ಯುಐಡಿಎಐ ಸಂಸ್ಥೆಯು ಎಂಆಧಾರ್ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ವಾಲೆಟ್‌ನಲ್ಲಿರುವ ಆಧಾರ್ ಕಾರ್ಡ್‌ಗೆ ಸಮಾನವಾಗಿದೆ. ಬಳಕೆದಾರರು ಈ ಎಂಆಧಾರ್ ಆಪ್‌ನಲ್ಲಿ ತಮ್ಮ ಕುಟುಂಬಸ್ಥರ ಪ್ರೊಫೈಲ್ ಅನ್ನು ಲಿಂಕ್ ಮಾಡಬಹುದಾಗಿದೆ.
ಯಾರೆಲ್ಲ ಆಧಾರ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಕೊಂಡಿದ್ದಾರೆಯೋ ಅಂಥವರು ಎಂಆಧಾರ್ ಆಪ್‌ನಲ್ಲಿ ಆಧಾರ್ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಬಹುದು. ಈ ಎಂಆಧಾರ್‌ನ ಆಧಾರ್ ಪ್ರೊಫೈಲ್ ಅನ್ನು ಮಾನ್ಯತೆಯ ಗುರುತಿನ ದಾಖಲೆಯಾಗಿ ಪರಿಗಣಿಸಲಾಗುತ್ತದೆ.

ಆಧಾರ್ ದೃಢೀಕರಣದ ಅಗತ್ಯವಿರುವ ಸೇವೆಗಳಿಗೆ ಬಳಕೆದಾರರು ತಮ್ಮ ಇ-ಕೆವೈಸಿ ಅಥವಾ ಕ್ಯೂರ್ ಕೋಡ್ ಅನ್ನು ಶೇರ್ ಮಾಡಿಕೊಳ್ಳಬಹುದು. ಎಂಆಧಾರ್ ಆಪ್ ಆಧಾರ್ ಹೊಂದಿರುವ ನಾಗರಿಕರ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಆಧಾರ್‌ಗೆ ಲಿಂಕ್ ಆಗಿರುವ ವಿಳಾಸದ ಮಾಹಿತಿ ಇದರಲ್ಲಿ ಅಡಗಿದೆ.
ವಿಶೇಷವೆಂದರೆ, ಬಳಕೆದಾರರು ತಮ್ಮ ಕುಟುಂಬಸ್ಥರ ಪ್ರೊಫೈಲ್ ಅನ್ನು ಕೂಡ ಕೆಲವು ಸರಳ ಹಂತಗಳ ಮೂಲಕ Mಆಧಾರ್‌ಗೆ ಸೇರಿಸಬಹುದಾಗಿದೆ. ಎಂಆಧಾರ್‌ನಲ್ಲಿ ಆಧಾರ್ ಕಾರ್ಡ್ ಹೊಂದಿರುವವರು ಕೇವಲ ಮೂವರು ಬಳಕೆದಾರರನ್ನು ಮಾತ್ರ ಸೇರಿಸಿಕೊಳ್ಳುವುದಕ್ಕೆ ಅವಕಾಶವಿದೆ.
ಅವರೆಲ್ಲರೂ ಅದೇ ಮೊಬೈಲ್ ಸಂಖ್ಯೆಯನ್ನೇ ಆಧಾರ್ ಲಿಂಕ್‌ಗೂ ನೀಡಿರಬೇಕು. ಅಂದರೆ, ಕುಟುಂಬದ ಸದಸ್ಯರೆಲ್ಲರೂ ನಿಗದಿತ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಿಕೊಂಡಿದ್ದರೆ ಮಾತ್ರ ಪೊಫ್ರೈಲ್‌ಗೆ ಸೇರಿಸುವುದಕ್ಕೆ ಸಾಧ್ಯ. ಹೇಗೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...
ಪ್ರೊಫೈಲ್ ಹೇಗೆ ಸೇರ್ಪಡೆ
- ಹಂತ 1: ಎಂಆಧಾರ್ ಆಪ್ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ಓಪನ್ ಮಾಡಬೇಕು. ಆಧಾರ್ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಬೇಕು.
- ಹಂತ 2: ನಿಮ್ಮ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
- ಹಂತ 3: ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಿ, ಷರತ್ತುಗಳನ್ನು ಒಪ್ಪಿಕೊಳ್ಳಬೇಕು.
- ಹಂತ 4: ಆಗ ನಿಮ್ಮ ಕುಟುಂಬದ ಸದಸ್ಯರು ಒಟಿಪಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಡೆದುಕೊಳ್ಳುತ್ತಾರೆ. ಆ ಮೂಲಕ ಒಟಿಪಿ ಷೇರು ಮಾಡಿಕೊಳ್ಳುವಂತೆ ವಿನಂತಿಸಬೇಕು.
- ಹಂತ 5: ಆಪ್‌ನಲ್ಲಿ ಒಟಿಪಿ ನಮೂದಿಸಬೇಕು. ಅದು ವೆರಿಫೈ ಆದ ಕೂಡಲೇ ನಿಮ್ಮ ಕುಟುಂಬ ಸದಸ್ಯರ ಆಧಾರ್ ಮಾಹಿತಿಯು ಎಂಆಧಾರ್‌ನಲ್ಲಿ ಸೇರ್ಪಡೆಗೊಳ್ಳುತ್ತದೆ.
ಆ ಬಳಿಕ ನಿಮ್ಮ ಕುಟುಂಬ ಸದಸ್ಯರ ಆಧಾರ್ ಮಾಹಿತಿಯ ಇ-ಕೆವೈಸಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಎಂಆಧಾರ್ ಯುಐಡಿಎಐ ಬಿಡುಗಡೆ ಮಾಡಿದ ಅಧಿಕೃತ ಆಧಾರ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಿಂದಲೇ ತಮ್ಮ ಆಧಾರ್ ವಿವರಗಳನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.


Click it and Unblock the Notifications