ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿವರಗಳಲ್ಲಿ ತಪ್ಪುಗಳಿವೆ ಎಂದು ಚಿಂತೆಪಡುತ್ತಿದ್ದೀರಾ..? ಹಾಗಿದ್ದರೆ ನಿಮಗಾಗಿ ಸುದ್ದಿ.. ಹೌದು, ಆಧಾರ್ ನಮ್ಮ ಗುರುತು. ಇಂತಹ ಪ್ರಮುಖ ದಾಖಲೆಯಲ್ಲಿ ತಪ್ಪುಗಳು ಇದ್ದರೆ ಏನು ಮಾಡಬೇಕೆಂದು ಗೊಂದಲವಂತೂ ನಿಮ್ಮಗೆ ಇದ್ದೇ ಇರುತ್ತದೆ. ಇದನ್ನು ನೀವು ಇಷ್ಟೇ ಬಿಡು ಕಡೆಗಣಿಸುವಂತಿಲ್ಲ ಯಾಕೆಂದರೆ ನಿಮ್ಮ ಸಣ್ಣ ತಪ್ಪುಗಳು ಸರ್ಕಾರಿ ಸೌಲಭ್ಯಗಳನ್ನು ಅಥವಾ ಇನ್ನೂವುದೋ ಪ್ರಯೋಜನವನ್ನು ಪಡೆಯುವಾಗ ಪ್ರಯೋಜನಕ್ಕೆಬಾರದಂತೆ ಆಗುತ್ತದೆ.ಆದ್ದರಿಂದ, ನೀವು ಯಾವಾಗಲೂ ನಿಮ್ಮ ಆಧಾರ್‌ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಬೇಕು ಮತ್ತು ಯಾವುದೇ ತಪ್ಪುಗಳಿದ್ದರೆ ಅದನ್ನು ತಕ್ಷಣ ಸರಿಪಡಿಸಬೇಕು. ನಿಮ್ಮ ಹೆಸರು ತಪ್ಪು, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ನಿವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಿಸುವುದು ಡಿಜಿಟಲ್ ಯುಗದಿಂದಲ್ಲಿ ಹಿಂದೆಂದಿಗಿಂತಲೂ ಸುಲಭ ಹಾಗೂ ಸರಳ.ಕುಳಿತಿರುವಂತಹ ಜಾಗದಲ್ಲಿ ಆನ್ಲೈನ್ ಮೂಲಕ ಅಪ್ಡೇಟ್ ಮಾಡಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) 2025 ರಿಂದ, ಆಧಾರ್ ಮಾಹಿತಿಯನ್ನು ನವೀಕರಿಸುವುದು ಹಿಂದೆಂದಿಗಿಂತಲೂ ಸುಲಭವನ್ನಾಗಿ ಮಾಡಿದೆ. ಆಧಾರ್ ಕಾರ್ಡ್‌ನಲ್ಲಿ ಯಾವುದೇ ತಪ್ಪುಗಳು ಕಂಡಬಂದರೂ ಮೊಬೈಲ್ ಮೂಲಕ ಅಥವಾ ನೀವು ಹತ್ತಿರದ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ಅದನ್ನು ಸರಿಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ತಿದ್ದುಪಡಿ ಮಾಡವುದು ಹೇಗೆ..?
- ನೀವು ಮೊದಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ದ ಅಧಿಕೃತ ವೆಬ್‌ಸೈಟ್ ಆದ myAadhaar ಗೆ ಭೇಟಿ ನೀಡಿಬೇಕಾಗುತ್ತದೆ. ತದನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿಬೇಲು
- ನಂತರ ನಿಮ್ಮ ಆಧಾರ್ ಗೆ ನೀಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ ಲಾಗಿನ್ ಮಾಡಬೇಕು.
- ಈಗ ಈ ಸಂಖ್ಯೆಗೆ ಬಂದ OTP ಬಳಸಿ ಲಾಗಿನ್ ಮಾಡಿ.
- ಲಾಗಿನ್ ಆದ ನಂತರ, ಡ್ಯಾಶ್‌ಬೋರ್ಡ್‌ನಲ್ಲಿರುವ 'ವಿಳಾಸ ನವೀಕರಿಸಿ' ಆಯ್ಕೆಗೆ ಹೋಗಿ.
- ಮುಂದಿನ ಪುಟದಲ್ಲಿ, 'ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ' ಬಟನ್ ಕ್ಲಿಕ್ ಮಾಡಿ.
- ನೀಡಿರುವ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿದ ನಂತರ, 'ಆಧಾರ್ ನವೀಕರಿಸುವುದನ್ನು ಮುಂದುವರಿಸಿ' ಆಯ್ಕೆಯನ್ನು ಆರಿಸಿ. ಲಭ್ಯವಿರುವ ಆಯ್ಕೆಗಳಿಂದ, 'ವಿಳಾಸ' ಆಯ್ಕೆಮಾಡಿ ಮತ್ತು 'ಆಧಾರ್ ನವೀಕರಿಸಲು ಮುಂದುವರಿಸಿ' ಮೇಲೆ ಮತ್ತೆ ಕ್ಲಿಕ್ ಮಾಡಿ.
- ನಿಮ್ಮ ಪ್ರಸ್ತುತ ವಿಳಾಸದ ವಿವರಗಳನ್ನು ಇಲ್ಲಿ ಕಾಣಬಹುದು. 'ಕೇರ್ ಆಫ್' ಕ್ಷೇತ್ರ (ಪೋಷಕರು ಅಥವಾ ಪಾಲುದಾರರ ಹೆಸರು), ಹೊಸ ವಿಳಾಸ ಮತ್ತು ಅಂಚೆ ಕಚೇರಿ ಸೇರಿದಂತೆ ನಿಮ್ಮ ನವೀಕರಿಸಿದ ಮಾಹಿತಿಯನ್ನು ಭರ್ತಿ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ. ಈಗ ಡ್ರಾಪ್‌ಡೌನ್ ಪಟ್ಟಿಯಿಂದ ವಿಳಾಸ ಪುರಾವೆ ದಾಖಲೆಗಾಗಿ ಆಯ್ಕೆಯನ್ನು ಆರಿಸಿ ಮತ್ತು ಅದರ ಸ್ಪಷ್ಟ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ, ನಂತರ 'ಮುಂದೆ' ಕ್ಲಿಕ್ ಮಾಡಿ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಎಲ್ಲವನ್ನೂ ಎಚ್ಚರಿಕೆಯಿಂದ ಓದಿ. ನಂತರ, 50 ರೂ. ಶುಲ್ಕವನ್ನು ಪಾವತಿಸಿದ್ದರೆ ನಿಮ್ಮ ವಿಳಾಸದ ಮಾಹಿತಿ ನವೀಕರಣವಾಗುತ್ತದೆ.
ಆಧಾರ್ ಮೊಬೈಲ್ ಸಂಖ್ಯೆಯನ್ನು ಹೇಗೆ ಬದಲಾಯಿಸುವುದು?
- ಮೊದಲು UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಭಾಷೆಯನ್ನು ಆಯ್ಕೆಮಾಡಿ.
- "ನನ್ನ ಆಧಾರ್" ವಿಭಾಗಕ್ಕೆ ಹೋಗಿ, "ಆಧಾರ್ ಪಡೆಯಿರಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು "ಅಪಾಯಿಂಟ್ಮೆಂಟ್ ಬುಕ್ ಮಾಡಿ" ಆಯ್ಕೆಮಾಡಿ.
- ನಂತರ ಹುಡುಕಾಟ ಪಟ್ಟಿಯಲ್ಲಿ ನಿಮ್ಮ ನಗರವನ್ನು ನಮೂದಿಸಿ ಮತ್ತು "ಅಪಾಯಿಂಟ್ಮೆಂಟ್ ಬುಕ್ ಮಾಡುವುದನ್ನು ಮುಂದುವರಿಸಿ" ಬಟನ್ ಒತ್ತಿರಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು OTP ಗಾಗಿ ಬಟನ್ ಒತ್ತಿರಿ.
- ನೀವು ಸ್ವೀಕರಿಸಿದ OTP ಅನ್ನು ಸೂಕ್ತ ಕಾಲಂನಲ್ಲಿ ಟೈಪ್ ಮಾಡಿ ಮತ್ತು ಕ್ಲಿಕ್ ಮಾಡಿ.
- ಈಗ ನಿಮ್ಮ ಆಧಾರ್‌ನಲ್ಲಿರುವ ಮಾಹಿತಿಯ ಪ್ರಕಾರ ಫಾರ್ಮ್ ಅನ್ನು ಭರ್ತಿ ಮಾಡಿ; 12 ಅಂಕಿಯ ಆಧಾರ್ ಸಂಖ್ಯೆ ಪೂರ್ಣ ಹೆಸರು ಹುಟ್ಟಿದ ದಿನಾಂಕ ಅಗತ್ಯವಿರುವ ಸೇವೆ ರಾಜ್ಯ ಮತ್ತು ನಗರ ಆದ್ಯತೆಯ ಆಧಾರ್ ಸೇವಾ ಕೇಂದ್ರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಆಯ್ಕೆಯನ್ನು ಆರಿಸಿ.
- ಈಗ "ಮುಂದೆ" ಕ್ಲಿಕ್ ಮಾಡಿ ಮತ್ತು ಅಪಾಯಿಂಟ್‌ಮೆಂಟ್‌ಗಾಗಿ ನಿಮ್ಮ ಆದ್ಯತೆಯ ದಿನಾಂಕ ಮತ್ತು ಸ್ಲಾಟ್ ಅನ್ನು ಆಯ್ಕೆ ಮಾಡಿ.
- ಒದಗಿಸಲಾದ ಎಲ್ಲಾ ಮಾಹಿತಿಯು ಪರಿಶೀಲಿಸಲ್ಪಟ್ಟಿದ್ದರೆ ಮತ್ತು ಸರಿಯಾಗಿದ್ದರೆ, ನಿಮ್ಮ ಬುಕಿಂಗ್ ಅನ್ನು ಪೂರ್ಣಗೊಳಿಸಲು "ಸಲ್ಲಿಸು" ಬಟನ್ ಅನ್ನು ಕ್ಲಿಕ್ ಮಾಡಿ.
- ಆಯ್ಕೆ ಮಾಡಿದ ದಿನದಂದು, ನಿಮ್ಮ ಅಪಾಯಿಂಟ್‌ಮೆಂಟ್ ವೇಳಾಪಟ್ಟಿಯ ಪ್ರಕಾರ ಆಯ್ದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ. ಇದಕ್ಕಾಗಿ ನೀವು 50 ರೂ. ಹಣವನ್ನು ಕಟ್ಟಬೇಕಾಗುತ್ತದೆ.


Click it and Unblock the Notifications