For Quick Alerts
ALLOW NOTIFICATIONS  
For Daily Alerts

ಯಶಸ್ವಿ ಸ್ಟಾರ್ಟ್‌ಅಪ್ ಆರಂಭ ಮತ್ತು ಬೆಳವಣಿಗೆ ಹೇಗೆ?

|

ಪ್ರಸ್ತುತದ ಸನ್ನಿವೇಶದಲ್ಲಿ ಹೆಚ್ಚುತ್ತಿರುವ ಉದ್ಯಮಶೀಲತೆಯು, ಸರ್ಕಾರದ ನೀತಿಗಳು ಮತ್ತು ಕಾರ್ಪೊರೇಟ್‍ಗಳ ವೇಗವಾಗಿ ಅಭಿವೃದ್ಧಿಯು ವೇಗವಾಗಿ ಸ್ಟಾರ್ಟ್‌ಅಪ್ ಆರಂಭಿಸಲು ಸಾಧ್ಯವಿಲ್ಲದಂತಾಗಿದೆ. ಆದಾಗ್ಯೂ, ಸ್ಟಾರ್ಟಪ್‌ಗಳಲ್ಲಿನ ವೈಫಲ್ಯದ ಪ್ರಮಾಣವು ಶೇ.90 ರಷ್ಟು ಹೆಚ್ಚಾಗಿದೆ.

 

ಮೊದಲ 18 ತಿಂಗಳಲ್ಲಿ ಶೇ.80 ರಷ್ಟು ಸ್ಟಾರ್ಟ್‌ಅಪ್‌ಗಳು ಕೊನೆಗೊಂಡಿವೆ. ಆರಂಭಿಕವಾದ ಪರಿಸರ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ದಿ ಸ್ಟಾರ್ಟಪ್ ಲಾಂಚ್' ಎಂಬ ಪುಸ್ತಕವು ಉತ್ತಮ ಮತ್ತು ಹೂಡಿಕೆ ಮಾಡಬಹುದಾದ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ರಚನಾತ್ಮಕವಾದ ಸಲಹೆಗಳನ್ನು ನೀಡುತ್ತದೆ.

ಯಶಸ್ವಿ ಸ್ಟಾರ್ಟ್‌ಅಪ್ ಆರಂಭ ಮತ್ತು ಬೆಳವಣಿಗೆ ಹೇಗೆ?

ಯುವ ಸಮುದಾಯವು ಉದ್ಯೋಗ ಅರಸುವುದರ ಬದಲಿಗೆ ಉದ್ಯೋಗ ನೀಡುವ ಬೆಳವಣಿಗೆಯು ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಪುಸ್ತಕವು ಸರಿಯಾದ ಸಮಯದಲ್ಲಿ ಹೊಸ ಉದ್ಯಮಿಗಳು ಯಶಸ್ವಿಯಾಗಿ ಮುನ್ನಡೆಯಲು ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ.

ಈ ಪುಸ್ತಕದ ಪ್ರಮುಖ ಉದ್ದೇಶ ಸ್ಟಾರ್ಟ್‌ಅಪ್‌ಗಳ ಫಲಿತಾಂಶವನ್ನು ಸುಧಾರಣೆ ಮಾಡುವುದು, ಸಂಸ್ಥಾಪಕರನ್ನು ಸಕ್ರಿಯಗೊಳಿಸುವುದು, ಇನ್‍ಕ್ಯುಬೇಟರ್‍ಗಳು ಮತ್ತು ಹೂಡಿಕೆದಾರರು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಪಡೆಯುವಂತೆ ಮಾಡುವುದಾಗಿದೆ. ಸ್ಟಾರ್ಟ್‌ಅಪ್ ಇಂಡಿಯಾ, ಅಟಲ್ ಇನ್ನೋವೇಶನ್ ಮಿಷನ್ ಮತ್ತು ಆತ್ಮನಿರ್ಭರ್ ಭಾರತ್‌ದಂತಹ ಪರಿಕಲ್ಪನೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಆದ್ಯತೆ ನೀಡುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಪೀಳಿಗೆಯ ಸ್ಥಾಪಕರು ಹೊಸ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಈ ಪುಸ್ತಕವು ಸೂಕ್ತ ಸಮಯದಲ್ಲಿ ಬೆಂಬಲವನ್ನು ನೀಡುತ್ತದೆ.

ಯಶಸ್ವಿ ಸ್ಟಾರ್ಟ್‌ಅಪ್ ಆರಂಭ ಮತ್ತು ಬೆಳವಣಿಗೆ ಹೇಗೆ?

ವಾಧ್ವಾನಿ ವೆಂಚರ್ ಫಾಸ್ಟ್‍ಟ್ರಾಕ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಜಯ್ ಬಾತ್ರ ಅವರು ಮಾತನಾಡಿ, ಕಳೆದ ಒಂದು ದಶಕದಲ್ಲಿ ನಾನು ಸ್ಟಾರ್ಟ್‌ಅಪ್ ಹೂಡಿಕೆದಾರ ಮತ್ತು ಮೆಂಟರ್ ಆಗಿ ಹೊರಹೊಮ್ಮಿದ್ದೇನೆ. ಸ್ಟಾರ್ಟ್‌ಅಪ್ ಆರಂಭಿಸುವ ಮೂಲಭೂತ ವಿಷಯಗಳ ಬಗ್ಗೆ ನನಗೆ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿಯೊಂದು ಸಂದರ್ಭದಲ್ಲಿಯೂ ನಾನು ಪ್ರಶಂಸೆಗಳನ್ನು ಪಡೆಯುತ್ತೇನೆ. ಸ್ಟಾರ್ಟಪ್‌ಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಹಲವಾರು ಪ್ರಕ್ರಿಯೆಗಳು ಇರುತ್ತವೆ. ಸಂಸ್ಥಾಪಕ ತಂಡಗಳು ಪ್ರಾಯೋಗಿಕವಾದ ವಿಧಾನದೊಂದಿಗೆ ಸ್ಪಷ್ಟವಾದ ಗುರಿಗಳೊಂದಿಗೆ ತಮ್ಮ ಆರಂಭ ಮತ್ತು ಬೆಳವಣಿಗೆಯ ಪಯಣವನ್ನು ಯೋಜಿಸಲು ಮತ್ತು ಅದನ್ನು ಟ್ರ್ಯಾಕ್ ಮಾಡಲು ಉತ್ತಮವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸ್ಟಾರ್ಟಪ್‌ಗಳು ಉತ್ಪನ್ನಗಳನ್ನು ಮೀರಿ ಯೋಚಿಸುವುದು ಮತ್ತು ಸಮಗ್ರವಾದ ಅಡಿಪಾಯವನ್ನು ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‍ಎಂಎಂ ಮತ್ತು ಪುಸ್ತಕದ ಪರಿಕಲ್ಪನೆ ನನಗೆ ಮೂಡಿತು'' ಎಂದು ತಿಳಿಸಿದರು.

 

ಸ್ಟಾರ್ಟ್‌ಅಪ್‌ಗಳ ಆರಂಭಕ್ಕೂ ಮುನ್ನ ಯಾವ ರೀತಿಯಾದ ಕಾರ್ಯ ವಿಧಾನಗಳನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಅಜಯ್ ಬಾತ್ರ ತಮ್ಮ ಪುಸ್ತಕದ ರೂಪದಲ್ಲಿ ತಿಳಿಸಿಕೊಟ್ಟಿದ್ದಾರೆ.

Read more about: india startup ಭಾರತ
English summary

How To Start And Grow A Successful Startup

The book outlines how to work out and prepare for a successful startup.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X