ಸೆಪ್ಟೆಂಬರ್ 5ರಂದು ಏಳು ವರ್ಷಗಳ ಹಿಂದೆ, ರಿಲಯನ್ಸ್ ಮಾಲೀಕ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಟೆಲಿಕಾಂ ಉದ್ಯಮದಲ್ಲಿ ಗೇಮ್ ಚೇಂಜರ್ ರಿಲಯನ್ಸ್ ಜಿಯೋವನ್ನು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಮುಂದೊಂದು ದಿನ ಜಿಯೋ ದೇಶದ ಡಿಜಿಟಲ್ ಮೂಲಸೌಕರ್ಯದ ಬೆನ್ನೆಲುಬಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಾಗಲಿಲ್ಲ.
ಪ್ರಸ್ತುತ ಜಿಯೋ ದೇಶದಲ್ಲಿಯೇ ಅತೀ ದೊಡ್ಡ ಟೆಲಿಕಾಂ ದೈತ್ಯ ಸಂಸ್ಥೆಯಾಗಿದೆ. ಏಳು ವರ್ಷಗಳಲ್ಲಿ, ಜಿಯೋ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ, ಹಾಗೆಯೇ ದೇಶದಲ್ಲಿ ಜಿಯೋ ಕೂಡಾ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಿದೆ. ದೇಶದಲ್ಲಿ ಜಿಯೋ ಸಂಸ್ಥೆಯು ಬೀರಿರುವ ಪ್ರಭಾವಗಳ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ...

1. ಉಚಿತ ಕರೆಗಳು
ಸೆಪ್ಟೆಂಬರ್ 5, 2016 ರಂದು ಜಿಯೋ ಮೊದಲು ಆರಂಭವಾಗಿದ್ದು, ಆರಂಭವಾದ ಮೊದಲ ದಿನದಲ್ಲಿ ರಿಲಯನ್ಸ್ ಜಿಯೋ ದೇಶದಲ್ಲಿ ದುಬಾರಿಯಾಗಿದ್ದ ಕರೆ ವೆಚ್ಚವನ್ನು ಕಡಿಮೆಯಾಗಿ ಲಭ್ಯವಾಗುವಂತೆ ಮಾಡಿತು. ರಿಲಯನ್ಸ್ ಜಿಯೋ ಉಚಿತ ಕರೆಯನ್ನು ನೀಡಿದ ಭಾರತದ ಮೊದಲ ಕಂಪನಿಯಾಗಿದೆ. ಇಂದಿಗೂ ಇದು ಮುಂದುವರಿದಿದೆ.
2. ಡೇಟಾ ಮತ್ತು ಮೊಬೈಲ್ ಬಿಲ್‌ಗಳು ಕಡಿಮೆ
ಜಿಯೋ ಮೊಬೈಲ್ ಡೇಟಾದ ಬೆಲೆಗಳ ಮೇಲೆ ಮತ್ತೊಂದು ದೊಡ್ಡ ಪರಿಣಾಮವಾಗಿದೆ. ಜಿಯೋ ಆರಂಭವಾದ ಸಂದರ್ಭದಲ್ಲಿ ಸುಮಾರು 255 ರೂಪಾಯಿಗೆ ಪ್ರತಿ ಜಿಬಿ ಡೇಟಾ ಲಭ್ಯವಾಗುತ್ತಿತ್ತು. ಆದರೆ ಜಿಯೋ ಡೇಟಾ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿತು. ಪ್ರತಿ ಜಿಬಿ ಡೇಟಾ 10 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲು ಆರಂಭವಾಯಿತು.
ಉಚಿತ ಕರೆ ಮತ್ತು ಕಡಿಮೆ ಡೇಟಾ ಬೆಲೆಗಳಿಂದಾಗಿ, ಮೊಬೈಲ್ ಬಿಲ್‌ಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಪ್ರಸ್ತುತ ಡೇಟಾ ಬಳಕೆಯಲ್ಲಿ ದೇಶವು ಮೊದಲೆರಡನೆಯ ಸ್ಥಾನದಲ್ಲಿದ್ದು, ಡೇಟಾ ಬೆಲೆಗಳಲ್ಲಿನ ಕಡಿತವು ಡೇಟಾ ಬಳಕೆಯ ಮೇಲೆ ನೇರ ಪರಿಣಾಮ ಬೀರಿತು. ಜಿಯೋ ಆಗಮನಕ್ಕೂ ಮೊದಲು ಡೇಟಾ ಬಳಕೆಯ ವಿಷಯದಲ್ಲಿ ಭಾರತವು ವಿಶ್ವದಲ್ಲಿ 155 ನೇ ಸ್ಥಾನದಲ್ಲಿತ್ತು. ಈಗ ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ತಿಂಗಳು 1,100 ಕೋಟಿ ಜಿಬಿ ಬಳಕೆ ಮಾಡಲಾಗುತ್ತದೆ. ಜಿಯೋ ಗ್ರಾಹಕರು ತಿಂಗಳಿಗೆ ಸರಾಸರಿ 25 ಜಿಬಿ ಡೇಟಾವನ್ನು ಬಳಸುತ್ತಾರೆ.
