ಆಧಾರ್ ಪ್ರಸ್ತುತ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಪ್ರಮುಖವಾಗಿ ನಾವು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಎಲ್ಲ ಕಾರ್ಯಗಳಿಗೆ ಮುಖ್ಯವಾಗಿದೆ.
ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರಿಗೂ ಆಧಾರ್ ಕಾರ್ಡ್ ಮುಖ್ಯವಾಗಿದೆ. ಆಧಾರ್ ಕಾರ್ಡ್‌ನಲ್ಲಿ ನಮ್ಮ ವೈಯಕ್ತಿಕ ದಾಖಲೆಗಳು ಇರುತ್ತದೆ. ಫಿಂಗರ್‌ಪ್ರಿಂಟ್ಸ್, ಐರಿಸ್ ಸ್ಕ್ಯಾನ್, ಫೋಟೋ ಸೇರಿದಂತೆ ಹಲವಾರು ವೈಯಕ್ತಿಕ ಮಾಹಿತಿಗಳು ಇರುತ್ತದೆ. ಪ್ರಸ್ತುತ ಕಾರ್ಡ್ ಅನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆ. ಯಾಕೆಂದರೆ ಕಾರ್ಡ್‌ನಲ್ಲಿನ ಬಯೋಮೆಟ್ರಿಕ್ ಡೇಟಾ ಇರುತ್ತದೆ.
ಹ್ಯಾಕರ್‌ಗಳು, ವಂಚಕರು ಬಯೋಮೆಟ್ರಿಕ್ ಡೇಟಾವನ್ನು ಕದಿಯುತ್ತಾರೆ. ಇದರಿಂದಾಗಿ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ಸುರಕ್ಷಿತ ವಿಧಾನವನ್ನು ಆಯ್ಕೆ ಮಾಡಿದೆ. ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವುದು ಹೇಗೆ, ಅನ್‌ಲಾಕ್ ಮಾಡುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ...
ಬಯೋಮೆಟ್ರಿಕ್ ಲಾಕ್ ಮಾಡುವುದೆಂದರೇನು?
ಬಯೋಮೆಟ್ರಿಕ್ ಲಾಕಿಂಗ್ ಅಥವಾ ಅನ್‌ಲಾಕಿಂಗ್ ಎಂದರೆ ಆಧಾರ್ ಕಾರ್ಡ್ ಬಳಕೆದಾರರಿಗೆ ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು ಹಾಗೂ ಅನ್‌ಲಾಕ್ ಮಾಡಲು ನೀಡುವ ಅವಕಾಶವಾಗಿದೆ. ಇದರಿಂದಾಗಿ ಆಧಾರ್ ಕಾರ್ಡ್‌ದಾರರ ಬಯೋಮೆಟ್ರಿಕ್ ಡೇಟಾಕ್ಕೆ ಸುರಕ್ಷತೆ ಲಭ್ಯವಾಗಲಿದೆ.
ಯಾರು, ಹೇಗೆ ಬಯೋಮೆಟ್ರಿಕ್ ಡೇಟಾ ಲಾಕ್ ಮಾಡಬಹುದು?
ಆಧಾರ್ ಕಾರ್ಡ್ ಅನ್ನು ಹೊಂದಿರುವ ಯಾವುದೇ ವ್ಯಕ್ತಿಯಾದರೂ ಈ ಸೇವೆಯ ಪ್ರಯೋಜನವನ್ನು ಪಡೆಯಬಹುದು. ಈ ಫೀಚರ್ ಆಧಾರ್ ಕಾರ್ಡ್‌ದಾರರಿಗೆ ಬಯೋಮೆಟ್ರಿಕ್ ಡೇಟಾವನ್ನು ರಕ್ಷಣೆ ಮಾಡಲು ಅವಕಾಶ ನೀಡುತ್ತದೆ. ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಿದ ಬಳಿಕ ಯಾವುದೇ ವ್ಯಕ್ತಿ ಕಾರ್ಡ್ ಮಾಹಿತಿ ಪಡೆಯಲು ನೋಡಿದರೆ, ಎರರ್ ಕೋಡ್ 330 ಬರಲಿದೆ.
ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ?
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ My Aadhaar ಮೇಲೆ ಕ್ಲಿಕ್ ಮಾಡಿ, ಬಳಿಕ Lock Biometrics ಮೇಲೆ ಕ್ಲಿಕ್ ಮಾಡಿ
ಹಂತ 3: ಬಾಕ್ಸ್‌ನಲ್ಲಿ ಚೆಕ್ ಮಾಡಿ, Lock/Unlock Biometrics ಮೇಲೆ ಕ್ಲಿಕ್ ಮಾಡಿ
ಹಂತ 4: 12 ಡಿಜಿಟ್‌ನ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ಅನ್ನು ಉಲ್ಲೇಖಿಸಿ
ಹಂತ 5: Send OTP ಮೇಲೆ ಕ್ಲಿಕ್ ಮಾಡಿ, ಒಟಿಪಿಯನ್ನು ಉಲ್ಲೇಖಿಸಿ
ಹಂತ 6: ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ Confirm ಒತ್ತಿದರೆ ಡೇಟಾ ಲಾಕ್ ಆಗಲಿದೆ.
ಬಯೋಮೆಟ್ರಿಕ್ ಡೇಟಾ ಅನ್‌ಲಾಕ್ ಮಾಡುವುದು ಹೇಗೆ?
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ
ಹಂತ 2: My Aadhaar ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Unlock Biometrics ಅನ್ನು ಕ್ಲಿಕ್ ಮಾಡಿ
ಹಂತ 3: ಬಾಕ್ಸ್‌ನಲ್ಲಿ ಚೆಕ್ ಮಾಡಿ, 'Unlock Biometrics' ಆಯ್ಕೆ ಮಾಡಿ
ಹಂತ 4: ನಿಮ್ಮ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ, ಕ್ಯಾಪ್ಚಾ ಕೋಡ್ ಅನ್ನು ಉಲ್ಲೇಖಿಸಿ
ಹಂತ 5: 'Get OTP' ಆಯ್ಕೆ ಮಾಡಿ, ಅದನ್ನು ನಮೂದಿಸಿ
ಹಂತ 6: ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ Confirm ಒತ್ತಿದರೆ ಅನ್‌ಲಾಕ್ ಆಗಲಿದೆ.
ಆದರೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್‌ನಲ್ಲಿ ರಿಜಿಸ್ಟಾರ್ ಆಗಿರುವುದು ಮುಖ್ಯವಾಗಿದೆ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ರಿಜಿಸ್ಟಾರ್ ಆಗಿಲ್ಲವಾದರೆ ರಿಜಿಸ್ಟಾರ್ ಮಾಡಿಕೊಳ್ಳಿ, ಅಥವಾ ಆಧಾರ್ ಅಪ್‌ಡೇಟ್ ಮಾಡಿಕೊಳ್ಳಿ.


Click it and Unblock the Notifications