ಆದಾಯ ತೆರಿಗೆ ಹೊಸ ಇ-ಫೈಲಿಂಗ್ ಪೋರ್ಟಲ್‌ ಅನ್ನು ಬಳಸುವುದು ಹೇಗೆ?

ಆದಾಯ ತೆರಿಗೆ ಇಲಾಖೆ ಜೂನ್ 7ರಂದು ಹೊಸ ಐಟಿಆರ್ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಹಳೆಯ ವೆಬ್‌ಸೈಟ್ www.incometaxindiaefiling.gov.in ಬದಲಾಗಿ www.incometaxgov.in ಹೊಸ ಪೋರ್ಟಲ್‌ಗೆ ನೀವು ಭೇಟಿ ನೀಡಬಹುದು.

ಈ ಹೊಸ ಪೋರ್ಟಲ್ ಬಹಳಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು ಬಳಕೆದಾರರಿಗೆ ಚುರುಕಾದ ಮತ್ತು ಸುಗಮವಾದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಅನುಭವವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈಗಾಗಲೇ ಹೊಸ ಪೋರ್ಟಲ್ ಚಾಲನೆಯಲ್ಲಿದೆ, ಹೊಸ ವೆಬ್‌ಸೈಟ್ ಅನ್ನು ಹೇಗೆ ಬಳಸುವುದು ಮತ್ತು ಅದು ಯಾವೆಲ್ಲಾ ಹೊಸ ವೈಶಿಷ್ಟ್ಯಗಳನ್ನ ಹೊಂದಿದೆ ಎಂದು ತಿಳಿಯಲು ಅನೇಕರು ಪ್ರಯತ್ನ ಪಡುತ್ತಾರೆ. ನೀವು ತೆರಿಗೆ ಪಾವತಿದಾರರಾಗಿದ್ದರೆ, ಹೊಸ ವೆಬ್‌ಸೈಟ್ ಅನ್ನು ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಕಲಿಯಲು ನಿಮಗೆ ಸಹಾಯ ಮಾಡುವ ಮಾರ್ಗದರ್ಶಿ ಇಲ್ಲಿದೆ.

ನೀವು ಹೊಸ ಪೋರ್ಟಲ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸುವ ಹಂತಗಳು:

ನೀವು ಹೊಸ ಪೋರ್ಟಲ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸುವ ಹಂತಗಳು:

* ಪೇಜ್‌ನ ಮೇಲ್ಭಾಗದಲ್ಲಿ ನೀವು ಐಟಿಆರ್ , ಅಪ್ಲಿಕೇಶನ್ ಫಾರ್ಮ್, ಕಡಿತಗಳು, ರೀಫಂಡ್ ಸ್ಟೇಟಸ್ ಸ್ಥಿತಿ ಮತ್ತು ಹೆಚ್ಚಿನದನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ತಿಳಿಯಲು ಅನ್ವಯವಾಗುವ ಟ್ಯಾಬ್‌ಗಳ ಮೇಲೆ ಕ್ಲಿಕ್ ಮಾಡಬಹುದು.

* ಒಮ್ಮೆ ನೀವು ಪೇಜ್ ಅನ್ನು ಸ್ಕ್ರಾಲ್ ಮಾಡಿದ ನಂತರ ನೀವು ಇ-ಪರಿಶೀಲನೆ, ಲಿಂಕ್ ಆಧಾರ್ ಮುಂತಾದ ಸೇವೆಗಳನ್ನು ವೀಕ್ಷಿಸಬಹುದು, ನಿಮ್ಮ ರೀಫಂಡ್ ಸ್ಟೇಟಸ್ ಮತ್ತು ಐಟಿಆರ್ ಸ್ಟೇಟಸ್ ತಿಳಿಯಿರಿ.

* ಇದಲ್ಲದೆ ಬಳಕೆದಾರರ ಕೈಪಿಡಿ ಮತ್ತು FAQ ಗಳೊಂದಿಗೆ ವೆಬ್‌ಸೈಟ್ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಸಂವಾದಾತ್ಮಕ ವೀಡಿಯೊಗಳನ್ನು ಹೊಂದಿರುವ ಬಳಕೆದಾರ ಗೈಡ್ ವಿಭಾಗವನ್ನು ಪ್ರವೇಶಿಸಲು ನೀವು ಕೆಳಗೆ ಸ್ಕ್ರಾಲ್ ಮಾಡಬಹುದು.

 

ಲಾಗ್‌ ಇನ್ ಆಗಬೇಕು

ಲಾಗ್‌ ಇನ್ ಆಗಬೇಕು

ಈಗ ಹೊಸ ವೆಬ್‌ಸೈಟ್ ನೀಡುವ ಎಲ್ಲಾ ಸೇವೆಗಳನ್ನು ಪಡೆಯಲು, ನೀವು ಹೊಸ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಒಮ್ಮೆ ನೀವು ಲಾಗ್ ಇನ್ ಮಾಡಿದ ನಂತರ ನೀವು ವಿವಿಧ ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತೀರಿ.

