ಬೆಂಗಳೂರು, ಜುಲೈ 15: ಭಾರತದ ಅತ್ಯಂತ ಬೆಲೆಬಾಳುವ ನಾಯಿಯು ಬೆಂಗಳೂರಿನಲ್ಲಿ ಇದೆ. ಇದರ ಹೆಸರು ಕಾಡಬೊಮ್ ಹೇಡರ್. ಈ ನಾಯಿ ಬೆಂಗಳೂರಿನ ಎಸ್ ಸತೀಶ್ ಎಂಬುವವರಿಗೆ ಸೇರಿದ್ದಾಗಿದೆ.
ಇದು ಕಕೇಶಿಯನ್ ಶೆಫರ್ಡ್ ಡಾಗ್ ತಳಿಗೆ ಸೇರಿದೆ, ಇದನ್ನು ಕಕೇಶಿಯನ್ ಓವ್ಚಾರ್ಕಾ ಎಂದೂ ಕರೆಯುತ್ತಾರೆ. ಕಾಡಬೊಮ್ ಹೇಡರ್ ಭಾರತದ ಅತ್ಯಂತ ದುಬಾರಿ ನಾಯಿ ಅಥವಾ ಸಾಕುಪ್ರಾಣಿ ಎಂಬ ಖ್ಯಾತಿ ಪಡೆಸಿದ್ದು, ಇದರ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿ ಆಗಿರುತ್ತದೆ.

ಮೊದಲು ಈ ದೊಡ್ಡ ತಳಿಯ ನಾಯಿಯನ್ನು ದನಗಳ ಪಾಲಕ ನಾಯಿ ಎಂದು ಕರೆಯಲಾಗಿತ್ತು. ಈ ನಾಯಿ ರಷ್ಯಾ, ಜಾರ್ಜಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ನಂತಹ ಶೀತ ದೇಶಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಟಾಪ್ ಕಂಪನಿಗಳ ಸಿಇಒಗಳ ವಾರ್ಷಿಕ ವೇತನಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬೆಂಗಳೂರಿನ ಎಸ್ ಸತೀಶ್ ಅವರು ಈ ತಳಿಯನ್ನು ಖರೀದಿಸಿದ್ದಾರೆ. ಒಂದೂವರೆ ವರ್ಷದ ನಾಯಿ ನಿರ್ವಹಣೆಗೆ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಿಸುತ್ತದೆ.
ವರದಿಗಳ ಪ್ರಕಾರ, ಕಾಡಬೊಮ್ ಹೇಡರ್ ಶ್ವಾನ ಪ್ರದರ್ಶನದ ಸ್ಪರ್ಧೆಗಳಲ್ಲಿ 32 ಪದಕಗಳನ್ನು ಗೆದ್ದಿದೆ. ಈ ತಳಿಯು ಸುಮಾರು 10-12 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಇದು ಕೆಲವು ದೊಡ್ಡ ಕಾಡು ಬೆಕ್ಕುಗಳಷ್ಟೇ ದೊಡ್ಡದಾಗಿದೆ. ಕಕೇಶಿಯನ್ ಓವ್ಚರ್ಕಾಸ್ ಸುಮಾರು 45-50 ತೂಗುತ್ತದೆ ಆದರೆ 77 ಕೆಜಿ ವರೆಗೂ ಬೆಳೆಯಬಲ್ಲದು.
ಅವು ಸುಮಾರು 27-30 ಇಂಚು ಎತ್ತರವಿರುತ್ತದೆ. ಈ ನಾಯಿಯನ್ನು ಹಿಂದೆ ಕೊಯೊಟ್‌ಗಳು ಮತ್ತು ತೋಳಗಳ ವಿರುದ್ಧ ಜಾನುವಾರುಗಳ ಹಿಂಡುಗಳಿಗೆ ಕಾವಲು ಕಾಯಲು ಬಳಸಲಾಗುತ್ತಿತ್ತು. ಈ ತಳಿಯನ್ನು ಕರಡಿ ಬೇಟೆ ನಾಯಿಯಾಗಿಯೂ ಬಳಸಲಾಗಿದೆ. ಇಂದು ಇದು ರಷ್ಯಾದಲ್ಲಿ ಜೈಲು ನಾಯಿಗಳಾಗಿ ಸೇವೆ ಸಲ್ಲಿಸುತ್ತದೆ. ಡೆನ್ಮಾರ್ಕ್‌ನಲ್ಲಿ ಈ ತಳಿಯನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಕಡಬೊಮ್ ಕೆನ್ನೆಲ್ಸ್ ಸಂಸ್ಥೆ ಮಾಲೀಕರಾದ ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಅಧ್ಯಕ್ಷ ಬೆಂಗಳೂರಿನ ಸತೀಶ್ ಅವರು ದುಬಾರಿ ನಾಯಿಗಳನ್ನು ಖರೀದಿಸುವ ಹವ್ಯಾಸ ಹೊಂದಿರುವವರು. ಅವರು ಜನವರಿಯಲ್ಲಿ ಈ ನಾಯಿಯನ್ನು 20 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು. ಸತೀಶ್ ತಿರುವನಂತಪುರದಲ್ಲಿ ನಡೆದಂತಹ ಕೆನ್ನೆಲ್ ಕ್ಲಬ್‌ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿದ್ದ ಅವರು, ಅತ್ಯುತ್ತಮ ತಳಿ ವರ್ಗದಡಿ 32 ಪದಕಗಳನ್ನು ಗೆದ್ದಿದ್ದಾರೆ.
ಈ ಹಿಂದೆ ಸತೀಶ್ ಅವರು 'ಕೋರಿಯನ್ ದೋಸ ಮಾಸ್ಟಿಫ್ಸ್' ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ರೂ.1 ಕೋಟಿ ಕೊಟ್ಟು ಖರೀದಿಸಿದ್ದರು. ಈಗ 20 ಕೋಟಿ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿ ಖರೀದಿಸಿದ್ದಾರೆ. ಸತೀಶ್ ಅವರು 1 ಕೋಟಿ ರೂ.ಗೆ ಖರೀದಿಸಿದ ಕೊರಿಯನ್ ಡೋಸಾ ಮ್ಯಾಸ್ಟಿಫ್ಸ್, ರೂ. 10 ಕೋಟಿ ಮೌಲ್ಯದ ಟಿಬೆಟಿಯನ್ ಮಾಸ್ಟಿಫ್ ಮತ್ತು ರೂ. 8 ಕೋಟಿಗೆ ಅಲಾಸ್ಕನ್ ಮಲಾಮುಟ್ ಸೇರಿದಂತೆ ಹಲವಾರು ಇತರ ಪ್ರೀಮಿಯಂ ತಳಿ ನಾಯಿಗಳನ್ನು ಸಹ ಸಾಕಿದ್ದಾರೆ.


Click it and Unblock the Notifications