ವೇಗದ ಜೀವನಶೈಲಿಯಲ್ಲಿ ಯಾವ ರೀತಿಯ ಅಪಾಯ ಬಂದು ಸಂಭವಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಬಹುತೇಕ ಜನರು ತಮ್ಮ ಕುಟುಂಬದ ಆರ್ಥಿಕ ರಕ್ಷಣೆಗಾಗಿ ಜೀವ ವಿಮೆಯನ್ನು ಮಾಡಿಸುವುದು ಸಹಜ. ನೀವು ಕೂಡ ಜೀವ ವಿಮೆ ಖರೀದಿ ಮಾಡಬೇಕೆಂದಿದ್ದರೆ ಡಿಸೆಂಬರ್ 1ನೇ ತಾರೀಖಿನವರೆಗೂ ಕಾಯಿರಿ.
ಜೀವ ವಿಮಾ ವಿತರಕರು ನವೆಂಬರ್ 30ರ ಮೊದಲು ಪಾಲಿಸಿಗಳನ್ನು ಖರೀದಿಸುವಂತೆ ನಿರೀಕ್ಷಿತ ಪಾಲಿಸಿದಾರರನ್ನು ಒತ್ತಾಯಿಸುತ್ತಾರೆ. ನಿಮಗೂ ಕಳೆದ ಕೆಲವು ವಾರಗಳಿಂದ ಜೀವ ವಿಮೆ ಮಾಡಿಸಿ ಎಂದು ಹೆಚ್ಚು ಕರೆ ಬಂದಿರಬಹುದು.
ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ದ ಹೊಸ ಮಾರ್ಗ ಸೂಚಿಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ. ಅದರರ್ಥ ವಿಮೆಯನ್ನು ಮಾಡಿಸಿರುವವರು ಅದಕ್ಕೆ ಮುಂಚಿತವಾಗಿ ಅನುಸರಣೆಯಿಲ್ಲದೆ ಉತ್ಪನ್ನಗಳನ್ನು ಹಿಂಪಡೆದುಕೊಳ್ಳುತ್ತಾರೆ.

'ಪ್ರೀಮಿಯಂಗಳ ಹೆಚ್ಚಳದೊಂದಿಗೆ ಹೊಸ ಯೋಜನೆಗಳು ಜಾರಿಗೆ ಬರಲಿವೆ , ಜೊತೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ವಿತರಿಸುತ್ತದೆ.' ಎಂದು ಐಡಿಬಿಐ ಫೆಡರಲ್ ಲೈಫ್ ಇನ್ಷೂರೆನ್ಸ್ ಉತ್ಪನ್ನಗಳ ಮುಖ್ಯಸ್ಥ ಕಾರ್ತಿಕ್ ರಾಮನ್ ಹೇಳಿದ್ದಾರೆ.
ಪಿಂಚಣಿ ಯೋಜನೆಗಳಿಗಾಗಿ ಕಾಯಿರಿ
ಪಿಂಚಣಿ ಯೋಜನೆಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ, ಹೊಸ ಮಾರ್ಗಸೂಚಿಗಳು ಬರುವವರೆಗೆ ಕಾಯುವುದು ಒಳಿತು. ಡಿಸೆಂಬರ್ 1ರ ನಂತರ ಮಾರಾಟವಾಗುವ ಹೊಸ ಪಿಂಚಣಿ ಯೋಜನೆಗಳಲ್ಲಿ ಮುಕ್ತಾಯಕ್ಕೆ ಅನುಮತಿಸಲಾದ ಗರಿಷ್ಟ ಸಂವಹನ (maximum commutation)ದ ಒಟ್ಟು ಮೊತ್ತವನ್ನು ಶೇಕಡಾ 60ರಷ್ಟು ಹಿಂತೆಗೆದುಕೊಳ್ಳಬಹುದು. ಸದ್ಯ ಇದು ಶೇಕಡಾ 33ರಷ್ಟಿದೆ.
ಡಿಸೆಂಬರ್ 1 ರ ಬಳಿಕ ಬರುವ ನಿಯಮಗಳು ಪಾಲಿಸಿದಾರರಿಗೆ ವಿಶೇಷ ಅವಕಾಶವನ್ನು ಒದಗಿಸುತ್ತವೆ. ಪಾಲಿಸಿದಾರರು ಚಿಕ್ಕವರಾಗಿದ್ದು, ದೀರ್ಘಾವಧಿಯ ಹೂಡಿಕೆಯನ್ನು ಹೊಂದಿದ್ದರೆ, ನೀವು ಈಕ್ವಿಟಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಆಯ್ಕೆ ಮಾಡಿಕೊಳ್ಳಬಹುದು.
ಸದ್ಯ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಪಾಲಿಸಿದಾರರಿಗೆ ವಿಮಾದಾರರಿಂದ ವರ್ಷಾಶನವನ್ನು(annuities) ಮುಕ್ತಾಯಕ್ಕೆ ಖರೀದಿಸಲು ಅವಕಾಶ ನೀಡಲಾಗಿಲ್ಲ. ಆದರೆ ಡಿಸೆಂಬರ್ 1ರ ನಂತರ ವಿಮಾದಾರರು ಈ ರೀತಿ ಮಾಡಲು ಅವಕಾಶವಿಲ್ಲ. ನೀವು ಹೆಚ್ಚಿನ ಆದಾಯ ನೀಡುವ ವಿಮಾದಾರರಿಂದ ವರ್ಷಾಶನಗಳನ್ನು ಖರೀದಿಸಲು, ನಿಮ್ಮ ಕಾರ್ಪಸ್‌ನ (ಒಟ್ಟು ಮೊತ್ತವನ್ನು ಹಿಂತೆದುಕೊಂಡ ನಂತರ ಬಾಕಿ) ಶೇಕಡಾ 50ರವರೆಗೆ ಬಳಸಬಹುದು.
Ulip ಖರೀದಿದಾರರಿಗೆ ಹೆಚ್ಚಿನ ಹೊಂದಾಣಿಕೆಯ ಅವಕಾಶ
ಡಿಸೆಂಬರ್ 1 ರಿಂದ ಯುಲಿಪ್ಸ್ ಅಡಿಯಲ್ಲಿ 45 ವರ್ಷ ವಯಸ್ಸಿಗಿಂತ ಕಡಿಮೆ ಇರುವವರಿಗೆ ಕನಿಷ್ಟ ಜೀವಿತಾವಧಿಯನ್ನು (minimum life cover) ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಕಡಿಮೆ ಮಾಡಲಾಗುತ್ತದೆ. ಇದರಿಂದ ಆದಾಯ ಹೆಚ್ಚಾಗುತ್ತದೆ. ಸದ್ಯ ವಾರ್ಷಿಕ ಪ್ರೀಮಿಯಂ 10 ಪಟ್ಟು ಇದೆ.
ಆದಾಗ್ಯೂ, ಸೆಕ್ಷನ್ 80(ಸಿ) ಮತ್ತು 10(10ಡಿ) ಅಡಿಯಲ್ಲಿ ತೆರಿಗೆ ಪ್ರಯೋಜನಗಳ ಬಗ್ಗೆ ಇನ್ನೂ ಸ್ಪಷ್ಟತೆ ಹೊರಬಂದಿಲ್ಲ. ನಿಮಗೆ ತೆರಿಗೆ ವಿನಾಯಿತಿ ಅಗತ್ಯವಿದ್ದರೆ, ವಾರ್ಷಿಕ ಕಂತುಗಿಂತ 10 ಪಟ್ಟು ಹೆಚ್ಚು ಲೈಫ್ ಕವರ್ ಮಾಡುವ ಪಾಲಿಸಿ ಮಾಡಿಸಿ.
ಕಾದು ನೋಡುವುದು ಒಳಿತು
ಮುಂಬರುವ ಹೊಸ ಉತ್ಪನ್ನಗಳು ಹೆಚ್ಚು ಗ್ರಾಹಕ ಸ್ನೇಹಿಯಾಗಿರುತ್ತದೆ. 10 ವರ್ಷಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ ಎಂಡೋಮೆಂಟ್ ಪಾಲಿಸಿಗಳಲ್ಲಿ ನೀವು 2 ವರ್ಷ ಪ್ರೀಮಿಯಂ ಪಾವತಿಸಿದ್ದರೆ ಸಾಕು ಅಕಾಲಿಕ ನಿರ್ಗಮನವಾಗಬಹುದು. ಸದ್ಯಕ್ಕೆ ಇದು 3 ವರ್ಷವಿದೆ.
ಇತರೆ ಅನುಕೂಲಗಳು
ಈ ಮೇಲೆ ಹೇಳಿದಂತೆ ಮುಂಬರುವ ದಿನಗಳಲ್ಲಿ ಬರುವ ಪಾಲಿಸಿಗಳು ನೀವು ಅಕಾಲಿಕ ನಿರ್ಗಮನ ಹೊಂದುವುದಾದರೆ ಹೆಚ್ಚಿನ ಪ್ರಯೋಜನ ನೀಡುವ ಯೋಜನೆಗಳಾಗಿವೆ. ಡಿಸೆಂಬರ್ 1 ರ ಬಳಿಕ ಪಾಲಿಸಿಯನ್ನು ಖರೀದಿಸುವವರಿಗೆ ಹೆಚ್ಚಿನ ಪರಿಹಾರವು ಸಿಗುತ್ತದೆ. ಐದು ವರ್ಷಗಳ ನಂತರ ಶೇಕಡಾ 50ರಷ್ಟು ಪ್ರೀಮಿಯಂಗಳನ್ನು ಕಡಿಮೆ ಮಾಡಬಹುದು ಮತ್ತು ಪಾಲಿಸಿಯನ್ನು ಜಾರಿಯಲ್ಲಿಡಬಹುದು.
ಒಂದು ವೇಳೆ ಮಧ್ಯಂತರದಲ್ಲಿ ಪ್ರೀಮಿಯಂ ಕಟ್ಟುವುದನ್ನು ನಿಲ್ಲಿಸಿದ ನಂತರ ಮತ್ತೆ ನವೀಕರಿಸಲು ಬಯಸುವ ಪಾಲಿಸಿದಾರರಿಗೆ ಐಆರ್‌ಡಿಎಐ ಹೆಚ್ಚಿನ ಅವಕಾಶ ಒದಗಿಸಲಿದೆ.
ಸಾಂಪ್ರದಾಯಿಕ ಯೋಜನೆಗಳ ಪುನರುಜ್ಜೀವನ(Revival) ಅವಧಿಯನ್ನು 2 ರಿಂದ 5 ವರ್ಷಗಳಿಗೆ ವಿಸ್ತರಿಸಲಾಗಿದೆ. ಯಾವುದೇ ಪಾಲಿಸಿಗಳನ್ನು ಮಾಡಿಸುವ ಮೊದಲು ಒಮ್ಮೆ ಸ್ವತಃ ನೀವೆ ಸಂಶೋಧಿಸಿ ತಿಳಿದುಕೊಂಡರೆ ಒಳಿತು. ಇಲ್ಲವೆ ವಿಮೆಗಳನ್ನು ಮಾಡಿಸುವ ಏಜೆಂಟ್‌ರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.


Click it and Unblock the Notifications