ಭಾರತದಲ್ಲಿ ಪ್ರಮುಖ ದಾಖಲೆಗಳ ಪೈಕಿ ಆಧಾರ್ ಒಂದಾಗಿದೆ. ನಮ್ಮ ಎಲ್ಲ ಕಾರ್ಯಗಳಿಗೂ ಆಧಾರ್ ಈಗ ಕಡ್ಡಾಯ ಮಾಡಲಾಗುತ್ತಿದೆ. ಆಧಾರ್ ಎಷ್ಟು ಪ್ರಮುಖ ದಾಖಲೆಯಾಗಿದೆ ಎಂದರೆ ಪ್ಯಾನ್ ಸೇರಿದಂತೆ ನಮ್ಮ ಇತರೆ ದಾಖಲೆಗಳಿಗೂ ಆಧಾರ್ ಲಿಂಕ್ ಮಾಡಬೇಕಾಗಿದೆ. ಹಾಗಿರುವಾಗ ಆಧಾರ್ ಅನ್ನು ನಾವು ಸುರಕ್ಷಿತಗೊಳಿಸುವುದು ಅತೀ ಮುಖ್ಯವಾಗಿದೆ.
ಆಧಾರ್ ಅನ್ನು ಸಾಮಾನ್ಯವಾಗಿ ನಾವು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಬಳಕೆ ಮಾಡುತ್ತೇವೆ. ಆದರೆ ಆಧಾರ್ ಮಾಹಿತಿಯನ್ನು ಕದಿಯುವ ಪ್ರಯತ್ನವನ್ನು ಸೈಬರ್ ವಂಚಕರು ಮಾಡುತ್ತಾ ಬರುತ್ತಿದ್ದಾರೆ. ಆದ್ದರಿಂದ ನಮ್ಮ ಆಧಾರ್ ಅನ್ನು ಸುರಕ್ಷಿತವಾಗಿರಿಸಲು ಯುಐಡಿಎಐ ಆಧಾರ್ ಸೇವೆ ಲಾಕ್ ಮತ್ತು ಅನ್‌ಲಾಕ್ ಮಾಡುವ ಅವಕಾಶವನ್ನು ನೀಡುತ್ತದೆ.

ನಾವು ಆನ್‌ಲೈನ್‌ನಲ್ಲಿಯೇ ಆಧಾರ್ ಕಾರ್ಡ್‌ನ ಸೇವೆಯನ್ನು ಲಾಕ್ ಮಾಡಬಹುದಾಗಿದೆ. ಹಾಗೆಯೆ ಆನ್‌ಲೈನ್ ಮೂಲಕವೇ ಆಧಾರ್ ಕಾರ್ಡ್ ಸೇವೆ ಅನ್‌ಲಾಕ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿರುತ್ತದೆ. ಆಧಾರ್ ಕಾರ್ಡ್ ಲಾಕ್ ಅನ್‌ಲಾಕ್ ಮಾಡುವುದು ಹೇಗೆ ಎಂದು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ಆಧಾರ್ ಕಾರ್ಡ್ ಲಾಕ್- ಅನ್‌ಲಾಕ್ ಎಂದರೇನು?
ಬಳಕೆದಾರರ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಜನರಿಗೆ ಆಧಾರ್ ಮೇಲಿನ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಯುಐಡಿಎಐ ಯಾಂತ್ರಿಕ ವ್ಯವಸ್ಥೆಯನ್ನು ಆರಂಭ ಮಾಡಿದೆ. ಯುಐಡಿಎಐ ವೆಬ್‌ಸೈಟ್ (www.myaadhaar.uidai.gov.in) ಅಥವಾ ಮೈಆಧಾರ್ ಅಪ್ಲಿಕೇಶನ್ ಮೂಲಕ ಆಧಾರ್ ಅನ್ನು ಸುಲಭವಾಗಿ ಲಾಕ್ ಮಾಡಬಹುದು.
ಲಾಕ್ ಮಾಡಿದ ಬಳಿಕ ಬಯೋಮೆಟ್ರಿಕ್ಸ್, ಡೆಮೊಗ್ರಾಫಿಕ್ಸ್ ಮತ್ತು ಒಟಿಪಿ ವಿಧಾನಗಳಿಗಾಗಿ ಯುಐಡಿ ಟೋಕನ್, ವಿಐಡಿ ಅನ್ನು ಬಳಸಿಕೊಂಡು ಜನರು ಯಾವುದೇ ರೀತಿಯ ದೃಢೀಕರಣವನ್ನು ಮಾಡಲು ಸಾಧ್ಯವಾಗುವುದಿಲ್ಲ. ಯುಐಡಿ ಅನ್‌ಲಾಕ್ ಮಾಡಲು ಇತ್ತೀಚಿನ ವಿಐಡಿ, ಯುಐಡಿಎಐ ವೆಬ್‌ಸೈಟ್ ಅಥವಾ ಮೈಆಧಾರ್ ಅಪ್ಲಿಕೇಶನ್ ಅನ್ನು ಬಳಸಬಹುದು. ಆಧಾರ್ ಅನ್‌ಲಾಕ್ ಮಾಡಿದ ನಂತರ, ಮಾತ್ರ ದೃಢೀಕರಣ ಮಾಡಲಯ ಸಾಧ್ಯವಾಗುತ್ತದೆ.
ಆಧಾರ್ ಸೇವೆ ಲಾಕ್ ಮಾಡುವುದು ಹೇಗೆ?
ಎಸ್‌ಎಂಎಸ್ ಮೂಲಕ: ಆಧಾರ್‌ನ ನಾಲ್ಕು ಅಥವಾ ಎಂಟು ಅಂಕೆಗಳನ್ನು GVID ಸ್ಫೇಸ್ ಕೊಟ್ಟು ನಮೂದಿಸಿ 1947 ಗೆ ಕಳುಹಿಸಿ. ಉದಾಹರಣೆಗೆ GVID 1234 ಎಂದು ಟೈಪ್ ಮಾಡಿ 1947 ಗೆ ಕಳುಹಿಸುವುದು.
ವೆಬ್‌ಸೈಟ್ ಮೂಲಕ ಲಾಕ್: ಹಂತ 1: ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ (https://resident.uidai.gov.in/aadhaar-lockunlock)
ಹಂತ 2: ಮೈ ಆಧಾರ್ ಅಡಿಯಲ್ಲಿ ಲಾಕ್ ಆಧಾರ್ ಅನ್ನು ಕ್ಲಿಕ್ ಮಾಡಿ.
ಹಂತ 3: ಯುಐಡಿ ಲಾಕ್ ಆಯ್ಕೆಯನ್ನು ಮಾಡಿ
ಹಂತ 4: ಆಧಾರ್ ಸಂಖ್ಯೆಯನ್ನು, ಹೆಸರು ಮೊದಲಾದವುಗಳನ್ನು ನಮೂದಿಸಿ.
ಹಂತ 5: Security Code ಅನ್ನು ಉಲ್ಲೇಖಿಸಿ
ಹಂತ 6: ಒಟಿಪಿ ಮೇಲೆ ಕ್ಲಿಕ್ ಮಾಡಿ
ಹಂತ 7: ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ Submit ಕ್ಲಿಕ್ ಮಾಡಿ
ಹಂತ 8: ನಿಮ್ಮ ಆಧಾರ್ ಸೇವೆ ಯಶಸ್ವಿಯಾಗಿ ಲಾಕ್ ಆಗುತ್ತದೆ.
ಆಧಾರ್ ಸೇವೆಯನ್ನು ಅನ್‌ಲಾಕ್ ಮಾಡುವುದು ಹೇಗೆ?
ಎಸ್‌ಎಂಎಸ್ ಮೂಲಕ: ಆಧಾರ್‌ನ ನಾಲ್ಕು ಅಥವಾ ಎಂಟು ಅಂಕೆಗಳನ್ನು RVID ಸ್ಫೇಸ್ ಕೊಟ್ಟು ನಮೂದಿಸಿ 1947 ಗೆ ಕಳುಹಿಸಿ. ಉದಾಹರಣೆಗೆ RVID 1234 ಎಂದು ಟೈಪ್ ಮಾಡಿ 1947 ಗೆ ಕಳುಹಿಸುವುದು.
ವೆಬ್‌ಸೈಟ್ ಮೂಲಕ: ಹಂತ 1: ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ (https://resident.uidai.gov.in/aadhaar-lockunlock)
ಹಂತ 2: Unlock ಅನ್ನು ಆಯ್ಕೆ ಮಾಡಿ
ಹಂತ 3: ನೂತನ ವಿಐಡಿ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ
ಹಂತ 4: Send OTP ಮೇಲೆ ಕ್ಲಿಕ್ ಮಾಡಿ
ಹಂತ 5: ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ Submit ಕ್ಲಿಕ್ ಮಾಡಿ
ಹಂತ 6: ನಿಮ್ಮ ಆಧಾರ್ ಸೇವೆ ಯಶಸ್ವಿಯಾಗಿ ಅನ್‌ಲಾಕ್ ಆಗುತ್ತದೆ.
ಇನ್ನು ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಮೈಆಧಾರ್ ಆಪ್ ಮೂಲಕವೈ ಆಧಾರ್ ಕಾರ್ಡ್ ಸೇವೆಯನ್ನು ಲಾಕ್ ಮತ್ತು ಅನ್‌ಲಾಕ್ ಮಾಡಿಕೊಳ್ಳಬಹುದಾಗಿದೆ.
ಆಧಾರ್ ಲಾಕ್ ಮಾಡಿದ ಬಳಿಕ ವಿಐಡಿ ಪಡೆಯುವುದು ಹೇಗೆ?
ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವಾಗಲೇ ವಿಐಡಿ ಮಾಹಿತಿ ಲಭ್ಯವಾಗುತ್ತದೆ. ಆ ಐಡಿಯನ್ನು ಬಳಕೆದಾರರು ಮರೆತಿದ್ದದರೆ, ಎಸ್‌ಎಂಎಸ್ ಸೇವೆ ಮೂಲಕ ಮತ್ತೆ ಪಡೆದುಕೊಳ್ಳಬಹುದಾಗಿದೆ. RVID ಸ್ಪೇಸ್ ಕೊಟ್ಟು 4 ಅಥವಾ 8 ಅಂಕೆಯ ಆಧಾರ್ ಮಾಹಿತಿಯನ್ನು ನಮೂದಿಸಬೇಕು. ಆದಾದ ಬಳಿಕ ಅದನ್ನು 1947ಕ್ಕೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. ಇದನ್ನು ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಲ್ಲೇ ಮಾಡಬೇಕಾಗುತ್ತದೆ.


Click it and Unblock the Notifications