ಈ ಹಿಂದೆಲ್ಲ ಶ್ರೀಮಂತಿಕೆ ಅಂದಾಕ್ಷಣ ಅವೇ ನಾಲ್ಕೈದು ಹೆಸರುಗಳು ಕೇಳಿಬರುತ್ತಿದ್ದವು. ನಾವೇನು ಟಾಟಾ- ಬಿರ್ಲಾ ಅಂದುಕೊಂಡೆಯಾ? ಏನು ವಿಕ್ಟೋರಿಯಾ ರಾಣಿ ಅದುಕೊಂಡೆಯಾ? ಹೀಗೆಲ್ಲ ಮಾತುಗಳನ್ನು ಕೇಳಿಸಿಕೊಳ್ಳುವ ಕಾಲ ಮುಗಿದಿದೆ. ಹಾಗಂದರೆ ಈಗೆಂಥ ಕಾಲ? ಈಗ ಯಾರು ಭವಿಷ್ಯದ ಸಾಧ್ಯತೆಯನ್ನು ಮುಂಚೆಯೇ ಗುರುತಿಸುತ್ತಾರೆ ಅಂಥವರಿಗೆ ಕಾಲ.
ಇವತ್ತಿಗೆ ವಿಶ್ವದ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್. ಇ ಕಾಮರ್ಸ್ ವ್ಯವಹಾರದ ಸಾಧ್ಯತೆಯನ್ನು ಬಹಳ ಮುಂಚಿತವಾಗಿಯೇ ಗುರುತಿಸಿದ ಕಾರಣಕ್ಕೆ ಅಮೆಜಾನ್ ನಂಥದ್ದನ್ನು ಕಟ್ಟಲು ಸಾಧ್ಯವಾಯಿತು. ಹಾಗಂತ ಜೆಫ್ ಬೆಜೋಸ್ ಏನೂ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ವ್ಯಕ್ತಿಯಲ್ಲ.
ಅದೇ ರೀತಿ ವರ್ಷಗಳ ಕಾಲ ವಿಶ್ಬದ ನಂಬರ್ ಒನ್ ಸ್ಥಾನದಲ್ಲಿದ್ದ ಬಿಲ್ ಗೇಟ್ಸ್ ಗೂ ಇದೇ ಮಾತು ಅನ್ವಯಿಸುತ್ತದೆ. ಈಗ ಟಾಪ್ ಟೆನ್ ಪಟ್ಟಿಯಲ್ಲಿ ಬಂದು ಕೂತಿರುವ ರಿಲಯನ್ಸ್ ನ ಮುಕೇಶ್ ಅಂಬಾನಿ ಕೂಡ ಭಾರತದಲ್ಲಿನ ಡಿಜಿಟಲ್ ವ್ಯವಹಾರ ಹಾಗೂ ಇಂಟರ್ನೆಟ್ ಬೇಡಿಕೆಯನ್ನು ಗುರುತಿಸಿದ ಕಾರಣಕ್ಕೆ ಎಂಥ ಕೊರೊನಾ ಬಂದರೂ ಶ್ರೀಮಂತಿಕೆ ಏರುತ್ತಲೇ ಇದೆ.
ಹೌದಲ್ವಾ, ಅವರು ಮಾತ್ರ ಏಕೆ ಶ್ರೀಮಂತರಾಗುತ್ತಾರೆ ಅನ್ನೋದನ್ನು ಯೋಚನೆ ಮಾಡಿದ್ದೀರಾ?
ವರ್ತಮಾನದಲ್ಲಿ ಬದುಕುತ್ತಾ ಭವಿಷ್ಯದ ಸೌಧ ಕಟ್ಟಿದವರು
ಜೆಫ್ ಬೆಜೋಸ್ ನಿಂದ ಫೇಸ್ ಬುಕ್ ನ ಮಾರ್ಕ್ ಝುಕರ್ ಬರ್ಗ್ ತನಕ, ಬಿಲ್ ಗೇಟ್ಸ್ ನಿಂದ ಎಲಾನ್ ಮಸ್ಕ್ ತನಕ ಇವರೆಲ್ಲ ಭವಿಷ್ಯದ ಸಾಧ್ಯತೆಯನ್ನು ಮುಂಚೆಯೇ ಅಂದಾಜು ಮಾಡಿದವರು. ವರ್ತಮಾನದಲ್ಲಿ ಬದುಕತ್ತಲೇ ಭವಿಷ್ಯದ ಸೌಧವನ್ನು ಕಟ್ಟುತ್ತಾ ಸಾಗಿದವರು. ಏನೋ ಸಂಕಷ್ಟ ಎದುರಾಗಿದೆ ಎಂದು ಸುಮ್ಮನೆ ಕೂರದೆ, ಭವಿಷ್ಯಕ್ಕೆ ಅದು ಹೇಗೆ ಅನುಕೂಲವಾಗಿ ಮಾರ್ಪಡಿಸಿಕೊಳ್ಳಬಹುದು ಎಂದು ಆಲೋಚಿಸಿದರು. ಬರೀ ಯೋಚಿಸುತ್ತಾ ಸುಮ್ಮನಾಗಲಿಲ್ಲ. ಅದನ್ನು ಕಾರ್ಯ ರೂಪಕ್ಕೆ ತಂದರು. ಆದರೆ ಈಗಾಗಲೇ ಟ್ರೆಂಡ್ ನಲ್ಲಿ ಇರುವ ಹಾದಿಯಲ್ಲಿ ಅವರೇನೂ ಸಾಗಲಿಲ್ಲ. ನಮ್ಮಲ್ಲಿ ಬಹುತೇಕರು ವರ್ತಮಾನದಲ್ಲಿ ಯಾವುದೇ ಬೇಡಿಕೆಯಲ್ಲಿ ಇರುತ್ತದೋ ಅದನ್ನು ಮಾತ್ರ ಆಲೋಚಿಸುತ್ತೇವೆ. ಆ ಕಾರಣಕ್ಕೆ ನಿರ್ದಿಷ್ಟ ಕಾಲ ಘಟ್ಟವನ್ನು ಮೀರಿ ಬೆಳೆಯಲು, ದೊಡ್ಡ ಸಾಧನೆ ಮಾಡಲು ಆಗಲ್ಲ. ಇದಕ್ಕೆ ಇನ್ನೂ ಒಂದು ಉದಾಹರಣೆ ಅಂದರೆ, ಇನ್ನೂ ದಪ್ಪ- ದಪ್ಪ ಪುಸ್ತಕಗಳ ಮಾರಾಟ ಆಗುತ್ತಿರುವಂತೆಯೇ ಇ- ಬುಕ್, ಆಡಿಯೋ ಬುಕ್ ಎಂದು ಆಲೋಚಿಸಿದರಲ್ಲಾ, ಅದನ್ನು ಜಾರಿಗೆ ತಂದರಲ್ಲಾ ಅಂಥ ಆಲೋಚನೆ ಬೇಕು.
ಸಮಯ ಜಾರಿ ಹೋಗುತ್ತದೆ ವಿನಾ ಸಾಧನೆ ಆಗಲ್ಲ
ಬೆಳಗ್ಗೆ ಒಂಬತ್ತರಿಂದ ಸಂಜೆ ಆರು ಗಂಟೆಯ ಕೆಲಸ ನೆಮ್ಮದಿಯನ್ನು ನೀಡಬಹುದು. ಆದರೆ ಕನಸನ್ನು ಸಾಕಾರಗೊಳಿಸುವುದಿಲ್ಲ. ಯಾವುದಾದರೂ ಒಂದೇ ಕೆಲಸವನ್ನು ಒಂದು ಸಲಕ್ಕೆ ಮಾಡುತ್ತಾ ದಿನವನ್ನು ಕಳೆಯುವ ಜಾಯಮಾನ ಇದ್ದಲ್ಲಿ ಅದಕ್ಕೆ ತಕ್ಕಂಥ ಪ್ರತಿಫಲವೇ ದೊರೆಯುತ್ತದೆ. ಬೆಳಗ್ಗೆ ಒಂದು ಗಂಟೆ ಬೇಗ ಎದ್ದು, ರಾತ್ರಿ ಒಂದು ಗಂಟೆ ತಡವಾಗಿ ಮಲಗುತ್ತಾ ಸಿದ್ಧತೆಯಲ್ಲಿ ತೊಡಗಲಿಲ್ಲ ಅಂದರೆ, ಯಾವುದಕ್ಕೂ ಸಮಯವೇ ಇಲ್ಲ ಎಂಬ ಸಬೂಬು ಮಾತ್ರ ಸಿಗುತ್ತದೆ. ಇವತ್ತಿಗೆ ಯಾವುದೇ ಕೆಲಸ ಮಾಡುವವರಿಗೂ ಒತ್ತಡ ಇದ್ದೇ ಇದೆ. ಮಾಮೂಲಿಗಿಂತ ಹೆಚ್ಚು ಸಮಯ ಅದಕ್ಕಾಗಿ ಇಡಬೇಕಾಗುತ್ತದೆ. ಈ ಕಾರಣಕ್ಕೆ ನಮ್ಮ ಮೇಲೆ ನಮಗೇ ಅನುಕಂಪ ಬಂದು, ನಾಳೆ ಮಾಡಿದರಾಯಿತು. ಈಗಿನ ಒತ್ತಡ ಕಡಿಮೆ ಮಾಡಿದ ಮೇಲೆ ಶುರು ಮಾಡಿದರಾಯಿತು ಅಂದುಕೊಳ್ಳುತ್ತಾ ಸಾಗಿದಲ್ಲಿ ಸಮಯ ಜಾರಿಹೋಗುತ್ತದೆಯೇ ವಿನಾ ಸಾಧನೆ ಆಗಲ್ಲ.
ಶ್ರೀಮಂತಿಕೆ ಕಾಣುತ್ತಿರುವ ಮೊದಲ ತಲೆಮಾರಿನವರು
ಡಿಗ್ರಿಗಳಿಲ್ಲ, ಒಳ್ಳೆ ಶಿಕ್ಷಣ ಸಂಸ್ಥೆಗಳಲ್ಲಿ ಓದಿಲ್ಲ, ಅಪ್ಪ ಅಥವಾ ಅಮ್ಮ ಪ್ರಭಾವಿಗಳಲ್ಲ- ಹಣ ಮಾಡಿಲ್ಲ... ಹೀಗೆ ಏನೆಲ್ಲ ಕಾರಣಗಳನ್ನು ಹಿನ್ನಡೆಗೆ ನೀಡಬಹುದು. ಆದರೆ ಈಗಿನ ಶ್ರೀಮಂತರ ಪೈಕಿ ಹಲವರು ಮೊದಲ ತಲೆಮಾರಿನಲ್ಲಿ ಶ್ರೀಮಂತಿಕೆ ಕಾಣುತ್ತಿರುವವರು ಎಂಬುದು ನೆನಪಿನಲ್ಲಿಡಿ. ಬುದ್ಧಿಶಕ್ತಿ, ಸಕಾರಾತ್ಮಕ ಆಲೋಚನೆ, ಪ್ರಯತ್ನ ಹಾಗೂ ಪಟ್ಟು ಬಿಡದ ಮನಸ್ತತ್ವ ಇವೆಲ್ಲವೂ ಇವರ ಮೂಲ ಬಂಡವಾಳ. ರಾತ್ರೋರಾತ್ರಿ ಇವರ ಜೀವನದಲ್ಲಿ ಬದಲಾವಣೆ ಆಗಿಲ್ಲ. ಮೆಟ್ಟಿಲುಗಳನ್ನು ಏರುತ್ತಾ, ಮಧ್ಯೆ ಮಧ್ಯೆ ಪೆಟ್ಟು ತಿನ್ನುತ್ತಾ ಹಾಗೂ ಬದುಕಿನ ಜತೆ ಸೆಣೆಸುತ್ತಲೇ ಮೇಲೇರಿ ಬಂದಿದ್ದಾರೆ. ಆದ್ದರಿಂದ ಅದಿಲ್ಲ- ಇದಿಲ್ಲ ಎಂಬ ಕಾರಣಗಳನ್ನು ಬದಿಗೊತ್ತಿ, ಬುದ್ಧಿ ಶಕ್ತಿ, ಸಕಾರಾತ್ಮಕ ಆಲೋಚನೆ, ಪ್ರಯತ್ನವನ್ನು ಒಗ್ಗೂಡಿಸಿ ಪಟ್ಟುಬಿಡದೆ ಬೆನ್ನು ಹತ್ತಬೇಕು. ನಿಮ್ಮ ಪಾಲಿಗೆ ಯಾರನ್ನೆಲ್ಲ ರೋಲ್ ಮಾಡೆಲ್ ಅಂದುಕೊಂಡಿದ್ದೀರೋ ಅಂಥ ಐದು ಜನರ ಹೆಸರನ್ನು ಒಂದು ಕಾಗದದ ಮೇಲೆ ಬರೆದುಕೊಳ್ಳಿ. ಅವರ ಬದುಕನ್ನು ಹೇಗೆ ಕಟ್ಟಿಕೊಂಡರು ಎಂಬುದನ್ನು ತಿಳಿದುಕೊಂಡರೆ ನಿಮಗೇ ಖಾತ್ರಿ ಆಗುತ್ತದೆ.
ಹವ್ಯಾಸಗಳನ್ನು ಗಮನಿಸಿ
ಇನ್ನು ಈ ಶ್ರೀಮಂತರ ಹವ್ಯಾಸಗಳನ್ನು ಗಮನಿಸಿ. ಯಾವುದಕ್ಕೆ ಹೆಚ್ಚಿನ ಸಮಯ ನೀಡುತ್ತಾರೆ ಎಂಬುದನ್ನು ತಿಳಿಯಿರಿ. ತುಂಬ ಸಾಮಾನ್ಯವಾದ ಅಂಶ ಅಂದರೆ, ಓದು- ಕಲಿಕೆಗೆ ಹೆಚ್ಚಿನ ಸಮಯ ಮೀಸಲಿಟ್ಟಿರುತ್ತಾರೆ. ಹಾಗಂತ ಅದು ಶಿಕ್ಷಣವೇ ಆಗಿರಬೇಕು ಅಂತಲ್ಲ. ಮತ್ತೊಬ್ಬರ ಜೀವನಗಾಥೆ, ಪರ್ಸನಾಲಿಟಿ ಡೆವೆಲಪ್ ಮೆಂಟ್ ವಿಷಯ, ಮೋಟಿವೇಷನಲ್ ಕೌಶಲ, ಪಬ್ಲಿಕ್ ಸ್ಪೀಕಿಂಗ್... ಹೀಗೆ ಕಮ್ಯುನಿಕೇಷನ್ ಗೆ ಅಂದರೆ ಸಂವಹನಕ್ಕೆ ಅನುಕೂಲ ಮಾಡುವ ವಿಷಯಗಳ ಕಲಿಕೆಗೆ ಜಾಸ್ತಿ ಮಹತ್ವ ನೀಡಿರುತ್ತಾರೆ. ಅದೇ ರೀತಿ ತಮ್ಮ ಉತ್ಪನ್ನ ಅಥವಾ ಸೇವೆ ಹೆಚ್ಚು ಜನರಿಗೆ ತಲುಪಬೇಕು ಅನ್ನೋದು ಇವರ ಉದ್ದೇಶ ಆಗಿರುತ್ತದೆಯೇ ವಿನಾ ತಾವು ನಂಬರ್ ಹೆಚ್ಚು ಹೆಚ್ಚು ಶ್ರೀಮಂತರಾಗಬೇಕು ಎಂದಿರುವುದಿಲ್ಲ. ಹೆಚ್ಚು ಮಂದಿಗೆ ಉದ್ಯೋಗ ನೀಡಬೇಕು ಎಂಬ ಕಡೆಗೆ ಗಮನ ಇರುತ್ತದೆಯೇ ತಮ್ಮ ತಿಜೋರಿಯಲ್ಲೇ ಹಣ ಕೊಳೆಯಬೇಕು ಎಂಬ ಆಲೋಚನೆ ಇರುವುದಿಲ್ಲ. ಇವರ ಪಾಲಿಗೆ ಅತ್ಯುತ್ತಮವಾದ ಕೆಲಸ ಅಥವಾ ಬಿಜಿನೆಸ್ ಮಾಡುವುದು ಆದ್ಯತೆ ಆಗಿರುತ್ತದೆ. ಅದನ್ನು ಸರಿಯಾಗಿ ಮಾಡಿದರೆ ಕೀರ್ತಿ, ಹಣ, ಯಶಸ್ಸು ಎಲ್ಲವೂ ಹುಡುಕಿಕೊಂಡು ಬರುತ್ತವೆ ಎಂದು ನಂಬಿರುತ್ತಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications