ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ಇಲಾಖೆ (Indian Railways) ಇತ್ತೀಚೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಏನಾದರೊಂದು ಹೊಸ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಅದೇ ರೀತಿ ಕಳೆದ ಬಾರಿ ಟಿಕೆಟ್ ಕಾಯ್ದಿರಿಸುವಿಕೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದಿತ್ತು. ಇದೀಗ ಗ್ರಾಹಕರ ಹಿತದೃಷ್ಟಿಯಿಂದ ಭಾರತೀಯ ರೈಲ್ವೇ ಇಲಾಖೆ ಮತ್ತೊಂದು ವ್ಯವಸ್ಥೆಯನ್ನು ಅಪ್ಡೇಟ್ ಮಾಡಿದೆ. ಈ ಬದಲಾವಣೆ ಹಿರಿಯ ನಾಗರಿಕರಿಗೆ, ಮಹಿಳೆಯರಿಗಾಗಿ ಮತ್ತು ದಿವ್ಯಾಂಗರ ಅನುಕೂಲಕ್ಕಾಗಿ ಮುಖ್ಯವಾಗಿ ಜಾರಿಗೆ ತರಲಾಗಿದೆ. ಹಾಗಿದ್ರೆ ಭಾರತೀಯ ರೈಲ್ವೇ ಇಲಾಖೆ ಜಾರಿಗೆ ತಂದ ಹೊಸ ಬದಲಾವಣೆ (New Rules) ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ನವದೆಹಲಿ ಮತ್ತು ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌ನ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (TTE) ಒಬ್ಬರು ಹಿರಿಯ ನಾಗರಿಕರು, ಮಹಿಳೆಯರು IRCTC ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡುವಾಗ ಕೆಳಗಿನ ಕೆಳಭಾಗದ ಬರ್ತ್‌ಗಳನ್ನು (ಸೀಟು) ಪಡೆಯುವುದು ಹೇಗೆ ಎಂಬುದರ ಟಿಪ್ಸ್ ನೀಡಿದ್ದಾರೆ. ಭಾರತೀಯ ರೈಲ್ವೇ ಟಿಕೆಟ್ ಮೀಸಲಾತಿ ವ್ಯವಸ್ಥೆಯ ಹೊಸ ಬದಲಾವಣೆ ಬಗ್ಗೆ ಮಾತನಾಡಿರುವ ಟಿಟಿಇ, ಇದು ಅನಾರೋಗ್ಯವಂತರಿಗೆ, ಹಿರಿಯರು ಆರಾಮದಾಯಕವಾಗಿ ರೈಲ್ವೇ ಪ್ರಯಾಣ ಮಾಡಲು ಅನುವು ಮಾಡಿಕೊಡಲಿದೆ.
ಹೊಸ ನಿಯಮಗಳ ಪ್ರಕಾರ, ಇನ್ಮೇಲೆ ರೈಲ್ವೇ ಟಿಕೆಟ್ ಬುಕಿಂಗ್ ಸಮಯದಲ್ಲಿ, ಕೆಳಭಾಗದ ಬರ್ತ್‌ಗಳು ಲಭ್ಯವಿದ್ದರೆ, ಭಾರತೀಯ ರೈಲ್ವೇ ಇದೀಗ ಹಿರಿಯ ನಾಗರಿಕರು 45 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು (ವೈದ್ಯಕೀಯ ರಿಪೋರ್ಟ್) ಮತ್ತು ದಿವ್ಯಾಂಗರಿಗೆ ಆಟೋಮೆಟಿಕ್ ಆಗಿ ಕೆಳಭಾಗದ ಬರ್ತ್‌ಗಳನ್ನು ಪಡೆಯಲು ಆದ್ಯತೆ ನೀಡಲಾಗುತ್ತದೆ.
IRCTC ಜಾರಿಗೆ ತಂದ ಹೊಸ ವೈಶಿಷ್ಟ್ಯವು "Book only if lower berth is available" ಎಂಬ ಆಯ್ಕೆಯನ್ನು ನೀಡುತ್ತದೆ. ಅಲ್ಲಿ ನೀವು ಆಯ್ಕೆ ಮಾಡಬಹುದು. ಇದರಿಂದ ಮೇಲಿನ ಬರ್ತ್ ಹತ್ತಲು ಕಷ್ಟಪಡುವ ಪ್ರಯಾಣಿಕರು ಈ ಆಯ್ಕೆಯನ್ನು ಸುಲಭವಾಗಿ ಪಡೆಯಬಹುದು..
ಇದರ ಜೊತೆಗೆ ಟಿಟಿಇ ಈ ವ್ಯವಸ್ಥೆಯ ಮತ್ತೊಂದು ನಿಯಮವನ್ನು ಹೇಳಿದ್ದಾರೆ. ಅಂದರೆ ಒಂದೇ PNR ಐಡಿಯ ಅಡಿಯಲ್ಲಿ ಎರಡಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರು ಒಮ್ಮೆಲೆ ಕೆಳಗಿನ ಬರ್ತ್‌ಗಳನ್ನು ಬುಕ್ ಮಾಡುವುದನ್ನು ತಪ್ಪಿಸಿ. ಏಕೆಂದರೆ ಕೆಲವೊಮ್ಮೆ ಒಂದೇ ಬಾರಿ ಮೂರು ಅಥವಾ ಅದಕ್ಕಿಂತ ಹೆಚ್ಚು ಜನರು ಬುಕ್ ಮಾಡಿದರೆ, ಅವರಿಗೆ ಮಧ್ಯದಲ್ಲಿ ಅಥವಾ ಮೇಲ್ಭಾಗದ ಬರ್ತ್‌ಗಳು ದೊರೆಯಬಹುದು ಎಂದು ಹೇಳಿದ್ದಾರೆ.
ಆದ್ದರಿಂದ ಸರಿಯಾಗಿ ಪ್ಲಾನ್ ಮಾಡಿಕೊಂಡು ಟಿಕೆಟ್ ಬುಕ್ ಮಾಡಿದರೆ, ಅಗತ್ಯವಾಗಿ ಬೇಕಾದವರು ಆರಾಮವಾಗಿ ಕೆಳಭಾಗದ ಬರ್ತ್ ಆಯ್ಕೆ ಮಾಡಬಹುದು. ಅಲ್ಲದೇ ಆರಾಮದಾಯಕವಾಗಿ ಟ್ರಾವೆಲ್ ಪ್ಲಾನ್ ಮಾಡಬಹುದು. ಅಲ್ಲದೇ ಭಾರತೀಯ ರೈಲ್ವೇ ಇಲಾಖೆ, ಟಿಟಿಇಗಳಿಗೆ ಪ್ರಯಾಣದ ಸಮಯದಲ್ಲಿ ಖಾಲಿ ಇರುವ ಕೆಳಭಾಗದ ಬರ್ತ್‌ಗಳನ್ನು ಅರ್ಹ ಪ್ರಯಾಣಿಕರಿಗೆ ಮರು ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ರೈಲ್ವೇ ಪ್ರಯಾಣಿಕರು ಇನ್ನಷ್ಟು ಆರಾಮದಾಯಕವಾಗಿ ಪ್ರಯಾಣ ಮಾಡಲು ಅನುಕೂಲವಾಗಲಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications