ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಯಾವುದೇ ಇತರ ಯುಪಿಐ ಸಕ್ರಿಯವಾದ ಯಾವುದೇ ಪಾವತಿ ಆಪ್‌ನಲ್ಲಿ ಪಾವತಿಯನ್ನು ನಾವು ಮಾಡುವಾಗ ನಮಗೆ ಇಂಟರ್‌ನೆಟ್ ಅತ್ಯಗತ್ಯ. ಆದರೆ ಆರ್‌ಬಿಐ ಫೀಚರ್ ಫೋನ್ ಇರುವವರಿಗೂ ಸಹಕಾರಿ ಆಗುವಂತೆ ಆಫ್‌ಲೈನ್ ಯುಪಿಐ ಬಳಕೆಯನ್ನು ಜಾರಿಗೆ ತಂದಿದೆ.
ಇನ್ನು ನೀವು ಇಂಟರ್‌ನೆಟ್ ಇರುವ ಮೊಬೈಲ್ ಅನ್ನು ಹೊಂದಿದ್ದರೂ ಕೂಡಾ ಆಫ್‌ಲೈನ್ ಮೂಲಕ ಯುಪಿಐ ಪಾವತಿ ಮಾಡಬಹುದು. ನೀವು ಅದಕ್ಕಾಗಿ *99# ಅನ್ನು ಡಯಲ್ ಮಾಡಬೇಕಾಗುತ್ತದೆ. ಇದು ಯುಎಸ್‌ಎಸ್‌ಡಿ (ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ) ಆಗಿದೆ.
ಯುಎಸ್‌ಎಸ್‌ಡಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆಧರಿಸಿದೆ. ನೀವು ಆಫ್‌ಲೈನ್ ಮೂಲಕ ಪಾವತಿ ಮಾಡಲು ಇದು ಸಹಾಯಕವಾಗಿದೆ. ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದೆ ಖಾತೆಯ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು.

ಆಫ್‌ಲೈನ್ ಯುಪಿಐ ಪಾವತಿ ಸೆಟ್‌ಅಪ್ ಹೇಗೆ?
* ಯುಪಿಐ ನೋಂದಣಿಯಲ್ಲಿ ನೀವು ಬಳಸುತ್ತಿರುವ ಮತ್ತು ಬ್ಯಾಂಕ್‌ನೊಂದಿಗೆ ಲಿಂಕ್ ಮಾಡಲಾದ ಅದೇ ಸಂಖ್ಯೆಯಿಂದ ನಿಮ್ಮ ಹ್ಯಾಂಡ್‌ಸೆಟ್‌ನಿಂದ (ಸ್ಮಾರ್ಟ್‌ಫೋನ್ ಅಥವಾ ಫೀಚರ್ ಫೋನ್) *99# ಅನ್ನು ಡಯಲ್ ಮಾಡಿ.
* ಬಯಸಿದ ಭಾಷೆಯನ್ನು ಆರಿಸಿ
* ನಂತರ ನಿಮ್ಮ ಬ್ಯಾಂಕ್ ಹೆಸರನ್ನು ನಮೂದಿಸಿ. ನಿಮ್ಮ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಪಟ್ಟಿ ಬರಲಿದೆ, ಇಲ್ಲಿ ಆಯ್ಕೆ ಮಾಡಿ
* ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ 6 ಅಂಕೆಗಳನ್ನು ನಮೂದಿಸಿ
* ನೀವು ಕಾರ್ಡ್‌ನ ಮುಕ್ತಾಯ ದಿನಾಂಕವನ್ನು ನಮೂದಿಸಿದರೆ ಇಂಟರ್ನೆಟ್ ಸಂಪರ್ಕವಿಲ್ಲದೆಯೇ ನೀವು ಸುಲಭವಾಗಿ ಯುಪಿಐ ಪಾವತಿ ಮಾಡಬಹುದು.
ಆಫ್‌ಲೈನ್ ಪಾವತಿ ಮಾಡುವುದು ಹೇಗೆ?
* ನಿಮ್ಮ ಫೋನ್‌ನಲ್ಲಿ *99# ಅನ್ನು ಡಯಲ್ ಮಾಡಿ
* ಈಗ ಹಣವನ್ನು ಕಳುಹಿಸಲು 1 ಅನ್ನು ಒತ್ತಿ
* ಈಗ ನೀವು ಹಣವನ್ನು ಕಳುಹಿಸಲು ಬಯಸುವ ವ್ಯಕ್ತಿಯ ಯುಪಿಐ ಐಡಿ/ಫೋನ್ ಸಂಖ್ಯೆ/ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ
* ವರ್ಗಾಯಿಸಲು ಬಳಸುವ ಮೊತ್ತ ಉಲ್ಲೇಖ ಮಾಡಿ
* ಯುಪಿಐ ಪಿನ್ ಅನ್ನು ನಮೂದಿಸಿ
* ಈ ಪ್ರಕ್ರಿಯೆ ಮುಗಿದ ನಂತರ, ನಿಮ್ಮ ಪಾವತಿಯನ್ನು ಯಶಸ್ವಿಯಾಗಿ ಮಾಡಲಾಗುತ್ತದೆ

ನೀವು *99# ಸೇವೆ ಪಡೆದಾಗ ಪ್ರತಿ ವಹಿವಾಟಿಗೆ ನಿಮಗೆ ಸುಮಾರು ರೂ.0.50 ಚಾರ್ಜ್ ಆಗಲಿದೆ. ಈ ಸೇವೆಯಲ್ಲಿ 5,000 ರೂಪಾಯಿವರೆಗೆ ಗರಿಷ್ಠ ವಹಿವಾಟು ಮಾಡಬಹುದಾಗಿದೆ.


Click it and Unblock the Notifications