ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಬಹು ಮುಖ್ಯ ಪ್ರಮಾಣ ಪತ್ರ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ವಂಚಕರು ನಿಮ್ಮ ಹೆಸರು, ನಿಮ್ಮ ಗುರುತು ಆದ ಆಧಾರ್ ಕಾರ್ಡ್ ಮೂಲಕ ಹೊಸ ಸಿಮ್ ಅನ್ನು ಕೂಡಾ ಖರೀದಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಮೊಬೈಲ್ ಸಂಖ್ಯೆಗಳು ಲಿಂಕ್ ಆಗಿದೆ ಎಂದು ನೀವು ತಿಳಿದು ಕೊಳ್ಳುವುದು ಕೂಡಾ ಅತೀ ಮುಖ್ಯ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿರುವ ಎಲ್ಲಾ ಆಧಾರ್ ಸಂಬಂಧಿತ ಸೇವೆಗಳನ್ನು ಆನಂದಿಸಲು ನೀವು ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಮೊಬೈಲ್ ಸಂಖ್ಯೆಗಳು ಲಿಂಕ್ ಆಗಿದೆ ಎಂದು ತಿಳಿಯುವುದು ಮುಖ್ಯವಾಗಿದೆ.
ಆದರೆ ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಮೊಬೈಲ್ ಸಂಖ್ಯೆ ಲಿಂಕ್ ಆಗಿದೆ ಎಂದು ನೀವು ನೋಡುವುದು ಹೇಗೆ?. ಇದಕ್ಕಾಗಿ ದೂರಸಂಪರ್ಕ ಇಲಾಖೆಯು ಹೊಸ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭ ಮಾಡಿದೆ. ಈ ಪ್ಲಾಟ್ ಫಾರ್ಮ್ ಮೂಲಕ ಜನರು ತಮ್ಮ ಆಧಾರ್ ಕಾರ್ಡ್ ಮೂಲಕ ಎಷ್ಟು ಸಿಮ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ನೋಡಬಹುದಾಗಿದೆ.
ವಂಚನೆ ನಿರ್ವಹಣೆ ಮತ್ತು ಗ್ರಾಹಕ ರಕ್ಷಣೆಗಾಗಿ ಟೆಲಿಕಾಂ ಅನಾಲಿಟಿಕ್ಸ್ (ಟಿಎಎಫ್‌ಸಿಒಪಿ) ಎಂದು ಈ ದೂರಸಂಪರ್ಕ ಇಲಾಖೆಯ ಪ್ಲಾಟ್‌ಫಾರ್ಮ್‌ಗೆ ಹೆಸರು ನೀಡಲಾಗಿದೆ. ಈ ಪ್ಲಾಟ್ ಫಾರ್ಮ್‌ನಲ್ಲಿ ನಮ್ಮ ಅರಿವಿಗೆ ಬಾರದೆಯೇ, ನಮ್ಮ ಗುರುತಿನಲ್ಲಿ ಸಿಮ್ ಅನ್ನು ಖರೀದಿ ಮಾಡಿರುವ ಬಗ್ಗೆ ಅಲರ್ಟ್ ಬರಲಿದೆ. ಈ ಅಲರ್ಟ್ ಬಂದ ಸಂದರ್ಭದಲ್ಲಿ ಆ ಮೊಬೈಲ್ ಸಂಖ್ಯೆಯು ನಮ್ಮದಲ್ಲ ಎಂದು ಆದರೆ ನಾವು ಅದನ್ನು ಬ್ಲಾಕ್ ಮಾಡಬಹುದು. ಆ ಬಳಿಕ ಆ ಮೊಬೈಲ್ ಸಂಖ್ಯೆಯನ್ನು ಬೇರೆ ವ್ಯಕ್ತಿಗಳು ನಿಮ್ಮ ಹೆಸರಿನಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಇನ್ನು ಜನರು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡುವ ಮೂಲಕ ತಮ್ಮ ಅರ್ಜಿಗಳ ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು "Request Status" ವಿಭಾಗದ ಅಡಿಯಲ್ಲಿ "Ticket ID Ref No" ಅನ್ನು ನಮೂದಿಸಿ ಪರಿಶೀಲನೆ ಮಾಡಬಹುದು.

ಟಿಎಎಫ್‌ಸಿಒಪಿ ಒದಗಿಸಿದ ಸೌಲಭ್ಯಗಳು ಯಾವುದು?
ಟಿಎಎಫ್‌ಸಿಒಪಿ ತನ್ನ ವೆಬ್‌ಸೈಟ್‌ನಲ್ಲಿ ದೂರಸಂಪರ್ಕ ಇಲಾಖೆಯು ಚಂದಾದಾರರಿಗೆ ಟೆಲಿಕಾಂ ಸಂಪನ್ಮೂಲಗಳ ಸರಿಯಾದ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಂಚನೆಗಳನ್ನು ಕಡಿಮೆ ಮಾಡುವ ಮೂಲಕ ಜನರ ಹಿತಾಸಕ್ತಿಯನ್ನು ರಕ್ಷಣೆ ಮಾಡಲು ದೂರಸಂಪರ್ಕ ಇಲಾಖೆಯು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಿರುವ ಮಾರ್ಗಸೂಚಿಗಳ ಪ್ರಕಾರ, ವೈಯಕ್ತಿಕ ಮೊಬೈಲ್ ಚಂದಾದಾರರು ತಮ್ಮ ಹೆಸರಿನಲ್ಲಿ ಒಂಬತ್ತು ಮೊಬೈಲ್ ಸಂಪರ್ಕಗಳನ್ನು ನೋಂದಾಯಿಸಿಕೊಳ್ಳಬಹುದು. "ಈ ವೆಬ್‌ಸೈಟ್ ಅನ್ನು ಚಂದಾದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಆರಂಭಿಸಲಾಗಿದೆ. ಚಂದಾದಾರರು ತಮ್ಮ ಹೆಸರಿನಲ್ಲಿ ಬಳಸಲಾಗುತ್ತಿರುವ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಲು, ಹೆಚ್ಚುವರಿ ಮೊಬೈಲ್ ಸಂಖ್ಯೆ ಇದ್ದರೆ ಅದನ್ನು ತೆಗೆದು ಹಾಕಲು ಸಹಾಯ ಮಾಡುವ ಸಲುವಾಗಿ ಪ್ರಾರಂಭ ಮಾಡಲಾಗಿದೆ," ಎಂದು ಇಲಾಖೆಯು ಹೇಳಿದೆ.
ಆದಾಗ್ಯೂ, ಗ್ರಾಹಕ ಸ್ವಾಧೀನ ಫಾರ್ಮ್ (ಸಿಎಎಫ್) ಅನ್ನು ನಿರ್ವಹಿಸುವ ಪ್ರಾಥಮಿಕ ಜವಾಬ್ದಾರಿ ಸೇವಾ ಪೂರೈಕೆದಾರರ ಮೇಲಿದೆ. ಪ್ರಸ್ತುತ ತೆಲಂಗಾಣ ಮತ್ತು ಆಂಧ್ರಪ್ರದೇಶದ ಬಳಕೆದಾರರಿಗಾಗಿ ಟಿಎಎಫ್‌ಸಿಒಪಿ ಬಳಸುವ ಸೌಲಭ್ಯವನ್ನು ನೀಡಲಾಗಿದೆ. ಸೌಲಭ್ಯಗಳು ಈ ಕೆಳಗೆ ಪಟ್ಟಿ ಮಾಡಲಾಗಿದೆ.
* 9 ಸಂಖ್ಯೆಗಿಂತ ಅಧಿಕ ಮೊಬೈಲ್ ಸಂಖ್ಯೆ ಒಬ್ಬರ ಗುರುತಿನಲ್ಲಿ ಇದ್ದರೆ ಎಸ್‌ಎಮ್‌ಎಸ್ ಅಲರ್ಟ್ ಬರುತ್ತದೆ.
* 9 ಸಂಖ್ಯೆಗಿಂತ ಅಧಿಕ ಮೊಬೈಲ್ ಸಂಖ್ಯೆ ಒಬ್ಬರ ಗುರುತಿನಲ್ಲಿ ಇದ್ದರೆ ಅಲರ್ಟ್ ಬಂದ ಬಳಿಕ ಬೇಡದ ಅಥವಾ ತಮ್ಮ ಹೆಸರಲ್ಲಿ ಬೇರೆ ಜನರು ಬಳಸುವ ಮೊಬೈಲ್ ಸಂಖ್ಯೆಯನ್ನು ರಿಪೋರ್ಟ್ ಮಾಡಬಹುದು.
* "Request Status" ವಿಭಾಗದ ಅಡಿಯಲ್ಲಿ "Ticket ID Ref No" ಅನ್ನು ನಮೂದಿಸಿ ಈ ರಿಪೋರ್ಟ್‌ನ ಸ್ಟೇಟಸ್ ಪರಿಶೀಲನೆ ಮಾಡಬಹುದು.

ನಿಮ್ಮ ಆಧಾರ್ ಮೂಲಕ ಎಷ್ಟು ಸಿಮ್ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?
* https://tafcop.dgtelecom.gov.in/ ಕ್ಕೆ ಭೇಟಿ ನೀಡಿ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ
* "Request OTP" ಮೇಲೆ ಕ್ಲಿಕ್ ಮಾಡಿ, ಆರು ಡಿಜಿಟ್ ಒಟಿಪಿಯನ್ನು ನಮೂದಿಸಿಕೊಳ್ಳಿ
* ಈಗ "Validate" ಮೇಲೆ ಕ್ಲಿಕ್ ಮಾಡಿ, ಆಗ ನಿಮ್ಮ ಗುರುತಿನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗಳು ನಿಮಗೆ ಲಭಿಸಲಿದೆ. ನಿಮ್ಮ ಮೊಬೈಲ್ ಸಂಖ್ಯೆಯು ಅಧಿಕೃತವಾಗಿ ಕಾರ್ಪೊರೇಟ್ ಸಂಪರ್ಕದ ಮೂಲಕ ಬಳಸಲಾಗುತ್ತಿದ್ದರೆ, ನಿಮ್ಮ ಹೆಸರದಲ್ಲಿ ಇರುವ ಬೇರೆ ಸಂಖ್ಯೆಗಳು ನಿಮಗೆ ಲಭಿಸಲಿದೆ.
* ನಿಮ್ಮದು ಅಲ್ಲದ ಅಥವಾ ನಿಮಗೆ ಬೇಡದಾದ ಮೊಬೈಲ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ, ನೀವು ರಿಪೋರ್ಟ್ ಅನ್ನು ಸಬ್‌ಮಿಟ್ ಮಾಡಬಹುದು.
* ನೀವು ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ, This is not my number, Not required, and Required ಎಂದು ಕ್ಲಿಕ್ ಮಾಡುವ ಮೂಲಕ ರಿಪೋರ್ಟ್ ಮಾಡಬಹುದು. ಇದನ್ನು ಕ್ಲಿಕ್ ಮಾಡಿದ ಬಳಿಕ ನೀವು "Report" ಮೇಲೆ ಕ್ಲಿಕ್ ಮಾಡಿ submit ಮಾಡಬಹುದು.


Click it and Unblock the Notifications