For Quick Alerts
ALLOW NOTIFICATIONS  
For Daily Alerts

ಜೀವನದ ಸಂತೋಷಕ್ಕೆ IKIGAIನ 10 ಸೂತ್ರಗಳು: ಆನಂದ್ ಮಹೀಂದ್ರಾ ಟ್ವೀಟ್

|

ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ದಾನ ಗುಣದ ಮೂಲಕ ಹಾಗೂ ಒಳ್ಳೆಯ ವಿಚಾರವನ್ನು ಎಲ್ಲಿ ಕಂಡರೂ ಅದನ್ನು ಗೌರವಿಸಿ, ಮೆಚ್ಚಿಕೊಳ್ಳುವ ಮೂಲಕ ಸಾಮಾನ್ಯ ಜನರಲ್ಲೂ ಜೀವನೋತ್ಸಾಹ ತುಂಬುತ್ತಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಸಕ್ರಿಯರಾಗಿರುವ ಅವರು, ಯಾವುದಾದರೂ ವಿಚಾರ ಹಂಚಿಕೊಂಡಿದ್ದಾರೆ ಅಂದರೆ ಅದು ಖಂಡಿತಾ ಮೌಲಿಕವಾಗಿರುತ್ತದೆ.

ಈಗ ಕೂಡ ಅಂಥದ್ದೇ ಆಸಕ್ತಿಕರ ಸಂಗತಿಯೊಂದನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ. ಅದು IKIGAIನ 10 ಸೂತ್ರಗಳು. ಸಂತೋಷದಿಂದ ಜೀವನ ಸಾಗಿಸಲು ಜಪಾನೀಯರು ಕಂಡುಕೊಂಡ ಸೂತ್ರ ಇದು. ಅವುಗಳನ್ನು ಅನುಸರಿಸಿದರೆ ಸಂತೋಷವಾಗಿರಬಹುದು ಎಂಬುದು ಜಪಾನೀಯರ ನಂಬಿಕೆ. ಅದನ್ನೇ ಆನಂದ್ ಮಹೀಂದ್ರಾ ಅನುಮೋದಿಸಿದ್ದಾರೆ. ನಿಮಗೆ ಏನನ್ನಿಸುತ್ತದೆ ಹೇಳಿ.

ಶ್ರೀಮಂತರಾಗಲು, ಶ್ರೀಮಂತಿಕೆ ಉಳಿಯಲು ಮೇಧಾವಿಯ ಸಲಹೆಗಳು

 

"ನಾನು ಈ ಸಿದ್ಧಾಂತದ ಬಗ್ಗೆ ಹೆಚ್ಚು ತಿಳಿದಿಲ್ಲ. ಅದಕ್ಕಾಗಿ ನಿಮಗೆ ಪಿಎಚ್.ಡಿ., ಕೂಡ ಬೇಕಿಲ್ಲ. ಜೀವನಕ್ಕೆ ಅಗತ್ಯ ಇರುವ ಸಾಮಾನ್ಯ ಜ್ಞಾನ ಈ ಪ್ರಿಸ್ಕ್ರಿಪ್ಷನ್ ನಲ್ಲಿ ಇದೆ. ಪ್ರತಿ ಬೆಳಗ್ಗೆ ದೈನಂದಿನ ಕೆಲಸಗಳಿಗೆ ತೊಡಗುವ ಮುನ್ನ ನೋಡುವುದಕ್ಕೆ ಇದು ಉತ್ತಮವಾದ ಚಾರ್ಟ್" ಎಂಬ ಟ್ವಿಟ್ಟರ್ ಒಕ್ಕಣೆಯನ್ನೂ ಆನಂದ್ ಮಹೀಂದ್ರಾ ಹಾಕಿದ್ದಾರೆ.

ಒಂದು: ಸಕ್ರಿಯರಾಗಿರಿ, ಎಂದಿಗೂ ನಿವೃತ್ತರಾಗಬೇಡಿ

ಒಂದು: ಸಕ್ರಿಯರಾಗಿರಿ, ಎಂದಿಗೂ ನಿವೃತ್ತರಾಗಬೇಡಿ

ನೀವು ಮಾಡುವ ಕೆಲಸಕ್ಕೆ ಒಂದು ಬೆಲೆ ಇದೆ ಎಂಬುದನ್ನು ತಿಳಿಯಿರಿ. ಬೆಲೆ ಇರುವಂಥ ಕೆಲಸವನ್ನು ಮಾಡಿ. ಪ್ರಗತಿಯನ್ನು ಸಾಧಿಸಿ. ಇತರರಿಗೂ ಸಹಾಯ ಮಾಡಿ. ಸದಾ ಸಕ್ರಿಯರಾಗಿರುವ ಮೂಲಕ ನಿವೃತ್ತಿಯ ಆಲೋಚನೆ ಕೂಡ ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಿ.

ಎರಡು: ನಿಧಾನವಾಗಿ ಸ್ವೀಕರಿಸಿ

ಎರಡು: ನಿಧಾನವಾಗಿ ಸ್ವೀಕರಿಸಿ

ಬಹಳ ಆತುರಾತುರವಾಗಿ ಏನನ್ನೋ ಪ್ರಯತ್ನಿಸಿದರೆ ಅದು ಆಷ್ಟೇ ಆತುರವಾಗಿ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದಲೇ ನಿಧಾನವಾಗಿ ನಡೆಯಿರಿ, ಬಹಳ ದೂರದ ತನಕ ನಡೆಯಬಹುದು.