ಲಾಗ್‌ ಇನ್ ಮಾಡಿದ ಬಳಿಕ ಪಡೆಯುವ ಸೇವೆಗಳು

ಲಾಗ್‌ ಇನ್ ಮಾಡಿದ ಬಳಿಕ ಪಡೆಯುವ ಸೇವೆಗಳು

1. ಫಾರ್ಮ್‌ಗಳನ್ನು ಭರ್ತಿ ಮಾಡಲು, ಫೈಲ್ ರಿಟರ್ನ್ಸ್ ಮತ್ತು ನಿಮ್ಮ ತೆರಿಗೆಯನ್ನು ಇ-ಪಾವತಿಸಲು ಇ-ಫೈಲ್ ನಿಮಗೆ ಸಹಾಯ ಮಾಡುತ್ತದೆ.

2. ಅಧಿಕೃತ ಪಾಲುದಾರ ಟ್ಯಾಬ್ ನಿಮ್ಮ ಇ-ರಿಟರ್ನ್ ಮಧ್ಯವರ್ತಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಅನ್ನು ಅನ್ವೇಷಿಸಲು ನಿಮಗೆ ಅನುಮತಿಸುತ್ತದೆ.

3. ಸೇವೆಗಳ ಮೆನು ಅಡಿಯಲ್ಲಿ ಹೊಸ ವೆಬ್‌ಸೈಟ್‌ನಲ್ಲಿ ನೀವು ಸರಿಪಡಿಸುವಿಕೆ, ಮರುಪಾವತಿ / ಮರುಹಂಚಿಕೆ ಮುಂತಾದ ಸೇವೆಗಳನ್ನು ಪಡೆಯುತ್ತೀರಿ.

4. ಇದಲ್ಲದೆ, ಯಾವುದೇ ಪೆಂಡಿಂಗ್ ಇರುವ ಪ್ರಕ್ರಿಯೆ ಮುಂದುವರಿಸಲು ನಿಮಗೆ ಅನುಮತಿಸುವ ಮೆನು ಕೂಡ ಇದ್ದು, ಯಾವುದೇ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುವ ಗ್ರೀವೆನ್ಸ್‌ ಮೆನುವನ್ನು ಸಹ ನೀವು ನೋಡಬಹುದು.

 

ಹೊಸ ಪೋರ್ಟಲ್ ವೈಶಿಷ್ಟ್ಯಗಳೇನು?

ಹೊಸ ಪೋರ್ಟಲ್ ವೈಶಿಷ್ಟ್ಯಗಳೇನು?

ಹೊಸ ಐಟಿಆರ್‌ ವೆಬ್‌ಸೈಟ್‌ ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್ ಆಗಿದ್ದು, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ತ್ವರಿತ ಮರುಪಾವತಿಗೆ ಸಂಯೋಜಿಸಲಾಗಿದೆ.
ತೆರಿಗೆದಾರರಿಂದ ಅನುಸರಣಾ ಕ್ರಮಕ್ಕಾಗಿ ಎಲ್ಲಾ ಸಂವಹನಗಳು ಮತ್ತು ಅಪ್‌ಲೋಡ್‌ಗಳು ಅಥವಾ ಬಾಕಿ ಇರುವ ಕ್ರಿಯೆಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ತಕ್ಷಣ ಪ್ರೊಸೆಸ್ ಆಗುವಂತೆ ಇನ್​ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜೊತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.

ಐಟಿಆರ್‌ ವೆಬ್‌ಸೈಟ್‌ನ ಹೆಚ್ಚುವರಿಯಾಗಿ, ತೆರಿಗೆದಾರರ ಪ್ರಶ್ನೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಲು ಹೊಸ ಕಾಲ್ ಸೆಂಟರ್ ಅನ್ನು ಸಹ ಸ್ಥಾಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಟ್ಯುಟೋರಿಯರಲ್​ಗಳು, ವಿಡಿಯೋಗಳು, ಕಾಲ್​ಸೆಂಟರ್, ಚಾಟ್​ಬಾಟ್ ಅಥವಾ ಲೈವ್ ಏಜೆಂಟ್​ಗಳು ಈ ಸೈಟ್​ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ.

 

ಮೊಬೈಲ್‌ ಅಪ್ಲಿಕೇಶನ್ ಸದ್ಯದಲ್ಲೇ ಬಿಡುಗಡೆ

ಮೊಬೈಲ್‌ ಅಪ್ಲಿಕೇಶನ್ ಸದ್ಯದಲ್ಲೇ ಬಿಡುಗಡೆ

ವೆಬ್‌ಸೈಟ್ ಅಷ್ಟೇ ಅಲ್ಲದೆ ತೆರಿಗೆದಾರರು ವಿವಿಧ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗಲು ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ತೆರಿಗೆದಾರರ ಅನಾನುಕೂಲತೆಯನ್ನು ತಪ್ಪಿಸುವ ಸಲುವಾಗಿ, ಯಾವುದೇ ಪೂರ್ವ ಮಾಹಿತಿ ಪಡೆಯಲು ಈ ಮೊಬೈಲ್ ಅಪ್ಲಿಕೇಶನ್ ಸಹಾಯವಾಗುತ್ತದೆ.

ಪೋರ್ಟಲ್‌ ಆರಂಭಿಕವಾಗಿ ತೆರಿಗೆದಾರರಿಗೆ ಹೆಚ್ಚು ಪರಿಚಿತವಾದ ಬಳಿಕ ಈ ಮೊಬೈಲ್ ಅಪ್ಲಿಕೇಶನ್‌ ಅನ್ನು ಪರಿಚಯಿಸಲಾಗುತ್ತದೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+