ನಮಗೆ ಹಣಕಾಸು ತುರ್ತು ಸ್ಥಿತಿ ಬಂದಾಗ ನಮ್ಮ ಸಹಾಯಕ್ಕೆ ಬರುವುದು ನಾವು ಮಾಡಿರುವ ಉಳಿತಾಯ. ಆದರೆ ನಮ್ಮಲ್ಲಿ ಯಾವುದೇ ಉಳಿತಾಯದ ಹಣ ಇಲ್ಲವಾದರೆ ನಾವೇನು ಮಾಡುವುದು. ಆ ಸಂದರ್ಭದಲ್ಲಿ ನಾವು ಅನಿವಾರ್ಯವಾಗಿ ಸಾಲವನ್ನು ಪಡೆಯಬೇಕಾಗುತ್ತದೆ. ಅದರ ಬದಲಾಗಿ ನಮ್ಮಲ್ಲಿ ಎಲ್‌ಐಸಿ ಪಾಲಿಸಿ ಇದ್ದರೆ ಅದರ ಮೇಲೆಯೇ ಸಾಲವನ್ನು ಪಡೆಯಬಹುದು.
ನಾವು ತೀರಾ ತುರ್ತು ಸ್ಥಿತಿ ಬಂದಾಗ ಸಾಲವನ್ನು ಪಡೆಯುತ್ತೇವೆ. ಆದರೆ ನಾವು ಪಡೆದ ಸಾಲದ ಅರ್ಧ ಭಾಗದಷ್ಟು ಬಡ್ಡಿಯನ್ನೇ ಪಾವತಿ ಮಾಡಬೇಕಾಗುತ್ತದೆ. ಹೌದು, ಆ ಸಂದರ್ಭದಲ್ಲಿ ಅದೇಷ್ಟೋ ಮಂದಿ ಸಾಲವನ್ನು ಮರುಪಾವತಿ ಮಾಡಲಾಗದೆ ತೊಂದರೆಗೆ ಸಿಲುಕಿದ್ದಾರೆ. ಇನ್ನೆಷ್ಟೋ ಸಣ್ಣ ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಸೇರಿ ಅದನ್ನು ಮರುಪಾವತಿ ಮಾಡಲು ತಮ್ಮ ಮನೆ, ಆಸ್ತಿಯನ್ನು ಕಳೆದುಕೊಂಡಿದ್ದಾರೆ.
ಸಾಲದಿಂದಾಗಿ ಇಷ್ಟೆಲ್ಲ ತೊಂದರೆಗಳು ಆಗುವಾಗ ನೀವು ಎಲ್‌ಐಸಿ ಪಾಲಿಸಿಯ ಮೇಲೆ ಸಾಲ ಪಡೆಯುವುದು ಉತ್ತಮವಲ್ಲವೇ?. ಎಲ್‌ಐಸಿ ಪಾಲಿಸಿಯ ಮೇಲೆ ನಾವು ಸಾಲವನ್ನು ಪಡೆಯಲು ಸಾಧ್ಯವಾಗಲಿದೆ. ಅದಕ್ಕಾಗಿ ನಾವು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಬೇಕಾದ ದಾಖಲೆಗಳು ಯಾವುದು, ಅರ್ಹತೆಯೇನು, ಎಂಬ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ. ಮುಂದೆ ಓದಿ....
ಎಲ್‌ಐಸಿ ಪಾಲಿಸಿ ಮೇಲೆ ಸಾಲ ಪಡೆಯಲು ಬೇಕಾದ ಅರ್ಹತೆ
* ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು.
* ಎಲ್‌ಐಸಿ ಪಾಲಿಸಿ ವ್ಯಾಲಿಡ್ ಆಗಿರಬೇಕು. ಅಂದರೆ ಚಾಲ್ತಿಯಲ್ಲಿರಬೇಕು.
* ಎಲ್‌ಐಸಿ ಪಾಲಿಸಿ ಮೇಲೆ ಸಾಲ ಪಡೆಯಬೇಕಾದರೆ ಪಾಲಿಸಿಯಲ್ಲಿ ಸರೆಂಡರ್ ಮೊತ್ತ ಇರಬೇಕು.
* ಕಡಿಮೆಯೆಂದರೆ ಮೂರು ವರ್ಷಗಳ ಎಲ್‌ಐಸಿ ಪ್ರೀಮೀಯಂ ಅನ್ನು ಪಾವತಿ ಮಾಡಿರಬೇಕು.
ಎಲ್‌ಐಸಿ ಪಾಲಿಸಿ ಮೇಲೆ ಸಾಲ: ಅಗತ್ಯ ಮಾಹಿತಿ
* ಅರ್ಜಿದಾರರ ಪ್ರೋಫೈಲ್ ಅನ್ನು ಆಧಾರಿಸಿ ಸಾಲದ ಮೇಲಿನ ಬಡ್ಡಿದರವನ್ನು ನಿರ್ಧಾರ ಮಾಡಲಾಗುತ್ತದೆ.
* ಎಂಡೋಮೆಂಟ್ (endowment) ಪಾಲಿಸಿ ಹೊಂದಿರುವವರು ಮಾತ್ರ ಸಾಲಕ್ಕೆ ಅರ್ಹರು.
