ಶೀಘ್ರದಲ್ಲೇ ಭಾರತವು ಪಾಸ್‌ಪೋರ್ಟ್ ಹೊಸ ಮತ್ತು ಅಪ್ಗ್ರೇಡ್ ಮಾಡಿದ ಸೇವಾ ಕಾರ್ಯಕ್ರಮದ (ಪಿಎಸ್‌ಪಿ-ಆವೃತ್ತಿ 2.0) ಪ್ರಾರಂಭಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪಾಸ್‌ಪೋರ್ಟ್ ಸೇವಾ ದಿವಸ್ ಸಂದರ್ಭದಲ್ಲಿ ಘೋಷಣೆಯನ್ನು ಮಾಡಿದ್ದಾರೆ.
ಹೌದು, ಪಿಎಸ್‌ಪಿ-ಆವೃತ್ತಿ 2.0 ಬಿಡುಗಡೆಯಾದ್ದರೆ ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯು ಮೊದಲಿಗಿಂತ ಸುಲಭವಾಗುತ್ತದೆ. ಈಗಾಗಲೇ ಸರ್ಕಾರವು 'ಪಾಸ್‌ಪೋರ್ಟ್ ಸೇವಾ 2.0' ಅಡಿಯಲ್ಲಿ ಹೊಸ ಉಪಕ್ರಮವನ್ನು ಕೈಗೊಂಡಿದ್ದು, ಅದರ ಅಡಿಯಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಸಹ ನೀಡಲಾಗುತ್ತಿದೆ. ಇದು ನಿಮ್ಮ ಗುರುತನ್ನು ಹೆಚ್ಚು ಸುರಕ್ಷಿತವಾಗಿಸುವುದಲ್ಲದೆ,ವಿದೇಶಿ ಪ್ರಯಾಣದ ಪ್ರಕ್ರಿಯೆಗಳನ್ನು ಕೂಡ ಸರಳಿಗೊಳಿಸುತ್ತಿದೆ ಎಂದು ವರದಿಗಳು ಹೇಳಿವೆ. ಹಾಗಿದ್ದರೆ ಇ-ಪಾಸ್‌ಪೋರ್ಟ್ ಎಂದರೇನು..? ಅರ್ಜಿಸಲ್ಲಿಸುವುದು ಹೇಗೆ..? ಇದರಿಂದ ಏನೆಲ್ಲಾ ಪ್ರಯೋಜನ ಎಂಬ ಹೆಚ್ಚಿನ ವಿವರವನ್ನು ನಾವಿಂದು ತಿಳಿಯೋಣ ಬನ್ನಿ..

ಇ-ಪಾಸ್‌ಪೋರ್ಟ್ ಎಂದರೇನು?
ಇ-ಪಾಸ್‌ಪೋರ್ಟ್ ಒಂದು ಸ್ಮಾರ್ಟ್ ಪಾಸ್‌ಪೋರ್ಟ್ ಆಗಿದೆ. ಇದರಲ್ಲಿ ಸಣ್ಣ ಎಲೆಕ್ಟ್ರಾನಿಕ್ ಚಿಪ್ ಮತ್ತು ಆಂಟೆನಾ ಅಳವಡಿಸಲಾಗಿದೆ. ಇ-ಪಾಸ್‌ಪೋರ್ಟ್ ಹೊಂದಿರುವವರ ಹೆಸರು, ಜನ್ಮ ದಿನಾಂಕ, ಫೋಟೋ ಮತ್ತು ಫಿಂಗರ್‌ಪ್ರಿಂಟ್‌ನಂತಹ ಮಾಹಿತಿಯನ್ನು ಈ ಚಿಪ್‌ನಲ್ಲಿ ಡಿಜಿಟಲ್ ರೂಪದಲ್ಲಿ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದ್ದರೆ ಸಾಕು ನಿಮ್ಮ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಇದು ನೋಡುವುದಕ್ಕೆ ಹೊರಗಿನಿಂದ ಇದು ಸಾಮಾನ್ಯ ಪಾಸ್‌ಪೋರ್ಟ್‌ನಂತೆ ಕಾಣುತ್ತದೆ, ಆದರೆ ಅದರ ಕವರ್‌ನ ಕೆಳಭಾಗದಲ್ಲಿ ವಿಶೇಷ ಚಿನ್ನದ ಚಿಹ್ನೆ ಇದ್ದು ಅದು ಅದರ ಗುರುತನ್ನು ಸೂಚಿಸುತ್ತದೆ
ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಮನೆಯಿಂದಲೇ ಕುಳಿತುಕೊಂಡು ಇ-ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂಬುವುದನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
- ನೀವು ಮೊದಲು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಆದ www.passportindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ತದನಂತರ ವೆಬ್‌ಸೈಟ್ ಮುಂಭಾಗದಲ್ಲಿ ಕಾಣುವಂತಹ ನೋಂದಾಯಿಸಿ ಅಥವಾ ಲಾಗಿನ್ ಮಾಡಿ ನೀವು ಇದನ್ನು ಮೊದಲ ಬಾರಿಗೆ ಮಾಡುತ್ತಿದ್ದರೆ "ಹೊಸ ಬಳಕೆದಾರ ನೋಂದಣಿ" ಮಾಡಿ. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ ನೇರವಾಗಿ ಲಾಗಿನ್ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
- ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ "ಹೊಸ/ಮರು-ನೀಡುವ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದು ವಿನಂತಿಸಿದ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ನಂತರ ನಿಮ್ಮ ಪಾಸ್‌ಪೋರ್ಟ್ ಕೇಂದ್ರವನ್ನು ಆಯ್ಕೆಮಾಡಿ ದಾಖಲೆ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ನಡೆಯುವ ಹತ್ತಿರದ ಪಿಎಸ್‌ಕೆ (ಪಾಸ್‌ಪೋರ್ಟ್ ಸೇವಾ ಕೇಂದ್ರ) ಅಥವಾ ಪಿಒಪಿಎಸ್‌ಕೆ (ಪೋಸ್ಟ್ ಆಫೀಸ್ ಪಿಎಸ್‌ಕೆ) ಆಯ್ಕೆಮಾಡಿ
- ಶುಲ್ಕ ಪಾವತಿಸಲು ನೀವು ಡಿಜಿಟಲ್ ಪಾವತಿಯನ್ನು ಆಯ್ಕೆ ಮಾಡಿಕೊಂಡು ಶುಲ್ಕಗಳನ್ನು ಪಾವತಿ ಮಾಡಿ.ಪಾವತಿ ಪ್ರಕ್ರಿಯೆಗಳು ಸಾಮಾನ್ಯ ಅಥವಾ ತತ್ಕಾಲ್ ಆಯ್ಕೆಯ ಪ್ರಕಾರ ನಿರ್ಧರಿಸಲಾಗುತ್ತದೆ. ಅಪಾಯಿಂಟ್ಮೆಂಟ್ ನೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಪಾಸ್‌ಪೋರ್ಟ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಬೆರಳಚ್ಚುಗಳು, ಫೋಟೋ ಮತ್ತು ದಾಖಲೆಗಳನ್ನು ಸಲ್ಲಿಸಿ. ಮೇಲ್ ಮೂಲಕ ಪಾಸ್‌ಪೋರ್ಟ್ ಪಡೆಯಿರಿ
ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ನಿಮ್ಮ ಪಾಸ್‌ಪೋರ್ಟ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಅಗತ್ಯ ದಾಖಲೆಗಳು ಆಧಾರ್ ಕಾರ್ಡ್ ಜನನ ಪ್ರಮಾಣಪತ್ರ ವಿಳಾಸ ಪುರಾವೆ (ವಿದ್ಯುತ್ ಬಿಲ್, ಪಡಿತರ ಚೀಟಿ ಇತ್ಯಾದಿ) ಫೋಟೋ ಐಡಿ (ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ) ಪಾಸ್‌ಪೋರ್ಟ್ ಸೇಜ್ ಭಾವಚಿತ್ರದಂತಹ ದಾಖಲೆಗಳು ನಿಮ್ಮ ಬಳಿ ಇರಲೇಬೇಕು.
ಇ-ಪಾಸ್‌ಪೋರ್ಟ್‌ನ ಪ್ರಯೋಜನಗಳೇನು..?
- ಇ-ಪಾಸ್‌ಪೋರ್ಟ್‌ನಿಂದ ನಿಮ್ಮ ವೈಯತ್ತಿಕ ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ, ಇದು ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ವಲಸೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ.
- ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್‌ಗಳನ್ನು ತಕ್ಷಣ ಸ್ಕ್ಯಾನ್ ಮಾಡಬಹುದು ಮತ್ತು ಪರಿಶೀಲಿಸಬಹುದು.
- ಪಾಸ್‌ಪೋರ್ಟ್‌ನ ನಕಲು ಅಥವಾ ನಕಲಿ ಆವೃತ್ತಿಗಳ ವಿರುದ್ಧ ರಕ್ಷಣೆ ಇದೆ.
- ಡಿಜಿಟಲ್ ದಾಖಲೆ ಇರುವುದರಿಂದ ಮಾಹಿತಿ ಕಳೆದುಹೋಗುವ ಚಿಂತೆ ಇಲ್ಲ.
ಪಾಸ್‌ಪೋರ್ಟ್ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಹೇಗೆ?
- ಪಾಸ್‌ಪೋರ್ಟ್ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು "ಟ್ರ್ಯಾಕ್ ಅಪ್ಲಿಕೇಶನ್ ಸ್ಥಿತಿ" ಮೇಲೆ ಕ್ಲಿಕ್ ಮಾಡಿ.
- ಪಾಸ್‌ಪೋರ್ಟ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ, ಅದನ್ನು ನೀವು ವೆಬ್‌ಸೈಟ್ ಅಥವಾ ಇಂಡಿಯಾ ಪೋಸ್ಟ್ ಸೈಟ್‌ನಿಂದ ಟ್ರ್ಯಾಕ್ ಮಾಡಬಹುದು. ಪೊಲೀಸ್ ಪರಿಶೀಲನೆಯೂ ಡಿಜಿಟಲ್ ಆಯಿತು. ಈಗ 'mPassport ಪೊಲೀಸ್ ಅಪ್ಲಿಕೇಶನ್' ಮೂಲಕ ಪೊಲೀಸ್ ಪರಿಶೀಲನೆ ಪ್ರಕ್ರಿಯೆಯು ಕೇವಲ 5-7 ದಿನಗಳಲ್ಲಿ ಪೂರ್ಣಗೊಳ್ಳುತ್ತಿದೆ.
ಪೊಲೀಸ್ ಸಿಬ್ಬಂದಿ ಕ್ಷೇತ್ರದಿಂದಲೇ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬಹುದು, ಇದು ಸಮಯವನ್ನು ಉಳಿಸುತ್ತದೆ. ಇ-ಪಾಸ್‌ಪೋರ್ಟ್ ತಂತ್ರಜ್ಞಾನದತ್ತ ಒಂದು ದೊಡ್ಡ ಹೆಜ್ಜೆಯಾಗಿದೆ.
ಇದು ನಿಮಗೆ ಸುರಕ್ಷಿತ ಪ್ರಯಾಣದ ಅನುಭವವನ್ನು ನೀಡುವುದಲ್ಲದೆ, ಪಾಸ್‌ಪೋರ್ಟ್ ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಸರಳ ಮತ್ತು ಪಾರದರ್ಶಕವಾಗಿಸುತ್ತದೆ. ನೀವು ವಿದೇಶ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ, ಈಗಲೇ ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ತುಂಬನೇ ಮುಖ್ಯ.


Click it and Unblock the Notifications