ಬಿಲಿಯನೇರ್ ಮುಕೇಶ್ ಅಂಬಾನಿ ನವೆಂಬರ್ 1 ರಂದು ಮುಂಬೈನ ಐಷಾರಾಮಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿ ತಮ್ಮ ಹೊಸ ಮೆಗಾ-ಮಾಲ್ ಜಿಯೋ ವರ್ಲ್ಡ್ ಪ್ಲಾಜಾವನ್ನು ಉದ್ಘಾಟನೆ ಮಾಡಿದ್ದಾರೆ. ಗ್ರ್ಯಾಂಡ್ ಓಪನಿಂಗ್ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ತಾರೆಗಳು ಕೂಡಾ ಈ ಮೆಗಾ ಮಾಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಿಯೋ ವರ್ಲ್ಡ್ ಪ್ಲಾಜಾದ ಉದ್ಘಾಟನೆಯು ಒಂದು ಸ್ಟಾರ್‌ಗಳ ಕೂಟವನ್ನೇ ಸೇರಿಸಿದೆ. ಇದರಿಂದಾಗಿ ಮೆಗಾ-ಮಾಲ್‌ನ ರಿಟೇಲ್ ವ್ಯಾಪಾರ ಪ್ಲ್ಯಾನ್‌ಗೆ ಪ್ರಭಾವ ಬೀರಿಲ್ಲ. ತಮ್ಮ ಹೊಸ ಉದ್ಯಮದ ಮೂಲಕ ಮುಕೇಶ್ ಅಂಬಾನಿ ಅನೇಕ ಅಂತಾರಾಷ್ಟ್ರೀಯ ಐಷಾರಾಮಿ ಬ್ರ್ಯಾಂಡ್‌ಗಳೊಂದಿಗೆ ಬಹುಕೋಟಿ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಜಿಯೋ ವರ್ಲ್ಡ್ ಪ್ಲಾಜಾ ಮೂಲಕವಾಗಿ ಅನೇಕ ವಿಶ್ವ-ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಭಾರತದಲ್ಲಿ ಮೊದಲ ಬಾರಿಗೆ ಮಾರಾಟವಾಗಲಿದೆ. ಬಹುನಿರೀಕ್ಷಿತ ಬ್ರಾಂಡ್‌ಗಳಲ್ಲಿ ಒಂದಾದ ಜಾರ್ಜಿಯೊ ಅರ್ಮಾನಿ ಕೆಫೆಯು ಜಾಗತಿಕ ವಿನ್ಯಾಸಕಾರರ ಒಡೆತನದಲ್ಲಿದೆ. ಭಾರತಕ್ಕೆ ಪ್ರವೇಶದ ಮಾಡುವ ಹೊಸ ಬ್ರ್ಯಾಂಡ್‌ಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಜಿಯೋ ಪ್ಲಾಜಾ ಮೂಲಕ ಭಾರತಕ್ಕೆ ಬರುವ ಬ್ರ್ಯಾಂಡ್‌ಗಳು
ಜಾರ್ಜಿಯೊ ಅರ್ಮಾನಿ ಕೆಫೆ: ಅರ್ಮಾನಿ ಕೆಫೆ ಮತ್ತು ರೆಸ್ಟೋರೆಂಟ್‌ಗಳು ಇಟಾಲಿಯನ್ ಐಷಾರಾಮಿ ವಿನ್ಯಾಸಕ ಜಾರ್ಜಿಯೊ ಅರ್ಮಾನಿ ಒಡೆತನದ ರೆಸ್ಟೋರೆಂಟ್ ಆಗಿದೆ. ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಈಗ ತೆರೆದಿರುವ ಕೆಫೆಯನ್ನು ಭಾರತಕ್ಕೆ ತರಲು ರಿಲಯನ್ಸ್ 2020 ರಿಂದ ಅರ್ಮಾನಿಯೊಂದಿಗೆ ಮಾತುಕತೆ ನಡೆಸುತ್ತಿದೆ.
ಬಾಲೆನ್ಸಿಯಾಗ: ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್ ಈಗಾಗಲೇ ಭಾರತದಲ್ಲಿ ಬಾಲೆನ್ಸಿಯಾಗದ ಆನ್‌ಲೈನ್ ರಿಟೇಲ್ ಹಕ್ಕುಗಳನ್ನು ಹೊಂದಿದೆ. ಐಷಾರಾಮಿ ಬ್ರ್ಯಾಂಡ್ ಅಂಬಾನಿಯ ಮೆಗಾ-ಮಾಲ್ ಮೂಲಕ ಭಾರತದಲ್ಲಿ ತಮ್ಮ ಆಫ್‌ಲೈನ್ ಸ್ಟೋರ್ ಅನ್ನು ತೆರೆಯಲಿದೆ.
ಪಾಟರಿ ಬಾರ್ನ್ ಕಿಡ್ಸ್: 2022 ರಲ್ಲಿ ಪಾಟರಿ ಬಾರ್ನ್ ರಿಲಯನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಅದರ ಮಕ್ಕಳ-ಆಧಾರಿತ ಸ್ಟೋರ್ ಪಾಟರಿ ಬಾರ್ನ್ ಕಿಡ್ಸ್ ಭಾರತದಲ್ಲಿ ಮೊದಲ ಬಾರಿಗೆ ಮುಕೇಶ್ ಅಂಬಾನಿ ಅವರ ಮೆಗಾ-ಮಾಲ್‌ನಲ್ಲಿ ತನ್ನ ಸ್ಟೋರ್ ತೆರೆಯುತ್ತಿದೆ.
ರಿಮೋವಾ: ರಿಮೋವಾ ಜರ್ಮನಿ ಮೂಲದ ಐಷಾರಾಮಿ ಲಗೇಜ್ ಮತ್ತು ಸೂಟ್‌ಕೇಸ್ ಬ್ರ್ಯಾಂಡ್ ಆಗಿದ್ದು, ಜಾಗತಿಕ ಸೆಲೆಬ್ರಿಟಿಗಳು ತಮ್ಮ ಬ್ಯಾಗ್‌ಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಖರೀದಿ ಮಾಡುತ್ತಾರೆ. ಇದೀಗ ರಿಮೋವಾ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಮಳಿಗೆಯನ್ನು ತೆರೆಯುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ.
ಇಎಲ್&ಎನ್ ಕೆಫೆ: ಪ್ಯಾರಿಸ್ ಮತ್ತು ಇಟಲಿಯಿಂದ ಪ್ರೇರಿತವಾದ ಇಂಟೀರಿಯರ್‌ಗಳೊಂದಿಗೆ ವಿಶ್ವದ ಅತ್ಯಂತ ಆಕರ್ಷಕ ಕೆಫೆಗಳಾಗಿ ಮಾರುಕಟ್ಟೆಗೆ ಬಂದಿರುವ ಇಎಲ್&ಎನ್ ಕೆಫೆಯೊಂದಿಗೆ ರಿಲಯನ್ಸ್ ಕಳೆದ ವರ್ಷ ಜಿಯೋ ವರ್ಲ್ಡ್ ಪ್ಲಾಜಾಗೆ ತರಲು ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.


Click it and Unblock the Notifications