ಆಧಾರ್ ಕಾರ್ಡ್ ಎನ್ನುವುದು ನಮ್ಮ ದೇಶದ ಎಲ್ಲ ನಾಗರಿಕರಿಗೂ ಭಾರತ ಸರ್ಕಾರ ನೀಡಿರುವ ಪ್ರಾಥಮಿಕ ಗುರುತಿನ ದಾಖಲೆಯಾಗಿದೆ. ಯುಐಡಿಎಐ ನೀಡಿರುವ ಒಟ್ಟು 12 ಡಿಜಿಟಲ್ ಗುರುತಿನ ಸಂಖ್ಯೆ ಒಳಗೊಂಡಿರುವ ಈ ಕಾರ್ಡ್‌ನಲ್ಲಿ ಜನನ ವಿವರ, ಬಯೋಮೆಟ್ರಿಕ್ಸ್ ಮಾಹಿತಿ ಅಡಗಿರುತ್ತದೆ.
ಜನನ ಮಾಹಿತಿ ಅಂದರೆ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು. ಆದರೆ, ಕಣ್ಣಿನ ರೆಟಿನಾ ಸ್ಕ್ಯಾನ್, ಬೆರಳಚ್ಚು ಹಾಗೂ ಭಾವಚಿತ್ರವನ್ನು ಆಧಾರ್ ನೋಂದಾಯಿತ ಸೆಂಟರ್‌ಗಳಲ್ಲಿ ಮಾತ್ರ ಅಪ್‌ಡೇಟ್ ಮಾಡಬಹುದಾಗಿದೆ.
ಆಧಾರ್ ಸೆಂಟರ್‌ಗಳಿಗೆ ಹೋಗುವುದಕ್ಕಿಂತಲೂ ಮೊದಲು ಸಮಯವನ್ನು ಉಳಿತಾಯ ಮಾಡಿಕೊಳ್ಳಲು ಮೊದಲೇ ಆನ್‌ಲೈನ್ ಮೂಲಕ ಅಪಾಂಟ್‌ಮೆಂಟ್ ಪಡೆದುಕೊಳ್ಳಬೇಕು. ಈ ನೋಂದಣಿ ಕೇಂದ್ರಗಳು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಆಧಾರ್‌ನಲ್ಲಿನ ಫೋಟೊ ಅಪ್‌ಡೇಟ್/ಚೇಂಜ್ ಮಾಡುವ ವಿಧಾನ ಈ ರೀತಿ ಇದೆ. ಮುಂದೆ ಓದಿ...

ಆಧಾರ್ ಫೋಟೊ ಅಪ್‌ಡೇಟ್ ವಿಧಾನ
1. ಆಧಾರ್ ನೋಂದಣಿ ಕೇಂದ್ರಗಳಿಂದ ಅಥವಾ ಯುಐಡಿಎಐ ವೆಬ್‌ಸೈಟ್‌ನಿಂದ ಆಧಾರ್ ಕಾರ್ಡ್ ಫಾರಂ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
2. ಬಳಿಕ ಈ ಫಾರಂ ಜತೆಗೆ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಕೆ ಮಾಡುವ ಮೂಲಕ ಫಿಂಗರ್‌ಪ್ರಿಂಟ್, ಐರೀಸ್ ಕ್ಯಾಪ್ಚರ್ ಸೇರಿದಂತೆ ಬಯೋಮೆಟ್ರಿಕ್ಸ್ ಮಾಹಿತಿಯನ್ನು ಒದಗಿಸಬೇಕು.
3. ನೋಂದಣಿ ಕೇಂದ್ರದಲ್ಲಿರುವ ಸಿಬ್ಬಂದಿಯು ನಿಮ್ಮ ಭಾವಚಿತ್ರವನ್ನು ಅವರ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ಈ ಮಾಹಿತಿ ಅಪ್‌ಡೇಟ್ ಮಾಡುವುದಕ್ಕೆ 100 ರೂ. ಶುಲ್ಕವನ್ನು ಪಾವತಿಸಬೇಕು. ಬಳಿಕ ಮಾಹಿತಿ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಸ್ವೀಕೃತ ಸ್ಲಿಪ್ ನೀಡಲಿದ್ದು, ಅದು ಯುಆರ್‌ಎನ್ ನಂಬರ್ ಅನ್ನು ಒಳಗೊಂಡಿರುತ್ತದೆ.
