ಬೆಂಗಳೂರು, ಜೂನ್ 10: ಸಬಿಲ್ ಸ್ಕೋರ್ ಮುಖ್ಯ ಎಂದು ನೀವು ಆಗಾಗ್ಗೆ ಕೇಳಿರಬಹುದು, ಆದರೆ ನೀವು ಅದನ್ನು ಅರ್ಥಮಾಡಿಕೊಂಡಿದ್ದೀರಾ? ಈ ಸ್ಕೋರ್ 300 ಮತ್ತು 900 ರ ನಡುವೆ ಇರುತ್ತದೆ, 900 ಗರಿಷ್ಠ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್ CIBIL ಸ್ಕೋರ್ 685 ಅಥವಾ ಹೆಚ್ಚಿನದಾಗಿದ್ದರೆ ಅದು ಉತ್ತಮವಾಗಿದೆ ಎಂದರ್ಥ. 685 ಅಥವಾ ಹೆಚ್ಚಿನ ಸ್ಕೋರ್ ಹೊಂದಿದ್ದರೆ ಅತ್ಯುತ್ತಮ ಸ್ಕೋರ್ ಶ್ರೇಣಿ ನಿಮ್ಮದಾಗಿದ್ದು ನೀವು ಸಾಲದಾತರಿಗೆ ನೀವು ವಿಶ್ವಾಸಾರ್ಹ ಸಾಲಗಾರ ಎಂದು ತೋರಿಸುತ್ತದೆ.
ನೀವು ಗೃಹಸಾಲ ಪಡೆದಿದ್ದರೆ ನಿಮ್ಮ ನಿಮ್ಮ CIBIL ಸ್ಕೋರ್ ಕೆಟ್ಟದಾಗಿದ್ದರೆ ಅದು ನಿಮ್ಮ ಹಣಕಾಸಿನ ಮೇಲೆ ನೇರಪರಿಣಾಮ ಬೀರುತ್ತದೆ. ಉದಾಹರಣೆಗೆ ನೀವು 50 ಲಕ್ಷ ರೂಪಾಯಿಯ ಗೃಹ ಸಾಲ ಪಡೆದಿದ್ದರೆ ನಿಮಗೆ ಸುಮಾರು 19 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಬೇಕಾಗಬಹುದು. ಅದಕ್ಕಾಗಿಯೇ CIBIL ಸ್ಕೋರ್ ಅನ್ನು ಉತ್ತಮವಾಗಿ ನಿರ್ವಹಿಸಬೇಕು ಮತ್ತು ಅದು ಹಾಳಾಗಲು ಬಿಡಬಾರದು ಎಂದು ಹೇಳುವುದು. ಇದರ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಳ್ಳಿ ಮತ್ತು ಅದನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳೋಣ.

CIBIL ಸ್ಕೋರ್ 820 ಅದ್ರೆ ಬಡ್ಡಿಎಷ್ಟು?
ನಿಮ್ಮ CIBIL ಸ್ಕೋರ್ 820 ಎಂದು ಭಾವಿಸೋಣ ಮತ್ತು ನೀವು 20 ವರ್ಷಗಳ ಅವಧಿಗೆ ರೂ 50 ಲಕ್ಷದ ಗೃಹ ಸಾಲವನ್ನು ತೆಗೆದುಕೊಳ್ಳುತ್ತೀರಿ, ಅದನ್ನು ನೀವು ಸುಮಾರು 8.35 ಶೇಕಡಾ ದರದಲ್ಲಿ ಪಡೆಯುತ್ತೀರಿ. ಈ ರೀತಿ 20 ವರ್ಷಗಳಲ್ಲಿ ಸುಮಾರು 53 ಲಕ್ಷ ಬಡ್ಡಿ ಸೇರಿ ಒಟ್ಟು 1.03 ಕೋಟಿ ರೂ. ಕಟ್ಟಬೇಕಾಗುತ್ತದೆ.
ನಿಮ್ಮ ಸ್ಕೋರ್ 580 ಆಗಿದ್ದರೆ, ನೀವು 19 ಲಕ್ಷ ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ!
ನಿಮ್ಮ CIBIL ಸ್ಕೋರ್ ತುಂಬಾ ಕಡಿಮೆಯಿದ್ದರೆ, ಅಂದರೆ 580 ಎಂದು ಅಂದಾಜು ಇಟ್ಟುಕೊಳ್ಳೋಣ, ಈ ವೇಳೆ ನೀವು ಈ ಸಾಲವನ್ನು ಸುಮಾರು 10.75 ಶೇಕಡಾ ಬಡ್ಡಿ ದರದಲ್ಲಿ ಪಡೆಯುತ್ತೀರಿ. ಈ ರೀತಿಯಾಗಿ, ನೀವು 71.82 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ, ಅಂದರೆ ಮೊದಲಿಗಿಂತ ಸುಮಾರು 18.82 ಲಕ್ಷ ರೂ. ಇದರರ್ಥ ನಿಮ್ಮ CIBIL ಸ್ಕೋರ್ ಉತ್ತಮವಾಗಿಲ್ಲದ ಕಾರಣ ನಿಮ್ಮ ಒಟ್ಟು ಸಾಲದ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ನಷ್ಟವನ್ನು ನೀವು ಅನುಭವಿಸಬಹುದು.
CIBIL ಸ್ಕೋರ್ ಏನು ಎಂದು ಮೊದಲು ತಿಳಿಯಿರಿ?
ಇದು ಮೂರು ಅಂಕಿ ಸಂಖ್ಯೆ ಅಥವಾ ಸ್ಕೋರ್ ಆಗಿದೆ. ಇದರ ವ್ಯಾಪ್ತಿಯು 300 ರಿಂದ 900 ಅಂಕಗಳು. ಇದು ಸಾಲವನ್ನು ತೆಗೆದುಕೊಳ್ಳುವ ನಿಮ್ಮ ಅರ್ಹತೆಯನ್ನು ತೋರಿಸುತ್ತದೆ. ನಿಮ್ಮ ಹಳೆಯ ಸಾಲಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಇತ್ಯಾದಿಗಳ ಆಧಾರದ ಮೇಲೆ CIBIL ಸ್ಕೋರ್ ನಿರ್ಧರಿಸಲಾಗುತ್ತದೆ. ನಿಮ್ಮ ಎಲ್ಲಾ ಲೋನ್‌ಗಳು ಮತ್ತು ಕಾರ್ಡ್ ಬಿಲ್‌ಗಳನ್ನು ನೀವು ಮರುಪಾವತಿಸುತ್ತಿದ್ದರೆ, ನಿಮ್ಮ CIBIL ಸ್ಕೋರ್ ಉತ್ತಮಗೊಳ್ಳುತ್ತದೆ, ಆದರೆ ನೀವು ಯಾವುದೇ ಸಾಲ ಪಾವತಿ ವಿಳಂಬ ಮಾಡಿದರೆ, ನಿಮ್ಮ CIBIL ಸ್ಕೋರ್ ಕೆಟ್ಟದಾಗುತ್ತದೆ.
4.ಕಳಪೆ CIBIL ಸ್ಕೋರ್‌ನ 5 ಅನಾನುಕೂಲಗಳು
CIBIL ಸ್ಕೋರ್ ಕೆಟ್ಟದಾಗಿದ್ದರೆ, ಅನೇಕ ತೊಂದರೆ ಅನುಭವಿಸಬೇಕಾಗುತ್ತದೆ. ಬ್ಯಾಂಕ್ ಸಂಬಂಧಿತ ಎಲ್ಲಾ ಕೆಲಸಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಟ್ಟ CIBIL ಸ್ಕೋರ್‌ನ 5 ಅನಾನುಕೂಲತೆಗಳು ಇಲ್ಲಿವೆ.
ಸಾಲ ಪಡೆಯಲು ತೊಂದರೆ:
ನಿಮ್ಮ CIBIL ಸ್ಕೋರ್ ಕೆಟ್ಟದಾಗಿದ್ದರೆ ನೀವು ಯಾವುದೇ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಅಥವಾ NBFC ಯಿಂದ ಸಾಲ ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮ CIBIL ಸ್ಕೋರ್ ಕೆಟ್ಟದಾಗಿದ್ದಾರೆ ನೀವು ಅರ್ಥಿಕ ಅಶಿಸ್ತು ಉಳ್ಳವರೆಂದು ಬ್ಯಾಂಕ್‌ಗಳು ಸಾಲ ನೀಡಲು ಹಿಂಜರಿದು, ನಿಮ್ಮ ಅರ್ಜಿಯನ್ನು ತಿರಸ್ಕರಿಸಬಹುದು.
ಹೆಚ್ಚಿನ ಬಡ್ಡಿ ದರ ನೀಡಬೇಕಾಗುತ್ತದೆ
ಕೆಲವು ಬ್ಯಾಂಕ್‌ಗಳು ಕೆಟ್ಟ CIBIL ಸ್ಕೋರ್‌ನ ಇದ್ರೂ ನಿಮಗೆ ಸಾಲ ನೀಡಲು ಒಪ್ಪಿಕೊಂಡರೂ, ಅವು ಹೆಚ್ಚಿನ ಬಡ್ಡಿ ದರವನ್ನು ವಿಧಿಸುತ್ತವೆ. ನೀವು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗಬಹುದು. ನಿಮ್ಮ CIBIL ಸ್ಕೋರ್ ಕಳಪೆ ಮಟ್ಟದ್ದಾಗಿದ್ದರೆ ಕೆಲವೊಮ್ಮೆ ವಿಮಾ ಕಂಪನಿಗಳು ನಿಮ್ಮಿಂದ ಹೆಚ್ಚಿನ ಪ್ರೀಮಿಯಂ ಕೇಳಬಹುದು. ಯಾಕೆಂದರೆ ನೀವು, ನೀವು ಹೆಚ್ಚಿನ ಕ್ಲೈಮ್‌ಗಳನ್ನು ಮಾಡಬಹುದು ಎಂದು ವಿಮಾ ಕಂಪನಿಗಳ ಅನಿಸಿಕೆಯಾಗಿರುತ್ತದೆ.
ಕಂಪನಿಗಳು ವಿಮೆ ನೀಡಲು ಹಿಂಜರಿಯಬಹುದು
ಪರ್ಸನಲ್ ಲೋನ್‌ನಂತೆ, ನೀವು ಗೃಹ ಸಾಲ ಅಥವಾ ಕಾರ್ ಲೋನ್ ತೆಗೆದುಕೊಳ್ಳುವಲ್ಲಿ ತೊಂದರೆಯನ್ನು ಎದುರಿಸಬಹುದು. ನೀವು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಬಹುದು. ಮಾತ್ರವಲ್ಲದೇ ಕಂಪನಿಯು ನಿಮಗೆ ಸಾಲವನ್ನು ನೀಡುವ ವೇಳೆ ಏನನ್ನಾದರೂ ಅಡವು ಇಡುವಂತೆ ಕೇಳಬಹುದು.
ಸಾಲ ಪಡೆಯುವಲ್ಲಿ ವಿಳಂಬವಾಗಬಹುದು
ನಿಮಗೆ ಸಾಲ ನೀಡಲು ಒಪ್ಪುವ ಬ್ಯಾಂಕ್ ನಿಮಗೆ ಸಾಲ ನೀಡುವ ಮೊದಲು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ. ನೀವು ಗೋಲ್ಡ್ ಲೋನ್ ಅಥವಾ ಸೆಕ್ಯುರಿಟೀಸ್ ಲೋನ್‌ಗೆ ಅರ್ಜಿ ಸಲ್ಲಿಸಿದರೂ, ಕಟ್ಟುನಿಟ್ಟಾದ ಪರಿಶೀಲನೆ ಇರುತ್ತದೆ. ಒಂದಿಷ್ಟು ಅಡಮಾನ ಕೊಟ್ಟರೂ ಬ್ಯಾಂಕ್ ನವರು ನಿಮ್ಮನ್ನು ಅನುಮಾನದಿಂದ ನೋಡುತ್ತಾರೆ ಮತ್ತು ಕೂಲಂಕುಷವಾಗಿ ತನಿಖೆ ಮಾಡುತ್ತಾರೆ. ಇದೆಲ್ಲವೂ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು, ಇದರಿಂದಾಗಿ ನೀವು ಸಾಲ ಪಡೆಯುವಲ್ಲಿ ವಿಳಂಬವಾಗಬಹುದು.
ನಿಮ್ಮ ಕ್ರೆಡಿಟ್ ಸ್ಕೋರ್ ಹದಗೆಟ್ಟು ನೀವು ಅದನ್ನು ಉತ್ತಮಗೊಳಿಸಲು ಬಯಸಿದರೆ, ಕ್ರೆಡಿಟ್ ಸ್ಕೋರ್ ಸುಧಾರಿಸುವುದು ಒಂದು ದಿನದ ಕೆಲಸವಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಾ ಬೇಕು. ಇದಕ್ಕಾಗಿ ಒಂದಷ್ಟು ತಾಳ್ಮೆಯನ್ನು ಹೊಂದಿರಬೇಕು ಏಕೆಂದರೆ ಅದರ ಸುಧಾರಣೆ ನಿಧಾನಗತಿಯ ಬೆಳವಣಿಯಾಗಿರುತ್ತದೆ. ನಿಮ್ಮ ಕೆಟ್ಟ ಕ್ರೆಡಿಟ್ ಸ್ಕೋರ್ ಸುಧಾರಿಸಲು ಕನಿಷ್ಠ ಆರು ತಿಂಗಳಿಂದ 1 ವರ್ಷ ತೆಗೆದುಕೊಳ್ಳಬಹುದು. ಸ್ಕೋರ್ ತುಂಬಾ ಕಡಿಮೆಯಿದ್ದರೆ ಅದು ಸುಧಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅದಕ್ಕಾಗಿಯೇ ನಿಮ್ಮ CIBIL ಸ್ಕೋರ್ ಅನ್ನು ಮುಂಚಿತವಾಗಿ ಕಾಪಾಡಿಕೊಳ್ಳಲು ಮತ್ತು ಕಾಲಕಾಲಕ್ಕೆ ಅದನ್ನು ಪರಿಶೀಲಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಆದ್ದರಿಂದ ಅದು ಕಡಿಮೆಯಾದರೆ, ಸಮಯಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಅದನ್ನು ಹೆಚ್ಚಿಸಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications