ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ..? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ..ಹೌದು, ಇತ್ತೀಚಿನ ದಿನಗಳಲ್ಲಿ ಜನರು ಡೆಬಿಟ್ ಕಾರ್ಡ್‌ಗಿಂತ ಅಧಿಕವಾಗಿ ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಬಳಕೆಯನ್ನು ಮಾಡಿಕೊಳ್ಳುತ್ತಾರೆ.ಯಾವುದೇ ವಸ್ತುವನ್ನು ಖರೀದಿ ಮಾಡಬೇಕೆಂದರೆ ಅತಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳವುದು ಕ್ರೆಡಿಟ್ ಕಾರ್ಡ್. ನಂತರ ಕ್ರೆಡಿಟ್ ಕಾರ್ಡ್ ಮರುಪಾವತಿಗಳನ್ನುಇಎಂಐ ಮೂಲಕ ಪಾವತಿ ಮಾಡುತ್ತಾರೆ. ಇನ್ನೂ ಕೆಲವರು ಕ್ರೆಡಿಟ್ ಮಿತಿ ಹೆಚ್ಚು ಇರಬೇಕು ಎಮದು ಬಯಸುತ್ತಾರೆ. ನಿಮ್ಮಗೂ ಕೂಡ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಿಕೊಳ್ಳವುದು ಹೇಗೆ ಎಂಬ ಪ್ರಶ್ನೆಮೂಡುತ್ತದೆ. ನಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವುದರಿಂದ ಆರ್ಥಿಕವಾಗಿ ಅನುಕೂಲವಾಗಬಹುದು ಆದರೆ ಅಷ್ಟೇ ತೊಂದರೆಗಳನ್ನು ಕೂಡ ಅನುಭವಿಸಬೇಕಾಗುತ್ತದೆ. ನಾವು ಯಾವುದೇ ಕ್ರಿಡಿಟ್ ಮಿತಿಯನ್ನು ಹೆಚ್ಚಳ ಮಾಡಿಕೊಂಡರು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳವುದು ಮುಖ್ಯ.

ಕ್ರೆಡಿಟ್ ಮಿತಿ ಹೆಚ್ಚಳದಿಂದ ಏನೆಲ್ಲಾ ಅನುಕೂಲಗಳು..?
ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಇಂತಿಷ್ಷೇ ಹಣವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.ಆದರೆ ಕೆಲವರು ತಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ಬಯಸುತ್ತಾರೆ. ಇದರಿಂದ ದೊಡ್ಡ ಮೊತ್ತದ ವಸ್ತುಗಲನ್ನು ಖರೀದಿ ಮಾಡಲು ಹಣ ಸಿಗುತ್ತದೆ. ಇದರ ಮೂಲಕ ತುರ್ತು ವೆಚ್ಚಗಳನ್ನು ಪೂರೈಸಲು ಅಥವಾ ಲಭ್ಯವಿರುವ ಉತ್ತಮ ಆಫರ್‌ಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಕ್ರೆಡಿಟ್ ಮಿತಿ ಹೆಚ್ಚಳ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಏಕೆಂದರೆ, ಇದು ಅನಗತ್ಯ ಖರ್ಚು ಮತ್ತು ಸಾಲದ ಸಂಕಷ್ಟಕ್ಕೆ ನಿಮ್ಮನ್ನು ತಲುತ್ತದೆ.
ಕ್ರೆಡಿಟ್ ಬಳಕೆಯ ಅನುಪಾತದಲ್ಲಿ ಇಳಿಕೆ: ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವುದರಿಂದ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತ ಕಡಿಮೆಯಾಗುತ್ತದೆ. ಇದು ನಿಮ್ಮ ಸಿವಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಹಣಕಾಸಿನ ನೆರವು: ಕ್ರೆಡಿಟ್ ಮಿತಿ ಹೆಚ್ಚಳವು ತುರ್ತು ಪರಿಸ್ಥಿತಿಗಳು, ಪ್ರಯಾಣ ಅಥವಾ ದೊಡ್ಡ ಖರೀದಿಗಳ ಸಂದರ್ಭದಲ್ಲಿ ನಿಮಗೆ ಹಣಕಾಸಿನ ನೆರವು ಅನ್ನು ನೀಡುತ್ತದೆ
ಉತ್ತಮ ಕ್ರೆಡಿಟ್ ಪ್ರೊಫೈಲ್: ಉತ್ತಮ ಕ್ರೆಡಿಟ್ ಹೋಂದಿದ್ದರೆ ನಿಮ್ಮಗೆ ಗೃಹ ಸಾಲ ಅಥವಾ ವೈಯಕ್ತಿಕ ಸಾಲವನ್ನು ಪಡೆಯಲು ಸಹಾಯಕವಾಗುತ್ತದೆ. ನಿಮ್ಮಗೆ ಯಾವುದೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ.
ಹೆಚ್ಚಿನ ಆಫರ್ ಮತ್ತು ಕ್ಯಾಶ್‌ಬ್ಯಾಕ್: ಕ್ರೆಡಿಟ್ ಕಾರ್ಡ್ ಕಂಪನಿಗಳು ಸಾಮಾನ್ಯವಾಗಿ ಪ್ರೀಮಿಯಂ ರಿವಾರ್ಡ್ ಪ್ರೋಗ್ರಾಂಗಳು ಮತ್ತು ಕ್ಯಾಶ್‌ಬ್ಯಾಕ್‌ನಂತಹ ಪ್ರಯೋಜನಗಳನ್ನು ನೀಡುತ್ತವೆ. ಇವುಗಳನ್ನು ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಮೂಲಕ ಪಡೆಯಬಹುದು.
ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಮೊದಲು ಈ ವಿಷಯಗಳನ್ನು ಗಮನದಲ್ಲಿಟ್ಟಿಕೊಳ್ಳಿ
ನಿಮ್ಮ ಬಳಿ ಈಗಾಗಲೇ ಇರುವ ಕ್ರೆಡಿಟ್ ಮಿತಿ, ಸರಾಸರಿ ಮಾಸಿಕ ಖರ್ಚು ಮತ್ತು ಕ್ರೆಡಿಟ್ ಬಳಕೆಯ ಅನುಪಾತದ ಬಗ್ಗೆ ತಿಳಿದಿರಬೇಕು. ಈ ಮಾಹಿತಿಯನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಹೇಳಿಕೆ, ಮೊಬೈಲ್ ಅಪ್ಲಿಕೇಶನ್ ಅಥವಾ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಇದು ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳವುದು ತುಂಬಾನೇ ಮುಖ್ಯ.
ಕ್ರೆಡಿಟ್ ಮಿತಿ ಹೆಚ್ಚಳಕ್ಕೆ ಯಾವಾಗ ಅರ್ಜಿ ಸಲ್ಲಿಸುವುದು..?
ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ಕನಿಷ್ಠ 6 ರಿಂದ 12 ತಿಂಗಳುಗಳವರೆಗೆ ಉತ್ತಮ ಪಾವತಿ ಹಿಸ್ಟರಿಯನ್ನು ಕಾಪಾಡಿಕೋಂಡು ಬರವುದು ತುಂಬಾನೇ ಮುಖ್ಯ. ತದ ನಂತರವೇ ನೀವು ಬ್ಯಾಂಕಿಗೆ ಕ್ರೆಡಿಟ್ ಮಿತಿಯ ವಿನಂತಿಗೆ ಅರ್ಜಿ ಸಲ್ಲಿಸಬಹುದು.
ಕ್ರೆಡಿಟ್ ಮಿತಿ ಹೆಚ್ಚಳಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು, ನೀವು ಮೊಬೈಲ್ ಅಪ್ಲಿಕೇಶನ್, ಆನ್‌ಲೈನ್ ಬ್ಯಾಂಕಿಂಗ್ ಅಥವಾ ಫೋನ್ ಕರೆಯ ಮೂಲಕ ವಿನಂತಿಯನ್ನು ಕಳುಹಿಸಬಹುದು. ಕ್ರೆಡಿಟ್ ಮಿತಿ ಹೆಚ್ಚಳಕ್ಕೆ ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್ ಮತ್ತು ಪಾವತಿ ಇತಿಹಾಸವನ್ನು ಆಧರಿಸಿ ಬ್ಯಾಂಕುಗಳು ನಿರ್ಧಾರ ತೆಗೆದುಕೊಳ್ಳತ್ತದೆ.


Click it and Unblock the Notifications