ಭಾರತದಲ್ಲಿ ಅನೇಕ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಒದಗಿಸುವವರಾಗಿ ಬದಲಾಗಿದ್ದಾರೆ. ಭಾರತೀಯ ಯುವಕರು, ವಿಶೇಷವಾಗಿ ನಗರಗಳಲ್ಲಿ, ಉದ್ಯಮಶೀಲತೆಯನ್ನು ವೃತ್ತಿಜೀವನದ ಆಯ್ಕೆಯಾಗಿ ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ.
ಇಂದು ಹಲವಾರು ಭಾರತೀಯ ಉದ್ಯಮಿಗಳ ಯಶೋಗಾಥೆಗಳಿವೆ. ಅದು ಅನೇಕ ಯುವಕ ಯುವತಿಯರಿಗೆ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಸ್ಫೂರ್ತಿ ನೀಡುತ್ತಿದೆ. ಅನೇಕ ಐಟಿ ವೃತ್ತಿಪರರು ತಮ್ಮ ಉದ್ಯೋಗವನ್ನು ತೊರೆದು ತಮ್ಮ ಶೈಕ್ಷಣಿಕ ಹಿನ್ನೆಲೆಗೆ ಸಂಬಂಧವಿಲ್ಲದ ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಪ್ರಾರಂಭಿಸುತ್ತಿದ್ದಾರೆ.

ಕಳೆದ ದಶಕದಲ್ಲಿ ಭಾರತದಲ್ಲಿ ಅನೇಕ ಉದ್ಯಮಿಗಳು ಬೆಳೆದಿದ್ದಾರೆ, ಅವರಲ್ಲಿ ಅನೇಕರು ವಿನಮ್ರ ಹಿನ್ನೆಲೆ ಮತ್ತು ಸಣ್ಣ ಪಟ್ಟಣಗಳಿಂದ ಬಂದ ಮೊದಲ ತಲೆಮಾರಿನ ಉದ್ಯಮಿಗಳು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹ ಯುವ ಉದ್ಯಮಿಗಳನ್ನು ಬೆಂಬಲಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ.
ಭಾರತ ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ ಅಂತಹ ಒಂದು ಪ್ರಮುಖ ಯೋಜನೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತದ ಕಾಲೇಜುಗಳಲ್ಲಿ ಇನ್ಕ್ಯುಬೇಷನ್ ಕೇಂದ್ರಗಳು ತಲೆಯೆತ್ತಿವೆ. ಸರ್ಕಾರದ ಪ್ರಮುಖ ಯೋಜನೆಯಾದ ಅಟಲ್ ಇನ್ನೋವೇಶನ್ ಮಿಷನ್ ನೂರಾರು ನವೋದ್ಯಮಗಳಿಗೆ ಧನಸಹಾಯ ಮತ್ತು ಮಾರ್ಗದರ್ಶನವನ್ನು ಒದಗಿಸಿದೆ. ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯವಾಗಿರಬಹುದು.
ನಿಮಗೆ ಸ್ಫೂರ್ತಿ ನೀಡುವ 10 ಭಾರತೀಯ ಉದ್ಯಮಿಗಳ ಯಶೋಗಾಥೆಗಳ ಪಟ್ಟಿ ಇಲ್ಲಿದೆ:
ಕನಿಕಾ ಟೇಕ್ರಿವಾಲ್
ಕ್ಯಾನ್ಸರಿನೊಂದಿಗೆ ಸೆಣೆಸಾಡಿ ಬದುಕಿ,ಕೆಲವು ಕಂಪನಿಗಳಿಗೆ ಕೆಲಸಕ್ಕಾಗಿ ಅರ್ಜಿ ಹಾಕಿ ಅದರಲ್ಲೂ ತಿರಸ್ಕೃತಗೊಂಡ, ಮಧ್ಯಮ ವರ್ಗದ ಹುಡುಗಿ ಕನ್ನಿಕಾ ಟೆಕ್ರಿವಾಲ್ ಕೊನೆಗೆ ಅಲ್ಪ ಬಂಡವಾಳದಿಂದ ಒಂದು ಚಾರ್ಟರ್ಡ್ ವಿಮಾನ ಬುಕ್ ಮಾಡುವ ಆಪ್ ರಚಿಸಿ, ಒಂದೇ ಒಂದು ವಿಮಾನವನ್ನು ಹೊಂದದೆ ಧೈರ್ಯದಿಂದ ಭಾರತೀಯ ವಾಯುಯಾನ ಉದ್ಯಮಕ್ಕೆ ಕಾಲಿಟ್ಟರು.