3. ಮೊಬೈಲ್‌ನ ಸಣ್ಣ ಪರದೆಯಲ್ಲಿ ಎಲ್ಲವೂ ಲಭ್ಯ
ಜಿಯೋದಿಂದಾಗಿ, ಡೇಟಾ ಅಗ್ಗವಾಯಿತು ಮತ್ತು ಜಗತ್ತು ಕೇವಲ ಮೊಬೈಲ್‌ಗೆ ಸೀಮಿತವಾಯಿತು. ಈಗ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಕೇವಲ ಒಂದು ಕ್ಲಿಕ್‌ನಲ್ಲಿ ಮನರಂಜನೆ ಲಭ್ಯವಿದೆ. ರೈಲು, ವಿಮಾನ, ಸಿನಿಮಾ ಹೀಗೆ ಎಲ್ಲ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಮಾಡಲಾಗುತ್ತದೆ. ಹೋಟೆಲ್ ಬುಕಿಂಗ್ ಮತ್ತು ಫುಡ್ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಳವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೊಂಡಿದೆ. ಇ-ಕಾಮರ್ಸ್ ಕಂಪನಿಗಳು ಇಡೀ ಸ್ಟೋರ್ ಅನ್ನು ಮೊಬೈಲ್‌ನಲ್ಲೇ ಲಭ್ಯವಾಗುವಂತೆ ಮಾಡಿದೆ.
4. ಡಿಜಿಟಲ್ ಪಾವತಿ
ಭಾರತ ಸರ್ಕಾರದ ಯುಪಿಐ ಓಪನ್ ಡಿಜಿಟಲ್ ಪಾವತಿ ವ್ಯವಸ್ಥೆಯು ಎಲ್ಲವನ್ನೂ ಬದಲಾಯಿಸಿದೆ. ಪೇಟಿಎಂ ಮತ್ತು ಫೋಪ್‌ಪೇನಂತಹ ವ್ಯಾಲೆಟ್ ಕಂಪನಿಗಳು ಸೇರಿದಂತೆ ದೊಡ್ಡ ಮತ್ತು ಸಣ್ಣ ಬ್ಯಾಂಕ್‌ಗಳು ಮತ್ತು ಹಣಕಾಸು ದೈತ್ಯರು ಈ ಉಪಕ್ರಮಕ್ಕೆ ಸೇರಿಕೊಂಡರು. ಪ್ರತಿ ಮೊಬೈಲ್‌ನಲ್ಲಿ ಪಾವತಿ ವ್ಯವಸ್ಥೆಯ ಮೂಲಕ ಹಣದ ವಹಿವಾಟು ನಡೆಸುವುದು ಇದರ ಉದ್ದೇಶವಾಗಿತ್ತು. ಇಂದು ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು 5 ಸ್ಟಾರ್ ಹೋಟೆಲ್‌ವರೆಗೆ ಯುಪಿಐ ಬಳಕೆ ಮಾಡಲಾಗುತ್ತದೆ.
5. 2G ಯಿಂದ 4G ಗೆ
ಜಿಯೋ ಬಿಡುಗಡೆಯ ಒಂದು ವರ್ಷದಲ್ಲಿ ಅಂದರೆ 2017 ರಲ್ಲಿ, ಕಂಪನಿಯು ಮಾರುಕಟ್ಟೆಯಲ್ಲಿ ಜಿಯೋಫೋನ್ ಅನ್ನು ಬಿಡುಗಡೆ ಮಾಡಿದೆ. 2ಜಿ ಗ್ರಾಹಕರನ್ನು 4ಜಿಗೆ ಬದಲಾವಣೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದಾಗಿ ಡಿಜಿಟಲ್ ಆರ್ಥಿಕತೆಯ ಭಾಗಕ್ಕೆ ಅಧಿಕ ಜನರ ಸೇರ್ಪಡೆ ಮಾಡಲು ಜಿಯೋ ಮುಂದಾಗಿದೆ. 13 ಕೋಟಿಗೂ ಹೆಚ್ಚು ಜಿಯೋಫೋನ್ ಮೊಬೈಲ್‌ಗಳು ಮಾರಾಟವಾಗಿವೆ. ಆರಂಭದಲ್ಲಿ ದೇಶದಲ್ಲಿ ಅತೀ ಅಧಿಕ ಮಾರಾಟವಾದ ಮೊಬೈಲ್ ಇದಾಗಿದೆ.
ಕಂಪನಿಯು ಜಿಯೋಭಾರತ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವ ಮೂಲಕ 2ಜಿ ಗ್ರಾಹಕರನ್ನು 4ಜಿಗೆ ಆಕರ್ಷಿಸುವ ಅಭಿಯಾನವನ್ನು ತೀವ್ರಗೊಳಿಸಿದೆ. ಜಿಯೋ ಜೊತೆಗೆ ಕಾರ್ಬನ್ ಎಂಬ ಕಂಪನಿಯು 'ಭಾರತ್' ಹೆಸರಿನ 4G ಫೀಚರ್ ಫೋನ್ ಅನ್ನು ತಯಾರಿಸುತ್ತಿದೆ. ಶೀಘ್ರದಲ್ಲೇ ಈ ಅಭಿಯಾನಕ್ಕೆ ಇನ್ನೂ ಕೆಲವು ಕಂಪನಿಗಳು ಸೇರುವ ನಿರೀಕ್ಷೆಯಿದೆ.
6. ಡಿಜಿಟಲ್ ವಿಭಾಗ ಕಡಿಮೆ
ಮೊದಲು ಶ್ರೀಮಂತರು ಮಾತ್ರ ಡೇಟಾವನ್ನು ಬಳಸಬಹುದಾಗಿತ್ತು, ದುಬಾರಿ ಡೇಟಾ ಇದಕ್ಕೆ ಕಾರಣವಾಗಿತ್ತು. ಜಿಯೋ ಶ್ರೀಮಂತ ಮತ್ತು ಬಡವರ ನಡುವಿನ ಈ ಅಂತರವನ್ನು ಕಡಿಮೆ ಮಾಡಿದೆ. ಈಗ ಪ್ರತಿಯೊಬ್ಬರೂ ಸುಲಭವಾಗಿ ಡೇಟಾವನ್ನು ಬಳಸಬಹುದು. ಆದರೆ ದೇಶದಲ್ಲಿ ಇತರೆ ಟೆಲಿಕಾಂ ಸಂಸ್ಥೆಗಳನ್ನು ಜಿಯೋ ಹಿಂದಕ್ಕೆ ತಲ್ಲುತ್ತಿದೆ. ಆದರೆ ಸ್ಪರ್ಧೆ ಹೆಚ್ಚಾಗಿದೆ. ನಗರವಾಸಿಗಳಂತೆ ಹಳ್ಳಿಗರಿಗೂ ಡಿಜಿಟಲ್ ಸೌಲಭ್ಯ ಲಭ್ಯವಾಗಿದೆ. ಆದರೆ ಪರಿಸರದ ಮೇಲೆ ಕೆಟ್ಟ ಪ್ರಭಾವ ಉಂಟಾಗಿದೆ.
7. ಯುನಿಕಾರ್ನ್ ಪ್ರವಾಹ
1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್‌ಅಪ್‌ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಜಿಯೋ ಆಗಮನದ ಮೊದಲು, ದೇಶದಲ್ಲಿ ಕೇವಲ 4-5 ಯುನಿಕಾರ್ನ್‌ಗಳು ಇದ್ದವು, ಆದರೆ ಈಗ 108 ಯುನಿಕಾರ್ನ್‌ಗಳಿದೆ. ಇವುಗಳಲ್ಲಿ ಹೆಚ್ಚಿನವು ಡಿಜಿಟಲ್ ಆರ್ಥಿಕತೆಯ ಭಾಗವಾಗಿದೆ, ಇದರ ಬೆನ್ನೆಲುಬು ರಿಲಯನ್ಸ್ ಜಿಯೋ ಆಗಿದೆ. ಇಂದು ಭಾರತೀಯ ಯುನಿಕಾರ್ನ್‌ಗಳ ಒಟ್ಟು ಮೌಲ್ಯ 28 ಲಕ್ಷ ಕೋಟಿ ರೂಪಾಯಿ ಆಗಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications