For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ಜಮಾ ಹೇಗೆ?

|

ಪೋಸ್ಟ್ ಆಫೀಸ್ ಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸೇರಿದಂತೆ ಒಂಬತ್ತು ಬಗೆಯ ಉಳಿತಾಯ ಯೋಜನೆಗಳಿವೆ. ಇವುಗಳಲ್ಲಿ ಬಹುತೇಕ ಯೋಜನೆಗಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಸಿಗುತ್ತದೆ. ಪಿಪಿಎಫ್ ಖಾತೆ ತೆರೆಯುವುದಕ್ಕೆ ಪೋಸ್ಟ್ ಆಫೀಸ್ ಗೆ ಒಂದು ಸಲ ಭೇಟಿ ನೀಡಿದರೆ ಸಾಕು. ಆ ನಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಪ್ಲಿಕೇಷನ್ ಮೂಲಕವೇ ಎಲ್ಲವೂ ನಿರ್ವಹಣೆ ಮಾಡಬಹುದು.

ಐಪಿಪಿಬಿ ಮೂಲಕವಾಗಿ ನಿಮ್ಮ ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಗೆ ಹಣ ವರ್ಗಾವಣೆ ಮಾಡುವುದು ಹೇಗೆ ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ಹಂತಹಂತವಾಗಿ ಅನುಸರಿಸಿ, ಹಣವನ್ನು ವರ್ಗಾವಣೆ ಮಾಡಬಹುದು.

PPF ಖಾತೆ ಮೆಚ್ಯೂರಿಟಿ ನಂತರ ಇರುವ ಆಯ್ಕೆಗಳೇನು?PPF ಖಾತೆ ಮೆಚ್ಯೂರಿಟಿ ನಂತರ ಇರುವ ಆಯ್ಕೆಗಳೇನು?

1) ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಐಪಿಪಿಬಿ ಖಾತೆಗೆ ಸೇರ್ಪಡೆ ಮಾಡಬೇಕು.

2) DOP ಪ್ರಾಡಕ್ಟ್ಸ್ ಗೆ ತೆರಳಬೇಕು. ಪಿಪಿಎಫ್ ಆಯ್ಕೆ ಮಾಡಿಕೊಳ್ಳಬೇಕು.

3) ನಿಮ್ಮ ಪಿಪಿಎಫ್ ಖಾತೆ ಸಂಖ್ಯೆ ನಮೂದಿಸಬೇಕು ಮತ್ತು ನಂತರ ಡಿಒಪಿ ಗ್ರಾಹಕರ ಐ.ಡಿ.ಯನ್ನು ಹಾಕಬೇಕು.

4) ನಿಮ್ಮ ಕಂತಿನ ಅವಧಿ ಮತ್ತು ಮೊತ್ತವನ್ನು ಆಯ್ಕೆ ಮಾಡಬೇಕು.

5) ಐಪಿಪಿಬಿ ಮೊಬೈಲ್ ಅಪ್ಲಿಕೇಷನ್ ಮೂಲಕ ಹಣ ವರ್ಗಾವಣೆ ಯಶಸ್ವಿ ಆದ ಮೇಲೆ ಐಪಿಪಿಬಿ ನೋಟಿಫಿಕೇಷನ್ ಬರುತ್ತದೆ.

ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ಜಮಾ ಹೇಗೆ?

ಡಾಕ್ ಪೇ ಡಿಜಿಟಲ್ ಪೇಮೆಂಟ್ ಆಪ್
ಕಳೆದ ತಿಂಗಳು ಸರ್ಕಾರದಿಂದ DakPay ಡಿಜಿಟಲ್ ಪೇಮೆಂಟ್ಸ್ ಅಪ್ಲಿಕೇಷನ್ ಆರಂಭಿಸಲಾಗಿದೆ. ಇದನ್ನು ಕೂಡ ಐಪಿಪಿಬಿ ಗ್ರಾಹಕರು ಬಳಸಬಹುದು. ಐಪಿಪಿಬಿ ಹಾಗೂ ಇಂಡಿಯಾ ಪೋಸ್ಟ್ ಒದಗಿಸುವ ಡಿಜಿಟಲ್ ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಅದು ಒದಗಿಸುತ್ತದೆ. ಇದರ ಮೂಲಕ ಹಣ ಕಳಿಸಬಹುದು, ಕ್ಯೂಆರ್ ಸ್ಕ್ಯಾನ್ ಮಾಡಿ, ವರ್ತಕರಿಗೆ ಹಾಗೂ ಇತರ ಸೇವೆಗಳಿಗೆ ಡಿಜಿಟಲ್ ಪಾವತಿ ಮಾಡಬಹುದು.

ಇದರ ಜತೆಗೆ ದೇಶದ ಇತರ ಬ್ಯಾಂಕ್ ಗಳ ಜತೆಗೆ ವ್ಯವಹರಿಸುವುದಕ್ಕೆ ಕೂಡ ಸಾಧ್ಯವಾಗುತ್ತದೆ.

ಪಿಪಿಎಫ್ ಇತ್ತೀಚೆಗಿನ ಬಡ್ಡಿ ದರ
ಪಿಪಿಎಫ್ ಸೇರಿದಂತೆ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರವು ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ ಬದಲಾವಣೆ ಮಾಡದೆ ಹಾಗೇ ಉಳಿಸಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಪಿಪಿಎಫ್ ಹದಿನೈದು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. 7.1% ಬಡ್ಡಿ ದರ ಇದೆ. ಖಾತೆ ಸಕ್ರಿಯವಾಗಿ ಇರಬೇಕು ಅಂದರೆ, ವರ್ಷಕ್ಕೆ 500 ರುಪಾಯಿ ಕಟ್ಟಬೇಕು.

English summary

How To Deposit Money Online In Post Office Public Provident Fund Account?

Here is the step by step details about how to deposit money online in post office Public Provident Fund (PPF).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X