ಆದಾಯ ತೆರಿಗೆ ಮರು ಪಾವತಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು 2023ರ ಜುಲೈ 31 ಕೊನೆಯ ದಿನಾಂಕವಾಗಿತ್ತು. ಆ ನಂತರದಲ್ಲಿ ದಂಡ ಅನ್ವಯವಾಗಲಿದ್ದು, ದಂಡದೊಂದಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ರವರೆಗೂ ಅವಕಾಶವಿದೆ. ವಾರ್ಷಿಕ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವವರಿಗೆ 1000 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಅಧಿಕ ದಂಡವನ್ನು ವಿಧಿಸಲಾಗುತ್ತದೆ.
ಒಮ್ಮೆ ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ನಂತರ ಇ-ವೆರಿಫಿಕೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಬಹಳ ಮುಖ್ಯ. ಒಂದುವೇಳೆ ಇದನ್ನು ಸರಿಯಾಗಿ ಮಾಡದೆ ಹೋದರೆ ನಿಮ್ಮ ಐಟಿಆರ್ ಸಲ್ಲಿಕೆಯು ಅಮಾನ್ಯವಾಗಿರುತ್ತದೆ. ಆಗ ಮರು ಫೈಲಿಂಗ್ ಅನ್ನು ಮಾಡಬೇಕಾದ ಅಗತ್ಯವಿರುತ್ತದೆ. ಐಟಿ ರಿಟರ್ನ್ಸ್‌ನಲ್ಲಿ ಯಾವುದೇ ಮರುಪಾವತಿಯನ್ನು ಸ್ವೀಕರಿಸುವುದಕ್ಕೆ ಇದು ಅತ್ಯಗತ್ಯವಾಗಿದೆ.

ಒಂದುವೇಳೆ ಐಟಿಆರ್ ರೀಫಂಡ್‌ಗಾಗಿ ಈಗಲೂ ಕಾಯುತ್ತಿದ್ದರೆ ಮತ್ತು ಫೈಲಿಂಗ್ ಮಾಡದೆ ಗಮನಾರ್ಹ ಸಮಯವನ್ನು ಕಳೆದಿದ್ದರೆ ಅದು ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರಣಗಳನ್ನು ಪರಿಶೀಲಿಸುವ ಮೊದಲು ನಿಮ್ಮ ಮರುಪಾವತಿ ಸ್ಟೇಟಸ್ ಅನ್ನು ಚೆಕ್ ಮಾಡಿ.
ನಿರೀಕ್ಷಿತ ರೀ-ಫಂಡ್ ಸಮಸ್ಯೆಗಳು:
1. ಅರ್ಹತೆ: ಕೆಲವು ತೆರಿಗೆದಾರರು ಅರ್ಹರಲ್ಲದ ಕಾರಣ ಅಂಥವರು ಮರುಪಾವತಿಯನ್ನು ಪಡೆಯುವುದಿಲ್ಲ. ನೀವು ಅರ್ಹರಾಗಿದ್ದರೆ ಫೈಲಿಂಗ್ ಸಮಯದಲ್ಲಿ ತೆರಿಗೆ ವೆಬ್‌ಸೈಟ್ ಅದನ್ನು ಖಚಿತಪಡಿಸುತ್ತದೆ ಹಾಗೂ ನೀವು ರೀ-ಫಂಡ್ ಅನ್ನು ನಿರೀಕ್ಷಿಸಬಹುದು.
2. ಬ್ಯಾಂಕ್ ಖಾತೆ ವಿವರಗಳು: ನಿಮ್ಮ ಬ್ಯಾಂಕ್ ಖಾತೆ ಮಾಹಿತಿಗಳು ಸಮರ್ಪಕವಾಗಿರಬೇಕು ಹಾಗೂ ಪೂರ್ವ ಮೌಲ್ಯೀಕರಣಗೊಂಡಿರಬೇಕು. ಇಲ್ಲದಿದ್ದರೆ ನೀವು ಮರುಪಾವತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
3. ಪ್ಯಾನ್ ಹಾಗೂ ಬ್ಯಾಂಕ್ ಮಾಹಿತಿ: ನಿಮ್ಮ ಪ್ಯಾನ್ ವಿವರಗಳು ಐಎಫ್‌ಎಸ್‌ಸಿ ಕೋಡ್ ಒಳಗೊಂಡಂತೆ ಬ್ಯಾಂಕ್ ಖಾತೆ ಮಾಹಿತಿಗೆ ಸರಿ ಹೊಂದಿಕೆಯಾಗಿರಬೇಕು.
4. ಸಮಯಕ್ಕೆ ಸರಿಯಾಗಿ ವೆರಿಫಿಕೇಷನ್: ಐಟಿಆರ್ ವೆರಿಫಿಕೇಷನ್ ಪ್ರಕ್ರಿಯೆಯನ್ನು 30 ದಿನದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಐಟಿಆರ್ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.


Click it and Unblock the Notifications