ಬೆಂಗಳೂರು, ಜೂನ್ 6: ಆಗರ್ಭ ಶ್ರೀಮಂತನೇ ಆಗಿರಲಿ, ಸಾಮಾನ್ಯ ಆಸ್ತಿ ಹೊಂದಿರುವವರೇ ಆಗಿರಲಿ, ಈ ಆಧುನಿಕ ಬದುಕಿನಲ್ಲಿ ಆಸ್ತಿ-ಪಾಸ್ತಿ ವಿಚಾರದಲ್ಲಿ ಮುಂದೆ ಮಕ್ಕಳ ವಿಚಾರದಲ್ಲಿ ಯಾವುದೇ ಗೊಂದಲ ಏರ್ಪಡಬಾರದು ಎಂದಾದರೆ ವಿಲ್ ಅಥವಾ ಉಯಿಲು ಮಾಡಿಸಲೇಬೇಕಾಗುತ್ತದೆ.
ನೀವು ನಿಮ್ಮ ಪ್ರಾಪರ್ಟಿ ವಿಲ್ ಅನ್ನು ಒಂದು ಸರಳ ಕಾಗದದ ಮೇಲೆಯೂ ಬರೆಯಬಹುದು. ಅದಕ್ಕೆ ಸ್ಟಾಂಪ್ ಪೇಪರ್ ಆಗಿರಬೇಕು ಅಂತೇನೂ ಇಲ್ಲ. ಆದರೂ, ಹಲವರು ಈ ತಪ್ಪೊಂದನ್ನು ಮಾಡುತ್ತಾರೆ. ಇದರಿಂದ ನಿಮ್ಮ ವಿಲ್ ಅನೂರ್ಜಿತವೂ ಆಗಬಹುದು. ವಿಲ್ ಮಾಡಿಸಿ ಸಾಕ್ಷಿಗಳ ಸಹಿ ಮಾಡಿಸದೇ ಇದ್ದರೆ ಆ ವಿಲ್ ಊರ್ಜಿತ ಆಗುವುದಿಲ್ಲ.

ವಿಲ್ ಮಾಡಿಸುವಾಗ ಒಂದಿಷ್ಟು ಇಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವಿಲ್ ಅನ್ನು ಖಾಲಿ ಕಾಗದದ ಮೇಲೆ ಬರೆಯಬಹುದು. ಆದರೆ, ಇದರಲ್ಲಿ ವಿಲ್ ಮಾಡಿಸುವ ವ್ಯಕ್ತಿಯ ಸಹಿ ಇರಬೇಕು. ಹಲವರು ಸಾಕ್ಷಿಯ ಸಮ್ಮುಖದಲ್ಲಿ ಸಹಿ ಮಾಡುವುದಿಲ್ಲ. ಅವರು ಸಾಕ್ಷಿಯ ಸಹಿಯನ್ನೂ ಪಡೆಯುವುದಿಲ್ಲ. ನಂತರ, ಯಾವಾಗಲೋ ವಿಲ್ ಮೇಲೆ ಅವರು ಸಹಿ ಮಾಡುತ್ತಾರೆ. ಇಂತಹ ತಪ್ಪುಗಳು ಮುಂದೊಂದು ದಿನ ಸಮಸ್ಯೆಯನ್ನು ತಂದೊಡ್ಡುತ್ತವೆ.
ಅದೇ ರೀತಿ, ಇಬ್ಬರು ಸಾಕ್ಷಿಗಳ ಪೈಕಿ ಒಬ್ಬರು ವೈದ್ಯರಾಗಿರಬೇಕು. ಇದರಿಂದ ಮುಂದೆ ವಿವಾದವನ್ನು ತಪ್ಪಿಸಲು ಸಹಾಯವಾಗುತ್ತದೆ. ವಿಲ್ ಮಾಡಿದಾಗ ವಿಲ್ ಬರೆಸುವಾತ ಮಾನಸಿಕವಾಗಿ ಅನಾರೋಗ್ಯವನ್ನು ಹೊಂದಿರಲಿಲ್ಲ ಎಂಬುದನ್ನು ಇದು ತಿಳಿಸುತ್ತದೆ.
ವಿಲ್‌ನ ನೋಂದಣಿ ಕಡ್ಡಾಯವಲ್ಲ. ಆದರೆ, ವಿಲ್‌ನ ದೃಢೀಕರಣಕ್ಕೆ ವಿಲ್ ನೋಂದಣಿ ಮಾಡುವುದು ಅಗತ್ಯವಾಗಿರುತ್ತದೆ. ಹಲವು ವಿಲ್ ಅನ್ನು ನೋಟರಿ ಮಾಡಿಸುತ್ತಾರೆ. ಆದರೆ ಅಷ್ಟೇ ಸಾಲದು. ವಿಲ್ ನೋಂದಣಿ ಮಾಡಿಸಿದರೆ ಮುಂದೆ ತೊಂದರೆ ಬರುವುದಿಲ್ಲ. ವಿಲ್ ರಿಜಿಸ್ಟರ್ ಮಾಡಿಸಲು, ರಿಜಿಸ್ಟ್ರಾರ್ ಕಚೇರಿಗೆ ವಿಲ್ ಮಾಡಿಸುವಾತ ಹೋಗಬೇಕು ಮತ್ತು ಸಹಿ ಮಾಡಬೇಕು. ಇದರಿಂದ ವಿಲ್ ನಕಲಿ ಅಲ್ಲ ಎಂದು ಕನ್ಫರ್ಮ್ ಆಗುತ್ತದೆ. ಎಕ್ಸೆಕ್ಯೂಟರ್ ಅನ್ನು ಆಯ್ಕೆ ಮಾಡುವುದು ವಿಲ್ ಜಾರಿ ಮಾಡಲು ಅತ್ಯಂತ ಅಗತ್ಯದ್ದಾಗಿರುತ್ತದೆ. ವ್ಯಕ್ತಿಯ ಬಯಕೆಗೆ ಅನುಗುಣವಾಗಿ ಅಸೆಟ್‌ಗಳನ್ನು ವಿತರಿಸಲು ಇದು ಅಗತ್ಯದ್ದಾಗಿದೆ. ಎಕ್ಸೆಕ್ಯೂಟರ್ ಆಗಿ ಸ್ನೇಹಿತರು ಅಥವಾ ಸಂಬಂಧಿಕರನ್ನು ನೇಮಿಸಿಕೊಳ್ಳಬಹುದು. ವಿಲ್‌ನಿಂದ ಏನನ್ನೂ ಪ್ರಯೋಜನ ಪಡೆಯದ ವ್ಯಕ್ತಿಯನ್ನು ಎಕ್ಸೆಕ್ಯೂಟರ್ ಆಗಿ ನೇಮಿಸಿಕೊಳ್ಳುವುದು ಅತ್ಯಂತ ಮುಖ್ಯ.
ಯಾವಾಗ ಬೇಕಾದರೂ ನಿಮ್ಮ ವಿಲ್ ಅನ್ನು ಅಪ್‌ಡೇಟ್ ಮಾಡಬಹುದು. ವಿಲ್ ಮಾಡಿಸುವಾತ ಕೊನೆಯದಾಗಿ ಅಪ್‌ಡೇಟ್ ಮಾಡಿದ ವಿಲ್ ಊರ್ಜಿತವಾಗಿರುತ್ತದೆ. ಅಗತ್ಯವಿದ್ದರೆ ಕಾನೂನು ಸಹಾಯ ಪಡೆಯಿರಿ. ಯಾಕೆಂದರೆ, ವಿಲ್‌ಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ವಿಲ್ ಮಾಡುವಾಗ ವೀಡಿಯೋ ರೆಕಾರ್ಡ್ ಮಾಡುವುದು ಕೂಡಾ ಸಮಸ್ಯೆಯನ್ನು ತಪ್ಪಿಸಬಹುದು. ಪ್ರಾಪರ್ಟಿಯಲ್ಲಿ ಪಾಲು ಪಡೆಯುವುದರಿಂದ ಯಾರನ್ನಾದರೂ ಸ್ಪಷ್ಟವಾಗಿ ಹೊರಗಿಟ್ಟಿದ್ದರೆ, ಅದನ್ನೂ ವಿಲ್‌ನಲ್ಲಿ ವಿವರಿಸುವುದು ಒಳ್ಳೆಯದು.


Click it and Unblock the Notifications