ಮೂರು: ಹೊಟ್ಟೆ ಬಿರಿಯುವ ಹಾಗೆ ತಿನ್ನಬೇಡಿ

ಮೂರು: ಹೊಟ್ಟೆ ಬಿರಿಯುವ ಹಾಗೆ ತಿನ್ನಬೇಡಿ

ಊಟವೋ ತಿಂಡಿಯೋ ಏನಾದರೂ ಸರಿ, ಪೂರ್ತಿ ತುಂಬುವ ತನಕ ತಿನ್ನಬೇಡಿ. ನಿಮಗೆ ಎಷ್ಟು ಹಸಿವಾಗಿದೆಯೋ ಅದಕ್ಕಿಂತ ಸ್ವಲ್ಪ ಕಡಿಮೆ ತಿನ್ನಿ.

ನಾಲ್ಕು: ಸುತ್ತಲೂ ಉತ್ತಮ ಸ್ನೇಹಿತರಿರಲಿ
 

ನಾಲ್ಕು: ಸುತ್ತಲೂ ಉತ್ತಮ ಸ್ನೇಹಿತರಿರಲಿ

ಜೀವನಕ್ಕೆ ಸ್ನೇಹಿತರೇ ಅತ್ಯುತ್ತಮ ಮದ್ದು. ಆದ್ದರಿಂದ ನಿಮ್ಮ ಸುತ್ತಲೂ ಯಾವಾಗಲೂ ಉತ್ತಮ ಸ್ನೇಹಿತರಿರಲಿ.

ಐದು: ವ್ಯಾಯಾಮ ಮಾಡಿ

ಐದು: ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿದರೆ ಬಿಡುಗಡೆಯಾಗುವ ಹಾರ್ಮೋನ್ ಗಳು ನಮ್ಮನ್ನು ಸಂತೋಷದಿಂದ ಇರುವಂತೆ ಮಾಡುತ್ತವೆ. ಆದ್ದರಿಂದ ನಿಯಮಿತವಾಗಿ ವ್ಯಾಯಾಮ ಮಾಡಬೇಕು.

ಆರು: ಮುಖದ ಮೇಲೆ ನಗುವಿರಲಿ

ಆರು: ಮುಖದ ಮೇಲೆ ನಗುವಿರಲಿ

ನಾವು ಈ ಭೂಮಿ ಮೇಲೆ ಇರಲು ಸಿಕ್ಕ ಅವಕಾಶದ ಬಗ್ಗೆ ತೃಪ್ತಿ ಇರಲಿ, ಕೃತಜ್ಞತೆ ಇರಲಿ. ಆ ಕಾರಣಕ್ಕೆ ಮುಖದ ಮೇಲೆ ನಗುವಿರಲಿ.

ಏಳು: ಪ್ರಕೃತಿ ಜತೆ ನಂಟಿರಲಿ

ಏಳು: ಪ್ರಕೃತಿ ಜತೆ ನಂಟಿರಲಿ

ನಿಮ್ಮ ಉತ್ಸಾಹ, ಚೈತನ್ಯ ಸದಾ ಜಾಗ್ರತೆಯಿಂದ ಇರುವ ಸಲುವಾಗಿ ಪ್ರಕೃತಿ ಜತೆಗೆ ನಂಟು ಉಳಿಸಿಕೊಳ್ಳಿ, ನಂಟು ಬೆಸೆದುಕೊಳ್ಳಿ.

ಎಂಟು: ಧನ್ಯವಾದ ಹೇಳಿ

ಎಂಟು: ಧನ್ಯವಾದ ಹೇಳಿ

ನಿಮಗೆ ದೊರೆತ ಎಲ್ಲ ಒಳ್ಳೆಯದಕ್ಕೂ ಧನ್ಯವಾದ ಹೇಳುವುದನ್ನು ರೂಢಿಸಿಕೊಳ್ಳಿ. ಆ ಮೂಲಕ ನಿಮ್ಮ ಸಂತೋಷ ಹೆಚ್ಚುವುದನ್ನು ಗಮನಿಸಿ.

ಒಂಬತ್ತು: ಈ ಕ್ಷಣದಲ್ಲಿ ಜೀವಿಸಿ

ಒಂಬತ್ತು: ಈ ಕ್ಷಣದಲ್ಲಿ ಜೀವಿಸಿ

ಈಗಾಗಲೇ ಆಗಿ ಹೋಗಿದ್ದರ ನಿನ್ನೆಯ ಬಗ್ಗೆ ವಿಷಾದ ಇರಿಸಿಕೊಳ್ಳದೆ, ಭವಿಷ್ಯದ ಬಗ್ಗೆ ಆತಂಕ ಪಡದೆ ನಿಮ್ಮ ಬಳಿ ಇರುವ ಈ ದಿನವನ್ನು ಅನುಭವಿಸಿ.

ಹತ್ತು: ನಿಮ್ಮ IKIGAI ಅನುಸರಿಸಿ

ಹತ್ತು: ನಿಮ್ಮ IKIGAI ಅನುಸರಿಸಿ

ನಿಮ್ಮೊಳಗಿನ ಉತ್ಕಟವಾದ ಇಚ್ಛೆಯನ್ನು ಅನುಸರಿಸಿ. ನಿಮ್ಮ ಬದುಕಿಗೆ ಅರ್ಥ ನೀಡುವ- ನಿಮ್ಮ ಬಳಿ ಇರುವ ವಿಶಿಷ್ಟವಾದ ಪ್ರತಿಭೆಯನ್ನು ಕಂಡುಹಿಡಿದು, ಅದರ ಜತೆಗೆ ಜೀವಿಸಿ.

English summary

Japanese IKIGAI 10 Rules To Happy Long Life: Anand Mahindra Tweet

Japanese IKIGAI 10 rules to happy long life shared by industrialist Anand Mahindra in his tweet.
Story first published: Wednesday, February 12, 2020, 17:00 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more