ಭಾರತದಲ್ಲಿ ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಆದರೆ, ರಿಯಲ್ ಎಸ್ಟೇಟ್ ಬೆಲೆ ಗಗನಕ್ಕೇರಿರುವ ಕಾರಣ ಗೃಹ ಸಾಲ ಪಡೆಯದೆ ಸ್ವಂತ ಮನೆಯ ಕನಸನ್ನು ನನಸು ಮಾಡುವುದು ತುಂಬಾ ಕಷ್ಟವಾಗಿದೆ. ಗೃಹ ಸಾಲವನ್ನು ಪಡೆದುಕೊಂಡು ಮನೆಯನ್ನು ನಿರ್ಮಿಸುವುದು ಅತ್ಯಂತ ಅನುಕೂಲಕರ ಮಾರ್ಗವಾಗಿದೆ.
ಆದರೆ ಸರಿಯಾದ ಡೌನ್ ಪೇಮೆಂಟ್ ಅನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ನಿಮ್ಮ ಮನೆಯ ವೆಚ್ಚವನ್ನು ಕಡಿಮೆಗೊಳಿಸುವಲ್ಲಿ ಅತ್ಯಂತ ಮಹತ್ವದ ನಿರ್ಧಾರವಾಗಿರುತ್ತದೆ ಎನ್ನುವುದು ಪರಿಣತರ ಸಲಹೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರಿಗೆ 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಗೃಹ ಸಾಲಕ್ಕೆ ಆಸ್ತಿ ಮೌಲ್ಯದ ಶೇ.80ರಷ್ಟು ಹಣವನ್ನು ಸಾಲವಾಗಿ ನೀಡಲು ಅನುಮತಿಸುತ್ತದೆ. ಉಳಿದ ಶೇ.20ರಷ್ಟು ಹಣವನ್ನು ತಮ್ಮ ಜೇಬಿನಿಂದ ವಿನಿಯೋಗಿಸಬೇಕು.

ಬೇಸಿಕ್ ಹೋಮ್ ಲೋನ್‌ನ ಸಹ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಅತುಲ್ ಮೊಂಗಾ ಹೇಳುವ ಪ್ರಕಾರ, ನೀವು ಹೆಚ್ಚಿನ ಡೌನ್ ಪೇಮೆಂಟ್ ಅನ್ನು ಪಾವತಿಸದಿದ್ದರೆ ಹಾಗೂ ನಿಮ್ಮ ಆಸ್ತಿ ಬೆಲೆಯು ಒಟ್ಟು ಬಾಕಿ ಮೊತ್ತಕ್ಕಿಂತ ಕಡಿಮೆಯಾಗದಿದ್ದರೆ ನೀವು ಆ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಮೊತ್ತದ ಡೌನ್ ಪೇಮೆಂಟ್ ಮಾಡುವುದರಿಂದ ನೆಗೆಟಿವ್ ಇಕ್ವಿಟಿ ಪರಿಸ್ಥಿತಿ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ.
ಹೆಚ್ಚು ಡೌನ್ ಪೇಮೆಂಟ್, ಆಸ್ತಿ ಮೌಲ್ಯ ಕಡಿಮೆ
ಹೆಚ್ಚು ಡೌನ್ ಪೇಮೆಂಟ್ ಇರುವಾಗ ಸಾಲದಾತರಿಂದ ಕಡಿಮೆ ಮೊತ್ತದ ಸಾಲವನ್ನು ಪಡೆದುಕೊಳ್ಳಬೇಕು. ಇದರಿಂದ ಸಾಲದ ಮೇಲಿನ ಬಡ್ಡಿ ಮೊತ್ತವು ಕಡಿಮೆಯಾಗುತ್ತದೆ ಎನ್ನುತ್ತಾರೆ. ನಿಮ್ಮ ಇಎಂಐಗಳ ಮೂಲ ಮೊತ್ತವನ್ನು ಕಡಿಮೆ ಮಾಡುವುದರಿಂದ ಸಾಲದ ಕಂತುಗಳನ್ನು ಸುಲಭವಾಗಿ ಕೈಗೆಟಕುವ ರೀತಿಯಲ್ಲಿ ನಿರ್ವಹಿಸಬಹುದು ಎನ್ನುತ್ತಾರೆ ಮೊಂಗಾ ಅವರು.
