ಪ್ಯಾನ್ ಕಾರ್ಡ್ ನಿಮ್ಮ ಫೋಟೋ ಸರಿಯಾಗಿ ಕಾಣುಸುತ್ತಿಲ್ಲ ಎಂಬ ಬೇಸರ ಇದ್ದೀಯಾ..? ಹಾಗಿದ್ದರೆ ಚಿಂತೆಪಡಬೇಡಿ ಈ ಸುದ್ದಿ ನಿಮಗಾಗಿ. ಪ್ರಸ್ತುತ ದೇಶದ ಎಲ್ಲರಿಗೂ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಕಾರ್ಡ್ ಅತೀ ಮುಖ್ಯವಾದ ಎರಡು ದಾಖಲೆಗಳಾಗಿದೆ. ಪ್ಯಾನ್ ಕಾರ್ಡ್ ಎಂಬುದು ತೆರಿಗೆ ಉದ್ದೇಶಗಳಿಗಾಗಿ ಜನರು ಮತ್ತು ಘಟಕಗಳಿಗೆ ಭಾರತದ ಆದಾಯ ತೆರಿಗೆ ಇಲಾಖೆ ನೀಡುವ ಹತ್ತು ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದು ಪ್ರತಿ ತೆರಿಗೆದಾರರಿಗೆ ಮುಖ್ಯವಾಗಿ ಬೇಕಾದ ದಾಖಲೆಯಾಗಿದೆ.

ಹೌದು, ಪ್ಯಾನ್ ಕಾರ್ಡ್ ಮುಖ್ಯವಾದ ದಾಖಲೆ. ಈ ದಾಖಲೆಗಳಿಲ್ಲದೇ ನಾವು ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅದರಲ್ಲೂ ಬ್ಯಾಂಕ್ ವ್ಯವಹಾರ, ಹೂಡಿಕೆಗಳಿಗೆ ಈ ದಾಖಲೆ ಇರಲೇಬೇಕು. ನಿಮ್ಮಗೆ ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯ ಕಡೆಯಿಂದ ಸಿಗುತ್ತದೆ. ತೆರಿಗೆ ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಗುರುತಿನ ಚೀಟಿಯಾಗಿಯಾಗಿ ಸಹ ನಿಮ್ಮಗೆ ಕೆಲಸ ಮಾಡುತ್ತದೆ. ಆದರೆ ಅನೇಕ ಮಂದಿಯ ಪ್ಯಾನ್ ಕಾರ್ಡ್ ನಲ್ಲಿ ಸರಿಯಾಗಿ ಫೋಟೋ ಕಾಣಿಸುವುದೇ ಇಲ್ಲ. ಇಂತವರು ಏನು ಮಾಡಬಹುದು? ಹಾಗಿದ್ದರೆ ಪ್ಯಾನ್ ಕಾರ್ಡ್ ನಿಮ್ಮ ಭಾವಚಿತ್ರ (ಫೋಟೋ)ಚೇಂಜ್ ಮಾಡವುದು ಹೇಗೆ ಎಂಬವುದನ್ನು ತಿಳಿಯಲು ಮುಂದೆ ಓದಿ..
ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿರುವ ಭಾವಚಿತ್ರ ತೀರ ಹಳೆಯಾದ್ದಗಿದ್ದರೆ ಚಿಂತೆ ಪಡಬೇಡಿ ಯಾಕೆಂದರೆ ನಿವು ಕುಳಿತಿರುವಂತಹ ಸ್ಥಳದಲ್ಲಿ ನಿಮ್ಮ ಫೋಟೋ ಪ್ಯಾನ್ ಕಾರ್ಡ್‌ನಲ್ಲಿನ ಫೋಟೋವನ್ನು ಬದಲಾಯಿಸಬಹುದು. ಇದಕ್ಕೆ ನೀವು ದೂರ ಸೇವಾ ಕೇಂದ್ರಗಳಿಗೆ ಭೇಟಿ ನೀಡವ ಅಶ್ಯಕತೆ ಇರುವುದಿಲ್ಲ ಆನ್ಲೈನ್ ಸುಲಭವಾಗಿ ಬದಲಾಗಿಸುಬಹುದು.
ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಫೋಟೋ ಬದಲಾಯಿಸುವುದು ಹೇಗೆ?
- ನೀವು ಮೊದಲು NSDL ಅಥವಾ UTIITSLನ ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.
- ನೀವು ಲಾಗಿನ್ ಆದ ಮೇಲೆ, TIN NSDL ಅಥವಾ UTIITSL ಆಯ್ಕೆ ಮಾಡಿ. ನಂತರ, "ಪ್ಯಾನ್ ಕಾರ್ಡ್ ತಿದ್ದುಪಡಿ/ನವೀಕರಣ" ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಇದು ಆದ ನಂತರ ನಿಮ್ಮಗೆ ಫಾರ್ಮ್ 49A ಸಿಗುತ್ತದೆ ಅದಕ್ಕೆ ನಿಮ್ಮ ಮಾಹಿತಿಯನ್ನು ತುಂಬಬೇಕು
- ತದನಂತರ "ಫೋಟೋ ಹೊಂದಾಣಿಕೆಯಾಗುತ್ತಿಲ್ಲ" ಅನ್ನೋ ಆಯ್ಕೆಯ ಮೇಲೆ ಕ್ಕಿಕ್ ಮಾಡಬೇಕಾಗುತ್ತದೆ.
- ನಿಮ್ಮ ಭಾವಚಿತ್ರದ ಅಳತೆ 4.5 ಸೆಂ.ಮೀ × 3.5 ಸೆಂ.ಮೀ ಅಷ್ಟೇ ಇರಬೇಕು.
- ನಂತರ ದಾಖಲೆಗಾಗಿ ನಿಮ್ಮ ಗುರುತಿನ ಚೀಟಿ, ವಿಳಾಸದ ಪರಾವೆ,ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಕರೆಂಟ್ ಬಿಲ್‌ನಂತಹ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
- ಅರ್ಜಿಸಲ್ಲಿಕೆಗೆ ಭಾರತದ ವಿಳಾಸಕ್ಕೆ 91 + GST ಶುಲ್ಕವನ್ನು ಕಟ್ಟಬೇಕಾಗುತ್ತದೆ. ನೀವು ಶುಲ್ಕವನ್ನು ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಕ್ರಿಡಿಟ್ ಕಾರ್ಡ್ ಮೂಲಕ ಪಾವತಿಯನ್ನು ಮಾಡಬಹುದು.
- ಪಾವತಿ ಆದ ಮೇಲೆ ನಿಮಗೆ 15 ಸಂಖ್ಯೆಗಳ ದೃಢೀಕರಣ ಸಂಖ್ಯೆ ಸಿಗುತ್ತದೆ. ಈ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಹೀಗೆ ನೀವು ನಿಮ್ಮ ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಫೋಟೋ ಬದಲಾಯಿಸಬಹುದು.


Click it and Unblock the Notifications