬೇರೆ ಬೇರೆ ಬ್ಯಾಂಡ್‌ಗಳನ್ನು ಹೊಂದಿದೆ. 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. ನಾವು ಸಾಮಾನ್ಯವಾಗಿ ಬಹಳಷ್ಟು ಜನರು ಇರುವ ಪ್ರದೇಶದಲ್ಲಿ, ಜಾತ್ರೆಯಲ್ಲಿ, ಸ್ಟೇಡಿಎಂಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಕಾಣುತ್ತೇವೆ. ಆದರೆ 5ಜಿಯಲ್ಲಿ ಈ ನೆಟ್‌ವರ್ಕ್ ದಟ್ಟಣೆ ಕಾಡುವುದಿಲ್ಲ. ಅತೀ ಅಧಿಕ ಜನರು ಇರುವ ಪ್ರದೇಶದಲ್ಲಿಯೂ ಸರಿಯಾದ ನೆಟ್‌ವರ್ಕ್ ಲಭ್ಯವಾಗಲಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications