ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಸುಮಾರು 92 ಬಿಲಿಯನ್ ಡಾಲರ್ (ಅಂದಾಜು 7.6 ಲಕ್ಷ ಕೋಟಿ ರೂಪಾಯಿ) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್‌ಮನ್ ಮತ್ತು ಎಂಡಿ ಮುಕೇಶ್ ಅಂಬಾನಿ ಯಾವಾಗಲೂ ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುತ್ತಾರೆ. ಇತ್ತೀಚೆಗೆ ಮತ್ತೆ ತಮ್ಮ ವ್ಯವಹಾರವನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಜಿಯೋ ವರ್ಲ್ಡ್ ಪ್ಲಾಜಾವನ್ನು ಪ್ರಾರಂಭಿಸುವುದರೊಂದಿಗೆ, ಭಾರತದ ಅತಿದೊಡ್ಡ ಐಷಾರಾಮಿ ಮಾಲ್ ಅನ್ನು ಮುಕೇಶ್ ಅಂಬಾನಿ ಈಗ ಪ್ರಾರಂಭಿಸಿದ್ದಾರೆ.

ಜಿಯೋ ವರ್ಲ್ಡ್ ಪ್ಲಾಜಾ ಮುಂಬೈನ ಬಿಕೆಸಿಯಲ್ಲಿನ ಜಿಯೋ ವರ್ಲ್ಡ್ ಸೆಂಟರ್‌ನ ಒಂದು ಭಾಗವಾಗಿದೆ. ಇದು ಲೂಯಿ ವಿಟಾನ್, ಬಾಲೆನ್ಸಿಯಾಗ ಮತ್ತು ಡಿಯರ್‌ನಂತಹ ಪ್ರಮುಖ ಫ್ಯಾಶನ್ ಬ್ರಾಂಡ್‌ಗಳನ್ನು ಹೊಂದಿದೆ. ತಮ್ಮ ಮಳಿಗೆಗಳಿಗೆ ಜಾಗವನ್ನು ಗುತ್ತಿಗೆ ನೀಡಿದ್ದಾರೆ.
ಮಾಲ್‌ನಿಂದ ಜಿಯೋ ಪ್ಲಾಜಾ ಪಡೆಯುವ ಬಾಡಿಗೆಯೆಷ್ಟು?
ಲೂಯಿ ವಿಟಾನ್ ಫ್ರೆಂಚ್ ಐಷಾರಾಮಿ ಫ್ಯಾಶನ್ ಹೌಸ್ ಆಗಿದೆ. ಜಿಯೋ ವರ್ಲ್ಡ್ ಪ್ಲಾಜಾದಲ್ಲಿ, ಇದು ಇತ್ತೀಚೆಗೆ ಭಾರತದಲ್ಲಿ ತನ್ನ ನಾಲ್ಕನೇ ಮಳಿಗೆಯನ್ನು ಪ್ರಾರಂಭಿಸಿದೆ. ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಲೂಯಿ ವಿಟಾನ್ ಮಾಸಿಕ ಬಾಡಿಗೆಯಾಗಿ 40.50 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ.
ಒಟ್ಟು 7,365 ಚದರ ಅಡಿಗಳಷ್ಟು ನಾಲ್ಕು ಘಟಕಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಇದು ಭಾರತದಲ್ಲಿ ಲೂಯಿ ವಿಟಾನ್‌ನ ಅತಿದೊಡ್ಡ ಮಳಿಗೆಯಾಗಿದೆ ಎಂದು ವರದಿಯಾಗಿದೆ.
ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಸ್ಟೋರ್ ಅನ್ನು ಹೊಂದಿರುವ ಮತ್ತೊಂದು ಎಲ್‌ವಿಎಂಎಚ್ ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ (ಎಲ್‌ವಿಎಂಎಚ್)ಬ್ರ್ಯಾಂಡ್ ಡಿಯೊರ್ ಆಗಿದೆ. 3,317 ಚದರ ಅಡಿ ವಿಸ್ತೀರ್ಣದ ಎರಡು ಘಟಕಗಳನ್ನು 21.56 ಲಕ್ಷ ರೂಪಾಯಿಗೆ ಮಾಸಿಕ ಬಾಡಿಗೆಗೆ ಡಿಯೊರ್ ಗುತ್ತಿಗೆ ಪಡೆದಿದೆ ಎಂದು ವರದಿಗಳು ಹೇಳುತ್ತವೆ. ಭಾರತದಲ್ಲಿ ಇದು ಡಿಯೊರ್‌ನ ಮೂರನೇ ಮಳಿಗೆಯಾಗಿದೆ.
ಮುಕೇಶ್ ಅಂಬಾನಿರ ಪುತ್ರಿ ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಅನ್ನು ಮುನ್ನಡೆಸಿದರು. 2022 ರಲ್ಲಿ, ಬಾಲೆನ್ಸಿಯಾಗಾದೊಂದಿಗೆ ಭಾರತಕ್ಕೆ ಬ್ರ್ಯಾಂಡ್ ಅನ್ನು ಪರಿಚಯಿಸಲು ದೀರ್ಘಾವಧಿಯ ಫ್ರ್ಯಾಂಚೈಸ್ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಭಾರತದಲ್ಲಿ ಬಾಲೆನ್ಸಿಯಾಗದ ಮೊದಲ ಮಳಿಗೆಯಾಗಿದೆ.
ಮುಕೇಶ್ ಅಂಬಾನಿ ಐಷಾರಾಮಿ ಮಾಲ್‌ನಲ್ಲಿ ಸ್ಟೋರ್ ಅನ್ನು ಬಾಡಿಗೆಗೆ ನೀಡಲು ಬಾಲೆನ್ಸಿಯಾಗ ಲೂಯಿ ವಿಟಾನ್‌ನಂತೆಯೇ ಮಾಸಿಕ ಬಾಡಿಗೆಯನ್ನು 40 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿದೆ ಎಂದು ವರದಿಗಳು ಹೇಳುತ್ತವೆ.
ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಮಳಿಗೆಗಳನ್ನು ಹೊಂದಿರುವ ಇತರ ಪ್ರಮುಖ ಐಷಾರಾಮಿ ಬ್ರಾಂಡ್‌ಗಳಲ್ಲಿ ಬರ್ಬೆರಿ, ಗುಸ್ಸಿ, ಕಾರ್ಟಿಯರ್ (ಭಾರತದಲ್ಲಿ ಎರಡನೇ ಸ್ಟೋರ್), ಬಲ್ಗರಿ, ಐಡಬ್ಲ್ಯೂಸಿ ಸ್ಕಾಫ್‌ಹೌಸೆನ್ ಮತ್ತು ರಿಮೋವಾ (ಭಾರತದ ಮೊದಲ ಸ್ಟೋರ್) ಸೇರಿವೆ.
ಮಾಸಿಕ ಬಾಡಿಗೆಯ ಹೊರತಾಗಿ, ಈ ಪ್ರಮುಖ ಐಷಾರಾಮಿ ಬ್ರಾಂಡ್‌ಗಳು ತಮ್ಮ ಮಾಸಿಕ ನಿವ್ವಳ ಆದಾಯದ ಶೇಕಡ 4 ರಿಂದ ಶೇಕಡ 12 ರಷ್ಟು ರಿಲಯನ್ಸ್‌ನೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ವರದಿಗಳು ಹೇಳುತ್ತವೆ.


Click it and Unblock the Notifications