ಈ ತಿಂಗಳ ಆರಂಭದಲ್ಲಿ ಆಪಲ್ ತನ್ನ ಮೊದಲ ಭಾರತದ ಸ್ಟೋರ್ ಅನ್ನು ಆರಂಭ ಮಾಡಿದೆ. ಆಪಲ್‌ನ ಮೊದಲ ಸ್ಟೋರ್ ಅನ್ನು ಮುಂಬೈನಲ್ಲಿ ಆರಂಭ ಮಾಡಲಾಗಿದ್ದು, ಅದಾದ ಬಳಿಕ ದೆಹಲಿಯಲ್ಲಿ ಆಪಲ್‌ನ ಎರಡನೇ ಸ್ಟೋರ್ ಅನ್ನು ಆರಂಭ ಮಾಡಲಾಗಿದೆ. ಉನ್ನತ ಶಿಕ್ಷಣವನ್ನು ಪಡೆದ, ಟೆಕ್ ತಜ್ಞರುಗಳು ಆಪಲ್‌ನ ಈ ಎರಡು ಸ್ಟೋರ್‌ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ ಭಾರತದಲ್ಲಿನ ಆಪಲ್ ಸ್ಟೋರ್ ಉದ್ಯೋಗಿಗಳು ಅಧಿಕ ವೇತನವನ್ನು ಪಡೆಯುತ್ತಿದ್ದಾರೆ. ಭಾರತದಲ್ಲಿನ ಈ ಆಪಲ್ ಸ್ಟೋರ್ ಉದ್ಯೋಗಿಗಳು ಇತರ ಟೆಕ್ ಬ್ರ್ಯಾಂಡ್ ರಿಟೇಲ್ ಸ್ಟೋರ್‌ಗಳಲ್ಲಿ ಕೆಲಸ ಮಾಡುವಾಗ ಹೊಂದಿರುವ ವೇತನಕ್ಕಿಂತ ಗಣನೀಯವಾಗಿ ಅಧಿಕ ವೇತನವನ್ನು ಗಳಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಪಲ್ ಸ್ಟೋರ್ ಆರಂಭದ ಸಂದರ್ಭದಲ್ಲಿಆಪಲ್ ಸ್ಟೋರ್ ಉದ್ಯೋಗಿಗಳು ಹಸಿರು ಟೀ ಶರ್ಟ್‌ಗಳನ್ನು ಧರಿಸಿ, ಸ್ಟೋರ್‌ನ ಹೊರಗೆ ಸಾಲಾಗಿ ನಿಂತು ಉತ್ಸಾಹದ ಹರ್ಷೋದ್ಗಾರ ಮತ್ತು ಚಪ್ಪಾಳೆಯನ್ನು ತಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಪಲ್ ಸಿಇಒ ಟಿಮ್ ಕುಕ್ ಕೂಡಾ ಇದ್ದರು. ಹಾಗಾದರೆ ಭಾರತದಲ್ಲಿ ಆಪಲ್ ಸ್ಟೋರ್‌ನಲ್ಲಿ ತನ್ನ ಉದ್ಯೋಗಿಗಳಿಗೆ ಎಷ್ಟು ವೇತನ ನೀಡಲಾಗುತ್ತದೆ ಎಂಬ ವಿವರ ಇಲ್ಲಿದೆ....
ಆಪಲ್ ಸ್ಟೋರ್ ಉದ್ಯೋಗಿಗಳ ವೇತನ ಎಷ್ಟಿದೆ?
ಮಾಧ್ಯಮಗಳ ವರದಿಯ ಪ್ರಕಾರ ಭಾರತದಲ್ಲಿ ಎರಡು ಆಪಲ್ ಸ್ಟೋರ್‌ಗಳಲ್ಲಿ ಸರಿಸುಮಾರು ಅಂದಾಜಿನಂತೆ ಉದ್ಯೋಗಿಗಳು 1 ಲಕ್ಷ ರೂಪಾಯಿ ಗಳಿಕೆಯನ್ನು ಹೊಂದಿದ್ದಾರೆ. ಈ ಸಂಬಳವು ಇತರ ಟೆಕ್ ಬ್ರ್ಯಾಂಡ್‌ಗಳು ತಮ್ಮ ರಿಟೇಲ್ ಸ್ಟೋರ್ ಉದ್ಯೋಗಿಗಳಿಗೆ ಮಾಸಿಕ ಆಧಾರದ ಮೇಲೆ ಪಾವತಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂದು ವರದಿಯಾಗಿದೆ.
ಭಾರತದಲ್ಲಿ ತನ್ನ ಮೊದಲ ಎರಡು ಸ್ಟೋರ್‌ಗಳನ್ನು ನಿರ್ವಹಿಸಲು, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಸುಮಾರು 170 ಜನರನ್ನು ನೇಮಕಾತಿ ಮಾಡಿಕೊಂಡಿದೆ. ಸ್ಟೋರ್‌ಗಳನ್ನು ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ತನ್ನ ತಂಡದ ಸದಸ್ಯರನ್ನು ಅಂತಿಮಗೊಳಿಸುವ ಮೊದಲು ಆಪಲ್ ಹಲವಾರು ಸಂದರ್ಶನಗಳನ್ನು ನಡೆಸಿದೆ ಎಂದು ವರದಿ ಉಲ್ಲೇಖಿಸಿದೆ.
ಆಪಲ್ ತನ್ನ ಭಾರತದ ರಿಟೇಲ್ ಸ್ಟೋರ್‌ಗಳಲ್ಲಿ ಕೆಲಸ ಮಾಡಲು ಐಟಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ರೊಬೊಟಿಕ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಹೆಚ್ಚು ಅರ್ಹ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ. ಹೆಚ್ಚುವರಿಯಾಗಿ, ಕಂಪನಿಯು ಭಾಷಾಶಾಸ್ತ್ರೀಯವಾಗಿ (linguistically) ನುರಿತ ಉದ್ಯೋಗಿಗಳನ್ನು ಕೂಡಾ ನೇಮಕ ಮಾಡಿಕೊಂಡಿದೆ.
ಮಾಹಿತಿ ತಂತ್ರಜ್ಞಾನದ ಸಚಿವ ರಾಜೀವ್ ಚಂದ್ರಶೇಖರ್ ಪ್ರಕಾರ ಆಪಲ್ ಮುಂದಿನ ದಿನಗಳಲ್ಲಿ ಭಾರತದಲ್ಲಿ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸಬಹುದು ಅಥವಾ ಮೂರು ಪಟ್ಟು ಹೆಚ್ಚಿಸಬಹುದು, ಜೊತೆಗೆ ರಫ್ತುಗಳನ್ನು ಹೆಚ್ಚಿಸಬಹುದು. ಇನ್ನು ಆಪಲ್ ಸಿಇಒ ಟಿಮ್ ಕುಕ್ ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಕೂಡಾ ಭೇಟಿಯಾಗಿದ್ದಾರೆ.
ಪಾಲುದಾರರ ಸಹಯೋಗದೊಂದಿಗೆ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ವಹಿವಾಟನ್ನು ನಡೆಸುತ್ತಾ ಬಂದಿರುವ ಐಕಾನಿಕ್ ಸಂಸ್ಥೆಯಾದ ಆಪಲ್ ಭಾರತದಲ್ಲಿ ತನ್ನ ಮೊದಲ ರಿಟೇಲ್ ಕಚೇರಿಯನ್ನು ಆರಂಭ ಮಾಡಿದೆ. ಮುಂಬೈನಲ್ಲಿರುವ ಭಾರತದ ಆಪಲ್‌ನ ಈ ಮೊದಲ ಕಚೇರಿಯನ್ನು ಮಂಗಳವಾರ ಉದ್ಘಾಟನೆ ಮಾಡಲಾಯಿತು. ಸಂಸ್ಥೆಯ ಸಿಇಒ ಟಿಮ್ ಕುಕ್ ಉದ್ಘಾಟನೆ ಮಾಡಿದ್ದಾರೆ.
ಈ ಕಚೇರಿಯು ಬಾಂದ್ರಾ ಕುರ್ಲಾ ಕಾಂಪ್ಲೇಕ್ಸ್ (BKC) ವಾಣಿಜ್ಯ ಪ್ರದೇಶದಲ್ಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಿಇಒ ಟಿಕ್ ಕುಕ್ ಗ್ರಾಹಕರನ್ನು ಭೇಟಿಯಾದರು. ಆಪಲ್ ನವದೆಹಲಿಯಲ್ಲಿಏಪ್ರಿಲ್ 20ರಂದು ಎರಡನೇ ಸ್ಟೋರ್ ಅನ್ನು ಆರಂಭ ಮಾಡಿದೆ. ಮೊಲದ ಸ್ಟೋರ್ ಅನ್ನು ಉದ್ಘಾಟನೆ ಮಾಡಿದ ಆಪಲ್ ಸಿಇಒ ಟಿಮ್ ಕುಕ್ ಎರಡನೇ ಸ್ಟೋರ್ ಅನ್ನು ಕೂಡಾ ಉದ್ಘಾಟಿಸಿ ಗ್ರಾಹಕರನ್ನು ಸ್ವಾಗತಿಸಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications