ದೇಶದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜೂಸ್ ಈಗಾಗಲೇ ಹಲವು ಸಂಕಷ್ಟಗಳಿಗೆ ಸಿಲುಕಿದ್ದು, ಇದೀಗ ಈ ಸಂಸ್ಥೆಗೆ ಮತ್ತೊಂದು ಆಘಾತ ಎದುರಾಗಿದೆ. ಯುಎಸ್ ಮೂಲದ ಹೂಡಿಕೆ ಸಂಸ್ಥೆ ಈಗಾಗಲೇ "ಬ್ಲ್ಯಾಕ್‌ರಾಕ್" ತನ್ನ ಹೂಡಿಕೆಗಳ ಮೌಲ್ಯವನ್ನು ಕಡಿಮೆ ಮಾಡಿದೆ.
ಭಾರತೀಯ ಎಡ್ ಟೆಕ್ ಬೈಜುಸ್‌ನಲ್ಲಿನ ಹೊಲ್ಡಿಂಗ್ ವಾಲ್ಯುವನ್ನು (ಹಿಡುವಳಿ ಮೌಲ್ಯ)ವನ್ನು ಬ್ಲ್ಯಾಕ್‌ರಾಕ್ ಕಡಿತಗೊಳಿಸಿದ್ದು, ಹೀಗಾಗಿ ಇದರ ಮೌಲ್ಯವು 2022 ರ ಆರಂಭದಲ್ಲಿದ್ದ 165924 ಕೋಟಿ ರೂಪಾಯಿಯಿಂದ ಕೇವಲ 8298 ಕೋಟಿ ರೂಪಾಯಿಗೆ ಇಳಿದಿದೆ. ಬೈಜುಸ್‌ನಲ್ಲಿ ಶೇಕಡ 1 ಕ್ಕಿಂತ ಕಡಿಮೆ ಹೊಲ್ಡಿಂಗ್ ಹೊಂದಿರುವ ಬ್ಲ್ಯಾಕ್‌ರಾಕ್, ಷೇರುಗಳನ್ನು ಸುಮಾರು 209.6 ಡಾಲರ್ ಮೌಲ್ಯವನ್ನು ಹೊಂದಿದ್ದು, ಇದು 2022 ರಲ್ಲಿ $4,660 ರ ಗರಿಷ್ಠ ಮಟ್ಟದಲ್ಲಿದ್ದು, ಈಗ ತೀರಾ ಇಳಿಕೆಯಾಗಿದೆ ಎಂದು TechCrunch ವರದಿ ಮಾಡಿದೆ.

ಹೂಡಿಕೆ ಸಂಸ್ಥೆಗಳು, ಬೈಜುಸ್ ನ ಹೂಡಿಕೆಗಳ ಮೌಲ್ಯವನ್ನು ಕಡಿತಗೊಳಿಸುವುದು ಇದೇ ಮೊದಲಲ್ಲ, ಆದರೆ ಇತ್ತೀಚಿಗೆ ಹೂಡಿಕೆ ಸಂಸ್ಥೆಗಳು ಮಾಡುತ್ತಿರುವ ಹೊಲ್ಡಿಂಗ್ ವಾಲ್ಯು ಕಡಿತ ದ ಬಗ್ಗೆ ಬೈಜುಸ್ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಈ ಹಿಂದೆ ಬೈಜುಸ್‌ನಲ್ಲಿ ಸುಮಾರು ಶೇ. 9 ಪಾಲನ್ನು ಹೊಂದಿರುವ ಹೂಡಿಕೆ ಸಂಸ್ಥೆ ಪ್ರೊಸಸ್, ಬೈಜುಸ್‌ನಲ್ಲಿನ ತನ್ನ ಪಾಲನ್ನು $3 ಬಿಲಿಯನಿಗಿಂತಲೂ ಕಡಿಮೆ ಮಾಡಿದೆ.
ಹಿಂದಿನ ನಿಧಿಯ ಸುತ್ತಿನ ಮೌಲ್ಯಮಾಪನ 22 ಬಿಲಿಯನ್ ಡಾಲರ್‌ಗಿಂತ ಇದು 86 ಪ್ರತಿಶತಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸಿದೆ. ಹೀಗಾಗಿ ಕಳೆದ ವರ್ಷ ನವೆಂಬರ್‌ನಲ್ಲಿ, ಪ್ರೊಸಸ್ ಸಂಸ್ಥೆಯು ಬೈಜುಸ್ ನ ನ್ಯಾಯಯುತ ಮೌಲ್ಯವನ್ನು 5.97 ಬಿಲಿಯನ್ ಡಾಲರ್‌ಗೆ ಇಳಿಸಿತು.
"ಬೈಜುಸ್ ಅನೇಕ ತೊಂದರೆಗಳನ್ನು ಎದುರಿಸುತ್ತಿದೆ. ನಾವು ಮತ್ತು ಇತರ ಷೇರುದಾರರು ಪರಿಸ್ಥಿತಿಯನ್ನು ಸುಧಾರಿಸಲು ಪ್ರತಿದಿನ ಕೆಲಸ ಮಾಡುತ್ತಿದ್ದೇವೆ. ದಿನಂಪತ್ರಿ ಕಂಪನಿಯೊಂದಿಗೆ ನಿಕಟವಾಗಿ ಚರ್ಚಿಸುತ್ತಿದ್ದೇವೆ," ಎಂದು ಕಳೆದ ವರ್ಷದ ಕೊನೆಯಲ್ಲಿ ಹಿರಿಯ ಪ್ರೊಸಸ್ ಕಾರ್ಯನಿರ್ವಾಹಕರು ವರದಿಗಳಲ್ಲಿ ಹೇಳಿದ್ದರು.
ಬೈಜೂಸ್ 2022 ರ ಆರಂಭದಲ್ಲಿ SPAC ಒಪ್ಪಂದದ ಮೂಲಕ ಸಾರ್ವಜನಿಕವಾಗಿ ಷೇರು ಮಾರಾಟ ಮಾಡಲು ತಯಾರಿ ನಡೆಸುತ್ತಿದೆ. ವರದಿಗಳ ಪ್ರಕಾರ, ಉದ್ಯೋಗಿಗಳು ಮತ್ತು ಇತರರ ಬಾಕಿ ಪಾವತಿಸಲು ಬೈಜುಸ್ ಗೆ ಕನಿಷ್ಠ 500- 600 ಕೋಟಿ ರೂಪಾಯಿ ಅಗತ್ಯವಿದೆ. ಇತ್ತೀಚಿನ FIFA ವಿಶ್ವಕಪ್‌ನಲ್ಲಿ ಜಾಗತಿಕ ಫುಟ್‌ಬಾಲ್ ತಾರೆ ಮೆಸ್ಸಿಯೊಂದಿಗೆ ಪಾಲುದಾರರಾದ ನಂತರ ಬೈಜುಸ್ ಗಮನ ಸೆಳೆಯಿತು.


Click it and Unblock the Notifications