ಇಂದು ಈ ಯುವ ಉದ್ಯಮಿ ಸುಮಾರು 150 ಕೋಟಿ ವಹಿವಾಟು ಮಾಡುವ ಕಂಪನಿ ಕಟ್ಟಿದ್ದು ಮತ್ತು ಸುಮಾರು 200 ಜನಗಳಿಗೆ ಉದ್ಯೋಗಾವಕಾಶ ಒದಗಿಸಿ ಯಶಸ್ವಿ ಯುವ ಉದ್ಯಮಿಯಾಗಿದ್ದಾರೆ ಮತ್ತು ಇಂದಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.
ನಿಧಿ ಯಾದವ್
ಇಂಜಿನಿಯರಿಂಗ್ ಪದವೀಧರೆಯಾದ ನಿಧಿ ಯಾದವ್ ತನ್ನದೇ ಸ್ವಂತ ಕಂಪನಿ ಕಟ್ಟುವ ಕನಸುಗಳೊಂದಿಗೆ ಡೆಲೋಯ್ಟ್ ಎಂಬ ಬಹುರಾಷ್ಟ್ರೀಯ ಕಂಪನಿಯ ಕೆಲಸ ತ್ಯಜಿಸಿ ಕೇವಲ 3.5 ಲಕ್ಷ ರೂಪಾಯಿ ಬಂಡವಾಳ ಹಾಕಿ ವಸ್ತ್ರ ವಿನ್ಯಾಸ ಮಾಡುವ ಆಕ್ಸ್ ಎಂಬ ಕಂಪನಿ ತೆರೆದರು.
ಇಂದು ಕಂಪನಿ ಯಾವುದೇ ಹೊರಗಿನವರ ಹಣದ ಸಹಾಯವಿಲ್ಲದೆ ಸುಮಾರು 200 ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟು ಮಾಡುತ್ತಿದ್ದು, 2024 ಹೊತ್ತಿಗೆ ಸುಮಾರು 500 ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟು ಮಾಡುವ ಗುರಿ ಹೊಂದಿದೆ.
ಕರಣ್ ಚೋಪ್ರಾ
ಇಂಜಿನಿಯರಿಂಗ್ ಪದವೀಧರರಾದ ಕರಣ್ ಚೋಪ್ರಾ ಅವರು 6 ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದ ಖ್ಯಾತ ಟಿಸಿಎಸ್‌ನಿಂದ ಹೊರಬಂದು ತನ್ನದೇ ಹೊಸ ಉದ್ಯಮ ಕಟ್ಟುವ ಕನಸೊಂದಿಗೆ ಸ್ವಂತ ಊರಿಗೆ ಮರಳಿದರು.
ಸ್ವಂತ ಊರಿನಲ್ಲಿ ಎಲ್‌ಇಡಿ ಬಲ್ಬ್ ಮಾರಿ ಒಂದು ವರ್ಷದಲ್ಲಿ ಕೇವಲ 60 ಸಾವಿರ ರೂಪಾಯಿ ಸಂಪಾದಿಸಿದರು ಮತ್ತು ಛಲ ಬಿಡದೆ ಅಲ್ಪ ಬಂಡವಾಳದೊಂದಿಂಗೆ ಚಿರಾಯು ಪವರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಸ್ಥಾಪಿಸಿ ಇಂದು ಸುಮಾರು 100 ಜನರಿಗೆ ಉದ್ಯೋಗಾವಕಾಶ ನೀಡುವುದರ ಜೊತೆಗೆ 14 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಮಾಡುವ ಕಂಪನಿ ಕಟ್ಟಿದ್ದಾರೆ.
ಶರತ್ ಸೋಮಣ್ಣ
ನಮ್ಮ ಕರ್ನಾಟಕದವರೇ ಆದ ಶರತ್ ಸೋಮಣ್ಣನವರು ರಾಮಯ್ಯ ಕಾಲೇಜ್ನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವಾಗಲೇ ಕೇವಲ 46 ಸಾವಿರ ಬಂಡವಾಳದಿಂದ ಬ್ಲೂ ಓಕ್ ಕನ್ಸ್ಟ್ರಕ್ಷನ್ಸ್ & ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಯಾವುದೇ ತರಬೇತಿ ಇಲ್ಲದೆ ಇಂದು ಸುಮಾರು 20 ಕೋಟಿ ವ್ಯವಹಾರ ಮಾಡುವ ಕಂಪನಿ ಕಟ್ಟಿ ಸುಮಾರು 150 ಜನರಿಗೆ ಉದ್ಯೋಗಾವಕಾಶ ಒದಗಿಸಿದ್ದಾರೆ.
ಫೈಜಲ್ ಅಹ್ಮದ್
ಕಾಲೇಜು ವಿದ್ಯಾರ್ಥಿಯಾಗಿದ್ದ ಫೈಝಲ್ ಅಹಮದ್ ಅವರು 5 ಲಕ್ಷ ರೂಪಾಯಿಗಳ ಬಂಡವಾಳದೊಂದಿಗೆ ಮತ್ತು 3 ಜನ ದರ್ಜಿಗಳೊಂದಿಗೆ ಕೇವಲ 7 ಹೊಲಿಗೆ ಯಂತ್ರಗಳನ್ನು ಇಟ್ಟುಕೊಂಡು ಪುರುಷರ ಉಡುಪುಗಳ ಬ್ರ್ಯಾಂಡ್ ಸುಕ್ಸಸ್ (SUXUS) ಅನ್ನು ಸ್ಥಾಪಿಸಿದರು.
ಇಂದು, ಅವರು ತಮಿಳುನಾಡಿನಲ್ಲಿ ಆರು ಶೋರೂಮ್‌ಗಳನ್ನು ಹೊಂದಿದ್ದಾರೆ ಮತ್ತು 2030 ರ ವೇಳೆಗೆ 420 ಕ್ಕೂ ಹೆಚ್ಚು ಶೋರೂಮ್‌ಗಳನ್ನು ಹೊಂದಲು ಯೋಜಿಸಿದ್ದಾರೆ. ಸುಕ್ಸಸ್ ಯಾವುದೇ ಬಾಹ್ಯ ನಿಧಿಯಿಲ್ಲದೆ ಸಂಪೂರ್ಣವಾಗಿ ಸಾಲ-ಮುಕ್ತ ಕಂಪನಿಯಾಗಿದೆ, ಮತ್ತು ಸುಮಾರು 50 ಕೋಟಿ ರೂಪಾಯಿ ವಹಿವಾಟು ಮಾಡುತ್ತಿದೆ.
ಹಿತೇಶ್ ರಾಠಿ
ಹಿತೇಶ್ ರಾಠಿ ಆದ್ವಿಕ್ ಫುಡ್ಸ್ ಸಂಸ್ಥಾಪಕರಾಗಿದ್ದಾರೆ. ಇದಕ್ಕೂ ಮೊದಲು ಅವರು ಪರಮಿ ಎನರ್ಜಿ ಹೋಲ್ಡಿಂಗ್‌ನಲ್ಲಿ ನಿರ್ಮಾಣ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಪಿಇ ಅನಾಲಿಟಿಕ್ಸ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿದ್ದರು. ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದಿದ್ದಾರೆ.
ಒಂಟೆ ಹಾಲು ಮತ್ತು ಅದರ ಉತ್ಪನ್ನಗಳನ್ನು ಸಂಸ್ಕರಿಸುವ, ಬ್ರಾಂಡ್ ಮಾಡುವ ಮತ್ತು ಮಾರುಕಟ್ಟೆ ಮಾಡುವ ಭಾರತದ ಮೊದಲ ಕಂಪನಿಯಾದ ಅದ್ವಿಕ್ ಫುಡ್ಸ್ ಸುಮಾರು 8 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.
ಉಪ್ಮಾ ಕಪೂರ್
ಜೀವನದ ಬಿರುಗಾಳಿಗಳನ್ನು ಧೈರ್ಯದಿಂದ ಎದುರಿಸುತ್ತಿರುವ ಕಪೂರ್, ಇಂದು ಟೀಲ್ ಮತ್ತು ಟೆರ್ರಾ, ವೈಯಕ್ತಿಕ ಬಾಡಿ ಕೇರ್ ಸ್ಟಾರ್ಟ್‌ಅಪ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ.
2017 ರಲ್ಲಿ 8 ಲಕ್ಷ ರೂಪಾಯಿಯಿಂದ ಪ್ರಾರಂಭ ಮಾಡಿದ ಉದ್ಯಮವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ, ಮೊದಲ ವರ್ಷದಲ್ಲಿ 80 ಲಕ್ಷ ರೂಪಾಯಿ ವಹಿವಾಟು ನಡೆಸಿತು ಮತ್ತು ಇಂದು 15 ಕೋಟಿ ರೂಪಾಯಿ ವಹಿವಾಟು ಮಾಡುತ್ತ ಯಶಸ್ವಿ ಉದ್ಯಮವಾಗುವತ್ತ ದಾಪುಗಾಲಿಟ್ಟಿದೆ.
