ಎಟಿಎಂ ಕಾರ್ಡ್ ಬಂದ ಮೇಲಂತೂ ಜನಸಾಮಾನ್ಯರಿಗೆ ಬ್ಯಾಂಕ್‌ಗೆ ಹೋಗಿ ಕ್ಯೂ ನಿಲ್ಲೋದು ತಪ್ಪಿದೆ. ಹಣವನ್ನು ವಿತ್‌ಡ್ರಾ ಮಾಡಲು ಎಟಿಎಂ ಡೆಬಿಟ್ ಕಾರ್ಡ್ ಬಹಳ ಸೂಕ್ತವಾಗಿದೆ. ಆದರೆ ಈ ಎಟಿಎಂ ಡೆಬಿಟ್ ಕಾರ್ಡ್ ಒಂದು ವೇಳೆ ಕಳೆದು ಹೋದಾಗ ಏನ್ ಮಾಡ್ಬೇಕು ಎಂದು ಜನರು ಗೊಂದಲಕ್ಕೆ ಒಳಗಾಗುವುದು ಸಹಜ.
ಕಾರ್ಡ್ ಅನ್ನು ಬ್ಲಾಕ್ ಮಾಡಲು ನೀವು ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಬೇಕಾದರೂ ಬ್ಲಾಕ್ ಮಾಡಬಹುದು. ಇಲ್ಲವೆ ಆನ್‌ಲೈನ್ ಮೂಲಕ ಅಥವಾ ಎಸ್‌ಬಿಐ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಕಾರ್ಡ್ ಬ್ಲಾಕ್‌ಗೆ ಅವಕಾಶವಿದೆ.
ಟ್ರೋಲ್ ಫ್ರೀ SMS ಸೌಲಭ್ಯ
ಇವುಗಳ ಹೊರತಾಗಿಯು ಎಸ್‌ಬಿಐ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡುವ ಸರಳ ಮಾರ್ಗವು ಇದೆ. ಕೇವಲ ಒಂದು ಎಸ್‌ಎಂಎಸ್ ಮಾಡಿದ್ರೆ ಸಾಕು ಕಾರ್ಡ್ ಬ್ಲಾಕ್ ಆಗುತ್ತೆ.
ಎಸ್‌ಬಿಐ ಕ್ವಿಕ್ ಆ್ಯಪ್ ಮೂಲಕ ಟ್ರೋಲ್ ಫ್ರೀ ಎಸ್‌ಎಂಎಸ್ ಸೌಲಭ್ಯವನ್ನು ನೀಡಿದೆ. ಎಸ್‌ಬಿಐ ಕ್ವಿಕ್‌ನೊಂದಿಗೆ, ಎಸ್‌ಎಂಎಸ್ ಕಳುಹಿಸುವ ಮೂಲಕ ಅಥವಾ ಮಿಸ್ಡ್ ಕಾಲ್ ನೀಡುವ ಮೂಲಕ ಸೇವೆಗಳನ್ನು ಕೋರಬಹುದು.
ಎಸ್‌ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವ ವಿಧಾನ
ನಿಮ್ಮ ಎಸ್‌ಬಿಐ ಎಟಿಎಂ ಕಂ ಡೆಬಿಟ್ ಕಾರ್ಡ್ ಅನ್ನು ಆಪ್‌ಲೈನ್‌ನಲ್ಲಿ ಸಹ ಬ್ಲಾಕ್ ಮಾಡಬಹುದು. ಆದರೆ ಅದಕ್ಕಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಎಟಿಎಂ ಕಾರ್ಡ್ನ ಕೊನೆಯ ನಾಲ್ಕು ಸಂಖ್ಯೆಗಳು ಬೇಕಾಗುತ್ತದೆ. ಎಸ್‌ಎಂಎಸ್ ಮೂಲಕ ಕಾರ್ಡ್ ಬ್ಲಾಕ್ ಮಾಡಲು ಈ ಕೆಳಕಂಡ ರೀತಿಯಲ್ಲಿ ಟೈಪ್ ಮಾಡಿ
''BLOCK XXXX'' ಎಂದು 567676 ನಂಬರ್‌ಗೆ ಎಸ್‌ಎಂಎಸ್ ಮಾಡಿ
XXXX ಎಂಬುದು ನಿಮ್ಮ ಎಸ್‌ಬಿಐ ಎಟಿಎಂ ಕಮ್ ಡೆಬಿಟ್ ಕಾರ್ಡ್‌ನ ಕೊನೆಯ ನಾಲ್ಕು ಸಂಖ್ಯೆಗಳು
ನಿರ್ಬಂಧಿಸುವ ವಿನಂತಿಯನ್ನು ಸ್ವೀಕರಿಸಿದ ನಂತರ, ಟಿಕೆಟ್ ಸಂಖ್ಯೆ, ದಿನಾಂಕ ಮತ್ತು ನಿರ್ಬಂಧಿಸುವ ಸಮಯವನ್ನು ಒಳಗೊಂಡಿರುವ ದೃಢೀಕರಣದ SMS ಎಚ್ಚರಿಕೆಯನ್ನು ನೀವು ಪಡೆಯುತ್ತೀರಿ.
ನಿಮ್ಮ ಮೊಬೈಲ್ ಸಂಖ್ಯೆ ಅಕೌಂಟ್‌ಗೆ ನೋಂದಾಯಿಸಿರಬೇಕು
ಮೇಲೆ ತಿಳಿಸಿದ ಯಾವುದೇ ಸೇವೆಗಳನ್ನು ಬಳಸಿಕೊಳ್ಳಲು, ನಿಮ್ಮ ಮುಖ್ಯ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸಲಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ನೀವು ಸೇವೆಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಈಗಾಗಲೇ ಬ್ಯಾಂಕಿನಲ್ಲಿ ನೋಂದಾಯಿಸಿದ್ದರೆ, ನೀವು ಮುಂದಿನ ವಿಭಾಗಕ್ಕೆ ಮುಂದುವರಿಯಬಹುದು. ನೀವು ಬ್ಯಾಂಕ್‌ನಲ್ಲಿ ಫೋನ್ ಸಂಖ್ಯೆಯನ್ನು ನೋಂದಾಯಿಸದಿದ್ದರೆ, ಸರಳವಾದ ಎಸ್‌ಎಂಎಸ್ ಕಳುಹಿಸುವ ಮೂಲಕ ನೀವು ಅದನ್ನು ಮಾಡಬಹುದು.
ಸಂದೇಶದ ಸ್ವರೂಪ- REG ನಿಮ್ಮ ಖಾತೆ ಸಂಖ್ಯೆ. ಮೇಲೆ ತಿಳಿಸಿದ SMS ಅನ್ನು 09223488888 ಸಂಖ್ಯೆಗೆ ಕಳುಹಿಸಿ. ಇದು ನಿಮ್ಮ ಫೋನ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ಸುಲಭವಾಗಿ ನೋಂದಾಯಿಸುತ್ತದೆ.
ಮಾರ್ಚ್‌ನಿಂದ ಏರಿಕೆಯಾಗಲಿದೆ ಲಾಕರ್ ಶುಲ್ಕ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶಾದ್ಯಂತ ಸೇಫ್ ಡೆಪಾಸಿಟ್ ಲಾಕರ್ ಗಳ ಬಾಡಿಗೆ ಶುಲ್ಕವನ್ನು ಹೆಚ್ಚಿಸಲಿದೆ. ಹೊಸ ಬಾಡಿಗೆ ಶುಲ್ಕವು 31ನೇ ಮಾರ್ಚ್ 2020ರಿಂದ ಜಾರಿಗೆ ಬರಲಿದೆ. ದರ ಹೆಚ್ಚಳ ಜಾರಿಗೆ ಬಂದ ಮೇಲೆ ಎಸ್‌ಬಿಐ ಲಾಕರ್ ಶುಲ್ಕವು ಕನಿಷ್ಠ 500 ರುಪಾಯಿ ಹೆಚ್ಚಳವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಣ್ಣ ಲಾಕರ್ ಶುಲ್ಕವು 500ರಿಂದ 2000 ರುಪಾಯಿ ಏರಿಕೆ ಆಗಲಿದೆ. ಇನ್ನು ಅತಿ ದೊಡ್ಡ ಲಾಕರ್ ಗಳ ವಾರ್ಷಿಕ ಶುಲ್ಕ 12,000 ರುಪಾಯಿ ಆಗಲಿದೆ. ಸದ್ಯಕ್ಕೆ ಆ ಅಳತೆಯ ಲಾಕರ್ ನ ವಾರ್ಷಿಕ ಶುಲ್ಕ 9,000 ರುಪಾಯಿ ಇದೆ. ಇನ್ನು ಮಧ್ಯಮ ಗಾತ್ರದ ಲಾಕರ್ ಗಳ ಬಾಡಿಗೆ ಶುಲ್ಕ 1,000 ರುಪಾಯಿಯಿಂದ 4000 ರುಪಾಯಿ ತನಕ ಏರಿಕೆಯಾಗಬಹುದು.


Click it and Unblock the Notifications