ನೌಕರರ ಭವಿಷ್ಯ ನಿಧಿ (ಇಪಿಎಫ್) ಸದಸ್ಯರು ತಮ್ಮ ಕುಟುಂಬ/ನಾಮಿನಿ ಮಾಡುವ ಕಾರ್ಯವನ್ನು ಈಗ ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು. ಅಂದರೆ ಇ-ನಾಮನಿರ್ದೇಶನವನ್ನು ನೋಂದಾಯಿಸಿಕೊಳ್ಳಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇ-ನಾಮಿನೇಷನ್ ಸಲ್ಲಿಸಬೇಕಾದರೆ ನೀವು ಕೆಲವು ದಾಖಲೆಗಳನ್ನು ಹೊಂದಿರಬೇಕು.
ಸದಸ್ಯರು ಸಕ್ರಿಯವಾಗಿರುವ ಮತ್ತು ಆಧಾರ್-ಲಿಂಕ್ ಯುಎಎನ್, ಆಧಾರ್-ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಮತ್ತು ಕೈಯಲ್ಲಿ ಛಾಯಾಚಿತ್ರ ಮತ್ತು ವಿಳಾಸದೊಂದಿಗೆ ನವೀಕರಿಸಿದ ಸದಸ್ಯ ಪ್ರೊಫೈಲ್ ಹೊಂದಿರಬೇಕು. ಹಾಗೆಯೇ ಕುಟುಂಬ ಮತ್ತು ನಾಮಿನಿಗಳು ಸ್ಕ್ಯಾನ್ ಮಾಡಿದ ಫೋಟೋಗಳು ಮತ್ತು ಆಧಾರ್, ಐಎಫ್‌ಎಸ್‌ಸಿ ಜೊತೆಗೆ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ವಿಳಾಸವನ್ನು ಹೊಂದಿರಬೇಕು.
"ನಿಮ್ಮ ಕುಟುಂಬ/ನಾಮಿನಿಗೆ ಸಾಮಾಜಿಕ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ನೀವು ಇಂದೇ ಇ-ನಾಮಿನೇಷನ್ ಸಲ್ಲಿಸಿ. ಸದಸ್ಯರು ತಮ್ಮ ಕುಟುಂಬದ ಸದಸ್ಯರು/ನಾಮಿನಿಯನ್ನು ನಾಮಿನೇಷನ್ ಮಾಡಲು ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು," ಎಂದು ಇಪಿಎಫ್‌ಒ ಟ್ವೀಟ್ ಮೂಲಕ ತಿಳಿಸಿದೆ. ಹಾಗಾದರೆ ನೀವು ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗಾಗಿ ಇ-ನಾಮಿನೇಷನ್ ಸಲ್ಲಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

ಇ-ನಾಮಿನೇಷನ್ ಸಲ್ಲಿಸಲು ಪಾಲಿಸಬೇಕಾದ ಹಂತಗಳು
ಇಪಿಎಫ್‌ಒ ಸದಸ್ಯರು ತಮ್ಮ ಇಪಿಎಫ್ ಖಾತೆಗೆ ಇ-ನಾಮಿನೇಶನ್ ಅನ್ನು ಆನ್‌ಲೈನ್‌ನಲ್ಲಿ ಕೆಲವೇ ಸರಳ ಹಂತಗಳನ್ನು ಪಾಲಿಸಬೇಕು. "ಸದಸ್ಯರು ಇಂದು ತಮ್ಮ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಇ-ನಾಮಿನೇಷನ್ ಅನ್ನು ಸಲ್ಲಿಸಬೇಕು. ಇಪಿಎಫ್/ಇಪಿಎಸ್ ನಾಮನಿರ್ದೇಶನವನ್ನು ಡಿಜಿಟಲ್ ಆಗಿ ಸಲ್ಲಿಸಲು ಈ ಸುಲಭ ಹಂತಗಳನ್ನು ಅನುಸರಿಸಿ," ಎಂದು ಇಪಿಎಫ್‌ಒ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ಆ ಹಂತಗಳನ್ನು ಈ ಕೆಳಗೆ ವಿವರಿಸಲಾಗಿದೆ.
* ಇಪಿಎಫ್‌ಒ www.epfindia.gov.in ವೆಬ್‌ಸೈಟ್‌ಗೆ ಭೇಟ ನೀಡಿ
* Member UAN/Online Service ಮೇಲೆ ಕ್ಲಿಕ್ ಮಾಡಿ
* ನಿಮ್ಮ ಯುಎಎನ್ ಹಾಗೂ ಪಾಸ್‌ವರ್ಡ್ ಉಪಯೋಗಿಸಿ ಲಾಗಿನ್ ಆಗಿ
* Manage ಟ್ಯಾಬ್ ಕೆಳಗೆ ಇರುವ E-Nomination ಅನ್ನು ಆಯ್ಕೆ ಮಾಡಿ
* ಬಳಿಕ Provide Details Tab ನಿಮಗೆ ಲಭ್ಯವಾಗಲಿದೆ,
* ಇಲ್ಲಿ ಎಲ್ಲಾ ಅಗತ್ಯ ದಾಖಲೆಗಳನ್ನು ಹಾಕಿ Save ಮೇಲೆ ಕ್ಲಿಕ್ ಮಾಡಿ
* ಆ ನಂತರ ನಿಮ್ಮ ಕುಟುಂಬದ ಬಗ್ಗೆ ಮಾಹಿತಿ ಹಾಕಲು ಹಾಗೂ ಅಪ್‌ಡೇಟ್ ಮಾಡಲು Yes ಮೇಲೆ ಕ್ಲಿಕ್ ಮಾಡಿ
* ಬಳಿಕ Add Family Details ಮೇಲೆ ಕ್ಲಿಕ್ ಮಾಡಿ, ಇಲ್ಲಿ ನೀವು ಒಂದಕ್ಕಿಂತ ಅಧಿಕ ನಾಮಿನಿಯನ್ನು ಹಾಕಬಹುದು
* ನಂತರ Nominee Details ಮೇಲೆ ಕ್ಲಿಕ್ ಮಾಡಿ
* Save EPF Nomination ಮೇಲೆ ಬಳಿಕ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್‌ನಲ್ಲಿ ಒಟಿಪಿ ಜೆನೆರೆಟ್ ಮಾಡಲು E-sign ಮೇಲೆ ಕ್ಲಿಕ್ ಮಾಡಿ
* ಆಧಾರ್ ಲಿಂಕ್ ಆಗಿರುವ ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ಹಾಕಿ
ಈ ಎಲ್ಲಾ ಹಂತಗಳ ಬಳಿಕ ನಿಮ್ಮ ಇಪಿಎಫ್ ಖಾತೆಗೆ ಇ-ನಾಮಿನೇಷನ್ ಸಲ್ಲಿಕೆ ಆಗಲಿದೆ, ಆ ಬಳಿಕ ಯಾವುದೇ ದಾಖಲೆಗಳನ್ನು ಕಚೇರಿಗೆ ನೀಡುವ ಅವಶ್ಯಕತೆ ಇರುವುದಿಲ್ಲ. ಈ ನಡುವೆ ಮತ್ತೊಂದೆಡೆ, 2021 ರ ಅಕ್ಟೋಬರ್ 20 ರಂದು ನೀಡಲಾದ ಇಪಿಎಫ್‌ಒನ ತಾತ್ಕಾಲಿಕ ವೇತನದಾರರ ದತ್ತಾಂಶವು, 2021 ರ ಆಗಸ್ಟ್ ತಿಂಗಳಲ್ಲಿ, ಇಪಿಎಫ್‌ಒ ಒಟ್ಟು 14.81 ಲಕ್ಷ ಸದಸ್ಯರು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಈ ಏರಿಕೆಯನ್ನು ದತ್ತಾಂಶವು ತೋರಿಸಿದೆ. ಜುಲೈ 2021 ಗೆ ಹೋಲಿಕೆ ಮಾಡಿದಾಗ ಆಗಸ್ಟ್ 2021 ರ ಒಟ್ಟಾರೆ ಚಂದಾದಾರರ ಸಂಖ್ಯೆ 12.61 ಶೇಕಡ ಏರಿಕೆಯಾಗಿದೆ.


Click it and Unblock the Notifications