ಈ ಮಾಹಿತಿ ಅಪ್‌ಡೇಟ್ ಕೋರಿಕೆ ಪ್ರಕ್ರಿಯೆ ಕಾರ್ಯಗತಕ್ಕೆ ಕೆಲವೊಮ್ಮೆ 90 ದಿನಗಳ ಸಮಯಾವಕಾಶ ತೆಗೆದುಕೊಳ್ಳಬಹುದು ಎನ್ನುವುದು ಗಮನಾರ್ಹ. ಈ ನಡುವೆ ಯುಐಡಿಎಐ ವೆಬ್‌ಸೈಟ್‌ನಲ್ಲಿ ಯುಆರ್‌ಎನ್ ಸಂಖ್ಯೆಯನ್ನು ನಮೂದಿಸಿ ಸ್ಟೇಟಸ್ ಕೂಡ ಚೆಕ್ ಮಾಡಬಹುದು. ಒಮ್ಮೆ ಈ ಆಧಾರ್ ಮಾಹಿತಿ ಅಪ್‌ಡೇಟ್ ಆದರೆ, ಬಳಿಕ ಇ-ಆಧಾರ್/ಡಿಜಿಟಲ್ ಪ್ರತಿಯನ್ನು ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಧಾರ್ ಆನ್‌ಲೈನ್‌ನ ಪ್ರವೇಶಕ್ಕೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೂಡ ನೋಂದಣಿ ಮಾಡಿಸಿಕೊಂಡಿರಬೇಕು. ಅದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಫೋಟೋ ಅಪ್‌ಡೇಟ್ ಹೀಗೆ ಮಾಡಿಕೊಳ್ಳಿ
1. UIDAI ಅಧಿಕೃತ ವೆಬ್ ಸೈಟ್ www.uidai.gov.in ಗೆ ಭೇಟಿ ನೀಡಿ ಮತ್ತು ಅಲ್ಲಿ ಕಾಣಿಸುತ್ತಿರುವ "ಡೌನ್ ಲೋಡ್ ಆಧಾರ್" ಕ್ಲಿಕ್ ಮಾಡಿ
2. ನಿಮ್ಮ ಆಧಾರ್ ಸಂಖ್ಯೆ, ಅಥವಾ ದಾಖಲಾತಿ ಐಡಿ ಅಥವಾ ವರ್ಚುವಲ್ ಐಡಿ ಇವುಗಳಲ್ಲಿ ಯಾವುದರೋ ಒಂದನ್ನು ನಮೂದಿಸಿ
3. ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಿ ಬಳಿಕ "ಸೆಂಡ್ ಒಟಿಪಿ" ಮೇಲೆ ಕ್ಲಿಕ್ ಮಾಡಿ. ಇದೇ ವೇಳೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ ವರ್ಡ್ ( ಓಟಿಪಿ) ಬಂದಿರುತ್ತದೆ.
4. ಈಗ ಓಟಿಪಿ ಎಂಟ್ರಿ ಮಾಡಿ ನಂತರ "ವೆರಿಫೈ ಆಂಡ್ ಡೌನ್ ಲೋಡ್" ಕ್ಲಿಕ್ ಮಾಡಿ
ಸುರಕ್ಷತೆ ದೃಷ್ಟಿಯಿಂದ ಗುರುತು ಗೊತ್ತಾಗದಂತೆ ನಿಮ್ಮ ಮಾಸ್ಕ್ಡ್ ಆಧಾರ್ ಪ್ರತಿಯನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಆಧಾರ್ ಸಂಖ್ಯೆಯನ್ನು ಮಾಸ್ಕ್ ಮಾಡಿಸುವುದಕ್ಕೆ ಇರುವ ಒಂದು ಆಯ್ಕೆಯಾಗಿದ್ದು, ಆಧಾರ್ ಕಾರ್ಡ್‌ನ ಮೊದಲ ಎಂಟು ಸಂಖ್ಯೆ XXXX-XXXX ಈ ರೀತಿ ಇದ್ದು ಕೊನೆಯ 4 ನಂಬರ್‌ಗಳು ಮಾತ್ರ ಗೋಚರಿಸುತ್ತವೆ.


Click it and Unblock the Notifications