ದೇಶದಲ್ಲಿರುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಕೂಡಾ ಸೇರಿದೆ. ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಸರ್ಕಾರವು ಹಲವಾರು ಬಾರಿ ಅವಕಾಶ ನೀಡಿದೆ. ಜೂನ್ 30, 2023 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವುದು ಎಂದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂದರ್ಥವಾಗಿದೆ. ನೀವು ಈ ಪ್ಯಾನ್ ಕಾರ್ಡ್ ಅನ್ನು ನೀವು ಬಳಸಿದರೂ ಕೂಡಾ ನೀವು ಅದಕ್ಕೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಇನ್ನು ನಿಮ್ಮ ಪ್ಯಾನ್ ನಿಷ್ಕ್ರೀಯವಾಗಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ವೇತನ ಜಮೆಯಾಗುತ್ತದೆಯೇ?

ಆದಾಯ ತೆರಿಗೆ ನಿಯಮಗಳ ಪ್ರಕಾರ, ನಿಷ್ಕ್ರೀಯ ಪ್ಯಾನ್ ಕಾರ್ಡ್ ಎಂದರೆ ನಿಮ್ಮ ಪ್ಯಾನ್ ಕಾರ್ಡ್ ಕೈಯಲ್ಲಿ ಇದ್ದರೂ ಕೂಡಾ ಪ್ಯಾನ್ ಕಾರ್ಡ್ ಇಲ್ಲ ಎಂದಾಗಿರುತ್ತದೆ. ಅಂದರೆ ನೀವು ಬ್ಯಾಂಕ್ ಖಾತೆಗಳನ್ನು ತೆರೆಯಲು, ಹೂಡಿಕೆ ಮಾಡಲು ಅಥವಾ ಪ್ಯಾನ್ ಕಾರ್ಡ್ ಅಗತ್ಯವಾದ ಯಾವುದೇ ಕಾರ್ಯಗಳನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
ಪ್ಯಾನ್ ನಿಷ್ಕ್ರೀಯ: ವೇತನ ಜಮೆಯಾಗುತ್ತಾ?
ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ನಿಮ್ಮ ಸಂಬಳವನ್ನು ನಿಮ್ಮ ಖಾತೆಗೆ ಕಳುಹಿಸಲಾಗುವುದಿಲ್ಲ ಎಂದು ಅರ್ಥವಲ್ಲ. ಉದ್ಯೋಗದಾತರ ಪರವಾಗಿ ಬ್ಯಾಂಕ್ ಖಾತೆಗೆ ಸಂಬಳವನ್ನು ಜಮೆ ಮಾಡುತ್ತದೆ. ಆದರೆ ಇದರೊಂದಿಗೆ ಟಿಡಿಎಸ್ ಶುಲ್ಕವನ್ನೂ ಕಡಿತಗೊಳಿಸಲಾಗುತ್ತದೆ. ಹಾಗೆಯೇ ಬ್ಯಾಂಕ್‌ನಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುವ ಪ್ರಕ್ರಿಯೆ ಕೂಡಾ ವಿಳಂಬವಾಗಬಹುದು.
ನಿಮ್ಮ ಕ್ರೆಡಿಟ್, ಡೆಬಿಟ್ ಕಾರ್ಡ್ ಮೇಲೆ ಪ್ರಭಾವ?
ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿಲ್ಲದಿದ್ದರೆ ನೀವು ವಿದೇಶಕ್ಕೆ ಹಣವನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ, ಅಂತಾರಾಷ್ಟ್ರೀಯ ಎಟಿಎಂಗಳಿಂದ ನಗದು ವಿತ್‌ಡ್ರಾ ಮಾಡಲು ಮತ್ತು ಪಾಯಿಂಟ್ ಆಫ್ ಸೇಲ್ ವಹಿವಾಟುಗಳನ್ನು ನಡೆಸಲು ನಿಮಗೆ ಅನುಮತಿ ನೀಡಲಾಗುವುದಿಲ್ಲ. ಹಾಗೆಯೇ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವುದಕ್ಕೆ ಅವಕಾಶ ಇರುವುದಿಲ್ಲ.
ಮತ್ತೊಂದೆಡೆ, ನೀವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಪ್ಯಾನ್ ಕಾರ್ಡ್ ಅಗತ್ಯವಿದೆ. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಿದ್ದರೆ ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆವೈಸಿ ಮಾಡಲು ಪ್ಯಾನ್ ಕಾರ್ಡ್ ಅಗತ್ಯವಾಗಿದೆ. ಅದೇನೇ ಇದ್ದರೂ, ಆಧಾರ್ ಕಾರ್ಡ್‌ಗಳು ಮತ್ತು ಇತರ ವಿಧಾನಗಳನ್ನು ಬಳಸಿಕೊಂಡು ಬ್ಯಾಂಕ್‌ಗಳು ನಿಮಗೆ ಡೆಬಿಟ್, ಕ್ರೆಡಿಟ್ ಕಾರ್ಡ್ ನೀಡಬಹುದು.
ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯಗೊಳಿಸಬಹುದೇ?
ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ನೀವು ಅದನ್ನು ಸಕ್ರಿಯಗೊಳಿಸಬಹುದಾಗಿದೆ. ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಅರ್ಜಿ ಸಲ್ಲಿಸುವ ಮೂಲಕ ನೀವು 1000 ರೂಪಾಯಿ ದಂಡವನ್ನು ಪಾವತಿ ಮಾಡಿ ಸಕ್ರಿಯಗೊಳಿಸಬಹುದಾಗಿದೆ. ಆದರೆ ನೀವು ಪ್ಯಾನ್-ಆಧಾರ್ ಲಿಂಕ್‌ಗೆ ಅರ್ಜಿ ಸಲ್ಲಿಸಿದ ನಂತರ 30 ದಿನಗಳು ಕಳೆಯುವವರೆಗೆ ಪ್ಯಾನ್ ಕಾರ್ಯನಿರ್ವಹಿಸುವುದಿಲ್ಲ.


Click it and Unblock the Notifications