ಕಾರ್ತಿಕ್ ಮಣಿಕಂದನ್
ಕಾರ್ತಿಕ್ ಮಣಿಕಂದನ್ ಅವರು ದಕ್ಷಿಣ ಭಾರತದಲ್ಲಿ ಸಂಗಮ್ ಗ್ರೂಪ್ ಆಫ್ ಹೋಟೆಲ್ಸ್ ಅನ್ನು ಹೊಂದಿರುವ ವ್ಯಾಪಾರ ಕುಟುಂಬದಲ್ಲಿ ಜನಿಸಿದರು. ಆದರೆ ಕುಟುಂಬದ ವ್ಯವಹಾರಕ್ಕೆ ಸೇರುವ ಮೊದಲು, ಸ್ವಂತವಾಗಿ ಏನಾದರೂ ಮಾಡಿ ತನ್ನದೇ ಹೆಸರು ಮಾಡಬೇಕೆಂಬ ಛಲ ಬೆಳೆಸಿಕೊಂಡರು.
ಬಿ ಟೆಕ್ ಓದುತ್ತಿರುವಾಗಲೇ ಕಾಲೇಜು ಪ್ರವಾಸಗಳನ್ನು ಆಯೋಜಿಸಲು ಆರಂಭಿಸಿದ್ದು, ಪದವಿ ಮುಗಿಯುವ ವೇಳೆಗೆ 25 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸುವ ಉದ್ಯಮವನ್ನು ಕಟ್ಟಿದರು.
ಈಗ, 35 ನೇ ವಯಸ್ಸಿನಲ್ಲಿ, ಅವರು ಜಿಟಿ ಹಾಲಿಡೇ ಪ್ರೈವೇಟ್ ಲಿಮಿಟೆಡ್ ಎಂಬ 90 ಕೋಟಿ ರೂಪಾಯಿ ವಹಿವಾಟು ಕಂಪನಿಯನ್ನು ನಿರ್ಮಿಸಿದ್ದಾರೆ ಮತ್ತು ಯಶಸ್ವಿ ಉದ್ಯಮಿಯಾಗಿದ್ದರೆ.
ದೀಪ್ ಬಜಾಜ್
ಪ್ರಶಸ್ತಿ ವಿಜೇತ ಸಾಮಾಜಿಕ ವಾಣಿಜ್ಯೋದ್ಯಮಿ, ದೀಪ್ ಬಜಾಜ್ ಪೀಬಡ್ಡಿ- ಭಾರತದ ಮೊದಲ ಪೋರ್ಟಬಲ್, ಬಿಸಾಡಬಹುದಾದ ಮತ್ತು ವಿನ್ಯಾಸದ ಪೇಟೆಂಟ್ ಸಂರಕ್ಷಿತ ಎಫ್‌ಯುಡಿ - ಸ್ತ್ರೀ ಮೂತ್ರ ವಿಸರ್ಜನೆ ಸಾಧನ ಮತ್ತು ಸಿರೋನಾ - ಆಧುನಿಕ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಸಂಸ್ಥಾಪಕರಾಗಿದ್ದಾರೆ. ಸಿರೋನ ಕಂಪನಿಯು ಒಂದು ಸಾಮಾಜಿಕ ಬದ್ಧತೆಯುಳ್ಳ ಕಂಪನಿ ಆಗಿದ್ದು, ಮಾರಾಟವಾದ ಪ್ರತಿ ಉತ್ಪನ್ನದ 1 ರೂಪಾಯಿಯನ್ನು ಸಾಮಾಜಿಕ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ.
ಮಲ್ಲಿಕಾ ದತ್ತ್ ಸದಾನಿ
ಇಂಜಿನಿಯರ್ ಮತ್ತು ಎಂಬಿಎ ಪದವೀಧರರಾಗಿರುವ ಮಲಿಕಾ ದತ್ತ್ ಸದಾನಿ ಅವರು ದ ಮಾಮ್ಸ್ ಕಂ. ಸಂಸ್ಥಾಪಕರು ಮತ್ತು ಸಿಇಒ ಆಗಿದ್ದಾರೆ. ನಿರೀಕ್ಷಿತ ಮತ್ತು ಹೊಸ ತಾಯಂದಿರಿಗೆ ತಮ್ಮ ದೈನಂದಿನ ವೈಯಕ್ತಿಕ ಆರೈಕೆಗಾಗಿ ನೈಸರ್ಗಿಕ, ರಾಸಾಯನಿಕ-ಮುಕ್ತ ಉತ್ಪನ್ನಗಳನ್ನು, ಟಾಕ್ಸಿನ್-ಮುಕ್ತ ಉತ್ಪನ್ನಗಳನ್ನು ಮಾರುವ ಭಾರತದ ಪ್ರಮುಖ ಕಂಪನಿಯಾಗಿದೆ. ಕಂಪನಿಯು 500 ಕೋಟಿ ವಹಿವಾಟು ನಡೆಸುವತ್ತ ದಾಪುಗಾಲಿಟ್ಟಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications