ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಪಿಂಚಣಿ ವಿತರಿಸುವ ಅಥಾರಿಟಿ (ಪಿಡಿಎ) ಯಿಂದ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಮೂಲಕ ಪಿಂಚಣಿ ಪಡೆಯುವವರು ಜೀವನ ಪತ್ರ ಅಥವಾ ಜೀವನ ಪ್ರಮಾಣ ಪತ್ರವನ್ನು ವರ್ಷಕ್ಕೆ ಒಂದು ಬಾರಿ ಪಿಡಿಎಗೆ ಸಲ್ಲಿಸುವುವುದು ಕಡ್ಡಾಯವಾಗಿದೆ. ಈ ಜೀವನ ಪ್ರಮಾಣ ಪತ್ರವನ್ನು ಪಿಂಚಣಿ ಪಡೆಯುವ ವ್ಯಕ್ತಿ ಖುದ್ದಾಗಿ ಹಾಜರಾಗುವ ಮೂಲಕ ಸಲ್ಲಿಸಬಹುದು ಅಥವಾ ನಿಗದಿತ ರೀತಿಯಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ.

ಪಿಂಚಣಿದಾದರಿಗೆ ನೌಕರರ ಭವಿಷ್ಯ ನಿಧಿಯು ಕನಿಷ್ಠ ಒಂದು ಸಾವಿರ ಪಿಂಚಣಿಯನ್ನು ನೀಡುವ ಭರವಸೆಯನ್ನು ನೀಡಿದೆ. ನೌಕರರ ಭವಿಷ್ಯ ನಿಧಿಗೆ ಕನಿಷ್ಠ ಹತ್ತು ವರ್ಷಗಳ ಕಾಲ ಹಣ ಜಮೆ ಆಗಿದ್ದರೆ ಆ ವ್ಯಕ್ತಿಯು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕಳೆದ ವರ್ಷ ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದ ಕಾರಣದಿಂದಾಗಿ ಮತ್ತು ಹಿರಿಯ ನಾಯಕರಿಗೆ ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರುವುದು ಕಷ್ಟ ಎಂಬ ಕಾರಣದಿಂದಾಗಿ ಕೇಂದ್ರ ಸರ್ಕಾರವು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಹಾಗೆಯೇ ಕಳೆದ ವರ್ಷ ಕೇಂದ್ರ ಸರ್ಕಾರದ ಪಿಂಚಣಿ ನೀತಿಯಡಿ ಬರುವ ಎಲ್ಲಾ ಪಿಂಚಣಿದಾರರು ನವೆಂಬರ್‌ 1 ರಿಂದ ಡಿಸೆಂಬರ್‌ 31 ರವರೆಗೆ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದು ಸರ್ಕಾರ ತಿಳಿಸಿತ್ತು. ಆದರೆ 80 ವರ್ಷಕ್ಕಿಂತ ಅಧಿಕ ವಯಸ್ಸಾದವರು ತಮ್ಮ ಜೀವನ ಪ್ರಮಾಣ ಪತ್ರವನ್ನು ಅಕ್ಟೋಬರ್‌ 1 ರಿಂದ ಡಿಸೆಂಬರ್‌ 31 ರವರೆಗೆ ಸಲ್ಲಿಸಬಹುದು ಎಂದು 2020 ರಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

 ಏನಿದು ಡಿಜಿಟಲ್‌ ಜೀವನ ಪ್ರಮಾಣ ಪತ್ರ

ಏನಿದು ಡಿಜಿಟಲ್‌ ಜೀವನ ಪ್ರಮಾಣ ಪತ್ರ

ಈ ವರ್ಷ ಫೆಬ್ರವರಿ 28 ರವರೆಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆಯ ಕೊನೆಯ ದಿನಾಂಕವಾಗಿತ್ತು. ಈಗ ಜೀವನ ಪ್ರಮಾಣ ಪತ್ರವನ್ನು ಒಂದು ವರ್ಷಕ್ಕೆ ಒಮ್ಮೆ ಸಲ್ಲಿಸಬೇಕಿದೆ. ಈ ಜೀವನ ಪ್ರಮಾಣ ಪತ್ರವನ್ನು ಆನ್‌ಲೈ‌ನ್‌ ಮೂಲಕವೂ ನಾವು ಪಡೆಯಬಹುದು ನಾವು ಬ್ಯಾಂಕ್‌ ನಿರ್ದೇಶಕರು ಅಥವಾ ಅಧಿಕಾರಿಗಳ ಸಹಿ ಪಡೆದು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಬದಲಾಗಿ ಈಗ ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್‌ ಮಾದರಿಯಲ್ಲಿ ನೌಕರರ ಭವಿಷ್ಯ ನಿಧಿ ಕಚೇರಿಗೆ ಸಲ್ಲಿಕೆ ಮಾಡಬಹುದು. ಈ ಪಿಂಚಣಿ ವಿತರಿಸುವ ಬ್ಯಾಂಕ್‌, ಉಮಾಂಗ್‌ ಆಪ್‌ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿಯೂ ಈ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದು.

ಅಪ್ಲಿಕೇಷನ್‌ಗಳನ್ನು ಬಳಿಸ ಹಾಗೂ ಸುರಕ್ಷಿತ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯ ಮೂಲಕ ಪಿಂಚಣಿದಾರರು ಡಿಜಿಟಲ್‌ ಜೀವನ ಪ್ರಮಾಣ ಪತ್ರವನ್ನು ಪಡೆಯಬಹುದು. ಈ ಡಿಜಿಟಲ್‌ ಜೀವನ ಪ್ರಮಾಣ ಪತ್ರವು ಆನ್‌ಲೈನ್‌ ಮೂಲಕ ಲಭಿಸುತ್ತದೆ ಹಾಗೂ ಇದನ್ನು ಪಿಂಚಣಿದಾರರು ಹಾಗೂ ಪಿಡಿಎ ಗಳು ಆನ್‌ಲೈನ್‌ ಮೂಲಕವೇ ಪರಿಶೀಲಿಸಬಹುದು.

 ಡಿಜಿಟಲ್‌ ಜೀವನ ಪ್ರಮಾಣ ಪತ್ರ ಪಡೆಯಲು ಏನು ಬೇಕು?

ಡಿಜಿಟಲ್‌ ಜೀವನ ಪ್ರಮಾಣ ಪತ್ರ ಪಡೆಯಲು ಏನು ಬೇಕು?

* ಪಿಂಚಣಿದಾರರಲ್ಲಿ ಆಧಾರ್‌ ನಂಬರ್‌ ಕಡ್ಡಾಯವಾಗಿ ಇರಬೇಕು
* ಪಿಂಚಣಿದಾರರಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್‌ ಸಂಖ್ಯೆಯನ್ನು ಹೊಂದಿರಬೇಕು.

ಈ ಡಿಜಿಟಲ್‌ ಜೀವನ ಪ್ರಮಾಣ ಪತ್ರವನ್ನು ಪಡೆಯಲು ಮೊದಲು ಪಿಂಚಣಿದಾರರು ಜೀವನ ಪ್ರಮಾಣ ಆಪ್‌ ಮೂಲಕ ನೋಂದಣಿ ಮಾಡಿಕೊಂಡಿರಬೇಕು.

 ಜೀವನ ಪ್ರಮಾಣ ಆಪ್‌ನಲ್ಲಿ ರಿಜಿಸ್ಟರ್‌ ಮಾಡಲು ಪಾಲಿಸಬೇಕಾದ ಹಂತಗಳು

ಜೀವನ ಪ್ರಮಾಣ ಆಪ್‌ನಲ್ಲಿ ರಿಜಿಸ್ಟರ್‌ ಮಾಡಲು ಪಾಲಿಸಬೇಕಾದ ಹಂತಗಳು

ಹಂತ ಒಂದು: ಜೀವನ ಪ್ರಮಾಣ ಆಪ್‌ ಡೌನ್‌ಲೋಡ್‌ ಮಾಡಿ ಅದನ್ನು ತೆರೆಯಿರಿ
ಹಂತ ಎರಡು: ಹೊಸ ರಿಜಿಸ್ಟಿರೇಷನ್‌ ಲಿಂಕ್‌ಗೆ ಹೋಗಿ
ಹಂತ ಮೂರು: ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ, ಹೆಸರು, ಮೊಬೈಲ್‌ ನಂಬರ್‌, ಪಿಂಚಣಿ ಪಾವತಿ ಆದೇಶವನ್ನು ಆಪ್‌ನಲ್ಲಿ ನೋಂದಯಿಸಿಕೊಳ್ಳಿ
ಹಂತ ನಾಲ್ಕು: Send OTP ಮೇಲೆ ಕ್ಲಿಕ್‌ ಮಾಡಿ. ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ
ಹಂತ ಐದು: ಆಧಾರ್‌ ಒಟಿಪಿಯನ್ನು ಹಾಕಿ, ಆಧಾರ್‌ ಬಳಸಿ ದೃಢೀಕರಿಸಿ
ಹಂತ ಆರು: submit ಕ್ಲಿಕ್‌ ಮಾಡಿ. ಬಳಿಕ ಪ್ರಮಾಣ್‌ ಐಡಿಯು ಜೆನರೆಟ್‌ ಮಾಡಿ

 ಆನ್‌ಲೈನ್‌ನಲ್ಲಿ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಆನ್‌ಲೈನ್‌ನಲ್ಲಿ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಕ್ಲೈಂಟ್ ಸಾಫ್ಟ್‌ವೇರ್‌ಗೆ ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ / ಐರಿಸ್ ಸ್ಕ್ಯಾನರ್ ಸಾಧನದ ಅಗತ್ಯವಿದೆ. ಈ ಬಗ್ಗೆ ನಿಮಗೆ ಮಾಹಿತಿ ಬೇಕಾದಲ್ಲಿ jeevanpramaan@gov.in ಅನ್ನು ಸಂಪರ್ಕಿಸಬಹುದು.

ಹಂತ ಒಂದು: ಪ್ರಮಾಣ್‌ ಐಡಿ ಹಾಗೂ ಒಟಿಪಿ ಬಳಸಿಕೊಂಡು ಜೀವನ ಪ್ರಮಾಣ್‌ ಆಪ್‌ಗೆ ಲಾಗ್‌ ಇನ್‌ ಆಗಿ
ಹಂತ ಎರಡು: Generate Jeevan Pramaan ಆಯ್ಕೆಯನ್ನು ಒತ್ತಿ ಹಾಗೂ ಆಧಾರ್‌ ನಂಬರ್‌, ಮೊಬೈಲ್‌ ನಂಬರ್‌ ಅನ್ನು ನಮೂದಿಸಿ
ಹಂತ ಮೂರು: generate OTP ಮೇಲೆ ಕ್ಲಿಕ್‌ ಮಾಡಿ
ಹಂತ ನಾಲ್ಕು: ಒಟಿಪಿ ಬಂದ ಮೇಲೆ ಒಟಿಪಿಯನ್ನು ಹಾಕಿ
ಹಂತ ಐದು: ಪಿಪಿಒ ಸಂಖ್ಯೆಯನ್ನು, ಹೆಸರು, ಪಿಡಿಎ ಹೆಸರನ್ನು ಉಲ್ಲೇಖ ಮಾಡಿ
ಹಂತ ಆರು: ಫಿಂಗರ್‌ ಪ್ರಿಂಟ್‌ ಅನ್ನು ಹಾಗೂ ಕಣ್ಣನ್ನು ಸ್ಕ್ಯಾನ್‌ ಮಾಡಿ, ಆಧಾರ್‌ ಬಳಸಿ ದೃಢೀಕರಿಸಿ

ಈ ನಂತರ ಜೀವನ ಪ್ರಮಾಣ ಪತ್ರ ನಿಮಗೆ ದೊರೆಯಲಿದೆ. ದೃಢೀಕರಣ ಸಂದೇಶವು ನಿಮ್ಮ ಪಿಂಚಣಿದಾರರ ಮೊಬೈಲ್‌ ಸಂಖ್ಯೆಗೆ ಬರಲಿದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+