ಡಿಜಿಟಲ್ ವಹಿವಾಟುವಿನಲ್ಲಿ ವಂಚನೆಗಳು ಹೆಚ್ಚುತ್ತಿರುವ ಈ ಸಮಯದಲ್ಲಿ, ಆಧಾರ್ ಕಾರ್ಡ್‌ನ ಕಾರ್ಯನಿರ್ವಹಣೆಯಲ್ಲಿಯೂ ಕೆಲವು ಬದಲಾವಣೆಗಳಾಗುತ್ತಿವೆ. ದೇಶದಲ್ಲಿ ಅಧಿಕೃತ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಭೌತಿಕ ಆಧಾರ್ ಕಾರ್ಡ್ ಅನ್ನು ಸದಾ ಜೊತೆಯಲ್ಲಿ ಕೊಂಡೊಯ್ಯುವುದು ಕಷ್ಟವಾಗುತ್ತದೆ, ಮತ್ತು ಕಳ್ಳತನದ ಭಯವೂ ಇರುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) QR ಕೋಡ್ ಆಧಾರಿತ ಅಪ್ಲಿಕೇಶನ್ ಅನ್ನು ಪರಿಚಯವನ್ನು ಮಾಡಿದೆ.
ಹೌದು, ನೀವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) QR ಕೋಡ್ ಆಧಾರಿತ ಅಪ್ಲಿಕೇಶನ್ ಬಳಸುವುದರಿಂದ ಆಧಾರ್ ಕಾರ್ಡ್ ಸಂಪೂರ್ಣವಾಗಿ ಡಿಜಿಟಲ್ ಆಗಲಿದೆ. ಬಯೋಮೆಟ್ರಿಕ್ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಅಪ್ಡೇಟ್ಸ್ ಗಳನ್ನು ಮನೆಯಿಂದಲೇ ಮಾಡಬಹುದು.

ಈ ಹಿಂದೆ ಆಧಾರ್ ಪತ್ರ ಮತ್ತು ಇ-ಆಧಾರ್‌ನಲ್ಲಿನ ಕ್ಯೂಆರ್ ಕೋಡ್, ಆಧಾರ್ ಹೊಂದಿರುವವರ ಜನಸಂಖ್ಯಾ ಮಾಹಿತಿಯನ್ನು ಮಾತ್ರ ಒಳಗೊಂಡಿತ್ತು. ಆದರೆ ಈಗ, ಯುಐಡಿಎಐ ಹೊಸ ಕ್ಯೂಆರ್ ಕೋಡ್ ಅನ್ನು ಪರಿಚಯಿಸಿದೆ. ಇದು ಜನಸಂಖ್ಯಾ ಮಾಹಿತಿಯೊಂದಿಗೆ ಆಧಾರ್ ಕಾರ್ಡ್ ಹೊಂದಿರುವವರ ಭಾವಚಿತ್ರವನ್ನೂ ಒಳಗೊಂಡಿರುತ್ತದೆ.
QR ಕೋಡ್ ಬಳಸಿ ಆಧಾರ್ ಅನ್ನು ಹೇಗೆ ಪರಿಶೀಲಿಸುವುದು?
ಪ್ರತಿಯೊಂದು ಆಧಾರ್ ಕಾರ್ಡ್‌ನಲ್ಲಿ ಎನ್‌ಕ್ರಿಪ್ಟ್ ಮಾಡಲಾದ ಜನಸಂಖ್ಯಾ ಮಾಹಿತಿ ಮತ್ತು ಕಾರ್ಡ್‌ದಾರರ ಫೋಟೋದೊಂದಿಗೆ ಎಂಬೆಡ್ ಮಾಡಲಾದ QR ಕೋಡ್ ಇರುತ್ತದೆ. ನೀವು ಈ QR ಕೋಡ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅದರ ನಂತರ, ನೀವು ಪರಿಶೀಲನೆಯನ್ನು ಪ್ರಾರಂಭಿಸಬಹುದು. ಪ್ರತಿ ಹಂತವನ್ನು ತಿಳಿದುಕೊಳ್ಳಿ.
- mAadhaar ಅಥವಾ Aadhaar QR ಸ್ಕ್ಯಾನರ್‌ನಂತಹ UIDAI ಅನುಮೋದಿತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
- ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು QR ಕೋಡ್ ಸ್ಕ್ಯಾನ್ ಆಯ್ಕೆಯನ್ನು ಆರಿಸಿ.
- ಆಧಾರ್ ಕಾರ್ಡ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮ್ಮ ಫೋನ್‌ನ ಕ್ಯಾಮೆರಾವನ್ನು ಬಳಸಿ.
- ಸ್ಕ್ಯಾನಿಂಗ್ ಪೂರ್ಣಗೊಂಡ ನಂತರ, ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಫೋಟೋದಂತಹ ಮಾಹಿತಿಯು ತಕ್ಷಣವೇ ಅಪ್ಲಿಕೇಶನ್‌ನಲ್ಲಿ ಗೋಚರಿಸುತ್ತದೆ.
- ಪ್ರದರ್ಶಿಸಲಾದ ಮಾಹಿತಿಯನ್ನು ಭೌತಿಕ ಆಧಾರ್ ಕಾರ್ಡ್‌ನೊಂದಿಗೆ ಹೋಲಿಕೆ ಮಾಡಿ ಮತ್ತು ಎರಡೂ ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಈ ಹಂತಗಳು ಪೂರ್ಣಗೊಂಡ ನಂತರ, ನಿಮ್ಮ QR ಕೋಡ್ ಸ್ಕ್ಯಾನ್ ಪರಿಶೀಲನೆ ಪೂರ್ಣಗೊಂಡಿದೆ. ಈ ಹೊಸ ವ್ಯವಸ್ಥೆಯು ಸಂಪೂರ್ಣ ಭದ್ರತೆಯನ್ನು ಭರವಸೆ ನೀಡುತ್ತದೆ. ಇದು ನಾಗರಿಕರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವಾಗ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.ಇದು ಭೌತಿಕ ಆಧಾರ್ ಕಾರ್ಡ್‌ಗಳು ಅಥವಾ ನಕಲು ಪ್ರತಿಗಳ ಅಗತ್ಯವನ್ನು ಸಹ ನಿವಾರಿಸುತ್ತದೆ. QR ಸ್ಕ್ಯಾನ್ ಬಳಸಿಕೊಂಡು ಈ ಗುರುತಿನ ಪರಿಶೀಲನೆಯು UPI ಪಾವತಿಯನ್ನು ಸ್ಕ್ಯಾನ್ ಮಾಡುವಷ್ಟು ಸುಲಭಗೊಳಿಸುತ್ತದೆ.


Click it and Unblock the Notifications