ಉದ್ಯೋಗ ನಿಮಿತ್ತ ಇರಬಹುದು, ವ್ಯವಹಾರಿಕವಿರಬಹುದು ಅಥವಾ ಪ್ರವಾಸದ ಉದ್ದೇಶವಿರಬಹುದು. ವಿದೇಶಕ್ಕೆ ಪ್ರಯಾಣಿಸಲು ಬಯಸುವ ಪ್ರತಿಯೊಬ್ಬರ ಜೀವನದಲ್ಲಿಯೂ ಪಾಸ್‌ಪೋರ್ಟ್ ಪ್ರಮುಖ ದಾಖಲೆಯಾಗಿದೆ. ಅದರಲ್ಲಿಯೂ ವಿದೇಶದಲ್ಲಿ ತಮ್ಮ ಪೋಷಕರು ಅಥವಾ ಹೆತ್ತವರೊಂದಿಗೆ ತೆರಳಬಯಸುವ ಅಪ್ರಾಪ್ತ ವಯಸ್ಸಿನವರಿಗೂ ಪಾಸ್‌ಪೋರ್ಟ್ ಪಡೆಯುವುದು ಕಡ್ಡಾಯವಾಗಿದೆ.
ಹತ್ತು ವರ್ಷಗಳ ಹಿಂದೆಯೆಲ್ಲ ಪಾಸ್‌ಪೋರ್ಟ್ ಮಾಡಿಸಬೇಕಾದರೆ ಸಾಕಷ್ಟು ಪ್ರಯಾಸಪಡಬೇಕಾಗಿತ್ತು. ಆದರೆ, ಎಲ್ಲವೂ ಡಿಜಿಟಲೀಕರಣಗೊಂಡ ಬಳಿಕ ಇದೀಗ ಯಾರು ಬೇಕಾದರೂ ಮನೆಯಲ್ಲಿ ಕುಳಿತುಕೊಂಡೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಭಾರತದಲ್ಲಿ ಅಪ್ರಾಪ್ತರಿಗೆ ಪಾಸ್‌ಪೋರ್ಟ್ ಮಾಡಿಸುವುದಕ್ಕೆ ಅಗತ್ಯವಿರುವ ದಾಖಲೆಗಳು:
* ಜನನ ಪ್ರಮಾಣ ಪತ್ರ
* ಆಧಾರ್ ಕಾರ್ಡ್ ಅಥವಾ ಪೋಷಕರ ವಿಳಾಸ ಪುರಾವೆ
* ಪೋಷಕರ ಪಾಸ್‌ಪೋರ್ಟ್ (ಲಭ್ಯವಿದ್ದರೆ ಇಬ್ಬರದ್ದು)
* ಪೋಷಕರ ರಾಷ್ಟ್ರೀಯತೆಯ ಪುರಾವೆ (ಮಗುವು ಭಾರತದ ಹೊರಗೆ ಜನಿಸಿದರೆ)
ಭಾರತದಲ್ಲಿ ಅಪ್ರಾಪ್ತ ವಯಸ್ಕರ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಂತ-ಹಂತದ ಮಾಹಿತಿ ಇಲ್ಲಿದೆ:
ಹಂತ 1: ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ನಲ್ಲಿ ಅಪ್ರಾಪ್ತ ವಯಸ್ಕರನ್ನು ನೋಂದಾಯಿಸಿ
(https://portal2.passportindia.gov.in/)
ಹಂತ 2: ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸಿ
ಹಂತ 3: ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಹಂತ 4: ಅರ್ಜಿ ನಮೂನೆಯನ್ನು ತುಂಬಿಸಿ ಯಶಸ್ವಿಯಾಗಿ ಸಲ್ಲಿಸಿದ ಬಳಿಕ, ಶುಲ್ಕ ಪಾವತಿ ಮಾಡಿ.
ಹಂತ 5: ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ, ನೀವು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ (PSK) ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಬೇಕಾಗುತ್ತದೆ. ನೀವು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹಾಜರಾಗುವ ವೇಳೆ ಅರ್ಜಿ ನಮೂನೆ ಮತ್ತು ಶುಲ್ಕ ರಶೀದಿ ಸೇರಿದಂತೆ ಅಗತ್ಯವಾಗಿರುವ ಎಲ್ಲಾ ಮೂಲ ದಾಖಲೆಗಳನ್ನು ಒಯ್ಯವುದು ಅಗತ್ಯವಾಗಿದೆ.
ಹಂತ 6: ಅಪಾಯಿಂಟ್‌ಮೆಂಟ್‌ನ ದಿನದಂದು ನೀವು ನಿಮ್ಮೊಂದಿಗೆ ಮೈನರ್/ ಮಗುವನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಕರೆದೊಯ್ಯಬೇಕು. ಪಾಸ್‌ಪೋರ್ಟ್ ಅಧಿಕಾರಿಯೂ ಎಲ್ಲವೂ ಕ್ರಮಬದ್ದವಾಗಿದೆಯೇ ಎಂದು ಖಾತ್ರಿಪಡಿಸಲು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಇದರ ನಂತರ, ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ಮತ್ತು ಪಾಸ್ಪೋರ್ಟ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಒಂದು ವೇಳೆ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಕಂಡುಬಂದರೆ ಇಲ್ಲಿಸೂಚನೆ ನೀಡುತ್ತಾರೆ. ಅಪ್ಲಿಕೇಶನ್‌ನಲ್ಲಿ ಸಮಸ್ಯೆಯಿದ್ದಲ್ಲಿ, ನಿಮಗೆ ಆ ಬಗ್ಗೆ ಸೂಚಿಸಲಾಗುತ್ತದೆ.
ಹಂತ 7: ಅರ್ಜಿಯನ್ನು ಸಲ್ಲಿಸಿದ ನಂತರ ಸಲ್ಲಿಕೆಯ ಸಮಯದಲ್ಲಿ ನೀಡಲಾದ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಮಗುವಿನ ಪಾಸ್‌ಪೋರ್ಟ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ನೀವು ಟ್ರ್ಯಾಕ್ ಮಾಡಬಹುದು.
ಹಂತ 8: ಮಗುವಿನ ಪಾಸ್‌ಪೋರ್ಟ್ ಸಿದ್ಧವಾದ ನಮತರ ಆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನೀವು ಅದನ್ನು ಖುದ್ದು ಪಡೆದುಕೊಳ್ಳಬಹುದು ಅಥವಾ ನಿಮ್ಮ ಮನೆಯ ವಿಳಾಸಕ್ಕೆ ತಲುಪಿಸಬಹುದು.
ಗಮನಿಸಬೇಕಾದ ಇತರೆ ಪ್ರಮುಖ ಅಂಶಗಳು:
ಅಪ್ರಾಪ್ತರ ಪಾಸ್‌ಪೋರ್ಟ್‌ಗೆ ಅರ್ಜಿ ಶುಲ್ಕ 1000 ರೂಪಾಯಿ ಆಗಿದೆ. ಈ ಶುಲ್ಕವನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಅಪ್ರಾಪ್ತರ ಪಾಸ್‌ಪೋರ್ಟ್ ಮಾಡಿಸುವುದಕ್ಕೆ ಅವರಿಗೆ ಐದು ವರ್ಷ ಆಗುವವರೆಗೆ ಅಥವಾ ಮಗುವಿಗೆ 18 ವಯಸ್ಸು ಆಗುವವರೆಗೆ ಯಾವುದು ಮೊದಲು ಬರುತ್ತದೆಯೋ ಅದು ಮಾನ್ಯವಾಗಿರುತ್ತದೆ.
10 ವರ್ಷದ ಮಕ್ಕಳಿಗೆ ಪಾಸ್‌ಪೋರ್ಟ್ ಮಾಡಿಸಬೇಕಾದರೆ ಪೊಲೀಸ್ ವೆರಿಫಿಕೇಷನ್‌ನೊಂದಿಗೆ ಮಾಡಿಸಬೇಕಾಗುತ್ತದೆ.


Click it and Unblock the Notifications