* ಸಾಲದ ಮೊತ್ತವು ಯೋಜನೆಯ ಸರೆಂಡರ್ ಮೌಲ್ಯದ ಮುಂಗಡವಾಗಿದೆ.
* ಎಲ್‌ಐಸಿ ವಿಮೆಯ ಸರೆಂಡರ್ ಮೌಲ್ಯವು ಗರಿಷ್ಠ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ. ಮೊತ್ತವು ಪಾಲಿಸಿ ಮೌಲ್ಯದ 90 ಶೇಕಡ ಆಗಿದೆ.
* ಸಾಲವನ್ನು ಮರುಪಾವತಿಸಲು ಅರ್ಜಿದಾರರು ನಿರಾಕರಿಸಿದರೆ ಸಾಲದ ಮೊತ್ತವನ್ನು ಪಡೆಯುವ ಮೊತ್ತವಾಗಿ ಎಲ್‌ಐಸಿ ಪಾಲಿಸಿಯನ್ನು ಹೊಂದಿದೆ.
* ನೀವು ಸಾಲದ ಮೊತ್ತವನ್ನು ಮರುಪಾವತಿ ಮಾಡುವ ಮುನ್ನವೇ ಪಾಲಿಸಿಯು ಮೆಚ್ಯೂರ್ ಆದರೆ, ಮೆಚ್ಯೂರಿಟಿ ಮೊತ್ತದ ಸಾಲದ ಬಾಕಿಯನ್ನು ಕಡಿತ ಮಾಡಿ ನೀಡಲಾಗುತ್ತದೆ.
ಬೇಕಾದ ಅಗತ್ಯ ದಾಖಲೆಗಳು ಯಾವುದು?
* ಎರಡು ಪಾಸ್‌ಪೋರ್ಟ್ ಛಾಯಾಚಿತ್ರದೊಂದಿಗೆ ಅಪ್ಲಿಕೇಶನ್ ಫಾರ್ಮ್ ಅನ್ನು ನೀಡಬೇಕಾಗುತ್ತದೆ.
* ಪಾಲಿಸಿಯ ಮಾಹಿತಿ ನೀಡಬೇಕಾಗುತ್ತದೆ.
* ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ ಕಾರ್ಡ್, ಇತರೆ ಗುರುತಿನ ದಾಖಲೆ
* ವಿಳಾಸ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಇತರೆ.
* ಆದಾಯ ಪುರಾವೆ: ಪೇಸ್ಲಿಪ್ (ವೇತನ ಪುರಾವೆ), ಬ್ಯಾಂಕ್ ಸ್ಟೇಟ್‌ಮೆಂಟ್.
ಎಲ್‌ಐಸಿ ಪಾಲಿಸಿಯ ಮೇಲೆ ಸಾಲ ಪಡೆಯುವುದು ಹೇಗೆ?
ಆಫ್‌ಲೈನ್:
ಹಂತ 1: ಸಮೀಪದ ಎಲ್‌ಐಸಿ ಆಫೀಸ್‌ಗೆ ಭೇಟಿ ನೀಡಿ.
ಹಂತ 2: ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ.
ಹಂತ 3: ಪಾಲಿಸಿ ದಾಖಲೆಯೊಂದಿಗೆ ಕೆವೈಸಿ ದಾಖಲೆಯನ್ನು ಸಬ್‌ಮಿಟ್ ಮಾಡಬೇಕು.
ಹಂತ 4: ಎಲ್ಲ ಮಾಹಿತಿಯನ್ನು ಪರಿಶೀಲನೆ ಮಾಡಲಾಗುತ್ತದೆ.
ಹಂತ 5: ಸರೆಂಡರ್ ವ್ಯಾಲ್ಯೂನ ಶೇಕಡ 90ರಷ್ಟು ಸಾಲವನ್ನು ನೀಡಲಾಗುತ್ತದೆ.
ಆನ್‌ಲೈನ್:
ಹಂತ 1: ಎಲ್‌ಐಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಆನ್‌ಲೈನ್ ಸಾಲವನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 3: ಆನ್‌ಲೈನ್ ಎಲ್‌ಐಸಿ ಸಾಲಕ್ಕಾಗಿ Through Customer Portal ಮೇಲೆ ಕ್ಲಿಕ್ ಮಾಡಿ
ಹಂತ 4: ಯೂಸರ್ ಐಡಿ ಮೊದಲಾದ ದಾಖಲೆ ಬಳಸಿಕೊಂಡು ಲಾಗಿನ್ ಆಗಿ
ಹಂತ 5: ನೀವು ಯಾವ ಪಾಲಿಸಿ ಮೇಲೆ ಸಾಲವನ್ನು ಪಡೆಯಲು ಬಯಸುತ್ತೀರಿ ಎಂದು ಆಯ್ಕೆ ಮಾಡಿಕೊಳ್ಳಿ
ಹಂತ 6: ಸಾಲಕ್ಕಾಗಿ ವಿನಂತಿ ಸಲ್ಲಿಸಿ
ಹಂತ 7: ಇದಾದ ಬಳಿಕ 3-5 ದಿನದಲ್ಲಿ ಸಾಲ ಅನುಮೋದನೆಯಾಗಲಿದೆ. ಸಾಲದ ಬಗ್ಗೆಗಿನ ದಾಖಲೆ ಇಮೇಲ್ ಮಾಡಲಾಗುತ್ತದೆ.


Click it and Unblock the Notifications