ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ನೆರೆಹೊರೆಯಲ್ಲಿ 5,416 ಚದರ ಅಡಿ ಬಂಗಲೆ ಮತ್ತು 7,722 ಚದರ ಅಡಿ ಭೂಮಿಯನ್ನು ಖರೀದಿ ಮಾಡಿದ್ದಾರೆ. ಈ ಭೂಮಿ ಮತ್ತು ಬಂಗಲೆಗೆ ಜಾನ್ ಅಬ್ರಹಾಂ 70.83 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ.
ಇಂಡೆಕ್ಸ್‌ಟ್ಯಾಪ್.ಕಾಮ್ ಬಂಗಲೆಗಾಗಿ ಆಸ್ತಿ ನೋಂದಣಿ ದಾಖಲೆಗಳನ್ನು ಬಹಿರಂಗಪಡಿಸಿದೆ. ಈ ಬಂಗಲೆಯು ಮುಂಬೈನ ಅತ್ಯಂತ ಜನನಿಬಿಡ ಶಾಪಿಂಗ್ ಮಾರ್ಗಗಳಲ್ಲಿ ಒಂದಾದ ಖಾರ್‌ನ ಲಿಂಕಿಂಗ್ ರಸ್ತೆಯಲ್ಲಿದೆ. ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಇದರ ನೆರೆಹೊರೆಯಲ್ಲಿದೆ.

ಅಬ್ರಹಾಂ ಅವರು ಡಿಸೆಂಬರ್ 27, 2023 ರಂದು 4.24 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ ನಂತರ ಬಂಗಲೆ ಒಪ್ಪಂದವನ್ನು ನೋಂದಾಯಿಸಿದ್ದಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಮುಂಬೈನಲ್ಲಿರುವ ಆಧುನಿಕ ಬಾಲಿವುಡ್ ತಾರೆಯರು ಪ್ರಾಥಮಿಕವಾಗಿ ಬಹುಮಹಡಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಕೆಲವು ಮುಂಬೈ ಬಂಗಲೆಗಳನ್ನು ಹೊಂದಿದ್ದಾರೆ. ಬಚ್ಚನ್ ಅವರು ಇತ್ತೀಚೆಗೆ ತಮ್ಮ ಮಗಳು ಶ್ವೇತಾ ನಂದಾ, ಅವರ ಮುಂಬೈ ಬಂಗಲೆ ಪ್ರತೀಕ್ಷಾವನ್ನು ನೀಡುವಾಗ ಸುದ್ದಿಯಾಗಿದ್ದರು. ಈ ಆಸ್ತಿಯು ಮುಂಬೈನ ಜುಹುದಲ್ಲಿ 890.47 ಚದರ ಮೀ ಮತ್ತು 674 ಚದರ ಮೀ ಗಾತ್ರದ ಎರಡು ಪ್ಲಾಟ್‌ಗಳಲ್ಲಿ ನೆಲೆಗೊಂಡಿದೆ.
ನವೆಂಬರ್ 8 ರಂದು, ಆಸ್ತಿಗೆ ಉಡುಗೊರೆ ಪತ್ರಕ್ಕೆ ಸಹಿ ಮಾಡಲಾಗಿದೆ. ಗಿಫ್ಟ್ ಡೀಡ್ ದಾಖಲೆಗಳಲ್ಲಿ ವಹಿವಾಟಿಗೆ 50.65 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂದು ಸೂಚಿಸಲಾಗಿದೆ. ಇನ್ನು ಅಬ್ರಹಾಂ ಬಂಗಲೆಯನ್ನು ಖರೀದಿಸಿದ ಖಾರ್‌ನಲ್ಲಿ ವಸತಿ ರಿಯಲ್ ಎಸ್ಟೇಟ್ ಪ್ರತಿ ಚದರ ಅಡಿಗೆ 40,000 ರೂಪಾಯಿಯಿಂದ 90,000 ರೂಪಾಯಿ ಆಗಿದೆ. ಪ್ರಾಪರ್ಟಿ ಗ್ರೇಡ್ ಮತ್ತು ಪ್ರದೇಶವನ್ನು ಆಧರಿಸಿ ದರವನ್ನು ನಿಗದಿಪಡಿಸಲಾಗಿದೆ ಎಂದು ಸ್ಥಳೀಯ ದಲ್ಲಾಳಿಗಳು ಹೇಳಿಕೊಳ್ಳುತ್ತಾರೆ.
ದೇವ್ ಆನಂದ್‌ರ ಬಂಗಲೆ 400 ಕೋಟಿ ರೂಪಾಯಿಗೆ ಮಾರಾಟ?
ಸಿನಿಮಾ ದಂತಕಥೆ ದೇವ್ ಆನಂದ್ ಅವರ ಬಂಗಲೆಯನ್ನು ನೋಡಿಕೊಳ್ಳುವವರು ಯಾರೂ ಕೂಡಾ ಇಲ್ಲ. ಅದರಿಂದಾಗಿ ಈ ಜುಹು ಬಂಗಲೆಯನ್ನು ಸುಮಾರು 400 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ವರದಿಯ ಬಗ್ಗೆ ದೇವ್ ಆನಂದ್ ಅವರ ಸೋದರಳಿಯ ಕೇತನ್ ಆನಂದ್ ಸ್ಪಷ್ಟಣೆಯನ್ನು ನೀಡಿದ್ದಾರೆ.
ಸೂಪರ್‌ಸ್ಟಾರ್ ಅವರ ಕುಟುಂಬವು "ಜುಹು ಬಂಗಲೆಯನ್ನು ಸರಿಸುಮಾರು 350-400 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ" ಎಂಬ ವರದಿಗಳನ್ನು ದೇವ್ ಆನಂದ್ ಅವರ ಸೋದರಳಿಯ ಕೇತನ್ ಆನಂದ್ ತಳ್ಳಿಹಾಕಿದ್ದಾರೆ. ಚೇತನ್ ಆನಂದ್ ಅವರ ಪುತ್ರ ಕೇತನ್ ಆನಂದ್ ಈ ಬಗ್ಗೆ ಎಕಾನಮಿಕ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದು, " ಇಲ್ಲ, ಇದು ಸುಳ್ಳು ಸುದ್ದಿ. ನಾನು ದೇವಿನಾ ಮತ್ತು ಕುಟುಂಬದೊಂದಿಗೆ ಮಾತನಾಡಿದ್ದೇವೆ," ಎಂದು ಹೇಳಿದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications