ಬೆಂಗಳೂರು, ಜೂನ್ 19: ಆನ್ ಲೈನ್ ಜಮಾನಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇಲ್ಲದವರೆ ಇಲ್ಲ ಎಂದು ಹೇಳಬಹುದು. ಬ್ರೌಸ್ ಮಾಡುತ್ತಿರುವಾಗ ನಿಮಗೆ ಬಗೆ ಬಗೆಯ ಜಾಹೀರಾತು ಕಣ್ಣಿಗೆ ಬೀಳಬಹುದು. ಸುಲಭವಾಗಿ ಹಣ ಗಳಿಸುವುದು ಹೇಗೆ ಎನ್ನುವುದರ ಕುರಿತಾದ ಜಾಹೀರಾತುಗಳು ಕನ್ಣಿಗೆ ಬೀಳಬಹುದು. ಆದರೆ, ಬೇಗ ಹಣ ಮಾಡಬೇಕು ಎಂಬ ಅತಿಯಾಸೆ ನಮ್ಮನ್ನು ಸಂಕಷ್ಟಕ್ಕೆ ದೂಡಬಹುದು.
ಜನಪ್ರಿಯ ಕಂಪನಿಗಳ ಹೆಸರಿನಲ್ಲಿ ನಕಲಿ ಲಿಂಕ್ ಗಳನ್ನು ಮಾಡಿ ವಂಚಕರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುತ್ತಾರೆ. ಅದನ್ನು ಕ್ಲಿಕ್ ಮಾಡಿದರೆ ಕೆಲವು ಮಾಹಿತಿ ಕೇಳುತ್ತದೆ. ನೀವು ನಿಮ್ಮ ಇ-ಮೇಲ್ ಐಡಿ ನೀಡುತ್ತಿದ್ದಂತೆ ನಿಮ್ಮ ಇನ್ ಬಾಕ್ಸ್ ತುಂಬಿಹೋಗುತ್ತದೆ. ಹಣ ಗಳಿಸಿದ್ದೇವೆ ಎನ್ನುವ ನಕಲಿ ದಾಖಲೆಗಳು ಇಂತಹ ಮೋಸದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ, ಹೂಡಿಕೆದಾರರಿಗೆ ಈ ಬಗ್ಗೆ ಸ್ಟಾಕ್ ಮಾರ್ಕೆಟ್ ಎಕ್ಸ್ಚೆಂಜ್ ಗಳು ಎಚ್ಚರಿಕೆ ನೀಡಿವೆ.

ಎನ್‌ಎಸ್‌ಇ ಎಚ್ಚರಿಕೆ ನೀಡಿದ್ದು, ಕೆಲವರು ತಾವು ಪ್ರತಿಷ್ಠಿತ ಸಂಸ್ಥೆಯವರು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಭಾರತದ ಮತ್ತು ಅಂತಾರಾಷ್ಟ್ರೀಯ ಮೊಬೈಲ್ ನಂಬರ್‌ಗಳನ್ನು ಅವರು ನೀಡುತ್ತಾರೆ, ವಾಟ್ಸಾಪ್ ಗ್ರೂಪ್‌ಗಳು, ಟೆಲಿಗ್ರಾಮ್ ಚಾನೆಲ್‌ಗಳು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಚಾನೆಲ್‌ಗಳ ಮಾಹಿತಿಯನ್ನು ಅವರು ಕೊಡುತ್ತಾರೆ. ಸೆಬಿ/ಸ್ಟಾಕ್ ಎಕ್ಸ್ಚೆಂಜ್ ಗಳ ನಕಲಿ ಸರ್ಟಿಫಿಕೇಟ್‌ಗಳನ್ನು ಅವರು ತೋರಿಸುತ್ತಾರೆ. ಇವರಿಂದ ದೂರ ಇರಿ ಎಂದು ತಿಳಿಸಿದೆ.
ಇಲ್ಲಿ ನಿಮ್ಮನ್ನು ವಂಚಿಸಲು ಇನ್ನೊಂದು ತಂತ್ರ ಬಳಸಲಾಗುತ್ತದೆ. ಷೇರುಗಳಲ್ಲಿ ಡೈರೆಕ್ಟ್ ಆಗಿ ಇನ್ವೆಸ್ಟ್ ಮಾಡುವುದರ ಬದಲಿಗೆ, ಒಂದು ಬ್ಯಾಂಕ್ ಅಕೌಂಟ್‌ಗೆ ಹಣವನ್ನು ವರ್ಗಾವಣೆ ಮಾಡಿ ಎಂದು ನಿಮಗೆ ಹೇಳಲಾಗುತ್ತದೆ. ಈ ಫೇಕ್ ಆಪ್‌ನಲ್ಲಿ, ನಿಮ್ಮ ಹಣದ ಬ್ಯಾಲೆನ್ಸ್ ತೋರಿಸುತ್ತದೆ. ತಾವು ರೆಗ್ಯುಲರ್ ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುವುದಿಲ್ಲ.
ಬದಲಿಗೆ ಪ್ರೈಮರಿ ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುತ್ತೇವೆ. ಅಲ್ಲಿ ನೀವು ನೇರವಾಗಿ ಇನ್ವೆಸ್ಟ್ ಮಾಡೋದಕ್ಕಾಗಲ್ಲ ಅಂತ ನಿಮ್ಮನ್ನು ನಂಬಿಸುತ್ತಾರೆ. ಅದೇ ಕಾರಣಕ್ಕೆ ನಿಮ್ಮ ಹಣವನ್ನು ಇನ್ನೊಂದು ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದೆಲ್ಲ ಹೇಳುತ್ತಾರೆ. ವಾಸ್ತವ ಸಂಗತಿ ಏನೆಂದರೆ, ಇದು ಆ ಮೋಸಗಾರರ ಬ್ಯಾಂಕ್ ಅಕೌಂಟ್ ಆಗಿರುತ್ತದೆ. ನಿಮ್ಮ ಹೆಸರಿನಲ್ಲಿ ಯಾವ ಇನ್ವೆಸ್ಟ್‌ಮೆಂಟ್ ಕೂಡಾ ಆಗುವುದಿಲ್ಲ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ಮೂಲಕ ನಿಮ್ಮನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಿಸಿದರೆ, ಎಚ್ಚರದಿಂದಿರಿ. ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಆಪ್ ಬಗ್ಗೆ ಜಾಹೀರಾತು ಕಂಡುಬಂದಿದೆ ಎಂದಾದರೆ, ಪ್ಲೇ ಸ್ಟೋರ್ ಅಥವಾ ಆಪ್‌ಸ್ಟೋರ್‌ನಲ್ಲಿ ಅದರ ರಿವ್ಯೂ ಹೇಗಿದೆ ಎಂದು ಚೆಕ್ ಮಾಡಿಕೊಳ್ಳಿ. ಸೆಬಿ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿದ ಬ್ರೋಕರ್‌ಗಳ ಲಿಸ್ಟ್ ನೋಡಿ. ಭಾರೀ ರಿಟರ್ನ್ಸ್ ಆಸೆಗೆ ಬಿದ್ದು ಹೂಡಿಕೆ ಮಾಡಲು ಹೋಗಬೇಡಿ.


Click it and Unblock the Notifications