ಹಣಕಾಸು ವರ್ಷ 2021-22ರ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡುವ ಕೊನೆಯ ದಿನಾಂಕ 2022ರ ಜುಲೈ 31 ಆಗಿದೆ. ನೀವು ಈವರೆಗೆ ಐಟಿಆರ್ ಅನ್ನು ಸಲ್ಲಿಕೆ ಮಾಡದಿದ್ದರೆ ಕೊನೆಯ ದಿನಾಂಕ ಹತ್ತಿರದಲ್ಲಿದೆ ಎಂದು ನೆನಪಿರಲಿ.
ಆದರೆ ಈ ನಡುವೆ ನೀವು ಆದಾಯ ತೆರಿಗೆ ಪೋರ್ಟಲ್‌ಗೆ ಲಾಗಿನ್ ಆಗುವ ಪಾಸ್‌ವರ್ಡ್ ಅನ್ನೇ ಮರೆತು ಬಿಟ್ಟಿರಬಹುದು. ಇದರಿಂದಾಗಿ ನಿಮ್ಮ ಐಟಿಆರ್ ಫೈಲಿಂಗ್ ವಿಳಂಬವಾಗುತ್ತಿರಬಹುದು. ಆ ಪಾಸ್‌ವರ್ಡ್ ಅನ್ನು ನೀವು ಸುಲಭವಾಗಿ ರಿಸೆಟ್ ಮಾಡುವುದು ಹೇಗೆ, ಎಂಬ ಬಗ್ಗೆ ಇಲ್ಲಿ ನಾವು ಹಂತ ಹಂತವಾಗಿ ವಿವರಿಸಿದ್ದೇವೆ.
ನೀವು ಪ್ರಮುಖವಾಗಿ ಮೂರು ವಿಧಾನಗಳಲ್ಲಿ ಆದಾಯ ತೆರಿಗೆ ಪೋರ್ಟಲ್‌ನ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡಬಹುದಾಗಿದೆ.
* ಆಧಾರ್ ಲಿಂಕ್ ಆದ ಮೊಬೈಲ್‌ಗೆ ಬಂದ ಒಟಿಪಿ ಮೂಲಕ
* ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಸಲ್ಲಿಕೆ ಮಾಡುವ ಮೂಲಕ
* ಇ-ಫೈಲಿಂಗ್ ಒಟಿಪಿ ಸಲ್ಲಿಕೆ ಮೂಲಕ
ಆಧಾರ್ ಒಟಿಪಿ ಮೂಲಕ ಪಾಸ್‌ವರ್ಡ್ ರಿಸೆಟ್ ಮಾಡುವುದು ಹೇಗೆ?
ಹಂತ ಒಂದು: ಆದಾಯ ತೆರಿಗೆ ಪೋರ್ಟಲ್‌ಗೆ ಭೇಟಿ ನೀಡಿ, ಲಾಗಿನ್ ಮೇಲೆ ಕ್ಲಿಕ್ ಮಾಡಿ
ಹಂತ ಎರಡು: ನಿಮ್ಮ ಯೂಸರ್ ಐಡಿ ಹಾಕಿ Continue ಕ್ಲಿಕ್ ಮಾಡಿ
ಹಂತ ಮೂರು: ಲಾಗಿನ್ ಸ್ಕ್ರೀನ್ ಮೇಲೆ Forgot Password ಕ್ಲಿಕ್ ಮಾಡಿ
ಹಂತ ನಾಲ್ಕು: Enter User ID textboxನಲ್ಲಿ ಯೂಸರ್ ಐಡಿ ಹಾಕಿ
ಹಂತ 5: Reset Password pageನಲ್ಲಿ ಆಧಾರ್ ಒಟಿಪಿ ಆಯ್ಕೆಯನ್ನು ಆರಿಸಿ
ಗಮನಿಸಿ: ನೀವು ಈಗಾಗಲೇ ಆಧಾರ್ ಒಟಿಪಿ ಹೊಂದಿದ್ದರೆ
I already have OTP on my Aadhaar-registered cellphone number ಎಂದು ಆಯ್ಕೆ ಮಾಡಿ
6-ಅಂಕಿಯ OTP ಅನ್ನು ನಮೂದಿಸಿ
Continue ಮೇಲೆ ಕ್ಲಿಕ್ ಮಾಡಿ
ಹಂತ 6: Generate OTP ಆಯ್ಕೆ ಮಾಡಿ Continue ಕ್ಲಿಕ್ ಮಾಡಿ
ಹಂತ 7: ಡಿಕ್ಲರೇಶನ್ ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ, Generate Aadhaar OTP ಕ್ಲಿಕ್ ಮಾಡಿ
ಹಂತ 8: ನಿಮ್ಮ ಮೊಬೈಲ್‌ಗೆ ಬಂದ 6-ಅಂಕಿಯ ಒಟಿಪಿಯನ್ನು ಹಾಕಿ Verify ಮೇಲೆ ಕ್ಲಿಕ್ ಮಾಡಿ
ಹಂತ 9: ಹೊಸ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಅನ್ನು ದೃಢೀಕರಿಸಿ Submit ಕ್ಲಿಕ್ ಮಾಡಿದರೆ ಹಂತ ಪೂರ್ಣ
ಇ-ಫೈಲಿಂಗ್ ಒಟಿಪಿ ಬಳಸಿ ಪಾಸ್‌ವರ್ಡ್ ಹೀಗೆ ಮರುಹೊಂದಿಸಿ
ಹಂತ 1: ಇ-ಫೈಲಿಂಗ್ ಮುಖಪುಟಕ್ಕೆ ಹೋಗಿ ಮತ್ತು ಲಾಗಿನ್ ಕ್ಲಿಕ್ ಮಾಡಿ
ಹಂತ 2: ನಿಮ್ಮ ಯೂಸರ್ ಐಡಿ ನಮೂದಿಸಿ, Continue ಕ್ಲಿಕ್ ಮಾಡಿ
ಹಂತ 3: ಲಾಗಿನ್ ಸ್ಕ್ರೀನ್‌ನಲ್ಲಿ Forgot Password ಮೇಲೆ ಕ್ಲಿಕ್ ಮಾಡಿ
ಹಂತ 4: Reset Password page ಆಯ್ಕೆ ಮಾಡಿ, Use e-filing OTP ಆಯ್ಕೆ ಮಾಡಿ Continue ಕ್ಲಿಕ್ ಮಾಡಿ
ಹಂತ 5: ಇ-ಫೈಲಿಂಗ್ OTP ಬಳಸಿಕೊಂಡು ಜನ್ಮ ದಿನಾಂಕವನ್ನು ಆಯ್ಕೆಮಾಡಿ, Continue ಕ್ಲಿಕ್ ಮಾಡಿ
ಹಂತ 6: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ, ಇಮೇಲ್‌ಗೆ ಕಳುಹಿಸಲಾದ 6-ಅಂಕಿಯ ಒಟಿಪಿ ಹಾಕಿ Verify ಕ್ಲಿಕ್ ಮಾಡಿ
ಹಂತ 7: ಹೊಸ ಪಾಸ್‌ವರ್ಡ್ ಹಾಕಿ, ಪಾಸ್‌ವರ್ಡ್ ದೃಢೀಕರಿಸಿ submit ಕೊಟ್ಟರೆ ಹಂತ ಪೂರ್ಣ
ಡಿಎಸ್‌ಸಿ ಬಳಸಿಕೊಂಡು ಪಾಸ್‌ವರ್ಡ್ ಬದಲಾವಣೆ
ಹಂತ 1: ಇ-ಫೈಲಿಂಗ್ ಮುಖಪುಟಕ್ಕೆ ಹೋಗಿ ಮತ್ತು ಲಾಗಿನ್ ಕ್ಲಿಕ್ ಮಾಡಿ
ಹಂತ 2: ಯೂಸರ್ ಐಡಿ ಮೇಲೆ ಹಾಕಿ, Continue ಕ್ಲಿಕ್ ಮಾಡಿ
ಹಂತ 3: Forgot Password ಮೇಲೆ ಕ್ಲಿಕ್ ಮಾಡಿ
ಹಂತ 4: Reset Password ಪೇಜ್‌ನಲ್ಲಿ Upload Digital Signature Certificate (DSC) ಆಯ್ಕೆ ಮಾಡಿ Continue ಕ್ಲಿಕ್ ಮಾಡಿ
ಹಂತ 5: ಸರಿಯಾದ ಆಯ್ಕೆ ಮಾಡಿ Continue ಕ್ಲಿಕ್ ಮಾಡಿ
ಹಂತ 6:Click here to download emsigner utility ಆಯ್ಕೆ ಮಾಡಿ
ಹಂತ 7: 'I have downloaded and installed emsigner utility' ಆಯ್ಕೆ ಮಾಡಿ, Continue ಕ್ಲಿಕ್ ಮಾಡಿ
ಹಂತ 8: ಡೇಟಾ ಸೈನ್ ಪರದೆಯಲ್ಲಿ ನಿಮ್ಮ ಪಾಸ್‌ವರ್ಡ್ ಮೊದಲಾದವು ಆಯ್ಕೆ ಮಾಡಿ Sign button ಕ್ಲಿಕ್ ಮಾಡಿ
ಹಂತ 9: ಹೊಸ ಪಾಸ್‌ವರ್ಡ್ ಹಾಕಿ, ಅದನ್ನು ದೃಢೀಕರಿಸಿ Submit ಕ್ಲಿಕ್ ಮಾಡಿ


Click it and Unblock the Notifications