ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO)ನಿಂದ ಚಂದಾದಾರರು ತಮ್ಮ ಇಪಿಎಫ್ ಖಾತೆಯಿಂದ ಹಣ ವಿಥ್ ಡ್ರಾ ಮಾಡವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ವಿಥ್ ಡ್ರಾ ಮಾಡಬೇಕು ಅಂದರೆ ಸದಸ್ಯರ ಬ್ಯಾಂಕ್ ಖಾತೆ ಮಾಹಿತಿಯನ್ನು ದಾಖಲೆಗಳಲ್ಲಿ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
ಕೆಲವು ಸಂದರ್ಭಗಳಲ್ಲಿ ಖಾತೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿರುತ್ತಾರೆ. ಆದರೆ ಆ ಮಾಹಿತಿಯನ್ನು ಇಪಿಎಫ್ ಖಾತೆಯಲ್ಲಿ ಬದಲಾವಣೆ ಅಥವಾ ಅಪ್ ಡೇಟ್ ಮಾಡುವುದನ್ನು ಮರೆತು ಬಿಡುತ್ತಾರೆ. ಬ್ಯಾಂಕ್ ಖಾತೆ ಮಾಹಿತಿ ಇಪಿಎಫ್ ಖಾತೆ ತಪ್ಪಾದಲ್ಲಿ ಹಣ ಜಮೆ ಆಗುವುದು ವಿಫಲವಾಗುತ್ತದೆ.
ಇಪಿಎಫ್ ಒ ಪೋರ್ಟಲ್ ನಲ್ಲಿ ಬ್ಯಾಂಕ್ ಮಾಹಿತಿಯ ತಪ್ಪಾದ ಮಾಹಿತಿಯನ್ನು ಚಂದಾದಾರರು ತಿದ್ದುಪಡಿ ಮಾಡಿಕೊಳ್ಳಬಹುದು. ಇಪಿಎಫ್ ಒ ದಾಖಲೆಗಳಲ್ಲಿ ಬ್ಯಾಂಕ್ ಖಾತೆ ಮಾಹಿತಿಯನ್ನು ಅಪ್ ಡೇಟ್ ಮಾಡುವುದಕ್ಕೆ ಹಂತಹಂತವಾದ ಮಾಹಿತಿ ಹೀಗಿದೆ.

ಹಂತ 1. ಯುನಿಫೈಡ್ ಸದಸ್ಯರ ಪೋರ್ಟಲ್ ಗೆ ಭೇಟಿ ನೀಡಿ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿ ಲಾಗ್ ಇನ್ ಆಗಬೇಕು.
ಹಂತ 2. 'Manage' ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 3. ಡ್ರಾಪ್ ಡೌನ್ ಮೆನುವಿನಿಂದ "KYC" ಆಯ್ಕೆ ಮಾಡಿಕೊಳ್ಳಬೇಕು.
ಹಂತ 4. ಬ್ಯಾಂಕ್ ಆಯ್ಕೆ ಮಾಡಿಕೊಂಡು, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು ಐಎಫ್ ಎಸ್ ಸಿ ಕೋಡ್ ನಮೂದಿಸಬೇಕು. 'Save' ಕ್ಲಿಕ್ ಮಾಡಬೇಕು.
ಹಂತ 5. ಒಂದು ಸಲ ಉದ್ಯೋಗದಾತರಿಂದ ಮಂಜೂರಾದ ಮೇಲೆ ಅಪ್ ಡೇಟೆಡ್ ಬ್ಯಾಂಕ್ ಮಾಹಿತಿಯು ಅಪ್ರೂವ್ಡ್ KYC ಸೆಕ್ಷನ್ ನಲ್ಲಿ ಕಾಣಿಸುತ್ತದೆ.
ಚಂದಾದಾರರ ಖಾತೆಗೆ 8.5% ಬಡ್ಡಿ ದರವನ್ನು ಇಪಿಎಫ್ ಒ ಡಿಸೆಂಬರ್ ಕೊನೆಯಿಂದಲೇ ಜಮೆ ಮಾಡಲು ಆರಂಭಿಸಿದೆ ಎಂದು ವರದಿಯಾಗಿದೆ. 2019- 20ರ ಸಾಲಿಗೆ ಇಪಿಎಫ್ ಗೆ 8.5 ಪರ್ಸೆಂಟ್ ಬಡ್ಡಿ ನಿಗದಿ ಮಾಡಲಾಗಿತ್ತು.


Click it and Unblock the Notifications