SBI ನಿಂದ ಹೊಸ ಎಟಿಎಂ ಕಾರ್ಡ್ ಪಡೆದಿಲ್ಲವೆ? ಡಿ. 31 ಡೆಡ್ ಲೈನ್

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರೇ? ನಿಮ್ಮ ಎಸ್ ಬಿಐ ಮ್ಯಾಗ್ನೆಟಿಕ್ ಸ್ಟ್ರೈಪ್ಸ್ ಎಟಿಎಂ ಕಾರ್ಡ್ ಅನ್ನು ಸುರಕ್ಷಿತವಾದ ಚಿಪ್ ಕಾರ್ಡ್ ಗೆ ಬದಲಿಸಿಕೊಂಡಿಲ್ಲವೆ? ಇದೀಗ ಎಸ್ ಬಿಐನಿಂದ ಇನ್ನೊಂದು ಅವಕಾಶ ನೀಡುತ್ತಿದ್ದು, ಮ್ಯಾಗ್ನೆಟಿಕ್ ಸ್ಟ್ರೈಪ್ಸ್ ಎಟಿಎಂ ಕಮ್ ಡೆಬಿಟ್ ಕಾರ್ಡ್ ಅನ್ನು ಇಎಂವಿ ಚಿಪ್ ಇರುವಂಥ ಕಾರ್ಡ್ ಗೆ ಬದಲಿಸಿಕೊಳ್ಳಲು ಡಿಸೆಂಬರ್ 31, 2019ರ ವರೆಗೆ ಗಡುವು ನೀಡಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿ ಸೂತ್ರದ ಪ್ರಕಾರ, ಗ್ರಾಹಕರ ಬಳಿ ಇರುವ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ಸ್ ಅನ್ನು ಎಸ್ ಬಿಐನಿಂದ ಇಎಂವಿ ಚಿಪ್ ಮತ್ತು ಪಿನ್ ಆಧಾರಿತ ಕಾರ್ಡ್ಸ್ ಗೆ ಬದಲಿಸಿ ಕೊಡಲಾಗುತ್ತಿದೆ. ಈ ಎರಡರ ಮಧ್ಯೆ ಏನು ವ್ಯತ್ಯಾಸ ಎಂಬ ಪ್ರಶ್ನೆ ಬರುತ್ತದೆ ಅಲ್ಲವೆ? ಎಟಿಎಂ ಕಮ್ ಡೆಬಿಟ್ ಕಾರ್ಡ್ ನ ಹಿಂಭಾಗ ಕಪ್ಪನೆಯ ಪಟ್ಟಿ ಮಾತ್ರ ಇದ್ದರೆ ಅದು ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್.

ಅದರ ಜತೆಗೆ ಕಾರ್ಡ್ ಮುಂಭಾಗದಲ್ಲಿ ಚಿಪ್ ಕೂಡ ಇದ್ದರೆ ಅದು ಇವಿಎಂ ಚಿಪ್ ಮತ್ತು ಪಿನ್ ಆಧಾರಿತ ಕಾರ್ಡ್. ಯಾವುದೇ ಶುಲ್ಕ ವಿಧಿಸದೆ ಹಳೆ ಎಟಿಎಂ ಕಾರ್ಡ್ ಗೆ ಬದಲಿಯಾಗಿ ಹೊಸದನ್ನು ನೀಡಲಾಗುತ್ತದೆ. ಆನ್ ಲೈನ್ ಮೂಲಕವೂ ಇದು ಲಭ್ಯವಿದೆ. ಅಥವಾ ಎಲ್ಲಿ ಖಾತೆ ಇದೆಯೋ ಅದೇ ಶಾಖೆಗೆ ತೆರಳಿ ಕಾರ್ಡ್ ಗೆ ಅಪ್ಲೈ ಮಾಡಬಹುದು.

ಒಂದು ವೇಳೆ ಶುಲ್ಕ ವಿಧಿಸಿದ್ದರೆ ದಾಖಲೆ ಸಹಿತ ಅದನ್ನು ತೋರಿಸಿ, ಮೊತ್ತವನ್ನು ವಾಪಸ್ ಪಡೆಯಬಹುದು.

ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಸುರಕ್ಷಿತವಾದ ಚಿಪ್ ಆಧಾರಿತವಾದ ಕಾರ್ಡ್ ಗೆ ಆನ್ ಲೈನ್ ಮೂಲಕ ಅಪ್ಲೈ ಮಾಡಬಹುದು. ಹಾಗೆ ಅಪ್ಲೈ ಮಾಡುವ ಮುನ್ನ ಈಗಿನ ವಿಳಾಸವು ಖಾತೆಯಲ್ಲಿ ಅಪ್ ಡೇಟ್ ಆಗಿದೆಯಾ ಎಂಬುದನ್ನು ಖಚಿತ ಮಾಡಿಕೊಳ್ಳಿ. ಏಕೆಂದರೆ ನೋಂದಾಯಿತ ವಿಳಾಸಕ್ಕೆ ಆ ಕಾರ್ಡ್ ಕಳುಹಿಸಲಾಗುತ್ತದೆ. ಆನ್ ಲೈನ್ ಮೂಲಕ ಮನವಿ ಸಲ್ಲಿಸುವುದಕ್ಕೆ ಮೊಬೈಲ್ ಸಂಖ್ಯೆ ಕಡ್ಡಾಯ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

SBI ನಿಂದ ಹೊಸ ಎಟಿಎಂ ಕಾರ್ಡ್ ಪಡೆದಿಲ್ಲವೆ? ಡಿ. 31 ಡೆಡ್ ಲೈನ್

ಆನ್ ಲೈನ್ ನಲ್ಲಿ ಅಪ್ಲೈ ಮಾಡುವುದು ಹೇಗೆ?
-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಬ್ ಸೈಟ್ ಗೆ ಲಾಗ್ ಇನ್ ಆಗಿ.

- ಮೇಲ್ಭಾಗದಲ್ಲಿ ಇ- ಸರ್ವೀಸಸ್ ಅಂತ ಇರುತ್ತದೆ. ಅದನ್ನು ಕ್ಲಿಕ್ ಮಾಡಿ, ಅದರಿಂದ ಎಟಿಎಂ ಕಾರ್ಡ್ ಸರ್ವೀಸಸ್ ಕ್ಲಿಕ್ ಮಾಡಿ.

- ಈಗ ರಿಕ್ವೆಸ್ಟ್ ಎಟಿಎಂ/ಡೆಬಿಟ್ ಕಾರ್ಡ್ ಕ್ಲಿಕ್ ಮಾಡಿ.

- ನೀವೇ ಖಾತೆದಾರರು ಎಂದು ಖಾತ್ರಿ ಮಾಡುವುದಕ್ಕೆ ಇರುವ ಆಯ್ಕೆ ಪೈಕಿ ಒಂದನ್ನು ಆರಿಸಿಕೊಂಡು, ಒನ್ ಟೈಮ್ ಪಾಸ್ ವರ್ಡ್ ಮೇಲೆ ಕ್ಲಿಕ್ ಮಾಡಿ.

- ನೋಂದಾಯಿತ ಮೊಬೈಲ್ ಫೋನ್ ಗೆ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ.

- ಈಗ ಖಾತೆಯನ್ನು ಆಯ್ಕೆ ಮಾಡಿಕೊಂಡು, ಕಾರ್ಡ್ ಮೇಲೆ ಇರುವ ಹೆಸರು, ಯಾವ ರೀತಿಯ ಕಾರ್ಡ್ ಮತ್ತಿತರ ಮಾಹಿತಿಗಳನ್ನು ತುಂಬಿ.

- ಟರ್ಮ್ಸ್ ಮತ್ತು ಕಂಡೀಷನ್ಸ್ ಅನ್ನು ಕ್ಲಿಕ್ ಮಾಡಿದ ನಂತರ, ಸಬ್ ಮಿಟ್ ಆಯ್ಕೆ ಮಾಡಿಕೊಳ್ಳಿ.

- ಒಂದು ಸಲ ಅರ್ಜಿ ಸಲ್ಲಿಸಿದ ನಂತರ, ನೋಂದಾಯಿತ ವಿಳಾಸಕ್ಕೆ ಇನ್ನು ಏಳೆಂಟು ವರ್ಕಿಂಗ್ ಡೇಸ್ ನಲ್ಲಿ ಡೆಬಿಟ್ ಕಾರ್ಡ್ ತಲುಪುತ್ತದೆ ಎಂದು ಸ್ಕ್ರೀನ್ ಮೇಲೆ ಸಂದೇಶವೊಂದು ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+