ನವದೆಹಲಿ, ಜೂನ್ 22: ಹೂಡಿಕೆ ಆರಂಭಿಸಲು ಲಕ್ಷ ಲಕ್ಷ ಹಣ ಬೇಕು ಅಂತೇನೂ ಇಲ್ಲ. 100 ರೂಪಾಯಿ ಬಳಸಿಕೊಂಡು ನೀವು ಕ್ರಮಬದ್ಧ ಹೂಡಿಕೆ ಆರಂಭಿಸಲು ಸಾಧ್ಯವಿದೆ. ಅದರಲ್ಲಿಯೂ ಹೊಸದಾಗಿ ಕೆಲಸಕ್ಕೆ ಸೇರಿದವರು ಈ ಹೂಡಿಕೆಯನ್ನು ಆದ್ಯತೆಯ ಮೇರೆಗೆ ಆರಂಭಿಸಲೇಬೇಕು. ನಿಮ್ಮ ಮನೆ ಬಾಡಿಗೆ, ಊಟ-ತಿಂಡಿ ಸೇರಿದಂತೆ ಇತರೆ ಎಲ್ಲಾ ಖರ್ಚುಗಳು ಕಳೆದ ಮೇಲೆಯೂ ಒಂದಿಷ್ಟು ಹಣ ಉಳಿಯುತ್ತದೆ. ಅದನ್ನು ಆರಂಭದಿಂದಲೆ ಹೂಡಿಕೆಯಲ್ಲಿ ತೊಡಗಿಸಬೇಕು.
ಹೊಸದಾಗಿ ಹೂಡಿಕೆ ಮಾಡುವವರಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ - ಸಿಪ್ ಸೂಟ್ ಆಗುತ್ತದೆ. ಈ ಎಸ್ ಐಪಿ ಮೂಲಕ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ಹಣಕಾಸು ತಜ್ಞರ ಸಲಹೆಯಾಗಿದೆ. ಸಿಪ್ ನಲ್ಲಿ ನೀವು ಪ್ರತಿ ತಿಂಗಳು ಕಡಿಮೆ ಮೊತ್ತ ಅಂದ್ರೆ ನೂರು ರೂಪಾಯಿ ಅಥವಾ ಐನೂರು ರೂಪಾಯಿ ಯಿಂದ ಹೂಡಿಕೆ ಆರಂಭಿಸಬಹುದು!

ವಯಸ್ಸು, ಹಣಕಾಸು ಗುರಿ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ, ಆದಾಯ ಮೊದಲಾದ ಅಂಶ ಆಧರಿಸಿ ನೀವು ಸೂಕ್ತ ಸ್ಕೀಂ ಆಯ್ಕೆ ಮಾಡಿಕೊಳ್ಳಬಹುದು. ಟಾಪ್ ಫಂಡ್ ಗಳ ಉತ್ತಮ ಸ್ಕೀಂ ಗಳು ಯಾವುದು ಎನ್ನುವುದನ್ನು ಸ್ವಲ್ಪ ರಿಸರ್ಚ್ ಮಾಡಿ. ಸಿಪ್ ಮೂಲಕ ಹೂಡಿಕೆ ಸುಲಭ ಅಂದ್ರೆ ಕನ್ವೀನಿಯಂಟ್ ವೇ ಆಗಿದೆ. ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಆಟೋಮ್ಯಾಟಿಕ್ ಆಗಿ ಹಣ ಡಿಡಕ್ಟ್ ಆಗುತ್ತಿರುತ್ತದೆ.
ಸಿಪ್‌ನ ಪ್ರಮುಖ ಅನುಕೂಲ ಅಂದರೆ ಅದು ರುಪೀ ಕಾಸ್ಟ್ ಆ್ಯವರೇಜಿಂಗ್ ಗೆ ಅವಕಾಶ ಕೊಡುತ್ತದೆ. ಅಂದರೆ ಮಾರುಕಟ್ಟೆ ಏರಿಳಿತಗಳು ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಹಾಗೇ ನೀವು ನಿಮ್ಮ ಹೂಡಿಕೆ ಸಮಯದ ಬಗ್ಗೆ ಚಿಂತೆ ಮಾಡೋ ಅಗತ್ಯ ಸಹ ಇಲ್ಲಿ ಇರುವುದಿಲ್ಲ. ನೀವು ಸಿಪ್ ಮೂಲಕ ಎಷ್ಟು ಬೇಗ ಹೂಡಿಕೆ ಶುರು ಮಾಡುತ್ತಿರೋ ಅಷ್ಟು ಲಾಭ ಸಿಗುತ್ತದೆ. ಬೇಗ ಹೂಡಿಕೆ ಮಾಡಿದರೆ ಕಾಂಪೌಂಡಿಂಗ್ ಲಾಭ ಪಡೆಯಬಹುದು. ಈ ಕಾಂಪೌಂಡಿಂಗ್ ಪರಿಣಾಮವಾಗಿ ನಿಮ್ಮ ಹೂಡಿಕೆ ನಿರಂತರ ಬೆಳವಣಿಗೆ ಕಾಣುತ್ತದೆ.
ಹೊಸ ಹೂಡಿಕೆದಾರರು ಕೇವಲ ಮ್ಯೂಚುಯಲ್ ಫಂಡ್ ಗಳ ಮೇಲೆ ಅವಲಂಬಿತರಾಗಬಾರದು. ಬದಲಿಗೆ, ಅವರು ಬ್ಯಾಲೆನ್ಸ್ಡ್ ಮತ್ತು ಡೈವರ್ಸಿಫೈಡ್ ಅಂದ್ರೆ ಸಮತೋಲಿತ ಮತ್ತು ವಿಸ್ತೃತ ಫೋಲಿಯೋ ರೂಪಿಸಿಕೊಳ್ಳಬೇಕು. ಅಂದರೆ ನಿಶ್ಚಿತ ಠೇವಣಿ - ಎಫ್ ಡಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ - ಪಿಪಿಎಫ್, ಚಿನ್ನ ಇತ್ಯಾದಿಯಾಗಿ ವಿವಿಧ ಉಳಿತಾಯ ಸ್ಕೀಂ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.
ಕಡಿಮೆ ಮೊತ್ತದಲ್ಲಿಯೇ ಹೂಡಿಕೆ ಆರಂಭಿಸಿಕೊಂಡು ನಿಧಾನಕ್ಕೆ ಕ್ರಮಬದ್ಧವಾಗಿ ಮೊತ್ತ ಹೆಚ್ಚಳ ಮಾಡಿಕೊಂಡು ಬಂದರೆ ನೀವು ಕಾಂಪೌಂಡಿಂಗ್ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.


Click it and Unblock the Notifications