ಒಂದು ವೇಳೆ ನಮ್ಮ ಉಳಿತಾಯ ಅಥವಾ ಕರೆಂಟ್ ಬ್ಯಾಂಕ್ ಖಾತೆಯಲ್ಲಿ ಎರಡು ವರ್ಷಗಳ ಕಾಲ ಯಾವುದೇ ವರ್ಗಾವಣೆಯನ್ನು ನಾವು ನಡೆಸದಿದ್ದರೆ, ಆ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ನಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದರೆ ಬಳಿಕ ಆ ಬ್ಯಾಂಕ್ ಖಾತೆಯಿಂದ ಠೇವಣಿದಾರರು ಅಥವಾ ಡೆಪಾಸಿಟ್‌ದಾರರು ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ನಾವು ಬ್ಯಾಂಕ್ ಖಾತೆಯನ್ನು ಮತ್ತೆ ಸಕ್ರಿಯ ಅಥವಾ ಆಕ್ಟಿವೇಟ್‌ಗೊಳಿಸಿ ಬಳಿಕ ಬ್ಯಾಂಕ್ ಖಾತೆಯಲ್ಲಿ ವರ್ಗಾವಣೆ ಮತ್ತೆ ಆರಂಭಿಸಲು ಸಾಧ್ಯವಾಗುತ್ತದೆ.
ಓರ್ವ ವ್ಯಕ್ತಿಯು ತಮ್ಮ ಬ್ಯಾಂಕ್ ಖಾತೆಯಲ್ಲಿ ಎರಡು ವರ್ಷಗಳಿಗಿಂತ ಅಧಿಕ ಕಾಲ ಯಾವುದೇ ವಹಿವಾಟನ್ನು ನಡೆಸದಿದ್ದರೆ, ಬ್ಯಾಂಕ್ ಆ ಖಾತೆಯನ್ನು ಪರಿಶೀಲಿಸುತ್ತದೆ. ಆ ಖಾತೆಯನ್ನು ಸಾಮಾನ್ಯ ವಹಿವಾಟು ನಡೆಯುವ ಖಾತೆಗಳಿಂದ ಪ್ರತ್ಯೇಕಗೊಳಿಸುತ್ತದೆ. ಈಗ ಸಾಮಾನ್ಯವಾಗಿ ಓರ್ವ ವ್ಯಕ್ತಿಯು ಎರಡು ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾನೆ. ಹಾಗೆಯೇ ಅದರಲ್ಲಿ ಯಾವುದಾದರೂ ಒಂದು ಖಾತೆಯಲ್ಲಾದರೂ ಯಾವುದೇ ವಹಿವಾಟನ್ನು ನಡೆಸಲು ಸಾಧ್ಯವಾಗದೆ ಇರಬಹುದು. ಇಂತಹ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ ಎಂಬುವುದು ಹಲವರಿಗೆ ತಿಳಿದಿಲ್ಲ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ನಿಷ್ಕ್ರಿಯ ಬ್ಯಾಂಕ್ ಖಾತೆ ಎಂದರೇನು?
ಎರಡು ವರ್ಷ ಅಥವಾ ಅದಕ್ಕೂ ಅಧಿಕ ಕಾಲದವರೆಗೆ ಯಾವುದೇ ಒಂದು ಉಳಿತಾಯ ಅಥವಾ ಕರೆಂಟ್ ಅಕೌಂಟ್‌ನಲ್ಲಿ ವಹಿವಾಟು ನಡೆಸಿಲ್ಲವೆಂದಾದರೆ, ಅಥವಾ ಹಣಕಾಸು ವಹಿವಾಟು ನಡೆದಿಲ್ಲದಿದ್ದರೆ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಖಾತೆಗೆ ನಿಷ್ಕ್ರಿಯ ಬ್ಯಾಂಕ್ ಖಾತೆ ಎಂದು ಕರೆಯಲಾಗುತ್ತದೆ. ಖಾತೆಯನ್ನು "ನಿಷ್ಕ್ರಿಯ" ಎಂದು ಪರಿಗಣಿಸುವುದಕ್ಕೂ ಮುನ್ನ ಎರಡೂ ರೀತಿಯ ವಹಿವಾಟುಗಳು, ಅಂದರೆ ಗ್ರಾಹಕರು ಮತ್ತು ಮೂರನೇ ವ್ಯಕ್ತಿಯ ಮೂಲಕ ಮೇರೆಗೆ ಡೆಬಿಟ್ ಮತ್ತು ಕ್ರೆಡಿಟ್ ವಹಿವಾಟುಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?
ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಯನ್ನು ನಾವು ಮತ್ತೆ ಸಕ್ರಿಯಗೊಳಿಸಬೇಕಾದರೆ ಮೊದಲು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ನಿಮ್ಮ ಸಹಿ ಮತ್ತು ಖಾತೆಯ ಎಲ್ಲ ಮಾಹಿತಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ಗುರುತು ಮತ್ತು ವಿಳಾಸದ ಪುರಾವೆ (ಆಧಾರ್, ಪ್ಯಾನ್, ವೋಟರ್ ಐಡಿ) ನೀಡಬೇಕಾಗುತ್ತದೆ. ಅದಾದ ಬಳಿಕ ನೀವು ವಹಿವಾಟನ್ನು ಪ್ರಾರಂಭಿಸಿದರೆ, ನಿಮ್ಮ ಖಾತೆಯನ್ನು ಪುನಃ ಸಕ್ರಿಯಗೊಳಿಸಲಾಗುತ್ತದೆ.
ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?
ಒಂದು ಬ್ಯಾಂಕ್ ಖಾತೆಯು ಸಿಂಗಲ್ ಖಾತೆಯಾಗಿರಲಿ ಅಥವಾ ಜಂಟಿ ಖಾತೆಯಾಗಿರಲಿ, ಬ್ಯಾಂಕ್‌ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಜಂಟಿ ಖಾತೆಗಳಿಗೆ ಎಲ್ಲಾ ಖಾತೆದಾರರ ಸಹಿ ಅಗತ್ಯವಿರುತ್ತದೆ. ನಿಮ್ಮ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ/ Know Your Customer) ಮಾಹಿತಿ ಒದಗಿಸಬೇಕಾಗುತ್ತದೆ. ವಿಳಾಸ ಪುರಾವೆ, ಪ್ಯಾನ್ ಕಾರ್ಡ್ ಮತ್ತು ಗುರುತಿನ ಪುರಾವೆಯನ್ನು ಒದಗಿಸುವುದು ಅಗತ್ಯವಾಗಿದೆ. ಅದಾದ ಬಳಿಕ ಕನಿಷ್ಟ ಒಂದು ಹಣಕಾಸಿನ ವಹಿವಾಟನ್ನು ಪೂರ್ಣಗೊಳಿಸಬೇಕು.
ಖಾತೆಯು ನಿಷ್ಕ್ರಿಯವಾಗಿದ್ದರೆ ಏನಾಗುತ್ತದೆ?
ದೀರ್ಘಕಾಲದವರೆಗೆ ಒಂದು ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣಕಾಸು ವಹಿವಾಟು ನಡೆಸದಿದ್ದರೆ ಆ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿ, ಆ ಖಾತೆಗಳ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ. ಅದಾದ ಬಳಿಕ ಈ ಬ್ಯಾಂಕ್ ಖಾತೆಯಲ್ಲಿ ಯಾವುದ ಹಣಕಾಸು ವಹಿವಾಟು, ಪಾವತಿ, ಹಣ ವರ್ಗಾವಣೆ, ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಅನ್ನು ನಿಷ್ಕ್ರಿಯ (ಸುಪ್ತ/ Dormant) ಎಂದು ಪರಿಗಣಿಸಿದಾಗ ಗ್ರಾಹಕರು ಮಾಡುವ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ವಹಿವಾಟುಗಳನ್ನು ನಿಷೇಧಿಸಲಾಗುತ್ತದೆ.
ಹಣಕಾಸು (ನಗದು ಠೇವಣಿ/ಹಿಂತೆಗೆದುಕೊಳ್ಳುವಿಕೆ, ನಿಧಿ ವರ್ಗಾವಣೆ, ಐಎಂಪಿಎಸ್, ಆರ್‌ಟಿಜಿಎಸ್, ನೆಫ್ಟ್ ಅಥವಾ ಎನ್‌ಇಎಫ್‌ಟಿ, ಅಥವಾ ಯುಪಿಐನಂತಹ ಯಾವುದೇ ವಹಿವಾಟು) ಮತ್ತು ಹಣಕಾಸಿನೇತರ ವಹಿವಾಟುಗಳು (ಚೆಕ್ ಬುಕ್, ಡೆಬಿಟ್ ಕಾರ್ಡ್) ಈ ನಿಷ್ಕ್ರಿಯ ಖಾತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ. ಖಾತೆಯು ಸಕ್ರಿಯವಾಗಿರಲಿ ಅಥವಾ ಇಲ್ಲದಿರಲಿ ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ನಿಯಮಿತವಾಗಿ ಜಮೆ ಮಾಡಲಾಗುತ್ತದೆ.


Click it and Unblock the Notifications