ಇಂಟ್ರನ್ಸಿಕ್ ವ್ಯಾಲ್ಯೂ ಇಕ್ವಿಟಿ ಅಡ್ವೈಸರ್ಸ್ ಸಂಸ್ಥಾಪಕ ನಿಖಲ್ ಗಂಗಿಲ್ ಅವರ ಅನುಭವದಂತೆ, ಸಾಲ ಪಡೆಯುವಾಗ ಸಾಧ್ಯವಾದಷ್ಟು ಪೂರ್ವಪಾವತಿ ಮಾಡಿ ಎನ್ನುತ್ತಾರೆ. ಅವರು ತಮ್ಮದೇ ಉದಾಹರಣೆಯನ್ನು ನೀಡುತ್ತಾ, ಕೇವಲ 36 ಹೆಚ್ಚುವರಿ ಇಎಂಐಗಳನ್ನು ಮೂಲ ಪೂರ್ವಪಾವತಿಯಾಗಿ ತುಂಬಿದ ನಂತರ ಅವರ ಗೃಹ ಸಾಲದ ಅವಧಿಯು 360 ತಿಂಗಳಿನಿಂದ 121 ತಿಂಗಳಿಗೆ ಇಳಿದಿದೆ. ಆ ಮೂಲಕ ನಾನು 203 ತಿಂಗಳ ಬಡ್ಡಿಯನ್ನು ಉಳಿತಾಯ ಮಾಡಿರುವುದಾಗಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಅವರು ಕೊರೊನಾ ಅವಧಿಯಲ್ಲಿ 240 ಕಂತುಗಳ ಸಾಲವನ್ನು ಪಡೆದುಕೊಂಡಿದ್ದರು. ಅದಕ್ಕೆ ಬಡ್ಡಿ ದರವು ಶೇಕಡ 6.89 ಆಗಿದ್ದು, ಆರ್‌ಬಿಐ ರೆಪೊ ದರ ಹೆಚ್ಚಳದಿಂದಾಗಿ ಶೇಕಡ 9.35ಕ್ಕೆ ಏರಿದೆ. ಇಎಂಐ ಮೊತ್ತವನ್ನು ಹೆಚ್ಚಿಸುವ ಬದಲು ಅವರ ಸಾಲಾವಧಿಯು ಜಾಸ್ತಿಯಾಗುವ ಮೂಲಕ ಕಂತು 370ಕ್ಕೆ ಏರಿದೆ. ಈ ವೇಳೆ ಅವರು ಪೂರ್ವ ಪಾವತಿ ಮಾಡಲು ನಿರ್ಧರಿಸಿದರು. ಅವರು ಐದು ತಿಂಗಳ ಅಂತರದಲ್ಲಿ 20 ಇಎಂಐ ನಂತರ 16 ಇಎಂಐಗಳನ್ನು ಪಾವತಿಸುವ ಮೂಲಕ ಉಳಿತಾಯ ಮಾಡಿದ್ದಾರೆ.
ಈಗ ಸ್ವಲ್ಪ ಹೆಚ್ಚಿದ ಇಎಂಐಯೊಂದಿಗೆ ನನ್ನ ಸಾಲಾವಧಿಯು 121 ತಿಂಗಳಿಗೆ ನಿಂತಿದೆ. ಇದು ಮುಖ್ಯವಾಗಿ ಏಕೆ ಆಗಿದೆ ಅಂದರೆ ಮೊದಲ ಮೂರು ವರ್ಷಗಳಲ್ಲಿ ನನ್ನ ಸಾಲದ ಶೇಕಡ 75ರಷ್ಟು ಬಡ್ಡಿಯನ್ನು ಬ್ಯಾಂಕ್‌ಗಳು ಮರು ಪಾವತಿಸುವಂತೆ ಮಾಡಿದ್ದೇನೆ ಎನ್ನುತ್ತಾರೆ ಗಂಗಿಲ್.
ಜತೆಗೆ ಪ್ರತಿ ಕಂತಿನಲ್ಲಿ ಶೇಕಡ 25 ಪ್ರಿನ್ಸಿಪಲ್ ಮೊತ್ತವಾಗಿರುತ್ತದೆ. ಈ ರೀತಿಯಲ್ಲಿ ಸಾಲದ ಲೆಕ್ಕಾಚಾರವಿರುತ್ತದೆ. ಮೊದಲ 5ರಿಂದ 7 ವರ್ಷದಲ್ಲಿ ಬ್ಯಾಂಕ್‌ನವರು ಸಾಧ್ಯವಾಗುವಷ್ಟು ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ, ಏಳು ವರ್ಷಗಳ ನಂತರ ಎಲ್ಲ ಸಾಲವನ್ನು ಮರುಪಾವತಿ ಮಾಡಬಹುದು ಹಾಗೂ ನಿಮ್ಮ ಗಳಿಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಇದರಿಂದಾಗಿ ನಾನು ಶೇಕಡ 25 ಪ್ರಿನ್ಸಿಪಲ್ ಮೊತ್ತವನ್ನು ಪಾವತಿಸುತ್ತಿದ್ದೇನೆ. ಆ ಮೂಲಕ 36 ಇಎಂಐಗಳನ್ನು ಮರುಪಾವತಿಸಿದ್ದೇನೆ. ಇದರ ಪರಿಣಾಮ ಪ್ರಿನ್ಸಿಪಲ್ ಮೊತ್ತದಿಂದ ನೇರವಾಗಿ ಸಾಲದ ಮೊತ್ತ ಕಡಿತಗೊಂಡಿದೆ. ಆದ್ದರಿಂದ ನನ್ನ ಸಾಲಾವಧಿಯಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದು ಗಂಗಿಲಿ ತಿಳಿಸಿದ್ದಾರೆ.


Click it and Unblock the Notifications