ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ಬಿಡುಗಡೆ ಮಾಡಲಾಗಿದೆ. ಭಾರತದ ಶ್ರೀಮಂತರ ಪಟ್ಟಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಮತ್ತೆ ಉದ್ಯಮಿ ಗೌತಮ್ ಅದಾನಿಯನ್ನು ಹಿಂದಿಕ್ಕಿ ಶ್ರೀಮಂತ ಭಾರತೀಯ ಎಂಬ ಬಿರುದನ್ನು ಮರಳಿ ಪಡೆದುಕೊಂಡಿದ್ದಾರೆ.
ಅದಾನಿ ಸಂಸ್ಥೆಯು ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಜನವರಿಯಲ್ಲಿ ಹಿಂಡೆನ್‌ಬರ್ಗ್ ವರದಿ ಮಾಡಿದೆ. ಅದಾದ ಬಳಿಕ ಅದಾನಿ ಸಂಪತ್ತು ಗಣನೀಯವಾಗಿ ಕುಸಿಯುತ್ತಾ ಬಂದಿದೆ. ಇದರಿಂದಾಗಿ ಗೌತಮ್ ಅದಾನಿಯು ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದ್ದು, ಅಂಬಾನಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಪಟ್ಟಿಯಿಂದ ಹೊರಕ್ಕುಳಿದ ಬೈಜೂಸ್ ರವೀಂದ್ರನ್
ಎಜುಕೇಷನ್ ಟೆಕ್ನಾಲಜಿ ಸ್ಟಾರ್ಟ್ಅಪ್ ಬೈಜೂಸ್‌ನ ಸಂಸ್ಥಾಪಕರಾದ ಬೈಜು ರವೀಂದ್ರನ್ ಕಂಪನಿಯು ಸಾಲದ ಹೊರೆ, ನಷ್ಟವನ್ನು ಕಾಣುತ್ತಿದೆ. ಈ ನಡುವೆ ಭಾರತದ ಶ್ರೀಮಂತರ ಪಟ್ಟಿಯಿಂದ ಬೈಜೂಸ್ ರವೀಂದ್ರನ್ ಹೊರಕ್ಕೆ ಉಳಿದಿದ್ದಾರೆ. ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ರಾಧಾಕಿಶನ್ ದಮಾನಿ ಮತ್ತು ಕುಟುಂಬ, ಗೌತಮ್ ಅದಾನಿಯ ನಿವ್ವಳ ಆದಾಯ ಮಾತ್ರ ಕುಸಿತ ಕಂಡಿದೆ.
ಮೊದಲರೆಡು ಸ್ಥಾನವನ್ನು ಎಂದಿನಿಂತೆ ಅಂಬಾನಿ, ಅದಾನಿ ಪಡೆದರೆ, ಮೂರನೇ ಸ್ಥಾನದಲ್ಲಿ ಸೈರಸ್ ಎಸ್ ಪೂನವಾಲಾ ಮತ್ತು ಕುಟುಂಬ ಕಾಣಿಸಿಕೊಂಡಿದೆ. ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಕುಟುಂಬ, ನಿರಾಜ್ ಬಜಾಜ್ ಮತ್ತು ಕುಟುಂಬವು ಟಾಪ್ 10 ರ ಪಟ್ಟಿಗೆ ಮತ್ತೆ ಎಂಟ್ರಿ ನೀಡಿದೆ. ಇನ್ನು ವಿನೋದ್ ಶಾಂತಿಲಾಲ್ ಅದಾನಿ ಮತ್ತು ಅದಾನಿ ಗ್ರೂಪ್ ಕುಟುಂಬ, ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಟಾಪ್ 10 ಪಟ್ಟಿಯಿಂದ ಹೊರಗುಳಿದಿದ್ದಾರೆ.
ಈ ವರ್ಷ ಪಟ್ಟಿಯನ್ನು ಐಪಿಒ ಮೂಲಕ ಹೆಸರು ಮಾಡಿದ ಕೇನ್ಸ್ ಟೆಕ್ನಾಲಜಿಯ ರಮೇಶ್ ಕುಂಞಿಕಣ್ಣನ್, ಟಿಟಗರ್ ವ್ಯಾಗನ್ಸ್‌ನ ಜಗದೀಶ್ ಪ್ರಸಾದ್, ಆರ್ಕಿಯನ್ ಕೆಮಿಕಲ್ ಇಂಡಸ್ಟ್ರೀಸ್‌ನ ರಂಜಿತ್ ಪೆಂಡುರ್ತಿ, ಜುಪಿಟರ್ ಲೈಫ್ ಲೈನ್ ಹಾಸ್ಪಿಟಲ್ಸ್‌ನ ಅಜಯ್ ಪಿ ಠಾಕ್ಕರ್ ಮತ್ತು ಕುಟುಂಬ, ಎಲೆಕ್ಟ್ರಾನಿಕ್ಸ್ ಮಾರ್ಟ್ ಇಂಡಿಯಾದ ಪವನ್ ಕುಮಾರ್ ಬಜಾಜ್ ಮತ್ತು ಕರಣ್ ಬಜಾಜ್, ಹರ್ಷ ಇಂಜಿನಿಯರ್ಸ್ ಇಂಟರ್ ನ್ಯಾಷನಲ್‌ನ ಹರೀಶ್ ರಂಗವಾಲಾ ಮತ್ತು ರಾಜೇಂದ್ರ ಶಾಂತಿಲಾಲ್ ಶಾ ಶ್ರೀಮಂತರ ಪಟ್ಟಿಗೆ ಸೇರಿದ್ದಾರೆ.
ಸೀರಮ್ ಇನ್‌ಸ್ಟಿಟ್ಯೂಟ್‌ನ ಪೂನಾವಾಲಾ ಸಂಪೂರ್ಣ ಲಾಭವನ್ನು ಗಳಿಸಿದ್ದಾರೆ. ಪೂನಾವಾಲಾರ ಆದಾಯವು ಶೇಕಡ 36 ರಷ್ಟು ಏರಿಕೆಯಾಗಿ 2.78 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಶೇಕಡಾವಾರು ಲೆಕ್ಕದಲ್ಲಿ, ನೋಡಿದಾಗ ಸಿಎಂಆರ್ ಗ್ರೀನ್ ಟೆಕ್ನಾಲಜೀಸ್‌ನ ಗೌರಿ ಶಂಕರ್ ಅಗರ್ವಾಲಾ ಮತ್ತು ಕುಟುಂಬವು ಅತೀ ಅಧಿಕ ಬೆಳವಣಿಗೆ ಕಂಡಿದೆ. ಸಂಪತ್ತು ನಾಲ್ಕು ಪಟ್ಟು ಏರಿಕೆಯಾಗಿ, 5,900 ಕೋಟಿ ರೂಪಾಯಿಗೆ ತಲುಪಿದೆ.


Click it and Unblock the Notifications